ರೊಜಾರಿಯೊ ಶಾಲಾ ಪ್ರಾರಂಭೋತ್ಸವ
Team Udayavani, May 30, 2019, 6:00 AM IST
ಮಹಾನಗರ: ನಗರದ ರೊಜಾರಿಯೊ ಪ್ರೌಢಶಾಲೆಯಲ್ಲಿ 2019-20ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಅಲೋಶಿಯಸ್ ಡಿ’ಸೋಜಾ ದೀಪ ಬೆಳಗಿಸುವುದರ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ, ಶಾಲಾ ಮಕ್ಕಳಿಗೆ, ಹೆತ್ತವರಿಗೆ ಅಭಿನಂದನೆ ಸಲ್ಲಿಸಿದರು.
ಶಾಲಾ ಶೈಕ್ಷಣಿಕ ಅವಧಿಯಲ್ಲಿನ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿ ಗಳು ನಿರ್ವಹಿಸಬೇಕಾದ ಕರ್ತವ್ಯಗಳ ಬಗೆಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ , ಶಿಕ್ಷಕ ವೃಂದಕ್ಕೆ ಶುಭಾಶಯ ಸಲ್ಲಿಸಿದರು.
ಶಾಲಾ ಶಿಕ್ಷಕಿಯರಾದ ಆಲಿಸ್ ಕೆ.ಜೆ., ಮೆಟಿuಲ್ಡಾ ಡಿ’ಸೋಜಾ, ದೈಹಿಕ ಶಿಕ್ಷಕ ಕಾರಿಯಪ್ಪ ರೈ ಉಪಸ್ಥಿತರಿದ್ದರು. ಶಿಕ್ಷಕಿ ಲವೀನಾ ಕ್ವಾಡ್ರಸ್ ನಿರೂಪಿಸಿ, ವಂದಿಸಿದರು.