ಅಂದವಾದ ಅಂಗನವಾಡಿ ಕೇಂದ್ರ


Team Udayavani, Sep 24, 2018, 3:25 PM IST

24-sepctember-18.jpg

ಗಜೇಂದ್ರಗಡ: ಅಂಗನವಾಡಿ ಎಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ ನಾಗೇಂದ್ರಗಡ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ ಇದಕ್ಕೆ ತದ್ವಿರುದ್ದವಾಗಿದೆ. ಮನಸ್ಸು ಮಾಡಿದರೆ ಉತ್ತಮವಾಗಿಸಬಹುದು ಎನ್ನುವುದಕ್ಕೆ ನಾಗೇಂದ್ರಗಡ ಅಂಗನವಾಡಿ ಕೇಂದ್ರ ಸಾಕ್ಷಿಯಾಗಿದೆ.

ಅಂಗನವಾಡಿ ಕಾರ್ಯಕರ್ತೆ ಸುವರ್ಣಾ ಚಿಗರಿ ಅವರು ಸ್ವಂತ ಹಣದಿಂದ ಕೇಂದ್ರಕ್ಕೆ ಸೂಜಿಗಲ್ಲಿನಂತೆ ಮಕ್ಕಳನ್ನು ಸೆಳೆಯುವಂತೆ ಮಾಡಿದ್ದಾರೆ. ಎಳೆಯ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಕದ ಅರಿವು ಮೂಡಿಸುವುದು ಅಂಗನವಾಡಿ ಕೇಂದ್ರಗಳು. ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ತಾಯಂದಿರ ಪಾತ್ರದಷ್ಟೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿರ ಜವಾಬ್ದಾರಿ ಬಹಳ ಮಹತ್ತರದ್ದಾಗಿದೆ ಎಂದು ತಿಳಿದು ಮಕ್ಕಳ ಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ನಾಗೇಂದ್ರಗಡದ ಅಂಗನವಾಡಿ ಕೇಂದ್ರ ಸಂಖ್ಯೆ 257ರಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಸುವರ್ಣಾ ಮಲ್ಲಪ್ಪ ಚಿಗರಿ ಸ್ವಂತ ಹಣದಿಂದ ಕೇಂದ್ರಕ್ಕೆ ವಿವಿಧ ಬಣ್ಣಗಳಿಂದ ಶೃಂಗರಿಸಿದ್ದಾರೆ. ಅದು ಈಗ ಮಾದರಿ ಕೇಂದ್ರವಾಗಿ ಹೊರ ಹೊಮ್ಮಿದೆ.

ನಾಗೇಂದ್ರಗಡದಲ್ಲಿ ಕಳೆದ 10 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಕೇಂದ್ರ ಆರಂಭದಲ್ಲಿ ಎಲ್ಲ ಅಂಗನವಾಡಿ ಕೇಂದ್ರದಂತೆ ದುರ್ಬಲಾವಸ್ಥೆಯಲ್ಲಿತ್ತು. ಆದರೆ ಮಾದರಿ ಅಂಗನವಾಡಿ ಕೇಂದ್ರ ಮಾಡಲೇಬೇಕು ಎಂದು ದೃಢ ಸಂಕಲ್ಪ ತೊಟ್ಟ ಸುವರ್ಣಾ ಚಿಗರಿ ಅವರು 30 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ಕಟ್ಟಡ ಸುತ್ತಲೂ ಬಣ್ಣಗಳ ಬಡಿಸಿದ್ದಾರೆ. ಇದಲ್ಲದೇ ಮಕ್ಕಳನ್ನು ಆಕರ್ಷಿಸುವಂತೆ ಕನ್ನಡ ಮೂಲಾಕ್ಷರ, ಆಂಗ್ಲ ಅಕ್ಷರ, ಪ್ರಾಣಿಗಳ ಚಿತ್ರ, ಕಾಮನ ಬಿಲ್ಲಿನ ವಯ್ನಾರವನ್ನು ಮನೋಹರವಾಗಿ ಚಿತ್ರಸಿದ ಪರಿಣಾಮ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರಕ್ಕೆ ಸದ್ಯ ಬರುವಂತಾಗಿದೆ.

