Udayavni Special

ಅನ್ನದಾತರಿಗೆ ಬೆಳೆವಿಮೆ ಕಂಪೆನಿಗಳ ಬರೆ

ಮೂರು ಜಿಲ್ಲೆಗಳಿಗೆ ಬಾರದ ನಯಾಪೈಸೆ ಪರಿಹಾರ | ಬೆಳೆ ಹಾನಿಯೇ ಆಗಿಲ್ಲ ಎಂಬಂತೆ ವರ್ತನೆ

Team Udayavani, Sep 28, 2020, 4:53 PM IST

huballi-tdy-1

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಅತಿವೃಷ್ಟಿಯಿಂದ ಬೆಳೆ ಸೇರಿದಂತೆ ವಿವಿಧ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರ ತಕ್ಕಮಟ್ಟಿಗೆ ಪರಿಹಾರ ನೀಡಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ನೆರೆ ಹಾನಿ ವೀಕ್ಷಣೆ ಮಾಡಿತ್ತು. ಇಷ್ಟಾದರೂ ಬೆಳೆವಿಮೆ ಕಂಪೆನಿಗಳು ಮಾತ್ರ ಕೆಲ ಜಿಲ್ಲೆಗಳ ರೈತರ ಪಾಲಿಗೆ ಕರುಣೆ ತೋರಿಲ್ಲ, ನಯಾ ಪೈಸೆ ಪರಿಹಾರ ನೀಡಿಲ್ಲ.

ಅತಿವೃಷ್ಟಿ ಇಲ್ಲವೆ ಬರದಿಂದ ಬೆಳೆ ಹಾನಿ ಸಂಭವಿಸಿದರೆ, ಸಂಕಷ್ಟ ಕಾಲಕ್ಕೆ ರೈತರ ನೆರವಿಗೆ ಇರಲಿ ಎಂಬ ಉದ್ದೇಶದೊಂದಿಗೆ ಜಾರಿಗೆ ಬಂದಿದ್ದ ಬೆಳೆ ವಿಮೆ ಯೋಜನೆ ಇಂದಿನ ಸ್ಥಿತಿ ಗಮನಿಸಿದರೆ, ಇದು ವಿಮಾ ಕಂಪೆನಿಗಳ ಲಾಭಕ್ಕೆ ಇದೆಯೇ ವಿನಃ ನಮ್ಮ ನೆರವಿಗೆ ಅಲ್ಲ ಅನ್ನಿಸುತ್ತದೆ ಎಂಬುದು ಹಲವು ರೈತರ ಅಸಮಾಧಾನ. 2019ರಲ್ಲಿ ಪ್ರವಾಹದಿಂದ ರಾಜ್ಯದ 22 ಜಿಲ್ಲೆಗಳು ಅಕ್ಷರಶಃ ನಲುಗಿದ್ದವಲ್ಲದೆ, ಸುಮಾರು 6.72ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಂದಾಜು 13,717 ಕೋಟಿ ರೂ. ಬೆಳೆ ನಷ್ಟ ಹಾಗೂ 1.09ಲಕ್ಷ ಹೆಕ್ಟೇರ್‌ ಪ್ರದೇಶದ ಅಂದಾಜು 926 ಕೋಟಿ ರೂ. ಉತ್ಪನ್ನ ಹಾನಿ ಗೀಡಾಗಿತ್ತು. ಇದರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ಪಾಲು ಅಧಿಕವಾಗಿತ್ತು.

