ಅಂತೂ ಶುರುವಾಯ್ತು ಎಕ್ಸ್‌ಪ್ರೆಸ್‌ ವಿದ್ಯುತ್‌ ಮಾರ್ಗದ ಕಾಮಗಾರಿ


Team Udayavani, Jul 31, 2017, 10:59 AM IST

31-DV-5.jpg

ದಾವಣಗೆರೆ: ಮಹಾನಗರ ಪಾಲಿಕೆಯ ನೀರು ಸರಬರಾಜು ಕೇಂದ್ರಕ್ಕೆ ತಡೆರಹಿತ ವಿದ್ಯುತ್‌ ಪೂರೈಕೆಗೆ ಎಕ್ಸ್‌ಪ್ರೆಸ್‌ ಫಿಡರ್‌ (66ಕೆವಿ) ಮಾರ್ಗ ನಿರ್ಮಾಣ, ವಿತರಣಾ ಕೇಂದ್ರ ನಿರ್ಮಾಣ ಕಾರ್ಯ ಇದೀಗ ಆರಂಭ ಆಗಿದೆ. 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನಗರೋತ್ಥಾನ ಯೋಜನೆ ಅಡಿ ಅನುದಾನ ಬಿಡುಗಡೆಗೊಳಿಸಿದ್ದು, ಕೆಪಿಟಿಸಿಎಲ್‌ ಕಾಮಗಾರಿ ಆರಂಭ ಮಾಡಿದೆ. ಈಗಿರುವ ವಿದ್ಯುತ್‌ ಮಾರ್ಗದಿಂದಾಗಿ ಆಗಿಂದಾಗ್ಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳ್ಳುತ್ತಿದ್ದು, ಎಕ್ಸ್‌ಪ್ರೆಸ್‌ ಮಾರ್ಗದಿಂದ ಈ ಸಮಸ್ಯೆ ದೂರಾಗಲಿದೆ.

ಸದ್ಯ ರಾಜನಹಳ್ಳಿ ನೀರು ಸರಬರಾಜು ಕೇಂದ್ರದಿಂದ ಜಾಕ್‌ವೆಲ್‌ ಮೂಲಕ ನದಿಯಿಂದ ನೀರೆತ್ತಿ ದೊಡ್ಡ ಬಾತಿ ನೀರು ಶುದೀœಕರಣ ಘಟಕಕ್ಕೆ ಪೂರೈಸಲಾಗುವುದು. ಅಲ್ಲಿ ಶುದೀœಕರಣಗೊಂಡ ನೀರು ಗುಡ್ಡದ ಮೇಲಿರುವ ಪಾಲಿಕೆಯ ನೀರು ಸಂಗ್ರಹಗಾರಕ್ಕೆ ಮತ್ತೆ ಪಂಪ್‌ ಮಾಡಲ್ಪಡುತ್ತದೆ. ಇನ್ನೊಂದು ಪೈಪ್‌ ಲೈನ್‌ ಮೂಲಕ ನದಿಯಿಂದ ನೀರು ಎತ್ತಿ ಕುಂದುವಾಡ ಕೆರೆಗೆ ನೀರು ಹರಿಸಲಾಗುತ್ತಿದೆ. ಬಾತಿ ಗುಡ್ಡದ ಮೇಲೆ ನಿರ್ಮಾಣ ಮಾಡಿರುವ ನೀರಿನ ಸಂಗ್ರಹಗಾರದಿಂದ ಯಾವುದೇ ಪಂಪ್‌ ಇಲ್ಲದೇ ನಗರದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ನೇರ ನೀರು ತುಂಬಿಸಲಾಗುತ್ತದೆ.

ಈ ರೀತಿ ಮಾಡುವಾಗ ಒಮ್ಮೆ ವಿದ್ಯುತ್‌ ಕಡಿತವಾದಲ್ಲಿ ಕನಿಷ್ಠ ಮೂರು ತಾಸುಗಳ ಕಾಲ ನೀರೆತ್ತುವುದು ಸ್ಥಗಿತ ಆಗುತ್ತಿತ್ತು. ಇದಕ್ಕೆ ಕಾರಣ ಬಾತಿ ಗುಡ್ಡದ ಮೇಲಕ್ಕೆ ನೀರು ರವಾನಿಲು ಜಾಕ್‌ವೆಲ್‌ ಬಳಕೆ ಮಾಡಲಾಗುತ್ತದೆ. ಒಮ್ಮೆ ನೀರು ಹರಿಯುವುದು ನಿಂತರೆ ನೀರು ಅಲ್ಲಿ, ಪೈಪ್‌ಲೈನ್‌ನಲ್ಲಿನ ನೀರು ವಾಪಸ್‌ ಬರುತ್ತದೆ. ಜೊತೆಗೆ ಮತ್ತೆ ಪಂಪ್‌ ಆರಂಭಿಸಿದರೆ ಮತ್ತೆ ಗುಡ್ಡದ ಮೇಲಿನ ಸಂಗ್ರಹಗಾರಕ್ಕೆ ನೀರು ಹರಿಯಬೇಕಾದರೆ ಮತ್ತೆ ಮೂರು ತಾಸುಗಳ ಕಾಲ ಕಾಯಬೇಕಿತ್ತು. ಈ ಸಮಸ್ಯೆ ಎಕ್ಸ್‌ಪ್ರೆಸ್‌ ವಿದ್ಯುತ್‌ ಮಾರ್ಗದಿಂದ ನಿವಾರಣೆ ಆಗಲಿದೆ. 

