ಬಜಪೆ – ಜೋಕಟ್ಟೆ ರಸ್ತೆ ಪೊರ್ಕೋಡಿ : ತಡೆಗೋಡೆ ಕುಸಿತ
Team Udayavani, Aug 4, 2017, 9:40 AM IST
ಪೊರ್ಕೋಡಿ: ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜಪೆ – ಜೋಕಟ್ಟೆ ರಸ್ತೆಯ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿ ರಸ್ತೆ ಬದಿಯ ತಡೆಗೋಡೆ ಕುಸಿದಿದೆ.ಮಳೆ ಹರಿಯುವ ನೀರು ಹರಿದಾಡಲು ಹಳೆಯದಾದ ಚರಂಡಿ ವ್ಯವಸ್ಥೆಯಿಂದ ಈ ತಡೆಗೋಡೆ ಕುಸಿದಿದೆ.
ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ಇತಿಹಾಸ ಪುರಾಣ ದೇವಸ್ಥಾನ. ಈ ಪ್ರದೇಶದಲ್ಲಿ ರಸ್ತೆಯು ಕಿರಿದಾಗಿದ್ದು, ಈಗಾಗಲೇ ದೇವಸ್ಥಾನ ಬದಿಯಲ್ಲಿ ತಡೆಗೋಡೆ ಹಾಗೂ ಕಾಂಪೌಂಡ್ ನಿರ್ಮಾಣವಾಗಿದ್ದು. ಮಳೆಯ ನೀರು ಹರಿಯಲು ಚರಂಡಿ ಸಮರ್ಪಕವಾಗಿ ಇಲ್ಲ. ಈಗ ತಡೆಗೋಡೆ ಹಾಗೂ ಕಾಂಪೌಂಡು ಗೋಡೆಗಳು ಚರಂಡಿಯಲ್ಲಿ ಬಿದ್ದ ಕಾರಣ ನೀರು ಹರಿದುಹೋಗಲು ತಡೆಯಾಗಿದೆ. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರದಕ್ಷಿಣೆ ಬರಲು ತೊಂದರೆಯಾಗುತ್ತಿದೆ.
ತಡೆಗೋಡೆ ಹಾಗೂ ಕಾಂಪೌಂಡ್ ಇನ್ನೂ ಕುಸಿತವಾಗುವ ಸಂಭವವಿದ್ದು ಪಾದಚಾರಿ ಹಾಗೂ ವಾಹನ ಸಂಚಾರಕ್ಕೆ ಅಪಾಯವಿದೆ. ಈ ಪ್ರದೇಶದಲ್ಲಿ ಕಾಂಕ್ರೀಟ್ ಚರಂಡಿ ಹಾಗೂ ತಡೆಗೋಡೆ ನಿರ್ಮಿಸಬೇಕಾದ ಅವಶ್ಯಕತೆ ಇದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಶೀಘ್ರ ಕ್ರಮ ತೆಗೆದುಕೊಂಡು ಶಾಶ್ವತ ಪರಿಹಾರ ನೀಡಬೇಕಾಗಿದೆ.