ಶೂನ್ಯ ಪರಿಹಾರ: ಈ ಪ್ರವಾಹದಿಂದಾದ ಹಾನಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದರು. ಕೇಂದ್ರದಿಂದ ಎರಡು ತಂಡಗಳು ಸಮೀಕ್ಷೆ ಕೈಗೊಂಡು ವರದಿ ನೀಡಿದ್ದವು. ಧಾರವಾಡ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಇದುವರೆಗೂ ನಯಾ ಪೈಸೆ ಬೆಳೆವಿಮೆ ಪರಿಹಾರ ಬಿಡುಗಡೆಯಾಗಿಲ್ಲ. ಸರ್ಕಾರ ಹಾನಿಯಾಗಿದೆ ಎಂದು ಪರಿಹಾರ ನೀಡಿದರೂ, ವಿಮಾ ಕಂಪೆನಿಗಳು ಹಾನಿಯೇ ಆಗಿಲ್ಲ ಎಂಬಂತೆ ವರ್ತಿಸುತ್ತಿವೆ. ಇತರೆ ಜಿಲ್ಲೆಗಳಿಗೆ ಪರಿಹಾರ ಬಂದರೂ ಅದು ಅತ್ಯಲ್ಪ ಎಂಬುದು ರೈತರ ಅಸಮಾಧಾನ.

ಧಾರವಾಡ ಜಿಲ್ಲೆಯಲ್ಲಿ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ 1,05,770 ರೈತರು ಬೆಳೆವಿಮೆಗೆ ಅರ್ಜಿ ಸಲ್ಲಿಸಿದ್ದರು. 18.22 ಕೋಟಿ ರೂ. ರೈತರು ವಂತಿಗೆ ನೀಡಿದ್ದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪಾಲು ತಲಾ 73.24ಕೋಟಿ ರೂ. ಸೇರಿದಂತೆ ಒಟ್ಟಾರೆ 164.70 ಕೋಟಿ ರೂ. ಪ್ರೀಮಿಯಂ ಪಾವತಿಸಲಾಗಿತ್ತು. 1,10,681 ಹೆಕ್ಟೇರ್‌ ಕೃಷಿ ಭೂಮಿ ವಿಮೆಗೆ ಒಳಪಟ್ಟಿತ್ತು. ಆದರೆ, ಇದುವರೆಗೂ ನಯಾ ಪೈಸೆ ಪರಿಹಾರ ಬಂದಿಲ್ಲ. ಯಾದಗಿರಿ ಜಿಲ್ಲೆಯಲ್ಲಿ 20,907 ರೈತರು ಅರ್ಜಿ ಸಲ್ಲಿಸಿದ್ದರು. ರೈತರ ಪಾಲು 3.25 ಕೋಟಿ, ರಾಜ್ಯ-ಕೇಂದ್ರ ಸರ್ಕಾರಗಳ ತಲಾ 14.04 ಕೋಟಿ ರೂ. ಸೇರಿದಂತೆ ಒಟ್ಟಾರೆ 31.33 ಕೋಟಿ ರೂ. ಪ್ರೀಮಿಯಂ ಪಾವತಿಸಲಾಗಿತ್ತು. 24,747 ಹೆಕ್ಟೇರ್‌ ಪ್ರದೇಶ ವಿಮೆಗೆ ಒಳಪಟ್ಟಿತ್ತು. ಪರಿಹಾರ ಮಾತ್ರ ಶೂನ್ಯವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ 19,971 ರೈತರು ಅರ್ಜಿ ಸಲ್ಲಿಸಿದ್ದರು. ರೈತರ ಪಾಲು 2.50 ಕೋಟಿ, ರಾಜ್ಯ-ಕೇಂದ್ರ ಸರ್ಕಾರಗಳ ಪಾಲು ತಲಾ 14.32 ಕೋಟಿ ರೂ. ಸೇರಿ ಒಟ್ಟಾರೆ 31.14 ಕೋಟಿ ರೂ. ಪ್ರೀಮಿಯಂ ಪಾವತಿಸಲಾಗಿತ್ತು. 28,049 ಹೆಕ್ಟೇರ್‌ ಪ್ರದೇಶ ವಿಮೆಗೆ ಒಳಪಟ್ಟಿತ್ತಾದರೂ, ಇದುವರೆಗೂ ರೈತರಿಗೆ ಯಾವುದೇ ಬೆಳೆ ವಿಮೆ ಪರಿಹಾರ ದೊರೆತಿಲ್ಲ.

