ಮತ ಎಣಿಕೆ ಕೇಂದ್ರಗಳು ಭದ್ರತೆ ಮುಕ್ತ!

Team Udayavani, May 25, 2019, 6:15 AM IST

240519ASTRO05

ಸುರತ್ಕಲ್‌/ಉಡುಪಿ: ಒಂದು ತಿಂಗಳಿಗಿಂತಲೂ ಹೆಚ್ಚು ಅವಧಿಯಿಂದ ಪೊಲೀಸರ ಬಿಗಿ ಭದ್ರತೆಯ ನೆರಳಿನಲ್ಲಿದ್ದ ಸುರತ್ಕಲ್‌ನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಉಡುಪಿ ಬ್ರಹ್ಮಗಿರಿಯ ಸೈಂಟ್‌ ಸಿಸಿಲೀಸ್‌ ಶಿಕ್ಷಣ ಸಂಸ್ಥೆಗಳು ಗುರುವಾರದಿಂದ ಮುಕ್ತವಾಗಿವೆ.

ಎನ್‌ಐಟಿಕೆ ಸಂಸ್ಥೆಯ ಎರಡು ಬೃಹತ್‌ ಕಟ್ಟಡಗಳಲ್ಲಿ ಎ. 21ರ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಯಂತ್ರಗಳನ್ನು ಇರಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮೂರು ಪಾಳಿಗಳಲ್ಲಿ ಭದ್ರತೆಯಿತ್ತು. ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಕಟ್ಟಡಗಳ ಅಕ್ಕಪಕ್ಕ ನಡೆದಾಡುವುದಕ್ಕೂ ಅನುಮತಿಯ ಅಗತ್ಯವಿತ್ತು. ಸಿಸಿ ಕೆಮರಾ ಕಣ್ಗಾವಲು ಹಾಕಲಾಗಿತ್ತು. ಪ್ರತೀ ದಿನ ಜಿಲ್ಲಾಡಳಿತದ ಅಧಿಕಾರಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳ ಭೇಟಿ, ನಿಗಾ ಇತ್ತು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಸೈಂಟ್‌ ಸಿಸಿಲೀಸ್‌ ಶಿಕ್ಷಣ ಸಂಸ್ಥೆ ಕೇಂದ್ರವಾಗಿತ್ತು. ಮೇ 23ರ ಮತ ಎಣಿಕೆಯ ಬಳಿಕ ಮತಯಂತ್ರ ಗಳನ್ನು ಸ್ವಸ್ಥಾನಕ್ಕೆ ರವಾನೆ ಮಾಡಲಾಗಿದ್ದು, ಭದ್ರತೆ, ಬ್ಯಾರಿಕೇಡ್‌ ತೆಗೆದು ಮುಕ್ತಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೆಮಿಸ್ಟರ್‌ ರಜೆಯಿದ್ದರೂ ಅಧಿ ಕಾರಿಗಳಿಂದ ಸದಾ ತುಂಬಿರುತ್ತಿದ್ದ ಎನ್‌ಐಟಿಕೆ ಈಗ ಶಾಂತವಾಗಿದೆ.

ಅಂಗನವಾಡಿಯಿಂದ ತೊಡಗಿ ಪದವಿ ಪೂರ್ವದ ವರೆಗೆ ಶಿಕ್ಷಣ ಒದಗಿಸುವ ಸೈಂಟ್‌ ಸಿಸಿಲೀಸ್‌ ಶಿಕ್ಷಣ ಸಂಸ್ಥೆ ತರಗತಿಗಳನ್ನು ಆರಂಭಿಸು ವುದಕ್ಕೆ ಸಿದ್ಧತೆಯಲ್ಲಿ ತೊಡಗಿದೆ.

ಟಾಪ್ ನ್ಯೂಸ್

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Lok Sabha Elections ಹಂತ-2: ಬಹಿರಂಗ ಪ್ರಚಾರಕ್ಕೆ ಇಂದು ತೆರೆ

Lok Sabha Elections ಹಂತ-2: ಬಹಿರಂಗ ಪ್ರಚಾರಕ್ಕೆ ಇಂದು ತೆರೆ

1-wwewewqe

Temple; ಎಪ್ರಿಲ್‌ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Lok Sabha Elections ಹಂತ-2: ಬಹಿರಂಗ ಪ್ರಚಾರಕ್ಕೆ ಇಂದು ತೆರೆ

Lok Sabha Elections ಹಂತ-2: ಬಹಿರಂಗ ಪ್ರಚಾರಕ್ಕೆ ಇಂದು ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.