ಎಚ್ಚೆತ್ತ ಪುರಸಭೆ; ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸೂಚನೆ

ಮೂಡುಬಿದಿರೆ ದಿನವಹಿ ಮಾರುಕಟ್ಟೆ: ಅವ್ಯವಸ್ಥೆ, ಮೂಲ ಸೌಲಭ್ಯಗಳ ಕೊರತೆ

Team Udayavani, Jan 9, 2023, 5:50 AM IST

ಎಚ್ಚೆತ್ತ ಪುರಸಭೆ; ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸೂಚನೆ

ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ 5 ವರ್ಷಗಳಿಂದಲೂ ಬೀಡು ಬಿಟ್ಟಿರುವ ಪುರಸಭೆ ದಿನವಹಿ ಮಾರುಕಟ್ಟೆಯ ಅವ್ಯವಸ್ಥೆಗಳು, ಮೂಲ ಸೌಲ ಭ್ಯಗಳ ಕೊರತೆ ಮೊದಲಾದ ವಿಷಯಗಳ ಬಗ್ಗೆ ಪುರಸಭೆ ಕೊನೆಗೂ ಎಚ್ಚೆತ್ತಂತಿದೆ.

ಶುಕ್ರವಾರದ ಸಂತೆಯ ದಿನ ಹೊರ ಜಿಲ್ಲೆಗ ಳಿಂದಲೂ ವ್ಯಾಪಾರಿಗಳು ಬಂದು ಸ್ಪರ್ಧಾತ್ಮಕವಾಗಿ ವ್ಯಾಪಾರ ಮಾಡುತ್ತ ರಾತ್ರಿ ತಮ್ಮ ತಾತ್ಕಾಲಿಕ ಶಿಬಿರಗಳನ್ನು ಬಿಚ್ಚಿ ಹೊರಡುವಾಗ ಇಡೀ ದಿನ ಹೊರಚೆಲ್ಲಿದ ತ್ಯಾಜ್ಯ ವಸ್ತುಗಳನ್ನು ಹಾಗೆಯೇ ಬಿಟ್ಟು ಹೋಗುವುದನ್ನು, ತರಕಾರಿ ತ್ಯಾಜ್ಯವನ್ನು ಜಾನುವಾರುಗಳು ಮೆದ್ದು (ತಿನ್ನಲಾಗದ್ದನ್ನು ಹಾಗೆಯೇ ಬಿಟ್ಟು) ಸೆಗಣಿ ಹಾಕಿ, ಗಂಜಳ ಸುರಿಸಿ ಧನ್ಯವಾದ ಸೂಚಿಸುವುದನ್ನು, ಮರು ದಿನ ಪುರಸಭೆಯ ಕಾರ್ಮಿಕರು ಬರುವವರೆಗೆ ಇಡೀ ಮಾರುಕಟ್ಟೆ ಅಂಗಣದಲ್ಲಿ ಪ್ಲಾಸ್ಟಿಕ್‌ ಚೀಲಗಳು ರಾಶಿ ರಾಶಿಯಾಗಿ ಬಿದ್ದು ಕೊಂಡು ಗಾಳಿಗೆ ಹಾರಾಡುತ್ತಿರುವುದರ ಬಗ್ಗೆ ಉದಯವಾಣಿ ಸುದಿ ನ ದಲ್ಲಿ ಜ. 2ರಂದು ವರದಿ ಪ್ರಕಟವಾಗಿತ್ತು. ಈ ವರದಿಗೆ ಈಗ ಸ್ಪಂದನೆ ವ್ಯಕ್ತ ವಾ ಗಿದೆ. ಪುರಸಭೆ ಅಧ್ಯಕ್ಷ ಪ್ರಸಾದ್‌ ಕುಮಾರ್‌, ಮುಖ್ಯಾಧಿಕಾರಿ ಇಂದು ಎಂ., ಪರಿಸರ ಎಂಜಿ ನಿ ಯರ್‌ ಶಿಲ್ಪಾ ಎಸ್‌., ಕಂದಾಯ ನಿರೀಕ್ಷಕ ಅಶೋಕ ಸಹಿತ ಸಿಬಂದಿ ಜ. 6ರಂದು ಸಂತೆ ವ್ಯಾಪಾರಿಗಳಿಗೆ ತ್ಯಾಜ್ಯ ವಿಲೇವಾರಿಯ ಬಗ್ಗೆ ಸೂಚನೆ, ಎಚ್ಚರಿಕೆ ನೀಡುವ ಕ್ರಮ ಕೈಗೊಂಡರು.