ಅಂಗನವಾಡಿ ಕಟ್ಟಡದ ಮೇಲೆ ವರ್ಣಮಾಲೆಗಳು, ಪ್ರಾಣಿಗಳು, ಕೇಂದ್ರದ ಒಳಭಾಗದಲ್ಲಿನ ಆಟಿಕೆಗಳು ಚಿತ್ರ ಬಿಡಿಸಿ ಆಕರ್ಷಿಸುವಂತೆ ಮಾಡಲಾಗಿದೆ. ಬಣ್ಣದ ಕುರ್ಚಿ ಮೇಜುಗಳನ್ನು ಒದಗಿಸಲಾಗಿದೆ. ಅಂಗನವಾಡಿ ಕೇಂದ್ರ ರಂಗು ರಂಗಾಗಿದೆ ಈ ಕಟ್ಟಡ. ಮಕ್ಕಳನ್ನು ಆಕರ್ಷಿಸುವ ಎಲ್ಲ ಬಗೆಯ ಸೌಕರ್ಯ ಇಲ್ಲಿದೆ. ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವ ಸುಸಜ್ಜಿತ ಅಡುಗೆ ಕೋಣೆ, ಜತೆಗೆ ಇಲ್ಲಿ ನೀಡಲಾಗುವ ಆಟ- ಪಾಠಗಳು ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಿ ಕೊಡುತ್ತದೆ.

ಕೊಠಡಿ ತುಂಬಾ ಜೋಡಿಸಲಾದ ಬೋಧನಾ ಉಪಕರಣಗಳು, ಪುಟಾಣಿಗಳ ಸೃಜನಾತ್ಮಕ ಬೆಳವಣಿಗೆಗೆ ವಿವಿಧ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಈ ಕೇಂದ್ರದಲ್ಲಿ 45ಕ್ಕೂ ಅ ಧಿಕ ಮಕ್ಕಳ ಹಾಜರಾತಿ ಇದೆ. ಬಾಲ್ಯ ಮಕ್ಕಳ ಬೆಳವಣಿಗೆಯಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಹಿರಿದಾಗಿದೆ. ಇಂಥಹ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರಗಳ ಜತೆಗೆ ಸಂಘ ಸಂಸ್ಥೆಗಳು, ಪ್ರಗತಿ ಪರ ಸಂಘಟನೆಗಳು, ಸಮಾಜ ಸೇವೆಕರ ಸಹಕಾರ ದೊರೆತಲ್ಲಿ ಸರಕಾರಿ ಎಲ್ಲ ಅಂಗನವಾಡಿ ಕೇಂದ್ರಗಳು ಮಾದರಿ ಕೇಂದ್ರವಾಗುವುದರಲ್ಲಿ ಸಂದೇಹವೇ ಇಲ್ಲ.

ನಾಗೇಂದ್ರಗಡ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುವರ್ಣಾ ಚಿಗರಿ ಅವರ ನಿಸ್ವಾರ್ಥ ಸೇವೆ ಮೆಚ್ಚಿ
ಇಲಾಖೆಯಿಂದ ಜಿಲ್ಲಾ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
. ಎನ್‌.ಪಿ. ನಾಗನಗೌಡ, ಸಿಡಿಪಿಒ

ಈ ಅಂಗನವಾಡಿ ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ ಈ ಕೇಂದ್ರವನ್ನು ಮಾದರಿ ಮಾಡುವ ಉದ್ದೇಶದಿಂದ ನನ್ನ ಅಳಿಲು ಸೇವೆ ಸಲ್ಲಿಸಿ ಕಟ್ಟಡಕ್ಕೆ ಬಣ್ಣ ಹಚ್ಚಿಸಿದ್ದೇನೆ. ಮಕ್ಕಳು ಕುಳಿತುಕೊಳ್ಳಲು ಕುರ್ಚಿ ಹಾಕಿಸಿದ್ದೇನೆ. ಇದೀಗ ಕೇಂದ್ರಕ್ಕೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
. ಸುವರ್ಣಾ ಚಿಗರಿ,
ನಾಗೇಂದ್ರಗಡ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ

ಡಿ.ಜಿ. ಮೋಮಿನ್‌

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.