ಕೆಂಬಣ್ಣದ ಚಂದಮಾಮನನ್ನು ಕಣ್ತುಂಬಿದ ಜನತೆ


Team Udayavani, Feb 1, 2018, 9:27 AM IST

01-6.jpg

ಮಂಗಳೂರು/ಉಡುಪಿ: ಬುಧವಾರ ನಡೆದ ಖಗ್ರಾಸ ಚಂದ್ರಗ್ರಹಣದಲ್ಲಿ ಕೆಂಬಣ್ಣದ ಚಂದಮಾಮನನ್ನು ಉಭಯ ಜಿಲ್ಲೆಗಳ ಸಾವಿರಾರು ಮಂದಿ ನೋಡಿ ಕಣ್ತುಂಬಿಕೊಂಡರು.

ಆಚಾರನಿಷ್ಠರು ಬೆಳಗ್ಗಿನಿಂದಲೇ ಉಪವಾಸ ಕುಳಿತು ರಾತ್ರಿ ಜಪಪೂಜಾದಿಗಳನ್ನು ನಡೆಸಿದರೆ, ಪುರೋಹಿತರು ಗ್ರಹಣ ಶಾಂತಿ ನಡೆಸಿದರು. ಸಂಜೆ ಸುಮಾರು 7 ಗಂಟೆ ಸುಮಾರಿಗೆ ಗ್ರಹಣಗ್ರಸ್ತ  ಚಂದಿರನ  ವೀಕ್ಷಣೆಗೆ  ಹವ್ಯಾಸಿ  ಖಗೋಲ ಶಾಸ್ತ್ರಜ್ಞರ ಸಂಘವು ಮಂಗಳೂರು ಕುಲ ಶೇಖರದ ಕೋರ್ಡೆಲ್‌ ಹಾಲ್‌ ಎದುರಿನ ಸ್ಫೂರ್ತಿ ಕಾಂಪ್ಲೆಕ್ಸ್‌ ಮೇಲುಗಡೆ, ಉಡುಪಿಯಲ್ಲಿ ಪಿಪಿಸಿ ಎಂಬಿಎ ಕಟ್ಟಡದ ಮೇಲೆ, ಮೂಡಬಿದಿರೆಯ ಮಹಾವೀರ ಕಾಲೇಜು ಮೊದಲಾದೆಡೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆ ಯಾಗು ತ್ತಿದ್ದಂತೆ ಸ್ಥಳೀಯರು ಅನೇಕ ಮಂದಿ ಇಲ್ಲಿಗೆ ಆಗಮಿಸಿ ಗ್ರಹಣವನ್ನು ಕಣ್ತುಂಬಿಕೊಂಡರು. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಪ್ರಮುಖ ದೇಗುಲ ಗಳ ಪೂಜೆ, ದೇವರ ದರುಶನದ ಅವಧಿಯಲ್ಲಿ ವ್ಯತ್ಯಯವಾಗಿತ್ತು.

ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇಗುಲವನ್ನು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮುಚ್ಚಲಾಗಿತ್ತು. ಗ್ರಹಣ ಇದ್ದುದರಿಂದ ಹಗಲಿನಲ್ಲಿ ಯಾವುದೇ ಪೂಜೆ ಪುನಸ್ಕಾರ ಗಳಿಗೆ ಅವಕಾಶ ಇಲ್ಲದಿದ್ದುದರಿಂದ ದೇವಸ್ಥಾನ ಪರಿಸರ ಖಾಲಿ ಖಾಲಿ ಯಾಗಿತ್ತು. ಧರ್ಮಸ್ಥಳದಲ್ಲಿ ಅಪರಾಹ್ನ 2.30ರಿಂದ 8.30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ವಿರಲಿಲ್ಲ. ಇಲ್ಲೂ ಎಂದಿಗಿಂತ ಜನಸಂದಣಿ ಕಡಿಮೆ ಇತ್ತು.

