ಬಾಂದಾರ ನೀರಿನ ರಭಸಕ್ಕೆ ಕಿತ್ತು ಹೋದ ರೈತರ ಜಮೀನುಗಳು

•ಅಲ್ಪಸ್ವಲ್ಪ ಜಮೀನು ಕಳೆದುಕೊಂಡು ಕಂಗಾಲು •ಸಂಕಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡಲು ಮನವಿ

Team Udayavani, Jun 28, 2019, 11:04 AM IST

gadaga-tdy-4…

ಲಕ್ಷ್ಮ್ಯೇಶ್ವರ: ಬಡ್ನಿ ಗ್ರಾಮದ ಹಳ್ಳಕ್ಕೆ ನಿರ್ಮಿಸಿದ ಬಾಂದಾರದ ತಡೆ ಗೋಡೆ ಕಿತ್ತು ಜಮೀನು ಕೊಚ್ಚಿಕೊಂಡು ಹೋಗಿರುವುದನ್ನು ತೋರಿಸುತ್ತಿರುವ ರೈತರು.

ಲಕ್ಷ್ಮ್ಯೇಶ್ವರ: ತಾಲೂಕಿನ ಬಡ್ನಿ ಹಳ್ಳಕ್ಕೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿದ್ದ ಬಾಂದಾರ ನೀರಿನ ರಭಸಕ್ಕೆ ಕಿತ್ತು ಪಕ್ಕದ ಜಮೀನುಗಳನ್ನು ಕೊಚ್ಚಿಕೊಂಡು ಹೋಗಿವೆ. ಇದರಿಂದ ರೈತರು ಇರುವ ಅಲ್ಪಸ್ವಲ್ಪ ಜಮೀನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಪ್ರತಿವರ್ಷ ಮಳೆಗಾಲದಲ್ಲಿ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದ ಸಂದರ್ಭದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಜಮೀನು ಕೊಚ್ಚಿಕೊಂಡು ಹೋಗುತ್ತಿದೆ. ಇದಕ್ಕೆ ಪರಿಹಾರ ನೀಡಬೇಕು ಎಂದು ಗುರುವಾರ ಬಡ್ನಿ ಗ್ರಾಮದ ಅನೇಕ ರೈತರಾದ ಹಸನಸಾಬ ಯಳವತ್ತಿ, ಚಾಂದಸಾಬ ಯಳವತ್ತಿ, ಗಂಗಮ್ಮ ಬಾಡಗಿ, ತಿರಕಪ್ಪ ಕಡಕೋಳ, ಮಾಲಿಂಗಪ್ಪ ಕಡಕೋಳ, ಶಂಭವ್ವ ಮೇಟಿ, ಷಣ್ಮುಕಪ್ಪ ಮಡಿವಾಳರ ಮತ್ತಿತರರು ಸಂಬಂಧಪಟ್ಟ ಇಲಾಖೆಯವರಿಗೆ ಒಕ್ಕೂರಲಿನ ಮನವಿ ಮಾಡಿದ್ದಾರೆ.

ಪತ್ರಿಕೆಗೆ ಮಾಹಿತಿ ನೀಡಿದ ರೈತ ಹಸನಸಾಬ ಯಳವತ್ತಿ, ಜಮೀನಿಗೆ ಹೊಂದಿಕೊಂಡಿರುವ ಬಾಂದಾರ ಕಿತ್ತು ಕಳೆದ 3 ವರ್ಷದಿಂದ ನೀರು ಜಮೀನಿಗೆ ನುಗ್ಗುತ್ತಿದೆ. ಕಳೆದ 3 ವರ್ಷಗಳಿಂದಲೂ ಜಮೀನುಗಳ ಧಕ್ಕೆಯಾಗುತ್ತಿದ್ದು ಇರುವ ಅಲ್ಪಸ್ವಲ್ಪ ಜಮೀನು ಸಹ ಬಾಂದಾರಕ್ಕೆ ಬಲಿಯಾಗುತ್ತಿದೆ. ಕಳೆದ 5 ದಿನಗಳ ಹಿಂದೆಯಷ್ಟೇ ಹರಿದ ಹಳ್ಳದಿಂದ ಜಮೀನು ಮತ್ತಷ್ಟು ಕೊಚ್ಚಿ ಆಳವಾದ ಕಂದಕ ಬಿದ್ದಿದೆ. ಹಾಳಾಗುತ್ತಿರುವ ನಮ್ಮ ಜಮೀನು ರಕ್ಷಣೆ ಮಾಡಿಕೊಡಿ ಎಂದು ಅನೇಕ ಬಾರಿ ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

