ಕಳಚಿ ಬೀಳುತ್ತಿವೆ ಆರ್‌ಎಫ್‌ಐಡಿ ಟ್ಯಾಗ್‌

ವೈಜ್ಞಾನಿಕವಾಗಿ ಅಳವಡಿಸದ ಪರಿಣಾಮ ಮೂಲ ಉದ್ದೇಶಕ್ಕೆ ಹಿನ್ನಡೆ, ಕಾಳಜಿ ವಹಿಸದ ಅಧಿಕಾರಿಗಳು-ಗುತ್ತಿಗೆದಾರರು

Team Udayavani, Mar 18, 2021, 11:03 AM IST

ಕಳಚಿ ಬೀಳುತ್ತಿವೆ ಆರ್‌ಎಫ್‌ಐಡಿ ಟ್ಯಾಗ್‌

ಹುಬ್ಬಳ್ಳಿ: ಮಹಾನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿಕಂಪೆನಿಯಿಂದ ಪ್ರತಿ ಮನೆಗಳ ಮುಂದೆ ಆರ್‌ಎಫ್‌ಐಡಿ ಟ್ಯಾಗ್‌ ಅಳವಡಿಸಿ ವರ್ಷ ಕಳೆದಿಲ್ಲ ಆಗಲೇ ಕಿತ್ತೋಗುತ್ತಿವೆ. ಗುತ್ತಿಗೆ ಪಡೆದ ಕಂಪನಿಯ ಸಿಬ್ಬಂದಿವೈಜ್ಞಾನಿಕವಾಗಿ ಅಳವಡಿಸದ ಪರಿಣಾಮ ಮೂಲ ಉದ್ದೇಶಕ್ಕೆ ಹಿನ್ನಡೆಯಾದಂತಾಗಿದೆ.

ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಮನೆ ಮನೆಯಕಸ ಸಂಗ್ರಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಅನುಷ್ಠಾನಗೊಳಿಸುವುದು ಉದ್ದೇಶದಿಂದ ಪ್ರತಿಮನೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್‌ ಅಳವಡಿಸಲಾಗಿದೆ. ಇಂಟಿಗ್ರೇಟೆಡ್‌ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರ ಯೋಜನೆಗೆ ಪೂರಕವಾಗಿ ಜಪಾನ್‌ ಮೂಲದ ಎನ್‌ಇಸಿ ಕಂಪನಿ ಈ ಕಾರ್ಯ ನಿರ್ವಹಿಸಿದೆ. ಇದಕ್ಕಾಗಿಸ್ಮಾರ್ಟ್‌ಸಿಟಿ ಕಂಪನಿಯಿಂದ ಕೋಟ್ಯಂತರ ರೂಪಾಯಿಖರ್ಚು ಮಾಡಲಾಗುತ್ತಿದೆ. ಈಗಾಗಲೇ ಮಹಾನಗರವ್ಯಾಪ್ತಿಯಲ್ಲಿ 2.10 ಲಕ್ಷ ಮನೆಗಳಿಗೆ ಈಗಾಗಲೇ ಟ್ಯಾಗ್‌ಅಳವಡಿಸುವ ಕೆಲಸ ಪೂರ್ಣಗೊಂಡಿದ್ದು, ಆದರೆ ಟ್ಯಾಗ್‌ ಅಳವಡಿಸಿ ತಿಂಗಳುಗಳು ಕಳೆದಿಲ್ಲ. ಕೆಲವೆಡೆ ಮನೆಗಳ ಮುಂದೆ ಟ್ಯಾಗ್‌ಗಳು ಕಾಣುತ್ತಿಲ್ಲ.

ಅಳವಡಿಕೆ ಸರಿಯಾಗಿಲ್ಲ: ಆರ್‌ಎಫ್‌ಐಡಿ ಟ್ಯಾಗ್‌ ಅಳವಡಿಸುವ ಕೆಲಸ ಸರಿಯಾಗಿ ಆಗದಿರುವುದುಕೆಲವೆಡೆ ಕಿತ್ತು ಹೋಗಿವೆ. ಸಿಬ್ಬಂದಿ ನಿರ್ಲಕ್ಷದ ಪರಿಣಾಮ ಟ್ಯಾಗ್‌ಗಳು ಕೀಳುತ್ತಿವೆ. ಒಟ್ಟಾರೆ ಮನೆ ಮುಂದೆ ಎರಡು ಸ್ಕ್ರೂ ಹಾಕಿ ಕೂಡಿಸಿದರಾಯ್ತು ಎನ್ನುವ ಬೇಕಾಬಿಟ್ಟಿಯ ಮನಸ್ಥಿತಿ ಎದ್ದು ಕಾಣುತ್ತಿದೆ. ಈ ಟ್ಯಾಗ್‌ಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಜನರು ಮನೆಗೆ ಅಳವಡಿಸಿದ ಟ್ಯಾಗ್‌ ಇದೆಯೋ ಇಲ್ಲವೋ ಎನ್ನುವುದರ ಬಗ್ಗೆತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನು ಅಳವಡಿಸಿರುವ ಟ್ಯಾಗ್‌ ಕೆಲಸ ನಿರ್ವಹಿಸುತ್ತಿರುವ ಬಗ್ಗೆಯೂ ಸ್ಮಾರ್ಟ್‌ಸಿಟಿಕಂಪನಿ ಅಧಿಕಾರಿಗಳಾಗಲೀ ಅಥವಾ ಗುತ್ತಿಗೆದಾರರು ಕಾಳಜಿ ವಹಿಸಿಲ್ಲ.

