ಮಳೆನೀರಿನ ಸದ್ಬ ಳಕೆಯಿಂದ ಜಲಕ್ಷಾಮ ದೂರ: ರಾಜು


Team Udayavani, Jan 22, 2022, 8:12 PM IST

ಚ್ಗೆಹಮನಬವಚ

ಹರಿಹರ: ಭೂಮಿಯ ಮೇಲೆ ಬೀಳುವ ಮಳೆ ನೀರು ಉಳಿಸಿಕೊಂಡು ಸದ್ಬಳಕೆ ಮಾಡಿಕೊಂಡರೆ ಸಾಕು, ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದು ಫೌಂಡೇಷನ್‌ ಫಾರ್‌ ಇಕಾಲಜಿಕಲ್‌ ಸೆಕ್ಯುರಿಟಿ (ಎಫ್‌ಇಎಸ್‌) ಜಿಲ್ಲಾ ಸಂಯೋಜಕ ಎಚ್‌.ಆರ್‌. ರಾಜು ಹೇಳಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಹಾಗೂ ತಾಂತ್ರಿಕ ಸಹಾಯಕ ಅಭಿಯಂತರರು ಹಾಗೂ ಬೇರ್‌ಫೂಟ್‌ ಟೆಕ್ನಿಷಿಯನ್ಸ್‌ಗೆ ಆಯೋಜಿಸಿದ್ದ ಉದ್ಯೋಗ ಖಾತ್ರಿ ಯೋಜನೆಯ ಅಂತರ್ಜಲ ಯೋಜನೆಯಡಿ ದಿಣ್ಣೆಯಿಂದ ತಗ್ಗು ಪ್ರದೇಶದವರೆಗೆ ಜಲಾನಯನ ಮಾದರಿಯಲ್ಲಿ ಯೋಜನೆ ತಯಾರಿಕೆ ಕುರಿತ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಬೀಳುವ ಮಳೆನೀರನ್ನು ನೆಲಕ್ಕೆ ಇಂಗಿಸುವುದು, ಚೆಕ್‌ಡ್ಯಾಂ, ಕೃಷಿಹೊಂಡ, ಗೋಕಟ್ಟೆ ಇತ್ಯಾದಿ ಕೆರೆ ಕಟ್ಟೆ ನಿರ್ಮಿಸಿ ಸಂಗ್ರಹಿಸಿಕೊಂಡರೆ ಅಂತರ್ಜಲ ಹೆಚ್ಚುವುದಲ್ಲದೆ ವರ್ಷಪೂರ್ತಿ ನೀರು ಲಭ್ಯವಿರುತ್ತದೆ.

ಹೀಗೆ ನೈಸರ್ಗಿಕ ವಿಧಾನದಲ್ಲಿ ನೀರು ಸಂಗ್ರಹಿಸುವ ಬದಲು ನೂರಾರು ಕಿಮೀ ದೂರದ ನದಿಯಿಂದ ಪಂಪ್‌ ಮಾಡಿ ಕೃತಕವಾಗಿ ಕೆರೆ ತುಂಬಿಸುವುದು ಅವೈಜ್ಞಾನಿಕ ಹಾಗೂ ವೆಚ್ಚದಾಯಕ ಎಂದು ಪ್ರತಿಪಾದಿಸಿದರು. ಕೊಳವೆ ಬಾವಿ ಪುನಶ್ಚೇತನ, ಜಮೀನುಗಳ ಮಣ್ಣಿನ ಸವಕಳಿ ತಡೆಯುವುದು, ಕೆರೆಗಳಿಗೆ ನೀರು ಹರಿಸುವ ಮಾರ್ಗದ ಹಳ್ಳಗಳ ಜಂಗಲ್‌, ಹೂಳು ತೆರೆಸುವುದು ನೀರಿನ ಸದ್ಬಳಕೆಯ ಪ್ರಮುಖ ಮಾರ್ಗಗಳಾಗಿವೆ. ರೈತರು ಇಂತಹ ಯೋಜನೆಗಳಿಗೆ ಸ್ವಂತ ಹಣ ಖರ್ಚು ಮಾಡಬೇಕಿಲ್ಲ. ಉದ್ಯೋಗ ಖಾತ್ರಿ ಅನುದಾನ ಬಳಸಿಕೊಳ್ಳಬಹುದು. ತಜ್ಞರ ಸಲಹೆ ಪಡೆದು ಆಯಾ ಗ್ರಾಮ ಪಂಚಾಯಿತಿ, ತಾಂತ್ರಿಕ ಸಹಾಯಕ ಎಂಜಿನಿಯರ್‌ ಕಾಮಗಾರಿ ಕುರಿತು ಕ್ರಿಯಾ ಯೋಜನೆ ಸಿದ್ಧಗೊಳಿಸಿದರೆ ಕಣ್ಣ ಮುಂದೆ ಸಾಗಿ ಹೋಗುವ ಮಳೆ ನೀರನ್ನು ನಮ್ಮ ಜಮೀನುಗಳಲ್ಲೆ ಇರುವಂತೆ ಮಾಡಬಹುದೆಂದು ತಿಳಿಸಿದರು. ಜಿಲ್ಲಾ ಸಂಚಾಲಕ ಪ್ರಕಾಶ ಲಂಬಿ ಮಾತನಾಡಿ, ಜಮೀನಿನ ಮಣ್ಣು ಮಳೆ ನೀರಿನೊಂದಿಗೆ ಹರಿದು ಹೋಗದಂತೆ ತಡೆಯಬೇಕು.