18 ಕೋಟಿ ರೂ. ವೆಚ್ಚ
ಪ್ರಸ್ತುತ ನಿರ್ಮಾಣ ಮಾಡಲಾಗುತ್ತಿರುವ ಎಕ್ಸ್‌ಪ್ರೆಸ್‌ ಫಿಡರ್‌ ವೇ, ವಿತರಣಾ ಕೇಂದ್ರ ನಿರ್ಮಾಣಕ್ಕೆ 17.80 ಕೋಟಿ ರೂ. ನಿಗದಿಪಡಿಸಾಗಿದೆ. ರಾಜನಹಳ್ಳಿ, ದೊಡ್ಡ ಬಾತಿಯಲ್ಲಿ ವಿತರಣಾ ಕೇಂದ್ರ ಸ್ಥಾಪನೆ ಯೋಜನೆಯ ಮುಖ್ಯ ಉದ್ದೇಶವಾಗಿದೆ. ರಾಜನಹಳ್ಳಿಗೆ ಹರಿಹರದ ಬಳಿಯ
ಹೊಸಪೇಟೆಯ ವಿದ್ಯುತ್‌ ಪ್ರಸರಣಾ ಕೇಂದ್ರದಿಂದ ವಿದ್ಯುತ್‌ ಮಾರ್ಗ ನಿರ್ಮಾಣ ಮಾಡಲಾಗುವುದು. ಒಟ್ಟು 9 ಕಿಮೀ ದೂರದ ವಿದ್ಯುತ್‌ ಮಾರ್ಗ ನಿರ್ಮಾಣ ಆಗಲಿದೆ. ಇನ್ನು ದೊಡ್ಡ ಬಾತಿಗೆ ಹರಿಹರದ ವಿದ್ಯುತ್‌ ವಿತರಣಾ ಕೇಂದ್ರದಿಂದ ಮಾರ್ಗ ನಿರ್ಮಾಣ ಮಾಡಲಾಗುವುದು. 4.8 ಕಿಮೀ ದೂರದ ಮಾರ್ಗ ಇಲ್ಲಿ ನಿರ್ಮಾಣ ಆಗಲಿದೆ. 

ಮೊದಲ ಅಂದಾಜು 8 ಕೋಟಿ ರೂ.
ಈ ಮೊದಲೇ ಎಕ್ಸ್‌ಪ್ರೆಸ್‌ ಫಿಡರ್‌ ಮಾರ್ಗ ನಿರ್ಮಾಣಕ್ಕೆ  ಯೋಜಿಸಲಾಗಿತ್ತು. ಮೊದಲು ಯೋಜನೆ ಅಂದಾಜು ಪಟ್ಟಿ ತಯಾರಿಸಿದಾಗ 8 ಕೋಟಿ ರೂ.ಗಳ ಅಂದಾಜಿತ್ತು. ಆದರೆ, ಕಾಮಗಾರಿ ಆರಂಭ ಆಗಲೇ ಇಲ್ಲ. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಾಗ ಮತ್ತೆ ಎಕ್ಸ್‌ಪ್ರೆಸ್‌ ಫಿಡರ್‌ ಮಾರ್ಗ ನಿರ್ಮಾಣದ ಯತ್ನ ಮಾಡಲಾಯಿತು. ಆಗ 10 ಕೋಟಿ ರೂ. ಅಂದಾಜು ವೆಚ್ಚದ ತಯಾರಿಸಲಾಗಿತ್ತು. ಆಗಲೂ ಕಾಮಗಾರಿ ಆರಂಭ ಆಗಲಿಲ್ಲ. ಇದೀಗ 8 ಕೋಟಿ ರೂ. ಅಧಿಕ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಂತಾಗಿದೆ. 

