ತರಕಾರಿ ಬೆಲೆ ಮತ್ತೆ ಗಗನಕ್ಕೆ: ಗ್ರಾಹಕರಿಗೆ ತಟ್ಟಿದ ಬಿಸಿ


Team Udayavani, Dec 2, 2017, 3:43 PM IST

02-23.jpg

ದಾವಣಗೆರೆ: ಕ್ಯಾರೆಟ್‌ ಕೆಜಿಗೆ 100 ರೂ., ಈರುಳ್ಳಿ 70-80 ರೂ., ಬೀನ್ಸ್‌ 50-60 ರೂ., ಇವು ಸದ್ಯ ಮಾರುಕಟ್ಟೆಯಲ್ಲಿರುವ ತರಕಾರಿ ಬೆಲೆ. ತರಕಾರಿ ತರಲು ಮಾರುಕಟ್ಟೆಗೆ ಹೋಗುವವರು ಸಣ್ಣ ಚೀಲ ತೆಗೆದುಕೊಂಡು ಹೋಗಿ ಪರ್ಸ್‌ ಕಾಲಿ ಮಾಡಿಕೊಂಡು ಬರುವಂತಹ ಸ್ಥಿತಿ ಇದೆ. ಕೆಜಿ ಗಟ್ಟಲೇ ಖರೀದಿ ಮಾಡುತ್ತಿದ್ದವರು 1/4ಕೆಜಿ, 1/2 ಕೆಜಿ ಖರೀಸುತ್ತಿದ್ದಾರೆ. ಟೊಮೊಟೊ, ಬದನೆಕಾಯಿ,
ಮೆಣಸಿನಕಾಯಿ, ಆಲೂಗೆಡ್ಡೆ ಬಿಟ್ಟು ಬಹುತೇಕ ತರಕಾರಿ ಬೆಲೆ 50ರ ಗಡಿ ದಾಟಿದೆ.

ಕ್ಯಾರೆಟ್‌ ಬೆಲೆಯಂತೂ ಗಗನಮುಖೀಯಾಗಿದೆ. ಗುಣಮಟ್ಟದ ಕ್ಯಾರೆಟ್‌ ಬೆಲೆ ಕೆಜಿಗೆ 120 ರೂ. ಇದೆ. ಇನ್ನು ಈರುಳ್ಳಿ 
ಬೆಲೆ ಹೇಳುವಂತಿಲ್ಲ. ಈರುಳ್ಳಿಗೆ ಈಗಿರುವ ಬೆಲೆ ಕೇಳಿದರೆ ಹಚ್ಚುವಾಗ ಕಣ್ಣಲ್ಲಿ ನೀರು ಬರುವ ಬದಲು ಕೊಳ್ಳುವಾಗಲೇ ಬರುವಂತಿದೆ. ಕೆಲ ದಿನಗಳ ಹಿಂದಷ್ಟೇ ಬೆಲೆ ಇಳಿದು, ರೈತರನ್ನು ಕಂಗಾಲು ಮಾಡಿದ್ದ ಈರುಳ್ಳಿ, ಈಗ 100 ರೂ. ಸಮೀಪ ಬಂದಿದೆ. ಉತ್ತಮ ಬೆಳೆ ಗೆಡ್ಡೆ ಚಿಲ್ಲರೆ ಮಾರುಕಟ್ಟೆಯಲ್ಲಿ 80 ರೂ.ಗೆ ಏರಿದೆ. ಕೊಳಚೆ, ಕೊಂಚ ಪದರ ಕೊಸರಿದ ಗೆಡ್ಡೆಯ ಬೆಲೆ 60-70 ರೂ.ಗೆ ಇದೆ. ಬೆಲೆ ಇಷ್ಟಿರುವುದು ಮಾತ್ರವಲ್ಲ, ಈರುಳ್ಳಿ ಖರೀದಿಸುವಾಗ ಇತರೆ ತರಕಾರಿಗಳಂತೆ ಇವನ್ನು ಆರಿಸಿಕೊಳ್ಳಲು ಅವಕಾಶ ಇಲ್ಲವಾಗಿದೆ. ವ್ಯಾಪಾರಿ ಕೊಟ್ಟ ಹಾಗೆಯೇ ಖರೀದಿಸಬೇಕಿದೆ.

ಹೂ ಕೋಸು ಬೆಲೆ ಸಹ ಏರಿದೆ. ಸಾಮಾನ್ಯವಾಗಿ ಒಂದು ಗೆಡ್ಡೆಗೆ 20-30 ರೂ. ಬಿಕರಿಯಾಗಿರುತ್ತಿದ್ದ ಹೂ ಕೋಸು ಇಂದು 50 ರೂ. ಇದೆ. ಗುಣಮಟ್ಟದ ಹೂ ಕೋಸು 70 ರೂ.ಗೆ ಒಂದರಂತೆ ಮಾರಾಟವಾಗುತ್ತಿದೆ. ಎಲೆ ಕೋಸು ಸಹ 40 ರೂ.ನಿಂದ 45 ರೂ.ವರೆಗೆ ಏರಿಕೆ ಕಂಡಿದೆ. ವರ್ಷಕ್ಕೊಮ್ಮೆ ಬರುವ ಅವರೆ, ತೊಗರಿ ಕಾಯಿ ಸುಗ್ಗಿ ಈ ಬಾರಿ ಕಹಿ ತಂದಿದೆ. ಸಾಮಾನ್ಯವಾಗಿ 20-25 ರೂ.ಗೆ ಕೆಜಿಯಂತೆ ಅವರೆ, ತೊಗರೆ ಮಾರಾಟ ಆಗುತ್ತದೆ. ಆದರೆ, ಇಂದು ಮಾರುಕಟ್ಟೆಯಲ್ಲಿ ಅವರೆ, ತೊಗರಿ ಬೆಲೆ 30-40 ರೂ.ಗೆ ಏರಿದೆ. ಇದೇ ಮಾರ್ಗದಲ್ಲಿ ದೊಡ್ಡ ಮೆಣಸಿನಕಾಯಿ ಸಹ ಇದೆ. ದೊಡ್ಡ ಮೆಣಸಿನ ಕಾಯಿ ಬೆಲೆ 40ರೂ.ಗೆ ಏರಿದೆ. 

ಸಮಾಧಾನದ ವಿಷಯ ಅಂದರೆ ಸೊಪ್ಪಿನ ಬೆಲೆ ಅಷ್ಟಾಗಿ ಏರಿಕೆ ಆಗಿಲ್ಲ. ಇನ್ನು ಕರಿಬೇವು, ಕೊತ್ತಂಬರಿ ಸಹ ಕಡಮೆ ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಒಗ್ಗರಣೆಗೆ ಬಳಸುವ ಮೆಣಸಿನ ಕಾಯಿ, ಟೊಟೊಟೊ ಬೆಲೆ ಕೈಗೆಟುಕುವಂತೆ ಇರುವುದು ತುಸು ನೆಮ್ಮದಿ ಅನ್ನಿಸಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.