ಅಡಿಕೆ ಮರ ಏರಲು ಸುಲಭ ಸಾಧನ ಆವಿಷ್ಕಾರ

 ನೂತನ ವಿಧಾನ ಕಂಡುಹಿಡಿದ ಎಂಜಿನಿಯರ್‌ ಪದವೀಧರ ಲಾಲ್‌ಕೃಷ್ಣ

Team Udayavani, May 9, 2019, 5:50 AM IST

3

ಬೆಳ್ಳಾರೆ: ಇವರು ಓದಿದ್ದು ಸಿವಿಲ್‌ ಎಂಜಿನಿಯರ್‌ ಪದವಿ. ಆದರೆ ಸೆಳೆದದ್ದು ಕೃಷಿ. ಎಂಜಿನಿಯರಿಂಗ್‌ ಪದವಿ ಬಳಿಕ ಕೃಷಿಯಲ್ಲೇ ಆಸಕ್ತಿಯಿಂದ ತೊಡ ಗಿಸಿಕೊಂಡು ಕೃಷಿ ತಾಂತ್ರಿಕತೆಯಲ್ಲಿ ಹೊಸ ಅವಿಷ್ಕಾರಕ್ಕೆ ಮುಂದಾಗಿರುವ ಸುಳ್ಯ ತಾಲೂಕಿನ ಮುಪ್ಪೇರ್ಯ ಗ್ರಾಮದ ಲಾಲ್‌ಕೃಷ್ಣ ಕೈಂತಜೆ ಇದೀಗ ಅಡಿಕೆ ಮರ ಏರಲು ಸುಲಭ ಉಪಾಯ ಕಂಡುಹಿಡಿಯುವ ಪ್ರಯತ್ನದಲ್ಲಿ ಸಫ‌ಲರಾಗಿದ್ದಾರೆ.

ಬೆಳೆಗಾರರಿಗೆ ಕಾಡುವ ಬಹುದೊಡ್ಡ ಸಮಸ್ಯೆಯಾದ ಅಡಿಕೆ ಮರ ಹತ್ತುವ ಕಾರ್ಯಕ್ಕೆ ವಿಭಿನ್ನ ಪ್ರಯತ್ನಗಳು ನಡೆ ಯುತ್ತಲೇ ಇವೆ. ಕೊಳೆರೋಗಕ್ಕೆ ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು ಇವೆಲ್ಲದಕ್ಕೂ ಅಡಿಕೆ ಮರ ಏರಲೇಬೇಕು ಆದರೆ ಕಾರ್ಮಿ ಕರ ಕೊರತೆ ಹಾಗೂ ಅಡಿಕೆ ಮರವನ್ನು ಹತ್ತಿ ಮೇಲೆ ಕುಳಿತು ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು ಸುಲಭದ ಕೆಲಸವಲ್ಲ. ಒಂದು ಕಡೆ ಯಂತ್ರಗಳ ಆವಿಷ್ಕಾರ ನಡೆಯುತ್ತಿದ್ದರೆ ಮತ್ತೂಂದು ಕಡೆ ಸುಲಭದಲ್ಲಿ ಹಾಗೂ ರಕ್ಷಣಾತ್ಮಕವಾಗಿ ಹೇಗೆ ಮರ ಏರಬಹುದು ಎನ್ನುವ ಬಗ್ಗೆಯೂ ಅಧ್ಯಯನ, ಪ್ರಯತ್ನ ನಡೆಯುತ್ತಿವೆ. ಲಾಲ್‌ ಕೃಷ್ಣ ಕೈಂತಜೆ ಪ್ರಯತ್ನ ಸುಲಭದಲ್ಲಿ ಅಡಿಕೆ ಮರ ಏರು ವುದು ಹಾಗೂ ತ್ರಾಸದಾಯಕವಲ್ಲದ ರೀತಿಯಲ್ಲಿ ಅಡಿಕೆ ಮರದಲ್ಲಿ ನಿಂತು ಔಷಧಿ ಸಿಂಪಡಣೆ ಹಾಗೂ ಕೊಯ್ಲು ಮಾಡುವುದಕ್ಕೆ ದಾರಿ ಕಂಡುಕೊಂಡಿದ್ದಾರೆ.