ಹಾವೇರಿ ಜಿಲ್ಲೆಯ 75,704 ರೈತರಿಗೆ 178.88ಕೋಟಿ ರೂ. ಪರಿಹಾರ ಬಂದಿದ್ದು ಅತ್ಯಧಿಕವಾಗಿದೆ. ಕೊಪ್ಪಳ ಜಿಲ್ಲೆಯ 2,127 ರೈತರು 2.53ಕೋಟಿ ರೂ. ಪರಿಹಾರ ಪಡೆದಿದ್ದಾರೆ. ಗದಗ ಜಿಲ್ಲೆಯ 1,836 ರೈತರು, 3.47 ಕೋಟಿ ರೂ. ಪರಿಹಾರ ಪಡೆದಿದ್ದರೆ, ಬಳ್ಳಾರಿ ಜಿಲ್ಲೆಯ 3,130 ರೈತರಿಗೆ 1.73ಕೋಟಿ ರೂ. ಪರಿಹಾರ ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯ 25 ರೈತರಿಗೆ 21 ಸಾವಿರ ರೂ. ಪರಿಹಾರ ಬಂದಿದೆ.

ಬಾಗಲಕೋಟೆ ಜಿಲ್ಲೆಯ 1,266 ರೈತರು 84.33 ಲಕ್ಷ ರೂ., ಬೆಳಗಾವಿ ಜಿಲ್ಲೆಯ 2,525 ರೈತರು 3.76 ಕೋಟಿ ರೂ., ಕಲಬುರಗಿಯ 392 ರೈತರು 62.84 ಲಕ್ಷ ರೂ., ರಾಯಚೂರು ಜಿಲ್ಲೆಯ 5,610 ರೈತರು 8.42ಕೋಟಿ ರೂ., ಬೀದರ ಜಿಲ್ಲೆಯ 14,605 ರೈತರು 7.34 ಕೋಟಿ ರೂ. ಪರಿಹಾರ ಪಡೆದಿದ್ದಾರೆ. ನಮ್ಮ ಜಿಲ್ಲೆಗಳಲ್ಲಿ ಬೆಳೆ ಹಾನಿಗೀಡಾದರೂ ನಯಾ ಪೈಸೆ ಪರಿಹಾರ ನೀಡಿಲ್ಲ ಯಾಕೆ ಎಂಬುದು ಪರಿಹಾರ ಬಾರದ ಮೂರು ಜಿಲ್ಲೆಗಳ ರೈತರ ಪ್ರಶ್ನೆಯಾಗಿದೆ. 2020ರ ಮುಂಗಾರು ಹಂಗಾಮಿಗೆ ಅತಿ ವೃಷ್ಟಿಯಿಂದ ಬೆಳೆಹಾನಿ ಕುರಿತು ರೈತರು ಸಂಕಷ್ಟ ಪಡುತ್ತಿದ್ದಾರೆ. ಜತೆಗೆ ಕೇಂದ್ರ ತಂಡ ಬಂದು ವೀಕ್ಷಣೆ ಮಾಡಿಯಾಗಿದೆ. ಆದರೆ, 2019-20ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ನಷ್ಟ ಕುರಿತು ಆಯಾ ಜಿಲ್ಲಾಡಳಿತಗಳಿಂದ ವಿವರ ಸಲ್ಲಿಕೆಯಾಗಿ ದೆಯಾದರೂ, ಪರಿಹಾರ ಕುರಿತು ಇನ್ನು ಅಂತಿಮಗೊಳಿಸಲಾಗಿಲ್ಲ ಎಂಬುದನ್ನು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸುತ್ತಿವೆ.