ವದಂತಿಯಿಂದ ನಾಶ: ಈ ಹಿಂದೆ ಕೋವಿಡ್ಸೋಂಕಿತರನ್ನು ಪತ್ತೆ ಹಚ್ಚು ಕಾರಣಕ್ಕೆ ಟ್ಯಾಗ್‌ಅಳವಡಿಸಲಾಗುತ್ತಿದೆ. ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ಈ ಕೆಲಸ ಮಾಡುತ್ತಿದ್ದಾರೆಎನ್ನುವ ವದಂತಿಗಳಿಂದ ಕೆಲ ಪ್ರದೇಶಗಳಲ್ಲಿ ತಮ್ಮಮನೆಗಳ ಮುಂದೆ ಅಳವಡಿಸಿರುವ ಟ್ಯಾಗ್‌ಗಳನ್ನು ನಾಶಮಾಡಿದ ಘಟನೆಗಳು ನಡೆದಿದ್ದವು. ಆರ್‌ಎಫ್‌ಐಡಿಟ್ಯಾಗ್‌ಗಳ ಬಗ್ಗೆ ಸೂಕ್ತ ಜಾಗೃತಿ ಇಲ್ಲದ ಕಾರಣ ಸುಳ್ಳು ವದಂತಿಗಳನ್ನು ನಂಬಿ ಕಿತ್ತು ಹಾಕಿದ್ದರು.

ಮಾಹಿತಿ ಕೊರತೆ: ಕಸ ಸಂಗ್ರಹಿಸಲು ಬರುವ ಪಾಲಿಕೆ ಸಿಬ್ಬಂದಿ ಟ್ಯಾಗ್‌ ಇದ್ದರೆ ರೀಡ್‌ ಮಾಡು ತ್ತಾರೆ.ಇಲ್ಲದಿದ್ದರೆ ಕಸ ಸಂಗ್ರಹಿಸಿ ಮುಂದೆ ಹೋಗುತ್ತಿದ್ದಾರೆ. ಇದೀಗ ಪ್ರಾಯೋಗಿಕವಾಗಿ ನಡೆಯುತ್ತಿರುವುದರಿಂದ ಪ್ರತಿ ಮನೆ ಕಸ ಸಂಗ್ರಹ ಬಗ್ಗೆ ಪಾಲಿಕೆ ಸಿಬ್ಬಂದಿಯಲ್ಲಿ ಗಂಭೀರತೆಯಿಲ್ಲ. ಕೆಲ ಭಾಗಗಳಲ್ಲಿ ಟ್ಯಾಗ್‌ ಇಲ್ಲದಿರುವಕುರಿತು ಮೇಲಾಧಿ ಕಾರಿಗಳಿಗೆ ತಿಳಿಸಿದ್ದಾರೆ.

ಈ ಕುರಿತುಪಾಲಿಕೆಯಿಂದಲೂ ಸ್ಮಾರ್ಟ್‌ಸಿಟಿ ಕಂಪನಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಆದರೆ ಬಹುತೇಕ ಕಡೆ ಪೌರ ಕಾರ್ಮಿಕರು ಟ್ಯಾಗ್‌ ಇಲ್ಲದಿರುವ ಕುರಿತು ತಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿದೆ ಎನ್ನುವ ಭಾವನೆ ಅಧಿಕಾರಿಗಳಲ್ಲಿದೆ.

