ಸಂಕಷ್ಟತಂದ ಕೃಷಿ ಕ್ಷೇತ್ರದ ಬದಲಾವಣೆ

Team Udayavani, Jul 25, 2017, 3:26 PM IST

25-DV-4.jpg

ದಾವಣಗೆರೆ: ಕಳೆದ 10 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಾದ ಬದಲಾವಣೆ ಸಹ ರೈತನ ಸಂಕಷ್ಟಕ್ಕೆ ಕಾರಣವಾಗಿದೆ. ಈ ಹಿಂದೆ ಬೆಳೆ  ಯಲಾಗುತ್ತಿದ್ದ ಸಾಂಪ್ರದಾಯಿಕ ಬೆಳೆಗಳ ಜಾಗದಲ್ಲಿ ವಾಣಿಜ್ಯ ಉದ್ದೇಶವನ್ನೇ ಹೊಂದಿರುವ ಬೆಳೆಗಳನ್ನು ಪ್ರಮುಖ ಬೆಳೆಯಾಗಿಸಿಕೊಂಡಿದ್ದು ಆತನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಒಂದು ಕಡೆ ಮಳೆ ಪ್ರಮಾಣದಲ್ಲಿ ಏರುಪೇರಾದರೂ ಕನಿಷ್ಠ ಇಳುವರಿ ಕೊಡುವಂತಹ ಬೆಳೆಗಳಿಂದ ದೂರಾದ ರೈತ ಇನ್ನೊಂದು ಕೊಟ್ಟಿಗೆ ಗೊಬ್ಬರ ಬಿಟ್ಟು ವಿಷಕಾರಿ, ದುಬಾರಿ ರಸಾಯನಿಕ ಗೊಬ್ಬರದ ಕಡೆ ಮುಖ ಮಾಡಿದ. ಇದರ ಜೊತೆಗೆ ತನ್ನಲ್ಲಿಯೇ ಇದ್ದ ಬಿತ್ತನೆ ಬೀಜದ ಹಕ್ಕನ್ನು ಕಳೆದುಕೊಂಡ. ಇಳುವರಿ ಹೆಚ್ಚು ಮಾಡುವ ಭರದಲ್ಲಿ ಹೈಬ್ರಿàಡ್‌ ಬೆಳೆಗೆ ಒಗ್ಗಿಕೊಂಡ ರೈತ ತಾನು ಮನೆಯಲ್ಲಿಯೇ ಬೀಜ ಉತ್ಪಾದನೆ ಮಾಡುವುದನ್ನು ಮರೆತ. ಇವೆಲ್ಲವೂ ಆತನ ಮೇಲಿನ ಆರ್ಥಿಕ ಹೊರೆ ಹೆಚ್ಚಿಸಿದವು. ಹಿಂದೆ ಜಿಲ್ಲೆಯ ರೈತರು ಜೋಳ, ರಾಗಿ, ಎಳ್ಳು, ಶೇಂಗಾ, ಸೂರ್ಯಕಾಂತಿ, ಗುರೆಳ್ಳು ಬೆಳೆ ಬೆಳೆಯುತ್ತಿದ್ದರು. ಇದೀಗ ಅದೆಲ್ಲವನ್ನು ಬಿಟ್ಟು ಮೆಕ್ಕೆಜೋಳವನ್ನೇ ಪ್ರಮುಖ ಬೆಳೆಯನ್ನಾಗಿ ಆಯ್ಕೆ ಮಾಡಿ ಕೊಂಡಿದ್ದಾರೆ. ಇದು ಸಹ ರೈತನ ಸಂಕಷ್ಟಕ್ಕೆ ಕಾರಣವಾಗಿದೆ.

ಸಾಂಪ್ರದಾಯಿಕ ಬೆಳೆಗಳು ಮಳೆ ಪ್ರಮಾಣ ಕಡಮೆ ಇದ್ದರೂ ಒಂದಿಷ್ಟು ಇಳುವರಿ ಕೊಡಬಲ್ಲವು. ಆದರೆ ಮೆಕ್ಕೆಜೋಳ ಅಂತಹ ಬೆಳೆ ಅಲ್ಲ. ನಿಗದಿತ ಸಮಯದಲ್ಲಿ ಮಳೆ ಆಗಲೇಬೇಕು. ಮಳೆ ಚೆನ್ನಾಗಿಯೇ ಬಂದು ಉತ್ಪಾದನೆ ಹೆಚ್ಚಳ ಆದರೆ ಬೆಲೆ ಸಿಗದೆ ಪರದಾಡುವ ಸ್ಥಿತಿ ರೈತನದ್ದಾಗಿದೆ.