ಬ್ರೆಜಿಲ್‌ನಲ್ಲಿ ಕೃಷಿಕರು ಬಳ್ಳಿಯ ಸಹಾಯದಿಂದ ಮರ ಏರುವ ಉಪಾಯ ವನ್ನು ನೋಡಿದ ಲಾಲ್‌ಕೃಷ್ಣ ಅವರು ಮರ ಏರುವ ಯಂತ್ರಗಳ ಬಗ್ಗೆ, ಸುಲಭ ಉಪಾಯಗಳ ಬಗ್ಗೆ ಹುಡುಕಾಟ ನಡೆಸಿ ಈ ಪ್ರಯತ್ನ ಮಾಡಿದ್ದಾರೆ. ತೆಂಗಿನ ಮರಕ್ಕೆ ಬಳ್ಳಿಯ ಸಹಾಯದಿಂದ ಏರುವ ಮಾದರಿಯಲ್ಲೇ ಅಡಿಕೆ ಮರ ಏರಲು ಬಳ್ಳಿಯಲ್ಲಿ ಬೇಕಾದ ವಿನ್ಯಾಸ ಮಾಡಿದ್ದಾರೆ.

ಏನಿದು ಉಪಾಯ?
ಎರಡು ಬಳ್ಳಿ ಹಾಗೂ ಬೈಕ್‌ ಅಥವಾ ಸ್ಕೂಟರ್‌ ಟಯರ್‌ ಇದ್ದರೆ ಸಾಕು ಈ ಪ್ರಯತ್ನ ಸಾಧ್ಯವಾಗುತ್ತದೆ. ಬಳ್ಳಿಯ ಒಂದು ತುದಿಗೆ ಟಯರ್‌ ಕಟ್ಟಿ, ಇನ್ನೊಂದು ತುದಿಯನ್ನು ಅಡಿಕೆ ಮರಕ್ಕೆ ಸಿಕ್ಕಿಸಿಕೊಂಡು ಏರುವ ಉಪಾಯ ಇದು. ಇದರಲ್ಲಿ ಇನ್ನಷ್ಟು ಸುಧಾರಣೆಗಳು ಇವೆ. ಈ ಮೂಲಕ ಸುಲಭದಲ್ಲಿ ಮರ ಏರಲು ಸಾಧ್ಯವಾಗುತ್ತದೆ ಹಾಗೂ ಆಯಾಸ ಕಡಿಮೆಯಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ನಿರಂತರ ಪ್ರಯೋಗ
ಕೃಷಿಯಲ್ಲಿ ಆಧುನಿಕ ಆವಿಷ್ಕಾರಗಳು ಹಾಗೂ ನೂತನ ಪ್ರಯತ್ನಗಳನ್ನು ಮಾಡಿ ದಾಗ ಮಾತ್ರ ಕೃಷಿಕರ ಬೆಳವಣಿಗೆ ಸಾಧ್ಯ ಇದನ್ನು ಮನಗಂಡಿರುವ ಲಾಲ್‌ ಕೃಷ್ಣ ಹಾಗೂ ಅವರ ಕುಟುಂಬ ಕೃಷಿ ಸುಲಭಕ್ಕೆ ವಿವಿಧ ಪ್ರಯೋಗ ಮಾಡುತ್ತಲೇ ಇದ್ದಾರೆ. ಕೃಷಿ ಬೆಳವಣಿಗೆಯಲ್ಲಿ ಹೊಸ ಆವಿಷ್ಕಾರಗಳೊಂದಿಗೆ ಸುಲಭ ಕೃಷಿಯಲ್ಲಿ ಯಶಸ್ಸು ಕಾಣುವ ಭರವಸೆಯೊಂದಿಗೆ ಲಾಲ್‌ಕೃಷ್ಣ ತೊಡಗಿಸಿಕೊಂಡಿದ್ದಾರೆ.

-  ಉಮೇಶ್‌ ಮಣಿಕ್ಕಾರ

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.