ಅದಕ್ಕಾಗಿ ಸೂಕ್ತ ಜಾಗದಲ್ಲಿ ಬಾಂದ್‌ಗಳನ್ನು ನಿರ್ಮಿಸಬೇಕು. ಮಣ್ಣಿನ ಸವಕಳಿ ತಡೆಯಲು ಮರ, ಗಿಡ ಬೆಳೆಸಬೇಕು. ಮುಂಚಿನಂತೆ ಈಗ ಕೆರೆ, ಕಟ್ಟೆಗಳು ತುಂಬದಿರಲು ಮಳೆ ನೀರು ಸಾಗಿ ಬರುವ ಮಾರ್ಗಗಳು ಮುಚ್ಚಿರುವುದೇ ಕಾರಣ. ಜಂಗಲ್‌, ಹೂಳು ತೆರವುಗೊಳಿಸಿದರೆ ಅಂತಹ ಕೆರೆ, ಕಟ್ಟೆಗಳು ಮುಂಚಿನಂತೆ ಮತ್ತೆ ಮೈದುಂಬುತ್ತವೆ ಎಂದರು. ಗ್ರಾಪಂ ಅಧ್ಯಕ್ಷ ಗಂಗಾಧರ ಎಚ್‌. ಉದ್ಘಾಟಿಸಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಈ ಯೋಜನೆ ಅಳವಡಿಸಿಕೊಂಡು ಮಳೆ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದೆಂದು ಹೇಳಿದರು. ಗ್ರಾಪಂ ಉಪಾಧ್ಯಕ್ಷೆ ಕರಿಯಮ್ಮ, ಜಿಪಂ ಎನ್‌ಆರ್‌ಡಿಎಂಎಸ್‌ ಸಂಯೋಜಕ ಆನಂದ್‌, ಜಗಳೂರಿನ ತಾಂತ್ರಿಕ ಸಿಬ್ಬಂದಿ ಹರ್ಷಾ, ಪಿಡಿಒ ರಾಮಚಂದ್ರಪ್ಪ ಟಿ.ಪಿ., ಕಾರ್ಯದರ್ಶಿ ನಟರಾಜ್‌ ಹಾಗೂ ಗ್ರಾಪಂ ಸದಸ್ಯರು ಇದ್ದರು.

 

ಟಾಪ್ ನ್ಯೂಸ್

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

ಹಾಡಹಗಲೇ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಣ

ಹಾಡಹಗಲೇ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಣ

ರಾಜ್ಯ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತೊಡಕು

ರಾಜ್ಯ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತೊಡಕು

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

ಗುರುಗಳ ವಿಷಯ ಪಠ್ಯದಿಂದ ಕೈಬಿಟ್ಟ ವಿಚಾರ ಸಮುದಾಯದ ಸಚಿವರು ರಾಜೀನಾಮೆ ನೀಡಲಿ: ರೈ

ಗುರುಗಳ ವಿಷಯ ಪಠ್ಯದಿಂದ ಕೈಬಿಟ್ಟ ವಿಚಾರ ಸಮುದಾಯದ ಸಚಿವರು ರಾಜೀನಾಮೆ ನೀಡಲಿ: ರೈ

ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠ ಕೈಬಿಟ್ಟಿಲ್ಲ: ಸುದರ್ಶನ್‌ ಮೂಡುಬಿದಿರೆ

ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠ ಕೈಬಿಟ್ಟಿಲ್ಲ: ಸುದರ್ಶನ್‌ ಮೂಡುಬಿದಿರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾರದಲ್ಲಿ ಬೆಳೆ ವಿಮೆ ಹಣ ಬಿಡುಗಡೆ: ಸಚಿವ ಬಿ.ಸಿ.ಪಾಟೀಲ್‌ವಾರದಲ್ಲಿ ಬೆಳೆ ವಿಮೆ ಹಣ ಬಿಡುಗಡೆ: ಸಚಿವ ಬಿ.ಸಿ.ಪಾಟೀಲ್‌

ವಾರದಲ್ಲಿ ಬೆಳೆ ವಿಮೆ ಹಣ ಬಿಡುಗಡೆ: ಸಚಿವ ಬಿ.ಸಿ.ಪಾಟೀಲ್‌

porake

ಸುರಿಯುವ ಮಳೆಯಲ್ಲೇ ಪೌರಕಾರ್ಮಿಕರ ಪೊರಕೆ ಪ್ರತಿಭಟನೆ

hairanu

ವರುಣಾರ್ಭಟಕ್ಕೆ ಹೈರಾಣಾದ ಜನ

bhagath

ಭಗತ್‌-ವಿವೇಕರ ಪಾಠ ಕೈಬಿಟ್ಟಿದ್ದು ಸರಿಯಲ್ಲ

damage

ವರುಣನ ಅಬ್ಬರಕ್ಕೆ ಅಪಾರ ಬೆಳೆ ಹಾನಿ

MUST WATCH

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ 9 ಮಂದಿ ಸಿಲುಕಿರುವ ಶಂಕೆ

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

ಹೊಸ ಸೇರ್ಪಡೆ

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

ಹಾಡಹಗಲೇ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಣ

ಹಾಡಹಗಲೇ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಣ

ರಾಜ್ಯ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತೊಡಕು

ರಾಜ್ಯ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತೊಡಕು

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.