ಸಿಎಎ-ಎನ್‌ಆರ್‌ಸಿ ವಿರುದ್ಧ ಗುಟುರು

Team Udayavani, Dec 25, 2019, 10:33 AM IST

huballi-tdy-2

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ವಿರೋಧಿಸಿ ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಮಾವೇಶ ಮಂಗಳವಾರ ನಡೆಯಿತು.

ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮುಂಭಾಗದಿಂದ ನೆಹರು ಮೈದಾನದವರೆಗೆ ನಡೆಯಿತು. ಇದಕ್ಕೂ ಮೊದಲು ಡಾ| ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ 135 ಮೊಹಲ್ಲಾಗಳಿಂದ ಪ್ರತ್ಯೇಕ ಮೆರವಣಿಗೆಗಳಲ್ಲಿ ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ ಪ್ರತಿಭಟನಾಕಾರರು ಅಲ್ಲಿಂದ ನೆಹರು ಮೈದಾನಕ್ಕೆ ಆಗಮಿಸಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಅಮಿತ್‌ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಮುಸ್ಲಿಂ ಜನಾಂಗವನ್ನು ಗುರಿಯಾಗಿಸಿಕೊಂಡು ಕಾಯ್ದೆ ಜಾರಿ ಮಾಡಿದೆ. ಕೂಡಲೇ ಸಿಎಎ ಹಾಗೂ ಎನ್‌ಆರ್‌ಸಿ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು. ನೆಹರು ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಧರ್ಮಗುರು ತಾಜುದ್ದಿನ್‌ ಖಾದ್ರಿ ಮಾತನಾಡಿ, ನಮ್ಮ ಅಸ್ತಿತ್ವಕ್ಕಾಗಿ ಹಾಗೂ ಮುಂದಿನ ಜನಾಂಗದ ಭವಿಷ್ಯಕ್ಕಾಗಿ ಈ ಹೋರಾಟ ಮಾಡಬೇಕಾಗಿದೆ.

ಇಂತಹ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಕಾಂಗ್ರೆಸ್‌, ಜೆಡಿಎಸ್‌, ದಲಿತ ಸಂಘಟನೆಗಳು, ಸಿಐಟಿಯು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು. ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಸಂಸದ ಪ್ರೊ| ಐ.ಜಿ. ಸನದಿ, ಅಬ್ದುಲ್‌ ಹಮೀದ್‌ ಖೈರಾತಿ, ಅಲ್ತಾಫ್‌ ಹಳ್ಳೂರು, ಸದಾನಂದ ಡಂಗನವರ, ಅಲ್ತಾಫ್ ಕಿತ್ತೂರ, ಅನೀಲಕುಮಾರ ಪಾಟೀಲ, ಪಿತಾಂಬ್ರಪ್ಪ ಬಿಳಾರ, ಗುರುನಾಥ ಉಳ್ಳಿಕಾಶಿ, ಅನ್ವರ್‌ ಮುಧೋಳ, ಬಾಬಾಜಾನ ಮುಧೋಳ, ಅಸ್ಪಾಕ್‌ ಕುಮಟಾಕರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ನಂತರ ವೇದಿಕೆಗೆ ಆಗಮಿಸಿದ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಟಾಪ್ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ

Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

vijayendra

Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Hubli ಅನ್ಯಕೋಮಿನ ಯುವಕನಿಂದ ಅತ್ಯಾಚಾರ

Hubli ಅನ್ಯಕೋಮಿನ ಯುವಕನಿಂದ ಅತ್ಯಾಚಾರ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ

Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ

Gayatri Siddeshwar: “ರಾಹುಲ್‌ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’

Gayatri Siddeshwar: “ರಾಹುಲ್‌ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.