ಇಂದು ವಿಶ್ವ ರೇಡಿಯೋ ದಿನ: ಇದು ಆಕಾಶವಾಣಿ… ನೀವು ಕೇಳುತ್ತಿರುವಿರಿ…

Team Udayavani, Feb 13, 2020, 5:05 AM IST

RADIO-DAY

ಜಗತ್ತಿನ ಪ್ರತಿಯೊಬ್ಬ ನಾಗರಿಕನಿಗೂ ಸುಲಭವಾಗಿ, ವೇಗವಾಗಿ ತಲುಪಬಹುದಾದ ಮಾಧ್ಯಮ ರೇಡಿಯೋ. “ಓಲ್ಡ್‌ ಈಸ್‌ ಗೋಲ್ಡ್‌’ ಎನ್ನುವಂತೆ ರೇಡಿಯೋ ತನ್ನ ಮಹತ್ವವನ್ನು ಇಂದಿಗೂ ಕಳೆದುಕೊಂಡಿಲ್ಲ. ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ರೇಡಿಯೋ ಕೇಳುಗರ ಸಂಖ್ಯೆ ವಿರಳವಾದರೂ ಅದರ ಕೇಳುಗ ವರ್ಗ ಈಗಲೂ ಇದೆ. ಜಗತ್ತಿನಲ್ಲಿ ನಡೆದ ಮಹಾನ್‌ ಘಟನೆಗಳ ಸುದ್ದಿಯನ್ನು ಜನರಿಗೆ ತಲುಪಿಸಿದ್ದೇ ರೇಡಿಯೋ. ಈಗಲೂ ಹಳ್ಳಿ ಜನರ ದೈನಂದಿನ ದಿನದ ಸಂಗಾತಿಯಾಗಿರುವ ರೇಡಿಯೋವನ್ನು ನೆನಪಿಸಲೆಂದೇ ವಿಶ್ವಸಂಸ್ಥೆ ವರ್ಷದಲ್ಲೊಂದು ದಿನವನ್ನು ರೇಡಿಯೋಗಾಗಿ ಮೀಸಲಿರಿಸಿದೆ. ಆ ದಿನಾಚರಣೆ ಇಂದು.

ಮೂಡಣದಲ್ಲಿ ಸೂರ್ಯನ ತೇಜೋ ಕಿರಣಗಳು ಮನೆಯ ಅಂಗಳಕ್ಕೆ ಬೀಳುವ ಸಮಯ. ಹಿತ್ತಲಲ್ಲಿ ಹೂಗಳು ಸುವಾಸನೆ ಬೀರುವ ಹೊತ್ತು. ಅಮ್ಮ ಮಾಡಿದ ಕಾಫಿಯ ಘಮಲು ಬೆಳಗನ್ನು ನಿಚ್ಚಳಗೊಳಿಸುತ್ತಿದೆ. ಮನೆಯ ಒಂದು ಮೂಲೆಯಲ್ಲಿ ತಾತ ತನ್ನ ಹಳೆಯ ಕಾಲದ ಚೇರ್‌ನಲ್ಲಿ ಕಾಫಿಯನ್ನು ಹೀರುತ್ತಾ, ಪೇಪರ್‌ ಓದುತ್ತಿದ್ದಾರೆ. ಅವರು ತನ್ನ ಮಗ್ಗುYಲಲ್ಲಿರುವ ರೇಡಿಯೋವನ್ನು ಆನ್‌ ಮಾಡಿದಾಗ ಇದು ಆಕಾಶವಾಣಿ ಎಂಬ ಧ್ವನಿ ಕೇಳಿದಾಗಲೇ ಆಡು-ಕಂದಮ್ಮಗಳಿಗೆ ಬೆಳಗ್ಗಿನ ಶುಭ ಸಂದೇಶ. ಅಲ್ಲೇ ದೂರದಲ್ಲಿರುವ ಅಜ್ಜಿಯಿಂದ “ಸ್ವಲ್ಪ ಸೌಂಡ್‌ ಜೋರಾಗಿಡಿ, ನಾವೂ ಸುದ್ದಿ ಕೇಳುತ್ತೇವೆ’ ಎಂಬ ಒತ್ತಾಯ. ವಾರ್ತೆ, ಬಳಿಕ ಉದಯರಾಗ, ತದನಂತರ ಚಿತ್ರಗೀತೆಗಳು… ಹೀಗೆ ದಿನದ ಆರಂಭದಿಂದ ಕೊನೆ ಘಳಿಗೆಯವರೆಗೂ ರೇಡಿಯೋ ಜೀವನದಲ್ಲಿ ಹಾಸುಹೊಕ್ಕು.

ರೇಡಿಯೋ ಒಂದು ಶ್ರಾವ್ಯ ಮಾಧ್ಯಮ. ಒಂದು ಕಾಲದಲ್ಲಿ ಗ್ರಾಮೀಣ ಭಾರತದ ಇಂಚು ಇಂಚನ್ನು ತಲುಪಿತ್ತು. ದೇಶದ ಜನತೆ ರೇಡಿಯೋದೊಂದಿಗೆ ಭಾವನಾತ್ಮಕ ಅನುಬಂಧವನ್ನಿಟ್ಟುಕೊಂಡಿದ್ದಾರೆ. ಈ ಅನುಬಂಧವನ್ನು ಸ್ಮರಿಸಲು ವಿಶ್ವ ರೇಡಿಯೋ ದಿನಾಚರಣೆ ಒಂದು ಪ್ರಶಸ್ತ ವೇದಿಕೆ.