ಇದರ ಪರಿಣಾಮವಾಗಿ ಮರುದಿನ ಶನಿವಾರ ಮುಂಜಾನೆ ಮಾರುಕಟ್ಟೆ ಪ್ರಾಂಗಣನ್ನು ಪರಿವೀಕ್ಷಿಸಿದಾಗ ತ್ಯಾಜ್ಯ ವಸ್ತುಗಳ ಪ್ರಮಾಣ ಕೊಂಚ ಕಡಿಮೆಯಾಗಿ ರುವುದು ಕಂಡು ಬಂದಿದೆ. ಆದರೆ ವರದಿ ಯಲ್ಲಿ ಸೂಚಿಸಲಾಗಿರುವಂತೆ, ಹಸಿ, ಒಣ ಕಸ ಮತ್ತು ನಿರುಪಯುಕ್ತ ತ್ಯಾಜ್ಯ ವಸ್ತುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ ವ್ಯವಸ್ಥೆ ಮಾಡಿಲ್ಲದೇ ಇರುವುದರಿಂದಾಗಿ ನಿರೀಕ್ಷಿತ ಫಲಿತಾಂಶ ಕಂಡುಬಂದ ಹಾಗಿಲ್ಲ. ಹಾಗೆ ಮಾಡಲು ಏನು ಸಮಸ್ಯೆ ಎಂಬುದು ತಿಳಿದಿಲ್ಲ.

ಇದರಲ್ಲಿ ಪುರಸಭೆಯದ್ದೂ ಸಂತೆ ವಹಿಸಿಕೊಂಡ ಗುತ್ತಿಗೆದಾರರದ್ದೂ ಹೊಣೆಗಾರಿಕೆ ಇರುವುದನ್ನು ತಳ್ಳಿಹಾಕು ವಂತಿಲ್ಲ. ಇದಕ್ಕೊಂದು ಮುಕ್ತಿ ಕಾಣಿಸಿದರೆ ಪೌರ ಕಾರ್ಮಿಕರ ಕೆಲಸ ಹಗುರವಾಗುವುದ ರಲ್ಲಿ ಸಂಶಯವಿಲ್ಲ. ಸ್ವತ್ಛ ಮೂಡುಬಿದಿರೆ ಕುರಿತಾಗಿ ಜಾಥಾ, ಸ್ಲೋಗನ್‌ಗಳ ದನಿ ಮುಗಿಲೆತ್ತರಕ್ಕೆ ಚಿಮ್ಮಲಿ; ಅದಕ್ಕೂ ಮುನ್ನ ಮೊದಲು ಸಂತೆ ಪ್ರಾಂಗಣ ಸ್ವತ್ಛವಾಗಿರಲಿ. ಮುಂದಿನ ಸಂತೆ ದಿನಗಳಲ್ಲಿ ದನಗಳಿಗೆ ಕೆಲಸವಿಲ್ಲದಿರಲಿ, ಶೂನ್ಯ ತ್ಯಾಜ್ಯ ಸಂತೆಯ ಕನಸು ನನಸಾಗಲಿ.

ಎಚ್ಚರಿಕೆ ನೀಡಿದ್ದೇವೆ
“ಜ. 6ರ ಶುಕ್ರವಾರ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಪರಿಣಾಮವಾಗಿ ತ್ಯಾಜ್ಯ ಕಡಿಮೆಯಾಗಿದೆ. ಕೆಲವರು ಗೋಣಿ ಚೀಲದಲ್ಲಿ ಹಾಕಿಟ್ಟಿದ್ದಾರೆ. ತ್ಯಾಜ್ಯ ವಿಂಗಡಣೆಗೆ ಕ್ರಮವಹಿಸಲು ಸದ್ಯ ಆಗಿಲ್ಲ. ಮುಂದಿನ ವಾರ ಗುತ್ತಿಗೆದಾರರ ಮೂಲಕ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು’
-ಪ್ರಸಾದ್‌ ಕುಮಾರ್‌, ಪುರಸಭೆ ಅಧ್ಯಕ್ಷರು

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.