Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ ಬಿಜೆಪಿ-ಕಾಂಗ್ರೆಸ್

Team Udayavani, Apr 17, 2024, 7:46 PM IST

MONEY (2)

ಧಾರವಾಡ : ಮದ್ಯ ಶೋಧನೆಗೆ ಹೋದವರಿಗೆ ಧಾರವಾಡದ ಅಪಾರ್ಟಮೆಂಟ್‌ವೊಂದರಲ್ಲಿ ಸಿಕ್ಕ ಕೋಟಿ ಕೋಟಿ ಹಣದ ಎಣಿಕೆ ಕಾರ್ಯ ಮುಗಿದಿದ್ದು, ಅದನ್ನು ಹುಬ್ಬಳ್ಳಿಯ ಕೇಶ್ವಾಪೂರ ಎಸ್‌ಬಿಐ ಬ್ಯಾಂಕ್‌ನಲ್ಲಿ ಅಧಿಕಾರಿಗಳು ಜಮೆ ಮಾಡಿದ್ದಾರೆ.

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವದ ವರೆಗೂ ಹಣದ ಎಣಿಕೆ ಮಾಡಿದ ಹಣವನ್ನು ಅಧಿಕಾರಿಗಳು 18 ಕ್ಕೂ ಅಧಿಕ ಬ್ಯಾಗುಗಳಲ್ಲಿ ತುಂಬಿಕೊಂಡು ಇನ್ನೊವಾ ಕಾರಿನಲ್ಲಿಟ್ಟುಕೊಂಡು ಹುಬ್ಬಳ್ಳಿಗೆ ಕೊಂಡೊಯ್ದರು. ಆದರೆ ಈ ಹಣದ ಕುರಿತು ಧಾರವಾಡದ ಜಿಲ್ಲಾಧಿಕಾರಿಗಳು ಸೇರಿದಂತೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ.

ಸದ್ಯಕ್ಕೆ ಅರ್ನಾ ಅಪಾರ್ಟ್‌ಮೆಂಟ್‌ನ 33 ನೇ ಫ್ಲಾಟ್ ಸಹಾಯಕ ಬಸವರಾಜ ದತ್ತುನವರ ಅವರಿಗೆ ಸೇರಿದ್ದರಿಂದ ಐಟಿ ಅಧಿಕಾರಿಗಳು ಹಣದ ಮೂಲ ಪತ್ತೆಗೆ ಬಲೆ ಬೀಸಿದ್ದಾರೆ. ಕೋಟಿ ಕೋಟಿ ಹಣ18-20 ಕೋಟಿ ರೂ.ಗಳಿಗೂ ಅಧಿಕ ಮೊತ್ತದ್ದಾಗಿದೆ ಎನ್ನಲಾಗಿದೆ. ಆದರೆ ಈ ಪೈಕಿ ಒಂದಿಷ್ಟು ಹಣಕ್ಕೆ ಈಗಾಗಲೇ ದಾಖಲೆಗಳನ್ನು ನೀಡಲಾಗಿದೆ ಎನ್ನುವ ಮಾಹಿತಿ ಇದ್ದು, ಅಂತಿಮವಾಗಿ ಎರಡು ದಿನಗಳ ನಂತರವೇ ಅಧಿಕೃತವಾಗಿ ಇದು ಯಾರಿಗೆ ಸೇರಿದ ಹಣ ಎಂಬುದು ಗೊತ್ತಾಗಲಿದೆ.

ಬಸವರಾಜ ದತ್ತುನವರ ತಾನು ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಎಂದು ಹೇಳಿಕೊಂಡಿದ್ದರಿಂದ ಐಟಿ ಅಧಿಕಾರಿಗಳು ಶೆಟ್ಟಿ ಅವರ ಕಚೇರಿ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.ಬುಧವಾರ ಮಧ್ಯಾಹ್ನ 2 ಗಂಟೆವರೆಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿ ಎರಡು ಪೊಲೀಸ್ ಎಸ್ಕಾರ್ಟ ವಾಹನದ ಸಮೇತ ಭದ್ರತೆಯೊಂದಿಗೆ 18 ಕೋಟಿಗೂ ಅಧಿಕ ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ರವಾನಿಸಿದ್ದಾರೆ.