ರೇಡಿಯೋ ಪ್ರಸಾರದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಸುಧಾರಿಸಲು ಮತ್ತು ರೇಡಿಯೋದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೆಸ್ಕೋ ಪ್ರತಿವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸುತ್ತದೆ. ವಿಶ್ವಸಂಸ್ಥೆಯ ಇಂಟರ್‌ನ್ಯಾಶನಲ್‌ ಬ್ರ್ಯಾಂಡ್‌ಕಾಸ್ಟ್‌ ಸರ್ವಿಸ್‌ 1946ರ ಫೆ. 13ರಂದು ಆರಂಭವಾಗಿರುವುದು ಇದೇ ದಿನಾಂಕವನ್ನು ಆರಿಸಿಕೊಳ್ಳಲು ಇನ್ನೊಂದು ಕಾರಣ.

ಹಿನ್ನೆಲೆ
2010ರ ಸೆ. 20ರಂದು ಸ್ಪೇಯ್ನನ ಸ್ಪ್ಯಾನಿಷ್‌ ರೇಡಿಯೋ ಅಕಾಡೆಮಿಯು ಯುನೆಸ್ಕೋದ ಮುಂದೆ ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬೇಡಿಕೆಯನ್ನು ಮಂಡಿಸಿತು. 2010ರ ಸೆ. 29ರಂದು ವಿಶ್ವ ರೇಡಿಯೋ ದಿನದ ಆಚರಣೆಯನ್ನು ಘೋಷಿಸಲಾಯಿತು. 2012ರ ಡಿಸೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅನುಮೋದಿಸಿತು. ವಿಶ್ವ ರೇಡಿಯೋ ದಿನವನ್ನು ಆಚರಿಸುವ ಸಂಪ್ರದಾಯ 2012ರ ಫೆ. 13ರಿಂದ ಪ್ರಾರಂಭವಾಯಿತು.ರೇಡಿಯೋ ಜನರಿಗೆ ಶಿಕ್ಷಣ, ಕೃಷಿ ಮತ್ತಿತರ ಕ್ಷೇತ್ರಗಳ ಮಾಹಿತಿ ಮತ್ತು ಸುದ್ದಿಗಳನ್ನು ಒದಗಿಸುವ ಮಾಧ್ಯಮವಾಗಿದೆ ಮಾತ್ರವಲ್ಲದೆ, ಅವರು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಒಂದು ವೇದಿಕೆಯೂ ಆಗಿದೆ. ಇಟಲಿಯ ಮಾರ್ಕೊನಿ ರೇಡಿಯೋದ ಪಿತಾಮಹ. ಆರಂಭದಲ್ಲಿ ರೇಡಿಯೋವನ್ನು ವೈರ್‌ಲೆಸ್‌ ಟೆಲಿಗ್ರಾಫ್ ಎಂದು ಕರೆಯಲಾಗುತ್ತಿತ್ತು.

ಆಲ್‌ ಇಂಡಿಯಾ
ರೇಡಿಯೋ (ಎಐಆರ್‌)
ಆಲ್‌ ಇಂಡಿಯಾ ರೇಡಿಯೋ (ಎಐಆರ್‌) ವಿಶ್ವದ ಅತಿದೊಡ್ಡ ರೇಡಿಯೋ ನೆಟ್‌ವರ್ಕ್‌ ಎಂಬ ಖ್ಯಾತಿಯನ್ನು ಹೊಂದಿದೆ. 1936ರ ಜೂನ್‌ 8ರಂದು ಆಲ್‌ ಇಂಡಿಯಾ ರೇಡಿಯೋ ಸ್ಥಾಪನೆಯಾಯಿತು. ಇದು ದೇಶದ ಜನಸಂಖ್ಯೆಯ ಶೇ. 99.19ರಷ್ಟು ಜನರನ್ನು ತಲುಪುತ್ತಿದೆ. 23 ಭಾಷೆಗಳಲ್ಲಿ ಆಲ್‌ ಇಂಡಿಯಾ ರೇಡಿಯೋ ಪ್ರಸಾರವಾಗುತ್ತದೆ. ಕುಗ್ರಾಮಗಳನ್ನು ಕೂಡ ತಲುಪಿರುವ ಮಾಧ್ಯಮ ಇದಾಗಿದೆ.

ವೈವಿಧ್ಯದ ಸಂದೇಶ
“ರೇಡಿಯೋ ಮತ್ತು ವೈವಿಧ್ಯ’ ಎಂಬ ಥೀಮ್‌ ಇರಿಸಿಕೊಂಡು ಈ ಬಾರಿ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತಿದೆ. ನ್ಯೂಸ್‌ ರೂಮ್‌ ಮತ್ತು ಏರ್‌ ವೇಯಲ್ಲಿ ವೈವಿಧ್ಯ ಕಾಪಾಡಿಕೊಳ್ಳುವುದು ಮತ್ತು ಕೇಳುಗರ ಸದಭಿರುಚಿಗೆ ಅನುಗುಣವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವುದು, ಸಮುದಾಯಗಳ ಕಾರ್ಯಕ್ರಮದಲ್ಲಿ ವೈವಿಧ್ಯವನ್ನು ತರುವುದು ಆಚರಣೆಯ ಉದ್ದೇಶ. ವಿಶ್ವ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ 44 ಸಹಸ್ರ ರೇಡಿಯೋ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

– ಧನ್ಯಶ್ರೀ ಬೋಳಿಯಾರ್‌

ಟಾಪ್ ನ್ಯೂಸ್

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.