ಮಧ್ವರ 32 ಅಡಿ ಎತ್ತರದ ಏಕಶಿಲಾ ಪ್ರತಿಮೆ


Team Udayavani, Mar 28, 2017, 3:50 AM IST

28-SPORTS-11.jpg

ಕಾಪು: ಪಲಿಮಾರು ಮಠಾಧೀಶರ ಸಂಕಲ್ಪದಂತೆ ಕುರ್ಕಾಲು ಗ್ರಾಮದ ಕುಂಜಾರುಗಿರಿ ಶ್ರೀ ದುರ್ಗಾ ಬೆಟ್ಟದಲ್ಲಿ 40 ಅಡಿ ಎತ್ತರದ ಸಿಮೆಂಟ್‌ ಪಿಲ್ಲರ್‌ (ವೇದಿಕೆ) ಮೇಲೆ ಪ್ರತಿಷ್ಠಾಪಿಸಲು ಉದ್ದೇಶಿರುವ ಪ್ರಪಂಚದಲ್ಲೇ ಅತೀ ದೊಡ್ಡದಾದ 32 ಅಡಿ ಎತ್ತರದ ಜಗದ್ಗುರು ಶ್ರೀ ಮಧ್ವಾಚಾರ್ಯರ ಬೃಹತ್‌ ಏಕಶಿಲಾ ಪ್ರತಿಮೆಯನ್ನು ಕ್ರೇನ್‌ ಮೂಲಕ ಪ್ರತಿಷ್ಠಾಪನೆಗೊಳಿಸುವ ಪ್ರಕ್ರಿಯೆ ಮಾ. 27ರಂದು ನಡೆಯಿತು.

ಕಳೆದ ಮೂರ್‍ನಾಲ್ಕು ದಿನಗಳಿಂದ ಎಲ್‌ ಆ್ಯಂಡ್‌ ಟಿ ಕಂಪೆನಿಯ ಎಂಜಿನಿಯರ್‌ಗಳ ಮಾರ್ಗದರ್ಶನದಲ್ಲಿ ಬೃಹತ್‌ ಕ್ರೇನ್‌ಗಳ ಸಹಾಯದಿಂದ ಶ್ರೀ ಮಧ್ವಾಚಾರ್ಯರ ಏಕಶಿಲಾ ಪ್ರತಿಮೆಯನ್ನು ಪಿಲ್ಲರ್‌ಗಳ ಮೇಲೆ ಎತ್ತಿ ನಿಲ್ಲಿಸುವ ಕಾರ್ಯ ನಡೆಯುತ್ತಿದ್ದು, ಸೋಮವಾರ ಸಂಜೆ ಅಂತಿಮ ಹಂತದಲ್ಲಿ ತಾಂತ್ರಿಕ ಅಡಚಣೆ ಎದುರಾಗಿದ್ದು, ಮಂಗಳವಾರ ಪ್ರತಿಮೆ ಪ್ರತಿಷ್ಠಾಪನೆಗೊಳ್ಳುವ ನಿರೀಕ್ಷೆಯಿದೆ. ಶ್ರೀ ಮಧ್ವಾಚಾರ್ಯರ ಏಕಶಿಲಾ ವಿಗ್ರಹವನ್ನು ಆಚಾರ್ಯರು ಅವತರಿಸಿದ ಪಾಜಕ ಸಮೀಪದಲ್ಲಿರುವ ಅದಮಾರು ಮಠದ ಆಡಳಿತಕ್ಕೊಳಪಟ್ಟಿರುವ ಕುಂಜಾರುಗಿರಿ ಬೆಟ್ಟದಲ್ಲಿ ಪ್ರತಿಷ್ಠಾಪಿಸಬೇಕು ಎನ್ನುವುದು ಪಲಿಮಾರು ಶ್ರೀಗಳ ಸಂಕಲ್ಪವಾಗಿತ್ತು.

