ಆಶ್ರಯ ಯೋಜನೆ: ಆರ್‌ಟಿಸಿ ವಿಳಂಬ ನೀಡಿಕೆಯಿಂದ ಸಮಸ್ಯೆ


Team Udayavani, Mar 31, 2017, 10:11 AM IST

3003nlp.jpg

ಬಡಗನ್ನೂರು: ಆಶ್ರಯ ಯೋಜನೆಯಡಿ  ಬಡ ಫ‌ಲಾನುಭವಿಗಳಿಗೆ  ವಸತಿ ನಿರ್ಮಾಣದ ದೃಷ್ಟಿಯಿಂದ 31ಬಡ ಕುಟುಂಬದ ಫ‌ಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಆದರೆ ಆ ಫ‌ಲಾನುಭವಿಗಳಿಗೆ ಆರ್‌.ಟಿ.ಸಿ. ನೀಡದೆ ವಿಳಂಬವಾಗಿದೆ. ಇದರಿಂದಾಗಿ ಫ‌ಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ತೊಂದರೆಯಾಗಿದೆ  ಎಂದು ಮಾಜಿ ಗ್ರಾ.ಪಂ. ಅಧ್ಯಕ್ಷ ರಾಮ ಮೇನಾಲ ವಿಷಯ ಪ್ರಸ್ತಾಪ ಮಾಡಿದರು. ಅವರೊಂದಿಗೆ ಅಬ್ದುಲ್‌ ಕಂಞ್ಞ ಧ್ವನಿ ಗೊಡಿಸಿದರು. 

ಗ್ರಾ.ಪಂ. ಅಧ್ಯಕ್ಷೆ ಶಂಕರಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೆಟ್ಟಣಿಗೆಮುಟ್ನೂರು ಗ್ರಾಮ ಸಭೆಯಲ್ಲಿ  ಮಾತನಾಡುತ್ತಿದ್ದರು.

ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಮಾತನಾಡಿ, ಈ ಮೂದಲು ತಹಸೀಲ್ದಾರ್‌  ಮುಖಾಂತರ ತಂಬ್‌ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ ಸರ್ಕಾರದ ನಿಯಮ ಬದಲಾವಣೆಯಿಂದ ಪೈಲ್‌ ಬೆಂಗಳೂರಿಗೆ ಕಳುಹಿಸಿ ಎಸಿ ತಂಬ್‌ ನೀಡಬೇಕಾಗುವುದರಿಂದ ವಿಳಂಬ ಆಗಿದೆ. ಈ ಬಗ್ಗೆ ಎಸಿಯವರಲ್ಲಿ ಮಾತನಾಡಿದ್ದೇನೆ. ತತ್‌ಕ್ಷಣ ಆರ್‌.ಟಿ.ಸಿ. ನೀಡುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಆನೆಕಂದಕಕ್ಕೆ ಒತ್ತಾಯ
ಕೊಟ್ಯಾಡಿಯವರೆಗೆ ಬರುವ ಸರ್ಕಾರಿ ಬಸ್ಸು ಗಾಳಿಮುಖದವರೆಗೆ ಬರಲಿಎಂದು ಗ್ರಾಮಸ್ಥರು ಒತ್ತಾಯಿಸಿದರು. ಜೊತೆಗೆ ಕಾಡುಕೋಣ ಹಾವಳಿ ನಿಯಂತ್ರಿಸಲು ಆನೆಕಂದಕ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.

ಪಂಚಾಯತ್‌ ಕುಡಿಯುವ ನೀರನ್ನು ಕೃಷಿಗೆ ಉಪಯೋಗಿಸುತ್ತಿದ್ದಾರೆ  ಅಂಥವರ ಮೇಲೆ ಕ್ರಮ ಕೈಗೊಳ್ಳಲುವಂತೆ ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಮಾತನಾಡಿ, ಕುಡಿಯುವ ನೀರನ್ನು ಕೃಷಿಗೆ ಉಪಯೋಗಿಸಲು ಅವಕಾಶ ಇಲ್ಲ. ನೀರು ಎಲ್ಲರಿಗೂ ಸರಿಯಾಗಿ ಸಿಗಬೇಕು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು. 

ಗ್ರಾಮಸ್ತ ಸುರೇಶ ಆಳ್ವ ಸಾಂತ್ಯ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯ ಹೆಚ್ಚಿನ ಕಡೆ ನೀರಿನ ಸಮಸ್ಯೆಇದೆ. ಇದನ್ನು ಗಂಬೀರವಾಗಿ ಪರಿಗಣಿಸಬೇಕು ಎಂದರು.

ಕರ್ನೂರು ಗಾಳಿಮುಖ  ವ್ಯಾಪ್ತಿಯಲ್ಲಿ  2 ತಿಂಗಳಾದರೂ ವಿದ್ಯುತ್‌ ಬಿಲ್‌ ನೀಡದೆ ಲೈನ್‌ ಕಡಿತಗೂಳಿಸಲು ಬಂದ ಬಗ್ಗೆ ಗ್ರಾಮಸ್ಥರೊಬ್ಬರು  ಪ್ರಶ್ನಿಸಿದರು. ಈ ಬಗ್ಗೆ ಗಮನಹರಿಸುದಾಗಿ ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಭರವಸೆ ನೀಡಿದರು. ಮಕ್ಕಳಿಗೆ ಪರೀಕ್ಷೆ  ನಡೆಯುವ ಈ ಸಂದರ್ಭದಲ್ಲಿ ವಿದ್ಯುತ್‌ ಕಡಿತಗೊಳಿಸಬಾರದು ಎಂದು ಇಲಾಖೆಯವರಲ್ಲಿ ಕೇಳಿಕೊಳ್ಳಲಾಯಿತು.