ಕೋಟಿ ಕೋಟಿ ಹಣ ರಾಜಕೀಯ
ಇನ್ನು ಜಿಲ್ಲೆಯಲ್ಲಿ ಮೊದಲೇ ಚುನಾವಣಾ ಕಾವು ಏರಿದ್ದರಿಂದ ರಾಜಕೀಯ ಪಕ್ಷಗಳ ಮುಖಂಡರು ಕೋಟಿ ಕೋಟಿ ಹಣವು ಈ ಪಕ್ಷದ್ದು ಆ ಪಕ್ಷದ್ದು ಎಂದು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಧಾರವಾಡದಲ್ಲಿ ಸಿಕ್ಕಿರುವ ಹಣ ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ್ದಿರಬಹುದು. ಇನ್ನೆರಡು ದಿನಗಳಲ್ಲಿ ಇವರ ಬಣ್ಣ ಬಯಲಾಗುತ್ತದೆ ಎಂದು ಆರೋಪಿಸಿದ್ದಾರೆ. ಅಷ್ಟೇಯಲ್ಲ, ಕೋಟಿ ಕೋಟಿ ಹಣ ಪಕ್ಕದ ಜಿಲ್ಲೆಯ ಪ್ರಭಾವಿ ರಾಜಕೀಯ ಮಹಿಳೆಯರೊಬ್ಬರಿಗೆ ಸೇರಿದ್ದಿರಬಹುದು ಎನ್ನುವ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.

ಟಾಪ್ ನ್ಯೂಸ್

neet

NEET ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ: ಧರ್ಮೇಂದ್ರ ಪ್ರಧಾನ್‌

1-wi

T20 World Cup;ಸೋಲಿನೊಂದಿಗೆ ನ್ಯೂಜಿಲ್ಯಾಂಡ್‌ ಹೊರಕ್ಕೆ:ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

33

ನರ್ಸಿಂಗ್‌ ಕಾಲೇಜುಗಳ ಶುಲ್ಕ ಪರಿಷ್ಕರಣೆ ಇಲ್ಲ, ಸೌಲಭ್ಯ ನೀಡದ ಕಾಲೇಜಿಗೆ ಬೀಗ ಹಾಕಿ: ಸಚಿವ

Actor Darshan: ನ್ಯಾಯ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟಿದ್ದ ದರ್ಶನ್‌!

Actor Darshan: ನ್ಯಾಯ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟಿದ್ದ ದರ್ಶನ್‌!

24

Namma clinic: ಸಾರ್ವಜನಿಕ ಸ್ಥಳದಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ ಪ್ರಾರಂಭ; ದಿನೇಶ್‌

ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಉಂಟಾದರೆ ಅಧಿಕಾರಿಗಳ ಮೇಲೆ ಕ್ರಮ: ಸಚಿವ

ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಉಂಟಾದರೆ ಅಧಿಕಾರಿಗಳ ಮೇಲೆ ಕ್ರಮ: ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

neet

NEET ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ: ಧರ್ಮೇಂದ್ರ ಪ್ರಧಾನ್‌

tennis

Australian Open: ಪ್ರಣಯ್‌, ಸಮೀರ್‌ ಕ್ವಾರ್ಟರ್‌ ಫೈನಲಿಗೆ

Rohan Bopanna

ಪ್ಯಾರಿಸ್‌ ಒಲಿಂಪಿಕ್ಸ್‌  ಡಬಲ್ಸ್‌ ನಲ್ಲಿ ಬೋಪಣ್ಣ-ಬಾಲಾಜಿ

1-wi

T20 World Cup;ಸೋಲಿನೊಂದಿಗೆ ನ್ಯೂಜಿಲ್ಯಾಂಡ್‌ ಹೊರಕ್ಕೆ:ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ

1-bbb

Kuwait ಭೀಕರ ಅಗ್ನಿ ದುರಂತದಲ್ಲಿ ಕಲಬುರಗಿಯ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.