32 ಅಡಿ ಎತ್ತರದ ಏಕಶಿಲಾ ವಿಗ್ರಹ 
32 ಅಡಿ ಎತ್ತರ (110 ಟನ್‌ ತೂಕ)ದ ವಿಗ್ರಹವನ್ನು 40 ಅಡಿ ಎತ್ತರದ (250 ಟನ್‌ ಭಾರ ಹೊರುವ ಸಾಮರ್ಥ್ಯ) ಪಿಲ್ಲರ್‌ಗಳ ಮೇಲೆ ಅಳವಡಿಸಲಾಗಿರುವ 8 ಅಡಿ ದಪ್ಪದ ಪದ್ಮ ಪೀಠದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.

ಮೇ 8ರಿಂದ-10ರವರೆಗೆ ಪ್ರತಿಷ್ಠಾಪನಾ ಕಾರ್ಯ: ಪಲಿಮಾರು ಶ್ರೀ
ಆಚಾರ್ಯ ಮಧ್ವರ ಏಕಶಿಲಾ ವಿಗ್ರಹದ ಪ್ರತಿಷ್ಠಾ ಧಾರ್ಮಿಕ ವಿಧಿ ವಿಧಾನ ಮತ್ತು ಅಭಿಷೆೇಕ ಹಾಗೂ ಇತರ ಕಾರ್ಯಗಳು ಮುಂದಿನ ಮೇ 8ರಿಂದ 10ರ ವರೆಗೆ ನಡೆಯಲಿದೆ. ಬಳಿಕ ಇಲ್ಲಿ ನಿತ್ಯ ಪೂಜೆ ಸಹಿತ ಭಕ್ತರಿಗೆ ಧ್ಯಾನಕ್ಕೆ ಅಗತ್ಯವಾಗಿರುವ ಆಧ್ಯಾತ್ಮಿಕ ವಾತಾವರಣ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ವಿಗ್ರಹ ಪ್ರತಿಷ್ಠಾಪನೆಗೆ ಸಂಕಲ್ಪಿಸಿರುವ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಕುಂಜಾರಿನಲ್ಲೇ ಸ್ಥಾಪನೆ ಯಾಕೆ ? 
ಕುಂಜಾರುಗಿರಿ – ಪಾಜಕ ಕ್ಷೇತ್ರ ಆಚಾರ್ಯರು ಅವತಾರ ಮಾಡಿದ ಕ್ಷೇತ್ರ. ಬಾಲ್ಯದಲ್ಲಿ ತಿರುಗಾಡಿದ ಕ್ಷೇತ್ರ, ದುರ್ಗಾ ಬೆಟ್ಟದಲ್ಲೇ ಧ್ಯಾನಸ್ಥರಾಗಿದ್ದು, ಅದೇ ಕಾರಣದಿಂದ ಇಲ್ಲಿ ಮಧ್ವಾಚಾರ್ಯರ ವಿಗ್ರಹ ಪ್ರತಿಷ್ಠಾಪಿಸಲು ಸಂಕಲ್ಪಿಸಲಾಗಿದೆ ಎಂದು ಪಲಿಮಾರು ಶ್ರೀ ತಿಳಿಸಿದ್ದಾರೆ. ಕಿರಿಯ ಶ್ರೀ ಈಶಪ್ರಿಯ ತೀರ್ಥರು ಉಪಸ್ಥಿತರಿದ್ದರು.

