20 ವರ್ಷ ಕಳೆದರೂ ಡಾಮರು ಕಾಣದ ರಸ್ತೆಗಳು


Team Udayavani, Sep 23, 2017, 5:34 PM IST

23Udi-3.jpg

ಸವಣೂರು : ಪುತ್ತೂರು ತಾಲೂಕಿನ ಗಡಿ ಗ್ರಾಮವಾದ ಕೊಳ್ತಿಗೆಯ ಬಹುತೇಕ ರಸ್ತೆಗಳು ಸಂಪರ್ಕ ರಸ್ತೆಗಳಾಗಿವೆ. ಒಂದು ಭಾಗದ ರಸ್ತೆಗಳು ಸುಳ್ಯ ತಾಲೂಕಿಗೆ, ಮತ್ತೂಂದು ಭಾಗದ ರಸ್ತೆಗಳು ಪಕ್ಕದ ಗ್ರಾಮಗಳಿಗೆ ಕೊಂಡಿಯಾಗಿವೆ. ಕೊಳ್ತಿಗೆ ಗ್ರಾಮದಲ್ಲಿ ಸಂಪರ್ಕ ರಸ್ತೆಗಳಿದ್ದರೂ ಅವುಗಳು ಇದುವರೆಗೂ ಡಾಮರು ಕಂಡಿಲ್ಲ. 20 ವರ್ಷಗಳಿಂದ ಬೇಡಿಕೆ ಸಲ್ಲಿ ಸಿದರೂ ಯಾರೂ ಸ್ಪಂದಿಸಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಬಾಯಂಬಾಡಿ- ಮಾಡಾವು ಕಟ್ಟೆ ರಸ್ತೆ
ಈ ರಸ್ತೆ ಕೊಳ್ತಿಗೆ ಗ್ರಾಮದ ಬಾಯಂಬಾಡಿಯಿಂದ ಅಡ್ಯಾರ್‌ಗುಂಡ- ಕಳಾಯಿ ಮೂಲಕ ಮಾಡಾವು ಕಟ್ಟೆಯನ್ನು ಸಂಪರ್ಕಿಸುತ್ತದೆ. ಪಾರ್ಲದ ವರೆಗಿನ ರಸ್ತೆಗೆ 20 ವರ್ಷಗಳ ಹಿಂದೆ ಡಾಮರು ಹಾಕಲಾಗಿದೆ. ಈಗ ಅದು ಪೂರ್ಣ ಮಾಯವಾಗಿದೆ. ಈ ರಸ್ತೆಯ ಮೂಲಕ ಸಾಗಿದರೆ ಪೆರ್ಲಂಪಾಡಿ ನಿವಾಸಿಗಳು ಮಾಡಾವು ಕಟ್ಟೆ ಬಳಿಯಿಂದ ಪುತ್ತೂರಿಗೆ ನೇರವಾಗಿ ಸಂಪರ್ಕ ಸಾಧಿಸಬಹುದು. ಹೊಂಡ-ಗುಂಡಿಗಳಿರುವ ಮಣ್ಣಿನ ರಸ್ತೆಯಾಗಿದ್ದರಿಂದ ಯಾವುದೇ ವಾಹ ನಗಳು ತೆರಳುವಂತಿಲ್ಲ. ಸುಮಾರು 6 ಕಿ.ಮೀ. ಉದ್ದದ ರಸ್ತೆ ಈಗಲೂ ಗ್ರಾಪಂ ಸುಪರ್ದಿಯಲ್ಲೇ ಇದ್ದು ಇನ್ನೂ ಜಿ.ಪಂ. ರಸ್ತೆಯಾಗಿ ಮೇಲ್ದರ್ಜೆಗೇರಿಲ್ಲ. ಇದಕ್ಕಾಗಿ ಯಾರೂ ಮುತುವರ್ಜಿ ವಹಿಸಿಲ್ಲ ಎಂಬು ದು ಗ್ರಾಮಸ್ಥರ ಆರೋಪ.

ಪಾಂಬಾರು-  ಅಮಲ
– ಮುಚ್ಚಿ ನಡ್ಕ ರಸ್ತೆ

ಪೆರ್ಲಂಪಾಡಿಯಿಂದ ಪಾಂಬಾರು- ಅಮಲ- ಮುಚ್ಚಿನಡ್ಕ ರಸ್ತೆ 5 ಕಿ.ಮೀ. ಉದ್ದವಿದೆ. ಜಿ.ಪಂ. ವ್ಯಾಪ್ತಿಗೊಳಪಡುವ ರಸ್ತೆಗೆ 20 ವರ್ಷಗಳ ಹಿಂದೆ 2 ಕಿ.ಮೀ. ದೂರದವರೆಗೆ ಡಾಮರು ಹಾಕಲಾಗಿದೆ. ಉಳಿದಂತೆ ರಸ್ತೆಯ ಸ್ಥಿತಿ ಅಯೋಮ ಯವಾಗಿದೆ. ಮಳೆಗಾಲದಲ್ಲಿ ರಸ್ತೆಯ ಮೂಲಕ ಸಾಗಬೇಕಾದರೆ ಹರಸಾಹಸ ಪಡಬೇಕಾದ ಸನ್ನಿವೇಶ ಇದೆ.

