ಗಾಳಿ-ಮಳೆ: ಮರ ಬಿದ್ದು ಕೋಳಿ ಅಂಗಡಿಗೆ ಹಾನಿ
Team Udayavani, May 25, 2017, 2:45 PM IST
ಉಳ್ಳಾಲ: ಮಂಗಳವಾರ ರಾತ್ರಿ ಸುರಿದ ಮಳೆ ಹಾಗೂ ಗಾಳಿಗೆ ಕೊಣಾಜೆಯಲ್ಲಿ ಬೃಹತ್ ಮರ ಉರುಳಿ ಕೋಳಿ ಅಂಗಡಿಗೆ ಹಾನಿಯಾಗಿದ್ದು, 3 ಕೋಳಿಗಳು ಸತ್ತಿವೆ.
ಕೊಣಾಜೆಯ ಅಸ್ಲಾಂ ಅವರಿಗೆ ಸೇರಿದ ಸಂಪಿಲ ಚಿಕನ್ ಅಂಗಡಿ ಮೇಲೆ ಬೃಹತ್ ನೀಲಗಿರಿ ಮರ ಬಿದ್ದಿದೆ. ಘಟನೆಯಲ್ಲಿ ಅಂಗಡಿ ಭಾಗಶಃ ಜಖಂ ಆಗಿದ್ದು, 30,000 ರೂ. ನಷ್ಟ ಸಂಭವಿಸಿದೆ. ಗ್ರಾಮ ಚಾವಡಿಯಲ್ಲಿ ಗೂಡಂಗಡಿಯ ಮೇಲ್ಛಾವಣಿ ಹಾರಿದೆ.