ವಿಶೇಷ ಶಿಲೆಯಲ್ಲಿ  ವಿಗ್ರಹ
ಬೆಂಗಳೂರಿನ ದೇವನಹಳ್ಳಿಯಿಂದ ತರಿಸಲಾಗಿದ್ದ ಕೋಯ್ನಾ ಗ್ರೇ ಗ್ರಾನೈಟ್‌ ಶಿಲೆಯನ್ನು ಕೆ.ಎಂ. ಶೇಷಗಿರಿ ಅವರ ವಿನ್ಯಾಸ, ಪರಿಕಲ್ಪನೆ ಮತ್ತು ಮೇಲ್ವಿಚಾರಣೆಯಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಶಿಲ್ಪಿ ಅಶೋಕ್‌ ಗುಡಿಗಾರ್‌ ಬೆಂಗಳೂರು ಅವರ ಮಾರ್ಗದರ್ಶನದಲ್ಲಿ, ಶಿಲ್ಪಿ ಕುಮಾರ್‌ ಅವರ ನೇತೃತ್ವದ ಶಿಲ್ಪಿಗಳ ತಂಡ ಜಗದ್ಗುರು ಮಧ್ವಾಚಾರ್ಯರ ವಿಗ್ರಹವನ್ನಾಗಿ ಪರಿವರ್ತಿಸಿದ್ದರು. ಆರ್ಕಿಟೆಕ್ಟ್ ರಾಜೇಂದ್ರ ಮಯ್ಯ ಅವರ ಮಾರ್ಗದರ್ಶನದಲ್ಲಿ ಎಂಜಿನಿಯರ್‌ ಲಕ್ಷ್ಮೀನಾರಾಯಣ್‌ ನೇತೃತ್ವದಲ್ಲಿ ಕಾಂಕ್ರೀಟ್‌ ಪಿಲ್ಲರ್‌ ಅಳವಡಿಕೆ ಸಹಿತ ನೆಲ ಸಮತಟ್ಟು ಮಾಡುವ ಕೆಲಸ ನಿರ್ವಹಿಸಿದ್ದರು.

32 ಪ್ರತಿಮಾ ಲಕ್ಷಣ
32 ಪ್ರತಿಮಾ ಲಕ್ಷಣ ಹೊಂದಿರುವ ಶ್ರೀ ಮಧ್ವಾಚಾರ್ಯರ ಶಿಲಾ ಪ್ರತಿಮೆ ಜಗತ್ತಿನಲ್ಲೇ – ದಕ್ಷಿಣ ಭಾರತದಲ್ಲೇ ಪ್ರಥಮದ್ದಾಗಿದೆ. ತಂತ್ರಸಾರ ಗ್ರಂಥದಲ್ಲಿ ಆಚಾರ್ಯ ಮಧ್ವರೇ ತಿಳಿಸಿರುವಂತೆ ಪ್ರತಿಮೆ ನಿರ್ಮಿಸಲಾಗಿದೆ. 32 ಅಡಿ ಎತ್ತರದ ಪ್ರತಿಮೆಯನ್ನು 32 ತಿಂಗಳ ಕಾಲ ಕೆತ್ತಲಾಗಿದೆ. ಗ್ರಂಥಸ್ಥವಾಗಿ ಕೆತ್ತಿರುವ ವಿಗ್ರಹದ ಮೂಲಕ ಚೋಳ ಶೈಲಿ, ಹೊಯ್ಸಳ ಶೈಲಿಯೂ ಸೇರಿದಂತೆ ದಕ್ಷಿಣ ಭಾರತದ ಅನೇಕ ಶೈಲಿಗಳನ್ನು ಪರಿಚಯಿಸಲಾಗಿದೆ ಎಂದು ವಿನ್ಯಾಸ, ಪರಿಕಲ್ಪನೆ ಮತ್ತು ಮೇಲ್ವಿಚಾರಕರಾಗಿರುವ ಕೆ.ಎಂ. ಶೇಷಗಿರಿ ಅವರು ತಿಳಿಸಿದರು.

►Special Photo Gallery►ಕುಂಜಾರುಗಿರಿಯಲ್ಲಿ ಎದ್ದುನಿಂತ ಆಚಾರ್ಯ ಮಧ್ವರ ಶಿಲಾಪ್ರತಿಮೆ: http://bit.ly/2ocW1S5

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.