ಮೊಗಪ್ಪೆ-ಕುಲ್ಲಂಪಾಡಿ
– ಐವರ್ನಾಡು ರಸ್ತೆ

ಮೊಗಪ್ಪೆಯಿಂದ- ಕುಲ್ಲಂಪಾಡಿ ಮೂಲಕ ಐವರ್ನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ 3 ಕಿ.ಮೀ. ಉದ್ದವಿದ್ದು, ಜಿ.ಪಂ. ವ್ಯಾಪ್ತಿಯಲ್ಲಿದೆ. ಸುಳ್ಯ ತಾಲೂಕಿನ ಐವರ್ನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯೂ ಡಾಮರು ಕಾಮಗಾರಿಯಾಗಿಲ್ಲ. ಮಾವಿನಕಟ್ಟೆಯಿಂದ ದುಗ್ಗಳಕ್ಕೆ ತೆರಳುವ ರಸ್ತೆಯೂ ಹೀನಾಯ ಸ್ಥಿತಿಯಲ್ಲಿದ್ದು, ಸಂಚಾರಕ್ಕೆ ದುರ್ಗಮವಾಗಿದೆ. ಪೆರ್ಲಂ ಪಾಡಿ- ಆನಡ್ಕ- ಕಣಿಯಾರ್‌ ರಸ್ತೆ ದುರಸ್ತಿ ಕಾಣದೇ ಅದೆಷ್ಟೋ ವರ್ಷಗಳು ಕಳೆದಿವೆ. ಮಳೆಗಾಲದಲ್ಲಿ ಇಲ್ಲಿ ವಾಹನಗಳ ಸಂಚಾರ ಸಾಧ್ಯವೇ ಇಲ್ಲ. ಬೇಸಗೆಯಲ್ಲಿ ಮಾತ್ರ ಕಷ್ಟ ಪಟ್ಟು ಸಂಚರಿಸುತ್ತವೆ.

ಕೊಳ್ತಿಗೆ ಗ್ರಾಮದ ಬಹುತೇಕ ರಸ್ತೆಗಳು, ಸಂಪರ್ಕ ರಸ್ತೆಗಳು ಹದಗೆಟ್ಟಿವೆ. ಮುಖ್ಯ ರಸ್ತೆಗಳು ಉತ್ತಮವಾಗಿದ್ದರೂ ಗ್ರಾಮದ ಒಳಗೆ ಸಂಚರಿಸುವ ರಸ್ತೆಗಳು ಹಾಳಾಗಿವೆ. ಶಾಸಕರು ಮತ್ತು ಸಂಸದರು ಇನ್ನೂ ಹೆಚ್ಚಿನ ಅನುದಾನವನ್ನು ನೀಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.

ಡಾಮರು ಪೂರ್ಣಗೊಂಡಿಲ್ಲ
ಗ್ರಾಮದ ಅಭಿವೃದ್ಧಿಗೆ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಸಂಸದ ನಳಿನ್‌ಕುಮಾರ್‌ ಕಟೀಲು ಅನುದಾನ ನೀಡಿದ್ದಾರೆ. ನೆಟ್ಟಾರಿನಿಂದ ಪೆರ್ಲಂಪಾಡಿಗೆ ತೆರಳುವ ಮುಖ್ಯ ರಸ್ತೆಗೆ ಶಾಸಕರ ನಿಧಿಯಿಂದ 1.70 ಕೋಟಿ ರೂ. , ಪಾಂಬಾರು ರಸ್ತೆಗೆ 1.70 ಕೋಟಿ ರೂ., ಗೋಳಿತ್ತಡಿ ರಸ್ತೆಗೆ 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಸಂಸದರ ನಿಧಿಯಿಂದ ಆನಡ್ಕ ರಸ್ತೆ 600 ಅಡಿ ಕಾಂಕ್ರೀಟ್‌ ಕಾಮಗಾರಿ ಮತ್ತು ಕಲಾಯಿಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಮೋರಿ ರಚನೆ ಮತ್ತಿತರ ಕಾಮಗಾರಿಗಳು ಸಾಗಿವೆ. ಈ ಅನುದಾನಗಳಿಂದ ಯಾವುದೇ ರಸ್ತೆಗಳಿಗೆ ಸಂಪೂರ್ಣವಾಗಿ ಡಾಮರು ಹಾಕಲಾಗಿಲ್ಲ.

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.