ರಾಜ್ಯ ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆ 2019ರ ಸಮಾರೋಪ

ಹೊಸಬೆಟ್ಟುವಿನ ಮಾರುತಿ ಕಡಲ ಕಿನಾರೆ

Team Udayavani, Apr 21, 2019, 6:16 AM IST

ಸುರತ್ಕಲ್‌: ಮಾರುತಿ ಫ್ರೆಂಡ್ಸ್‌ ಹೊಸಬೆಟ್ಟು ಇದರ ಆಶ್ರಯದಲ್ಲಿ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಹಗ್ಗ-ಜಗ್ಗಾಟ ಸ್ಪರ್ಧೆಯು ಕುಳಾಯಿ ಹೊಸಬೆಟ್ಟುವಿನ ಮಾರುತಿ ಕಡಲ ಕಿನಾರೆಯಲ್ಲಿ ನಡೆಯಿತು.

ರಾಜ್ಯದ ವಿವಿಧ ಭಾಗಗಳಿಂದ ಹತ್ತು ಹಲವಾರು ಬಲಿಷ್ಟ ತಂಡಗಳು ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿ ಯಾಗಿಸುವಲ್ಲಿ ಸಹಕರಿಸಿದರು. ಕಾರ್ಯ ಕ್ರಮದ ಸಮಾರೋಪ ಹೊಸಬೆಟ್ಟು ಮೊಗವೀರ ಸಂಘದ ಮಾಜಿ ಅಧ್ಯಕ್ಷ ಉಮೇಶ್‌ ಟಿ. ಕರ್ಕೇರ ಹೊಸಬೆಟ್ಟು ಅವರ ಅಧ್ಯ ಕ್ಷತೆಯಲ್ಲಿ ನಡೆಯಿತು.

ಅತಿಥಿಗಳಾಗಿ ಹೊಸಬೆಟ್ಟು ಮೊಗವೀರ ಸಂಘದ ಮಾಜಿ ಅಧ್ಯಕ್ಷ ಯೋಗೀಶ್‌ ಕರ್ಕೇರ, ಹೊಸಬೆಟ್ಟು ಸತ್ಯಜಾರಂದಾಯ ದೈವಸ್ಥಾನದ ಮೊಕ್ತೇಸರ ಶಶಿಧರ ಗುರಿಕಾರ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ, ಡಾ| ತಾರ ನಾಥ್‌ ಶೆಟ್ಟಿ ದ.ಕ. ಉಡುಪಿ ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಕರ್ನಾಟಕ ಪರ್ಸಿನ್‌ ಮೀನು ಗಾರರ ಸಂಘದ ಅಧ್ಯಕ್ಷ ಮೋಹನ್‌ ಬೆಂಗ್ರೆ, ಸುರತ್ಕಲ್‌ ಬಂಟರ ಸಂಘದ ಅಧ್ಯಕ್ಷ ಸುಧಾಕರ್‌ ಪೂಂಜ, ಉದ್ಯಮಿ ಹರೀಶ್‌ ಶೆಟ್ಟಿ, ಹಿಂದೂ ಯುವಸೇನೆ ಉಡುಪಿ ಅಧ್ಯಕ್ಷ ಮಂಜು ಕೊಳ, ಹೊಸಬೆಟ್ಟು ಮೀನುಗಾರರ ಸಹಕಾರಿ ಸಂಘ ಅಧ್ಯಕ್ಷ ಸಂತೋಷ್‌ ಹೊಸಬೆಟ್ಟು, ಯುವ ಉದ್ಯಮಿ ಚರಣ್‌ ಶ್ರೀಯಾನ್‌, ಮಾರುತಿ ಫ್ರೆಂಡ್ಸ್‌ ಹೊಸ ಬೆಟ್ಟು ಇದರ ಗೌರವಾಧ್ಯಕ್ಷ ಗಣೇಶ್‌ ಹೊಸಬೆಟ್ಟು, ಅಧ್ಯಕ್ಷ ಹರೀಶ್‌ ಪುತ್ರನ್‌ ಹೊಸಬೆಟ್ಟು ಉಪಸ್ಥಿತರಿದ್ದರು. ಶಿಫಾಲಿ ಎನ್‌. ಹೊಸಬೆಟ್ಟು ಸ್ವಾಗತಿಸಿ, ಪೂಜಾ ರಾವ್‌ ಸುರತ್ಕಲ್‌ ನಿರೂಪಿಸಿದರು.

ಪ್ರಶಸ್ತಿ ಪ್ರದಾನ
ವಿಜೇತ ತಂಡಗಳಿಗೆ ನಗದು ಪುರಸ್ಕಾರ ಮತ್ತು ಶಾಶ್ವತ ಫಲಕ “ಮಾರುತಿ ಟ್ರೋಫಿ-2019′ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪುರುಷರ ವಿಭಾಗದಲ್ಲಿ: ಪ್ರಥಮ ಸ್ಥಾನವನ್ನು ಬೀಚ್‌ ಫ್ರೆಂಡ್ಸ್‌ ಯುನೈಟೆಡ್‌ ಹೊಸಬೆಟ್ಟು, ದ್ವಿತೀಯ ಸ್ಥಾನವನ್ನು ಶ್ರೀ ರಾಮಭಕ್ತಾಂ ಜನೇಯ ಬಿ.ಸಿ. ರೋಡ್‌, ತೃತೀಯ ಸ್ಥಾನವನ್ನು ನಮ್ಮ ಜವನೆರ್‌ ಮಂಜನಕಟ್ಟೆ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ: ಪ್ರಥಮ ಸ್ಥಾನವನ್ನು ಪಡುಕೆರೆ ಫ್ರೆಂಡ್ಸ್‌ ಪಡುಕೆರೆ ಮಲ್ಪೆ, ದ್ವಿತೀಯ ಸ್ಥಾನವನ್ನು ಫ್ರೆಂಡ್ಸ್‌ ಮಹಿಳೆಯರು ಹೊಸಬೆಟ್ಟು ಪಡೆದುಕೊಂಡಿತು.

 


ಈ ವಿಭಾಗದಿಂದ ಇನ್ನಷ್ಟು

  • ಮಂಗಳೂರು: ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್‌ ಕುಮಾರ್‌ ಕಟೀಲು ಅವರು ಮೂರನೇ ಬಾರಿಗೆ ಸಂಸತ್‌ ಪ್ರವೇಶಿಸುವ ಮೂಲಕ ಕರಾವಳಿ ಮಾತ್ರವಲ್ಲ ಇಡೀ ರಾಷ್ಟ್ರ...

  • ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದಿನ ಎರಡು ಚುನಾವಣೆಗಳಲ್ಲಿಯೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ನಳಿನ್‌...

  • ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಿಂದ ನಿರಂತರ 3ನೇ ಬಾರಿಗೆ ಗೆಲುವು ಸಾಧಿಸಿರುವ ನಳಿನ್‌ ಕುಮಾರ್‌ ಕಟೀಲು ಅವರಿಗೆ ಈ ಬಾರಿಯ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ...

  • ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲಾ ಯುವ ಕಾಂಗ್ರೆಸ್‌...

  • ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸುವುದಕ್ಕೆ ಶತಾಯಗತಾಯ ಪ್ರಯತ್ನ ನಡೆಸಿದ್ದರೂ ಯಶಸ್ಸು ಕಾಣದಿರಲು ಕಾರಣಗಳೇನು...

ಹೊಸ ಸೇರ್ಪಡೆ