ಸುರುಳಿಮೂಲೆ ಪ್ರದೇಶದಲ್ಲಿ ಕಾಲೇಜು ಆರಂಭಿಸುವಂತೆ ಗ್ರಾಮಸ್ತ ಸುರೇಶ್‌ ಆಳ್ವ ಒತ್ತಾಯಿಸಿದರು.

ಬೀದಿ ನಾಯಿ ನಿಯಂತ್ರಿಸಿ
ಈಶ್ವರಮಂಗಲ ಪರಿಸರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಿದ್ದು ಶಾಲಾ ಮಕ್ಕಳಿಗೆ ಹಾಗೂ  ನಡೆದಾಡುವ ನಾಗರಿ ಕರಿಗೆ ತೊಂದರೆಯಾಗಿದೆ  ಎಂದು ಗ್ರಾಮಸ್ಥರೋರ್ವರು ಗಮನ ಸೆಳದರು. 

ಮೂಟ್ನೂರು ಗ್ರಾಮವನ್ನು ಮದ್ಯಮುಕ್ತ ಗ್ರಾಮವಾಗಿ ಮಾಡಲು ಯಾವುದೇ ಮದ್ಯದಂಗಡಿಗೆ ಗ್ರಾ.ಪಂ.ನಿಂದ ಪರವಾನಿಗೆ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು. ಬಳಿಕ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಗ್ರಾ.ಪಂ. ವ್ಯಾಪ್ತಿಯ  ಈಶ್ವರಮಂಗಲ ಹಾಗೂ ಮತ್ತಿತರ ಪ್ರದೇಶದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದ್ದು  ಇದನ್ನು ಪೊಲೀಸ್‌ ಇಲಾಖೆ ಸಮರ್ಥವಾಗಿ ಭೇದಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
  
ಮಾಜಿ ಸದಸ್ಯ ಅಬ್ದುಲ್‌ ಕುಂಞ್ಞ ಮಾತನಾಡಿ, ಈಶ್ವರಮಂಗಲ ಪೇಟೆಯಲ್ಲಿ ಮತ್ತು ಆಸುಪಾಸುನಲ್ಲಿ ತ್ಯಾಜ್ಯ ಎಸೆದಿದ್ದು ಸ್ವತ್ಛತೆ ಇಲ್ಲದಾಗಿದೆ. ಈ ಬಗ್ಗೆಯು ಪೊಲೀಸರು ಕ್ರಮ ಕೈಗೊಳ್ಳಬೇಕಿದೆ ಎಂದರು. ಇದಕ್ಕೆ ಈಶ್ವರಮಂಗಲ ಹೊರ ಠಾಣಾ ಎ.ಎಸ್‌.ಐ. ಸಿ. ಟಿ ಸುರೇಶ್‌ ಉತ್ತರಿಸಿ, ಪೂರಕವಾಗಿ ಕ್ರಮ ಕೈಗೊಳ್ಳಲುವ ಭರವಸೆ ನೀಡಿದರು.

ಪ್ರಸಕ್ತ ಸನ್ನಿವೇಶದಲ್ಲಿ ನೀರಿಗೆ ಅದ್ಯತೆ ನೀಡಿಬೇಕು ಎಂದು ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ  ಗ್ರಾ.ಪಂ.ಗೆ  ಸೂಚನೆ ನೀಡಿದರು.
 
ನೊಡೇಲ್‌ ಅಧಿಕಾರಿಯಾಗಿ ಪುತ್ತೂರು ತಾ.ಪಂ. ಯೋಜನಾಧಿಕಾರಿ ಗಣಪತಿ ಭಟ್‌ ಭಾಗವಹಿಸಿದರು. ತಾ.ಪಂ. ಸದಸ್ಯೆ ಫೌಝಿಯಾ ಇಬ್ರಾಹಿಮ್‌, ಗ್ರಾ.ಪಂ. ಸದಸ್ಯರಾದ   ರಮೇಶ್‌ ರೈ ಸಾಂತ್ಯ, ಸಂಶುದ್ದೀನ್‌, ಇಬ್ರಾಹಿಮ್‌ ಕೆ., ಇಂದಿರಾ, ಅಬ್ದಲ್‌ ಖಾದರ್‌, ಅಯಿಷಾ ಡಿ.ಎಂ., ಇಬ್ರಾಹಿಮ್‌ ಎಂ.ಬಿ., ಅಬ್ದಲ್ಲ  ಕೆ., ಅಸ್ಮ ಕೊಟ್ಯಾಡಿ, ವಿಜಯ, ವತ್ಸಲ, ಮಾಧವಿ, ಸುಶೀಲಾ, ಮಹಮ್ಮದ್‌ ಕುಂಞ್ಞ ಕೆ., ಉಷಾ, ಸುರೇಶ್‌ ನಾಯ್ಕ, ಲಲಿತಾ, ಲೀಲಾವತಿ,ಬಾಬು ಎನ್‌., ಪುಷ್ಪಾವತಿ, ನಾರಾಯಾಣ ರೈ ಉಪಸ್ಥಿತರಿದ್ದರು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ  ಸುನೀಲ್‌ ಸ್ವಾಗತಿಸಿದರು. ಕಾರ್ಯದರ್ಶಿ ವಂದಿಸಿದರು. ಸಿಬಂದಿ  ಶಿನಪ್ಪ ನಾಯ್ಕ, ಮಲ್ಲ, ಸಹಕಾರಿಸಿದರು.

ಟಾಪ್ ನ್ಯೂಸ್

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.