2015-16 ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಗೊಜನೂರ- ಅಕ್ಕಿಗುಂದ-ಬಟ್ಟೂರ, ಪುಟಗಾಂವ್‌ ಬಡ್ನಿ ಮಾರ್ಗವಾಗಿ ಸಂಕದಾಳ ವರೆಗಿನ 12 ಕಿ.ಮೀ. ಉದ್ದದ ಹಳ್ಳಕ್ಕೆ 18 ಸರಣಿ ಬಾಂದಾರ ನಿರ್ಮಿಸಲಾಗಿದೆ. ಈ ಕಾಮಗಾರಿಯನ್ನು ಬೆಂಗಳೂರಿನ ಅಮೃತಾ ಕನóಕ್ಷನ್‌ ಅವರು ಗುತ್ತಿಗೆ ಪಡೆದಿದ್ದರು. ಈಗ ಗುತ್ತಿಗೆದಾರರ ನಿರ್ವಹಣಾ ಅವಧಿಯೂ ಮುಗಿದಿರುವುದರಿಂದ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಹಾಳಾಗಿರುವ ಬಾಂದಾರಗಳ ದುರಸ್ಥಿಗೆ ಅನುದಾನವೂ ಇಲ್ಲದ್ದರಿಂದ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ ಎಂದರು.

ಬಾಂದಾರಗಳ ನಿರ್ಮಾಣದಿಂದ ಸಾಕಷ್ಟು ಅನಕೂಲವಾದೀತು ಎಂದು ನಂಬಿದ್ದ ರೈತರಿಗೆ ಈಗ ಬಾಂದಾರಗಳಿಂದಲೇ ತೊಂದರೆ ಆಗುತ್ತಿದೆ. ಇದು ಕೇವಲ ಒಬ್ಬಿಬ್ಬ ರೈತರ ಗೋಳಾಗಿರದೇ ಈ ಹಳ್ಳದುದ್ದಕ್ಕೂ ಕಟ್ಟಿರುವ ಬಾಂದಾರಗಳಿಗೆ ಎರಡೂ ಕಡೆ ರಕ್ಷಣಾ ಗೋಡೆ ನಿರ್ಮಿಸದ್ದರಿಂದ ರೈತ ಪಾಲಿಗೆ ವರವಾಗುವ ಬದಲು ಶಾಪವಾಗುತ್ತಿವೆ ಎಂದು ತಿಳಿಸಿದರು.

ಟಾಪ್ ನ್ಯೂಸ್

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

Lack of Water: ನೀರಿನ ಅಭಾವ… ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಜೆ

Lack of Water: ನೀರಿನ ಅಭಾವ… ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಜೆ

3-mundaragi

Mundargi: ದುರಸ್ತಿ ಸಂದರ್ಭ ವಿದ್ಯುತ್‌ ಶಾಕ್‌ ; ಕೂಲಿಕಾರ ಸಾವು

ಮುಂಡರಗಿ-ರಾಜ್ಯ ಸರ್ಕಾರವೂ ಬರ ಪರಿಹಾರ ನೀಡಲಿ: ಶಿವಾನಂದ ಇಟಗಿ

ಮುಂಡರಗಿ-ರಾಜ್ಯ ಸರ್ಕಾರವೂ ಬರ ಪರಿಹಾರ ನೀಡಲಿ: ಶಿವಾನಂದ ಇಟಗಿ

ಗದಗ: ಬಿಸಿಲಿನ ಬೇಗೆಗೆ ಸಿಮ್ಮಿಂಗ್‌ ಫೂಲ್‌ಗೆ ಲಗ್ಗೆ

ಗದಗ: ಬಿಸಿಲಿನ ಬೇಗೆಗೆ ಸ್ವಿಮ್ಮಿಂಗ್‌ ಫೂಲ್‌ಗೆ ಲಗ್ಗೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

31

Italian Open 2024: ಬೋಪಣ್ಣ ಜೋಡಿಗೆ ಸೋಲು

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.