 ಅಂಕಿ-ಅಂಶ ಗಮನಿಸಿದರೆ ಜಿಲ್ಲೆಯ ಪ್ರಮುಖ ಬೆಳೆ ಮೆಕ್ಕೆಜೋಳ ಆಗಿರುವುದು ಸುಸ್ಪಷ್ಟ. 1990ರ ದಶಕದಲ್ಲಿ ಭಾರತೀಯ ರೈತರಿಗೆ ದೊಡ್ಡಮಟ್ಟದಲ್ಲಿ ಪರಿಚಿತವಾದ ಮೆಕ್ಕೆಜೋಳ ಬೆಳೆ ದಶಕ ಕಳೆಯುತ್ತಲೇ ಎಲ್ಲಾ ಕಡೆ ಮೆಚ್ಚಿನ ಬೆಳೆಯಾಗಿ ಪರಿವರ್ತನೆಯಾಯಿತು. ಕೃಷಿ ಇಲಾಖೆ ನೀಡಿರುವ ಅಧಿಕೃತ ಅಂಕಿ, ಅಂಶದ ಆಧಾರದಲ್ಲಿ ಹೇಳುವುದಾದರೆ ಒಟ್ಟು ಬಿತ್ತನೆ ಪ್ರದೇಶದ ಪೈಕಿ ಶೇ.50ಕ್ಕೂಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ.

ಮಳೆಯಾಧಾರಿತ ಪ್ರದೇಶಗಳಲ್ಲಿ ಮೊದಲೆಲ್ಲಾ ರಾಗಿ, ಜೋಳ, ಹತ್ತಿ, ಶೇಂಗಾ, ಸೂರ್ಯಕಾಂತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಅದೇ ಕಾರಣಕ್ಕೆ ನಮ್ಮಲ್ಲಿ ಕಾಟನ್‌ ಮಿಲ್‌, ಎಣ್ಣೆ ಮಿಲ್‌ ಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಆದರೆ, ಕ್ರಮೇಣ ಮೆಕ್ಕೆಜೋಳ ಆವರಿಸಿದ ನಂತರ ಈ ಬೆಳೆ ಪ್ರಮಾಣ ಕಡಮೆ ಆಯಿತು. ತಜ್ಞರ ಪ್ರಕಾರ 90ರ ದಶಕದ ಆರಂಭದಲ್ಲಿರಾಗಿ,
ಶೇಂಗಾ, ಸೂರ್ಯಕಾಂತಿ ಬೆಳೆ ಪ್ರಮಾಣ ಶೇ.60ರಷ್ಟು ಇರುತ್ತಿತ್ತು. ಆದರೆ, ಇಂದಿನ ಪ್ರಮಾಣ ಗಮನಿಸಿ. ರಾಗಿ ಶೇ.2.67, ಶೇಂಗಾ ಶೇ.4.14, ಜೋಳದ ಪ್ರಮಾಣ ಶೇ.2.08. ಹೀಗೆ ಸಾಂಪ್ರದಾಯಿಕ ಬೆಳೆಗಳಾವೂ ಸಹ ಒಂದಂಕಿ ದಾಟುವುದಿಲ್ಲ. 

ಜೊತೆಗೆ ಈ ಬೆಳೆಗಳ ಪ್ರಮಾಣ ದಿನದಿಂದ ದಿನಕ್ಕೆ ಇಳಿಯುತ್ತಾ ಸಾಗುತ್ತಿದೆ. ಈ ಕುರಿತು ಹಿರಿಯ ಕೃಷಿಕರು, ರೈತಪರ ಹೋರಾಟಗಾರರು ಸಹ ಈ ಅಂಶಗಳನ್ನು ಒಪ್ಪಿಕೊಳ್ಳುತ್ತಾರೆ.

ಪಾಟೀಲ ವೀರನಗೌಡ

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.