2019ರ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿದೆ ಎಂದು ಕೇಂದ್ರ-ರಾಜ್ಯ ಸರ್ಕಾರಗಳೇ ಒಪ್ಪಿಕೊಂಡಿವೆ. ಆದರೆ, ಬೆಳೆವಿಮೆ ಕಂಪೆನಿಗಳು ಮಾತ್ರ ನೂರಾರು ಕೋಟಿ ರೂ. ವಿಮಾ ಕಂತು ಹಣ ಪಡೆದು, ನಯಾ ಪೈಸೆ ಪರಿಹಾರ ನೀಡುವುದಿಲ್ಲ ಎಂದಾದರೆ ವಿಮೆ ಯಾಕೆ ಬೇಕು. ಬೆಳೆವಿಮೆ ಎಂಬುದು ಕಂಪೆನಿಗಳ ಉದ್ಧಾರಕ್ಕೋ, ಕಷ್ಟಕಾಲದಲ್ಲಿ ರೈತರ ನೆರವಿಗೆ ಬರುವುದಕ್ಕೋ ಎಂಬುದು ಸ್ಪಷ್ಟವಾಗಬೇಕು. -ಸುಭಾಸ ಬೂದಿಹಾಳ, ಕೋಳಿವಾಡ ರೈತ

 

-ಅಮರೇಗೌಡ ಗೋನವಾರ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

000.

ಆರ್ ಸಿಬಿ vs ಚೆನ್ನೈ ಕಾದಾಟ : ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ಕೆ

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ; ಐಪಿಎಲ್‌ ವಿದಾಯ ಸೂಚನೆಯೇ?

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ; ಐಪಿಎಲ್‌ ವಿದಾಯ ಸೂಚನೆಯೇ?

bihar

ಬಿಹಾರ: ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

News-tdt-01

ಧಮ್ ಇದ್ದರೆ ಪ್ರಧಾನಿ ಮೋದಿ ಮುಂದೆ ಕೂತು ರಾಜ್ಯಕ್ಕೆ ಪರಿಹಾರ ತರಲಿ:  ಸಿದ್ದರಾಮಯ್ಯ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಕನೂರು ಗೆಲುವಿಗೆ ಶ್ರಮಿಸಿ: ಕೋಟಾ

ಸಂಕನೂರು ಗೆಲುವಿಗೆ ಶ್ರಮಿಸಿ: ಕೋಟಾ

huballi-tdy-2

ಯುದ್ಧ ಕಾಲದಲ್ಲಿ ಜೆಡಿಎಸ್‌ನಿಂದ ಮತ್ತೂಮ್ಮೆ ಶಸ್ತ್ರತ್ಯಾಗ

Huballi-tdy-1

ಕಾನೂನು ಬಾಹಿರ ಕೃತ್ಯಗಳ ಮಟ್ಟ ಹಾಕಲು ಮುಲಾಜಿಲ್ಲದೆ ಕ್ರಮ

ಧಾರವಾಡ: ಬೈಕ್ ಕಳ್ಳರ ಬಂಧನ; 17 ಬೈಕ್‌ ಗಳ ವಶ

ಧಾರವಾಡ: ಬೈಕ್ ಕಳ್ಳರ ಬಂಧನ; 17 ಬೈಕ್‌ ಗಳ ವಶ

Hubali-tdy-2

ಎಸ್‌ಡಿಎಂ ನಾರಾಯಣ ಹೃದಯಾಲಯ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

UK-TDY-1

ಅಪರೂಪದ ಅಪ್ಪೆ ಮಾವಿಗೆ ಕಸಿ ಕಾಯಕಲ್ಪ

KOPALA-TDY-1

ಕೆರೆ ಭರ್ತಿಯಾದರೂ ರೈತರಿಗಿಲ್ಲ ನೆಮ್ಮದಿ

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ನಕ್ಸಲರೊಂದಿಗೆ ಗುಂಡಿನ ಚಕಮಕಿ; ಯೋಧ ಹುತಾತ್ಮ

ನಕ್ಸಲರೊಂದಿಗೆ ಗುಂಡಿನ ಚಕಮಕಿ; ಯೋಧ ಹುತಾತ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.