Udayavni Special

ಅಭಿವೃದ್ಧಿ ರಾಷ್ಟ್ರಗಳಲ್ಲೇ ಮಾನವ ಹಕ್ಕುಗಳ ಉಲ್ಲಂಘನೆ


Team Udayavani, Dec 14, 2018, 2:57 PM IST

dvg-1.jpg

ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳೇ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಮುಂಚೂಣಿಯಲ್ಲಿವೆ ಎಂದು ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಡಾ| ಪಿ.ವಿ. ಕೃಷ್ಣಭಟ್‌ ತಿಳಿಸಿದ್ದಾರೆ. ಗುರುವಾರ, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಮಾನವ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಾದ ಪರಾಮರ್ಶೆ… ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಗತ್ತಿನಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. 

ಆದರೆ, ಆ ರೀತಿ ಕಾಳಜಿ ವ್ಯಕ್ತಪಡಿಸುವ ಅಭಿವೃದ್ಧಿ ಹೊಂದಿದ ದೇಶಗಳೇ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿವೆ ಎಂದರು. ಪ್ರಕೃತಿಯನ್ನ ಇನ್ನಿಲ್ಲದಂತೆ ಬರಿದಾಗಿಸುವ ಪ್ರಯತ್ನ ಅಭಿವೃದ್ಧಿ ಹೊಂದಿದ ದೇಶಗಳಿಂದ ಆಗುತ್ತಿದೆ. ಕೇವಲ ಮಾನವರ ಮೇಲೆ ಮಾತ್ರವಲ್ಲದೇ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ಆಕ್ರಮಣಗಳು ಪ್ರಕೃತಿಯ ಹಕ್ಕುಗಳ ಉಲ್ಲಂಘನೆಗೂ ಕಾರಣವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ಯಶಸ್ವಿ ಆಗಬೇಕಾದರೆ ಮಾನವನ ಹಕ್ಕುಗಳ ಜೊತೆ ಪ್ರಕೃತಿಯ ಸಂರಕ್ಷಣೆ ಹಕ್ಕುಗಳು ಸಹ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು. ಪ್ರಕೃತಿಯನ್ನು ಆರಾಧಿ ಸುವ ಗುಣವನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟ ಕೀರ್ತಿ ಭಾರತದ ಸಂಸ್ಕೃತಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಭಾರತದಲ್ಲಿ ಮಾನವ ಹಕ್ಕುಗಳು ಮಾತ್ರವಲ್ಲದೆ ಜೀವಿಗಳ ಹಕ್ಕನ್ನು ಸಂರಕ್ಷಿಸುವ ಸಂಸ್ಕೃತಿ ಅನಾದಿ ಕಾಲದಿಂದಲೂ ಬೆಳೆದು ಬಂದಿದೆ. ಮಾನವೀಯ ಮೌಲ್ಯಗಳೊಂದಿಗೆ ಪ್ರಕೃತಿಯ ಮೌಲ್ಯಗಳನ್ನು ಸಹ ಮುಂದಿನ ಭವಿಷ್ಯಕ್ಕೆ ತಲುಪಿಸುವ ಗುರುತರ ಹೊಣೆಗಾರಿಕೆ ಯುವ ಪೀಳಿಗೆಯ ಮೇಲಿದೆ ಎಂದು ತಿಳಿಸಿದರು.

ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ ಸಂಚಾಲಕ ಡಾ| ಸುಧಾಕರ್‌ ಹೊಸಳ್ಳಿ ಮಾತನಾಡಿ, ಮಾನವ ಹಕ್ಕುಗಳ ಬಗೆಗಿನ ಪರಿಕಲ್ಪನೆ ಹಾಗೂ ಆಳವಾದ ಮಾಹಿತಿ ಕೊರತೆ ಯುವಜನತೆಯನ್ನ ಕಾಡುತ್ತಿದೆ. ಪ್ರಜಾಪ್ರಭುತ್ವ ಯಶಸ್ವಿ ಆಗಬೇಕಾದರೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಸಂವಿಧಾನದಲ್ಲಿ
ಅಶಕ್ತರನ್ನು ಶಕ್ತರನ್ನಾಗಿ ಮಾಡಲು ರೂಪಿಸಿದ ಕಾನೂನುಗಳು ದುರ್ಬಳಕೆ ಆಗುತ್ತಿವೆ ಎಂದು ವಿಷಾದಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಮಾತನಾಡಿ, ಮಾನವೀಯತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ವರ್ತನೆ ಹೇಗಿರಬೇಕು ಎಂಬುದನ್ನು ಅರಿತು ನಡೆದರೆ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ. ಭಾರತದ ಸಂವಿಧಾನವೇ ಒಂದು ರೀತಿಯ ದಿಕ್ಸೂಚಿ ಇದ್ದಂತೆ. ಸಂವಿಧಾನವನ್ನು ಸಮರ್ಪಕವಾಗಿ ಅಧ್ಯಯನ ಮಾಡುವ ಮೂಲಕ ಯುವಜನತೆ ಮಾನವ ಹಕ್ಕುಗಳ ಮಹತ್ವ ತಿಳಿದುಕೊಳ್ಳಬೇಕು ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ(ಆಡಳಿತ) ಪ್ರೊ| ಪಿ. ಕಣ್ಣನ್‌, ಪರೀಕ್ಷಾಂಗ ಕುಲಸಚಿವ ಪ್ರೊ| ಬಸವರಾಜ್‌ ಬಣಕಾರ್‌, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜನಾ ಧಿಕಾರಿ ಪ್ರೊ| ಕೆ.ಬಿ. ರಂಗಪ್ಪ ಮತ್ತು ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಬಿ.ಎಸ್‌. ಪ್ರದೀಪ್‌ ಇತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ದಕ್ಷಿಣ ಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಮತ್ತೆ ಹೊಸ ಕೋವಿಡ್-19 ಸೋಂಕು ಪತ್ತೆ

ಉಡುಪಿಯಲ್ಲಿ ಮತ್ತೆ 27 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

28-May-04

ಮನೆಬಾಗಿಲಿಗೆ ವೃದ್ಧಾಪ್ಯ ವೇತನ ವ್ಯವಸ್ಥೆ

28-May-03

ಕೆಎಸ್ಸಾರ್ಟಿಸಿ ನಷ್ಟ ತಗ್ಗಿಸಲು ಕ್ರಮ

27-May-24

ಭತ್ತ ಖರೀದಿ ಕೇಂದ್ರ ಆರಂಭಿಸಿ: ತೇಜಸ್ವಿ

27-May-25

ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಆಕ್ರೋಶ

27-May-06

ಕೋವಿಡ್ ಸೋಂಕಿನ ಚೈನ್‌ಲಿಂಕ್‌ ಕಡಿತ ನಿಶ್ಚಿತ: ಭೈರತಿ

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

28-May-14

ಕೋವಿಡ್ ಸೋಂಕಿತರ ಹಾಸ್ಟೇಲ್‌ ಚಿಕಿತ್ಸೆಗೆ ವಿರೋಧ

28-May-13

ಅಭಿವೃದ್ಧಿ-ಕೃಷಿ ಚಟುವಟಿಕೆ ನಿರಂತರವಾಗಿರಲಿ

ದಕ್ಷಿಣಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ದಕ್ಷಿಣ ಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

28-May-12

ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹೆಚ್ಚಿನ ಒತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.