ಸಿಂಹಪಾಲು ನೀರು
ನಗರಕ್ಕೆ ಬೇಕಾಗುವ ನೀರಿನ ಸಿಂಹಪಾಲು ಸರಬರಾಜಾಗುವುದು ರಾಜನಹಳ್ಳಿ ಕೇಂದ್ರದಿಂದ. ರಾಜನಹಳ್ಳಿ ಕೇಂದ್ರದಿಂದ ಪ್ರತಿನಿತ್ಯ 40-50 ಎಂಎಲ್‌ಡಿ ನೀರು ಪೂರೈಸಲಾಗುತ್ತದೆ. ನಗರಕ್ಕೆ ಪೂರೈಸುವ ನೀರಿನ ಶೇ.75ರಷ್ಟು ಪ್ರಮಾಣ ಇಲ್ಲಿಂದಲೇ ಸರಬರಾಜು ಆಗುತ್ತದೆ. ಕಳೆದ ವರ್ಷದಿಂದ ಕುಂದುವಾಡ ಕೆರೆಗೂ ಸಹ ನೇರ ನದಿಯಿಂದ ನೀರು ಹರಿಸಲಾಗುತ್ತಿದೆ. ಮುಂದೆ ದೂರದರ್ಶನ ಕರೆ, ಆವರಗೆರೆ ಕೆರೆಗೂ ಸಹ ಇಲ್ಲಿಂದಲೇ ನೀರು ಹರಿಸುವ ಪ್ರಸ್ತಾವನೆ ಪಾಲಿಕೆ ಮುಂದಿದೆ.

ಟಾಪ್ ನ್ಯೂಸ್

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

5death

ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಪ್ರಿಯತಮ ಆತ್ಮಹತ್ಯೆ

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

ಎಚ್. ವಿಶ್ವನಾಥ್

ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ: ಎಚ್. ವಿಶ್ವನಾಥ್

ರೋಣ: ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಬೆಣ್ಣಿಹಳ್ಳ; ಪ್ರವಾಹ ಭೀತಿ

ರೋಣ: ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಬೆಣ್ಣಿಹಳ್ಳ; ಪ್ರವಾಹ ಭೀತಿ

ನಮ್ಮೂರಿನಲ್ಲಿ ಪಾನಿಪುರಿ, ಪಾನ್ ಮಸಾಲಾ ಮಾರುವವರು ಗುಜರಾತ್ ನವರು: ಸಿ.ಎಂ.ಇಬ್ರಾಹಿಂ

ನಮ್ಮೂರಿನಲ್ಲಿ ಪಾನಿಪುರಿ, ಪಾನ್ ಮಸಾಲಾ ಮಾರುವವರು ಗುಜರಾತ್ ನವರು: ಸಿ.ಎಂ.ಇಬ್ರಾಹಿಂ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾರದಲ್ಲಿ ಬೆಳೆ ವಿಮೆ ಹಣ ಬಿಡುಗಡೆ: ಸಚಿವ ಬಿ.ಸಿ.ಪಾಟೀಲ್‌ವಾರದಲ್ಲಿ ಬೆಳೆ ವಿಮೆ ಹಣ ಬಿಡುಗಡೆ: ಸಚಿವ ಬಿ.ಸಿ.ಪಾಟೀಲ್‌

ವಾರದಲ್ಲಿ ಬೆಳೆ ವಿಮೆ ಹಣ ಬಿಡುಗಡೆ: ಸಚಿವ ಬಿ.ಸಿ.ಪಾಟೀಲ್‌

porake

ಸುರಿಯುವ ಮಳೆಯಲ್ಲೇ ಪೌರಕಾರ್ಮಿಕರ ಪೊರಕೆ ಪ್ರತಿಭಟನೆ

hairanu

ವರುಣಾರ್ಭಟಕ್ಕೆ ಹೈರಾಣಾದ ಜನ

bhagath

ಭಗತ್‌-ವಿವೇಕರ ಪಾಠ ಕೈಬಿಟ್ಟಿದ್ದು ಸರಿಯಲ್ಲ

damage

ವರುಣನ ಅಬ್ಬರಕ್ಕೆ ಅಪಾರ ಬೆಳೆ ಹಾನಿ

MUST WATCH

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ 9 ಮಂದಿ ಸಿಲುಕಿರುವ ಶಂಕೆ

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

ಹೊಸ ಸೇರ್ಪಡೆ

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

fertilizers

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ

ಬೆಣ್ಣೆಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ

ಬೆಣ್ಣೆಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

5death

ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಪ್ರಿಯತಮ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.