ವಿವಿಧ ರೈಲುಗಳ ಸಂಚಾರ ರದ್ದು

Team Udayavani, Aug 18, 2019, 5:43 AM IST

ಹುಬ್ಬಳ್ಳಿ: ಸೊಲ್ಲಾಪುರ ಡಿವಿಜನ್‌ನ ವಾಡಸಿಂಗೆ ಹಾಗೂ ಭಲ್ವಾನಿ ನಿಲ್ದಾಣಗಳ ಮಧ್ಯೆ ನಾನ್‌ ಇಂಟರ್‌ಲಾಕಿಂಗ್‌ ಕಾರ್ಯ ನಿಮಿತ್ತ ಕೆಲ ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ.

ಆ.19 ಹಾಗೂ 20ರಂದು ನಾಗರಕೊಯಿಲ್-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ ಎಕ್ಸ್‌ಪ್ರೆಸ್‌ (16340), ಆ.21 ಹಾಗೂ 22 ರಂದು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌-ನಾಗರಕೊಯಿಲ್ (16339) ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದುಪಡಿಸಲಾಗಿದೆ.

ಆ.23ರಂದು ನಾಗರಕೊಯಿಲ್-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ (16340) ಎಕ್ಸ್‌ಪ್ರೆಸ್‌ ರೈಲು ಮಧುರೈ, ಡಿಂಡಿಗಲ್, ಪೊಲ್ಲಾಚಿ, ಪಾಲಕ್ಕಾಡ, ಶೋರನೂರ, ಠೊಕುರ, ರೋಹಾ, ಪನ್ವೆಲ್ ಮಾರ್ಗವಾಗಿ ಸಾಗಲಿದೆ.

ಆ.23ರಂದು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌-ನಾಗರಕೊಯಿಲ್ (16339) ರೈಲು ಪನ್ವೆಲ್, ರೋಹಾ ಠೊಕುರ, ಶೋರನೂರ, ಪಾಲಕ್ಕಾಡ, ಪೊಲ್ಲಾಚಿ, ಡಿಂಡಿಗಲ್, ಮಧುರೈ ಮಾರ್ಗವಾಗಿ ಸಂಚರಿಸಲಿದೆ. ಆ.18ರಂದು ದಾದರ್‌-ಪುದುಚೆರಿ ಎಕ್ಸ್‌ ಪ್ರಸ್‌ (11005) ದಾದರ್‌ನಿಂದಲೇ ಪ್ರಯಾಣ ಬೆಳೆಸಲಿದೆ. ಆ.18ರಂದು ಮೈಸೂರು-ದಾದರ್‌ (11036) ಎಕ್ಸ್‌ಪ್ರೆಸ್‌ ರೈಲು ದಾದರ್‌ವರೆಗೂ ಸಂಚರಿಸಲಿದೆ.

ಆ.19ರಂದು ಕೊಯಿಮತ್ತೂರ- ಲೋಕಮಾನ್ಯ ತಿಲಕ್‌ ಟರ್ಮಿನಸ್‌ (11014) ಎಕ್ಸ್‌ಪ್ರೆಸ್‌ ರೈಲು ಲೋಕಮಾನ್ಯ ತಿಲಕ್‌ ಟರ್ಮಿನಸ್‌ವರೆಗೂ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