ಪ್ರತಿ ವರ್ಷದ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ

ದೊಡ್ಡ ಗಾತ್ರದ ಹೊಂಡ-ಗುಂಡಿಗಳಿಂದ ಸಂಚಾರಕ್ಕೆ ತೊಡಕು

Team Udayavani, Sep 23, 2019, 5:25 AM IST

ದರ್ಬೆ: ನಗರದ ಮುಖ್ಯ ರಸ್ತೆಯ ದರ್ಬೆ ಸರ್ಕಲ್‌ ಬಳಿ ಪ್ರತಿ ವರ್ಷದಂತೆ ಈ ಬಾರಿಯೂ ಎರಡು ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

ಸುಳ್ಯ ಭಾಗದಿಂದ ಪುತ್ತೂರು ನಗರಕ್ಕೆ ಸಂಪರ್ಕಿಸುವ ದ್ವಿಪಥ ರಸ್ತೆಯ ಒಂದು ಭಾಗದಲ್ಲಿ ಎರಡು ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಕಳೆದ ಎರಡು ವಾರಗಳ ಹಿಂದೆ ಈ ಹೊಂಡ ನಿರ್ಮಾಣ ವಾಗಿದ್ದರೂ ಯಾರೋ ಅಪಾಯ ವನ್ನು ಸೂಚಿಸಲು ಬ್ಯಾರಿಕೇಡ್‌ಗಳನ್ನು ತಂದಿರಿಸಿದ್ದು ಬಿಟ್ಟರೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.

ಈ ಭಾಗದಲ್ಲಿ ಮೂರು ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಪ್ರತಿ ಬಾರಿಯೂ ಹೊಂಡ ನಿರ್ಮಾಣವಾಗುತ್ತದೆ. ಸಾರ್ವಜನಿಕ ಮನವಿಯ ಬಳಿಕ ಸ್ಥಳೀಯಾಡಳಿತ ತಾತ್ಕಾಲಿಕ ದುರಸ್ತಿ ಮಾಡುತ್ತದೆ. ಮುಂದಿನ ವರ್ಷಕ್ಕೆ ಮತ್ತೆ ಅದೇ ಸಂಕಟ ಎದುರಾಗುತ್ತದೆ.

ಅಪಾಯವಿದೆ
ಎರಡೂ ಹೊಂಡಗಳಿಗೆ ಲಿಂಕ್‌ ಇರುವಂತೆ ಒಳಭಾಗದಲ್ಲಿ ದೊಡ್ಡ ಪ್ರಮಾಣದ ಕುಸಿತ ಉಂಟಾಗಿದೆ. ಘನ ವಾಹನಗಳೂ ಸಂಚರಿಸುವುದರಿಂದ ಈ ಕುಸಿತ ಅಧಿಕವಾಗುವ ಅಪಾಯವಿದೆ. ಪ್ರಸ್ತುತ ಬ್ಯಾರಿಕೇಡ್‌ ಅಳವಡಿಸಿ ರಸ್ತೆ ಕಿರಿದಾಗಿರುವುದರಿಂದ ವಾಹನಗಳ ದಟ್ಟಣೆ ಇರುವ ಸಂದರ್ಭ ಟ್ರಾಫಿಕ್‌ ಜಾಂ ಉಂಟಾಗುತ್ತಿದೆ.

ಶಾಶ್ವತ ಪರಿಹಾರ ಬೇಕು
ಇಲ್ಲಿ ರಸ್ತೆ ಹೊಂಡ ನಿರ್ಮಾಣವಾಗುವ ಸ್ಥಿತಿ ಪ್ರತಿ ವರ್ಷವೂ ಮುಂದುವರಿಯುತ್ತಿರುವ ಕಾರಣ ತಾತ್ಕಾಲಿಕ ದುರಸ್ತಿ ಮಾಡಿ ಹಣ ಪೋಲು ಮಾಡುವ ಬದಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಚಿಂತನೆ ನಡೆಸಬೇಕಿದೆ ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ.

 ಶೀಘ್ರ ತೀರ್ಮಾನ
ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡಗಳು ಸೃಷ್ಟಿಯಾಗಿರುವುದನ್ನು ಗಮನಿಸಿದ್ದೇವೆ. ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸ್ವಲ್ಪ ದೊಡ್ಡ ಅನುದಾನ ಬೇಕಾಗುತ್ತದೆ. ಈ ಕುರಿತು ಶೀಘ್ರ ನಗರಸಭೆಯಲ್ಲಿ ತೀರ್ಮಾನ ಕೈಗೊಂಡು ಟೆಂಡರ್‌ ಕರೆದು ಸರಿಪಡಿಸುತ್ತೇವೆ.
– ರೂಪಾ ಟಿ. ಶೆಟ್ಟಿ,
ಪೌರಾಯುಕ್ತರು, ನಗರಸಭೆ ಪುತ್ತೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