ಶ್ರೀಕೃಷ್ಣಮಠದಲ್ಲಿ ಬೆಳಗ್ಗೆ 8 ಗಂಟೆಗೆ ಮಹಾಪೂಜೆಯನ್ನು, ಸಂಜೆ ಚಂದ್ರೋದಯದೊಳಗೆ ರಾತ್ರಿ ಪೂಜೆಯನ್ನು ಪರ್ಯಾಯ ಶ್ರೀಪಲಿಮಾರು ಸ್ವಾಮೀಜಿ ನಡೆಸಿದರು. ಕೆಲವು ದೇವಸ್ಥಾನಗಳಲ್ಲಿ ಭೋಜನಪ್ರಸಾದ ಇರಲಿಲ್ಲ. ಶ್ರೀಕೃಷ್ಣಮಠದಲ್ಲಿ ಯಾತ್ರಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಕೃಷ್ಣಮಠದಲ್ಲಿ ದೇವರ ದರ್ಶನ ಅಬಾಧಿತವಾಗಿ ನಡೆಯಿತು. 

ಕದ್ರಿ ಮಂಜುನಾಥ ದೇವಸ್ಥಾನದಲ್ಲಿ  ಮಧ್ಯಾಹ್ನ 11.30ರಿಂದ ಸಂಜೆ 4 ಗಂಟೆಯ ಸಮಯವನ್ನು ಹೊರತು ಪಡಿಸಿದಂತೆ ಸಾರ್ವ ಜನಿಕರ ದರುಶನಕ್ಕೆ ಅನುವು ಮಾಡಲಾಗಿತ್ತು. ಮಂಗಳಾ ದೇವಿ ದೇವಸ್ಥಾನದಲ್ಲಿ  ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯ ಹೊರತುಪಡಿಸಿ ಉಳಿದ ಸಮಯದಲ್ಲಿ ದೇವರ ದರುಶನಕ್ಕೆ ಅನುವು ಮಾಡಿಕೊಡಲಾಯಿತು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಮಧ್ಯಾಹ್ನ 1ರಿಂದ ರಾತ್ರಿ 4 ಗಂಟೆ ಹೊರತುಪಡಿಸಿ ದೇವರ ದರುಶನಕ್ಕೆ ಅವಕಾಶ ನೀಡಲಾಗಿತ್ತು. ಕುದ್ರೋಳಿಯ ಶ್ರೀ ಭಗವತಿ ದೇವಾಲಯದಲ್ಲಿ ದೇವರ ದರುಶನಕ್ಕೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿರಲಿಲ್ಲ. ಮನೆಗಳಲ್ಲಿ ರಾತ್ರಿ ಗ್ರಹಣ ಬಿಟ್ಟ ಬಳಿಕ ಆಹಾರ ಸ್ವೀಕರಿಸಿದರು. 

ಜನಸಂಚಾರ ವಿರಳ: ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಗರ ದಲ್ಲಿ ಜನಸಾಮಾನ್ಯರ ಓಡಾಟ ವಿರಳವಾಗಿತ್ತು.  ಸಾಮಾನ್ಯ ವಾಗಿ ಸಂಜೆಯ ಸಮಯದಲ್ಲಿ ಮಂಗಳೂರಿನ ಜ್ಯೋತಿ ವೃತ್ತ, ಕಂಕನಾಡಿ, ಹಂಪನಕಟ್ಟ, ಪಿವಿಎಸ್‌  ವೃತ್ತ, ಸ್ಟೇಟ್‌ ಬ್ಯಾಂಕ್‌, ಉಡುಪಿಯ ಕಲ್ಸಂಕ, ಬನ್ನಂಜೆ ಸಹಿತ ನಗರದ ಅನೇಕ ರಸ್ತೆಗಳು ಟ್ರಾಫಿಕ್‌ ಸಮಸ್ಯೆ ಎದು ರಾಗು ತ್ತದೆ. ಆದರೆ ಗ್ರಹಣ ಹಿನ್ನೆಲೆಯಲ್ಲಿ ಟ್ರಾಫಿಕ್‌ ಮುಕ್ತ ವಾಗಿತ್ತು. ಗ್ರಹಣ ರಾತ್ರಿ ಸಂಭವಿಸಿದ್ದೂ ಸಂಚಾರ ವಿರಳಕ್ಕೆ ಪೂರಕವಾಯಿತು. ಅನೇಕ ಹೊಟೇಲ್‌ಗ‌ಳ ವ್ಯವಹಾರವೂ ಕಡಿಮೆಯಾಗಿತ್ತು.

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 29  ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 29  ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.