ಆರ್‌ಎಫ್‌ಐಡಿ ಜಾಗೃತಿ ಅಗತ್ಯ :

ಯೋಜನೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಇಲ್ಲದವಾದರೆ ಇಂತಹ ಪರಿಸ್ಥಿತಿ ಬರಲಿದೆ. ಹೀಗಾಗಿ ಆರ್‌ಎಫ್‌ಐಡಿಟ್ಯಾಗ್‌ ಅವಶ್ಯಕತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಮೂಡಿಸಬೇಕಿದೆ. ಕಸ ಸಂಗ್ರಹಿಸಲು ಬರುವ ಪಾಲಿಕೆಸಿಬ್ಬಂದಿ ಮನೆ ಮುಂಭಾಗದಲ್ಲಿ ಅಳವಡಿಸಿರುವ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ ಟ್ಯಾಗ್‌ಗೆ ರೀಡರ್‌ ಮೂಲಕ ತಮ್ಮ ಹಾಜರಿ ಖಾತರಿಪಡಿಸುತ್ತಾರೆ. ಈ ಟ್ಯಾಗ್‌ಇರುವುದರಿಂದ ಪೌರ ಕಾರ್ಮಿಕರು ನಮ್ಮ ಪ್ರದೇಶಗಳಿಗೆ ಬಂದಿಲ್ಲ. ಒಂದು ವೇಳೆ ಬಂದರೂ ಕಸ ಸಂಗ್ರಹಿಸುತ್ತಿಲ್ಲ ಎನ್ನುವ ದೂರುಗಳಿಗೆ ಅವಕಾಶ ಇರಲ್ಲ.

0836-6612601 ಕರೆ ಮಾಡಿ ಅಳವಡಿಸಿಕೊಳ್ಳಿ :

ಕಸ ಸಂಗ್ರಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ ಉಪಯುಕ್ತವಾಗಿದೆ. ಈ ವ್ಯವಸ್ಥೆ ಪಾಲಿಕೆ ಸಿಬ್ಬಂದಿಯಲ್ಲಿ ಕರ್ತವ್ಯ ಶಿಸ್ತು ಮೂಡಿಸಿದೆ. ನೇರವಾಗಿ ಸ್ವತ್ಛತೆಗೆ ಆದ್ಯತೆ ನೀಡಿದಂತಾಗಲಿದೆ. ಹೀಗಾಗಿ ತಮ್ಮ ಮನೆಗೆ ಅಳವಡಿಸಿರುವ ಟ್ಯಾಗ್‌ ಕಿತ್ತು ಹೋಗಿದ್ದರೆ ಕೂಡಲೇ ಸ್ಮಾರ್ಟ್‌ ಸಿಟಿ ಕಂಪನಿಯ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಿದರೆ ಪುನಃ ಅಳವಡಿಸುವ ಕೆಲಸ ಆಗಲಿದೆ. ಸ್ಮಾರ್ಟ್‌ ಸಿಟಿ ಕಂಪನಿಯ ದೂ: 0836-6612601 ಕರೆ ಮಾಡಿದರೆ ಟ್ಯಾಗ್‌ ಅಳವಡಿಸುವ ಕಾರ್ಯ ಆಗಲಿದೆ.

ಅಳವಡಿಸಿದ್ದ ಟ್ಯಾಗ್‌ ಕೆಲವೆಡೆ ಕಿತ್ತು ಹೋಗಿವೆ ಎನ್ನುವ ವಿಷಯ ಗೊತ್ತಾಗಿದೆ.ಅಂತಹ ಮನೆಗಳನ್ನು ಗುರುತಿಸಿ ಪುನಃಅಳವಡಿಸುವ ಕೆಲಸ ಆಗಲಿದೆ. ಸಾರ್ವಜನಿಕರು ತಮ್ಮ ಮನೆ ಮುಂದೆ ಟ್ಯಾಗ್‌ ಇಲ್ಲದಿದ್ದರೆ ಸ್ಮಾರ್ಟ್ಸಿಟಿ ಕಂಪನಿಯ ದೂರವಾಣಿಗೆ ಕರೆ ಮಾಡಿತಿಳಿಸಿದರೆ ಟ್ಯಾಗ್‌ ಕೂಡಿಸುವ ಕೆಲಸ ಆಗಲಿದೆ.ಟ್ಯಾಗ್‌ ಅತ್ಯಂತ ಉಪಯುಕ್ತವಾಗಿದ್ದು,ಜೋಪಾನವಾಗಿ ಕಾಪಾಡಿಕೊಳ್ಳಬೇಕು. – ಶಕೀಲ್‌ ಅಹ್ಮದ್‌, ವ್ಯವಸ್ಥಾಪಕ ನಿರ್ದೇಶಕ, ಹು-ಧಾ ಸ್ಮಾರ್ಟ್‌ ಸಿಟಿ ಕಂಪನಿ.

 

-ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.