ಜವಾಬ್ದಾರಿಯುತ ಮದುಮಗಳು:ಮತ ಚಲಾಯಿಸಿ ಮದುವೆಗೆ!
Team Udayavani, May 12, 2018, 10:08 AM IST
ಮಂಗಳೂರು: ಮದುವೆ ಜೀವನದ ಬಹು ದೊಡ್ಡ ಸಂಭ್ರಮ. ಮತದಾನ ಅದಕ್ಕಿಂತಲೂ ದೊಡ್ಡ ಸಂಭ್ರಮ. ಮತದಾನ ತನ್ನ ದೊಡ್ಡ ಜವಾಬ್ದಾರಿ ಎಂದರಿತ ಮದುಮಗಳು ಮತಗಟ್ಟೆಗೆ ಬಂದು ಮತದಾನ ಮಾಡಿ ಮದುವೆಗೆ ತೆರಳಿ ಮಾದರಿಯಾಗಿದ್ದಾರೆ.
ಬೊಂದೇಲ್ ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮದುಮಗಳು ವಿಯೊಲಾ ಫೆರ್ನಾಂಡಿಸ್ ಅವರು ಮತ ಚಲಾಯಿಸಿ ಮದುವೆಗಾಗಿ ಬೆಳ್ತಂಗಡಿಗೆ ತೆರಳಿದರು.
ವಿಯೊಲಾ ಅವರೊಂದಿಗೆ ಮನೆಯವರೂ ಬಂದು ಮತ ಚಲಾಯಿಸಿ ಮದುವೆಗೆ ತೆರಳಿದ್ದಾರೆ.