ಘನತ್ಯಾಜ್ಯ ವಿಲೇವಾರಿ: ಶಂಕರ ದಂಪತಿಗೆ ಸನ್ಮಾನ

Team Udayavani, Nov 17, 2019, 10:51 AM IST

ಹುಬ್ಬಳ್ಳಿ: ಮನೆ ತ್ಯಾಜ್ಯ ವಿಲೇವಾರಿಯಲ್ಲಿ ಮಾದರಿಯಾದ ವಿದ್ಯಾನಗರ ಅಕ್ಷಯ ಕಾಲೋನಿಯ ಕೆ. ಶಂಕರ-ರೇಖಾ ದಂಪತಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್‌ ಸನ್ಮಾನಿಸಿದರು.

ಶನಿವಾರ ಅವರ ಮನೆಗೆ ಭೇಟಿ ಕೊಟ್ಟ ಡಿಸಿ ದೀಪಾ, ಮನೆಯಲ್ಲಿ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವನ್ನಾಗಿ ಮೂಲದಲ್ಲಿಯೇ ವಿಂಗಡಿಸಿ ಹಸಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಾವಯವ ಗೊಬ್ಬರ ತಯಾರಿಸಿ ತಮ್ಮ ಮನೆ ಮೇಲಿನ ತಾರಸಿ ತೋಟಕ್ಕೆ ಬಳಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ದಂಪತಿಯ ಪರಿಸರ ಪ್ರೇಮ ನಗರದ ಎಲ್ಲಾ ನಾಗರಿಕರಿಗೆ ಮಾದರಿ. ಪರಿಸರ ಸಂರಕ್ಷಣೆಯಲ್ಲಿ ಮನೆಯಿಂದ ತೆಗೆದುಕೊಳ್ಳುವ ಆರಂಭಿಕ ಜಾಗೃತಿ ಕಾರ್ಯಗಳು ಉತ್ತಮ ಫಲ ನೀಡುತ್ತವೆ ಎಂದು ಹೇಳಿದರು. ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಮಾಜಿ ಸದಸ್ಯರಾದ ಮಹೇಶ ಬುರ್ಲಿ, ಉಮೇಶ ಕೌಜಗೇರಿ, ಘನತ್ಯಾಜ್ಯ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ವಿಜಯಕುಮಾರ ಆರ್‌., ಪರಿಸರ ಅಭಿಯಂತ ಶ್ರೀಧರ್‌ ಟಿ.ಎನ್‌., ಆರೋಗ್ಯ ನಿರೀಕ್ಷಕ ಮಹಾಂತೇಶ ನಿಡವಣಿ ಮೊದಲಾದವರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