ಶಿಗ್ಗಾವಿ: ಪಕ್ಷಿ ಸಂಕುಲ ರಕ್ಷಣೆಗೆ ಆದ್ಯತೆ ನೀಡಿ: ಪ್ರೊ| ಭಾಸ್ಕರ್‌

Team Udayavani, Mar 21, 2024, 10:08 AM IST

ಶಿಗ್ಗಾವಿ: ಪಕ್ಷಿ ಸಂಕುಲ ರಕ್ಷಣೆಗೆ ಆದ್ಯತೆ ನೀಡಿ: ಪ್ರೊ| ಭಾಸ್ಕರ್‌

ಉದಯವಾಣಿ ಸಮಾಚಾರ
ಶಿಗ್ಗಾವಿ: ಗುಬ್ಬಚ್ಚಿ ಅತ್ಯಂತ ಮೃದು ಸ್ವಭಾವದಿಂದ ಗೂಡಿಗೆ ಬೇಕಾದ ರೀತಿಯಲ್ಲಿ ಹುಲ್ಲಿನ ಎಸಳುಗಳನ್ನು ತಂದು ಗೂಡು
ಕಟ್ಟಿಕೊಳ್ಳುತ್ತದೆ. ಅಮ್ಮನ ವಾತ್ಸಲ್ಯ, ಗುಬ್ಬಚ್ಚಿ ವಾತ್ಸಲ್ಯ ಒಂದೇ ಆಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ| ಟಿ.ಎಂ. ಭಾಸ್ಕರ್‌ ಅವರು ಹೇಳಿದರು.

ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂತಃಕರಣದ ಗುಣಸ್ವಭಾವ ಇರುವುದು ತಾಯಿ ಮತ್ತು ಗುಬ್ಬಚ್ಚಿಗೆ ಮಾತ್ರ, ಮಕ್ಕಳ ಪರಿಪಾಲನೆಗೆ ಗುಬ್ಬಚ್ಚಿ ಮಾದರಿಯಾಗಿದೆ.
ಅದು ಪರಿಸರದಲ್ಲಿ ಅತ್ಯಂತ ಮಾದರಿ ಮನೆಯನ್ನು ಕಟ್ಟಿಕೊಳ್ಳುತ್ತದೆ, ನಾವೆಲ್ಲ ಪ್ರೀತಿಯಿಂದ ಆ ಪಕ್ಷಿ ಸಂಕುಲ ರಕ್ಷಣೆ
ಮಾಡಬೇಕು ಎಂದರು.

ಕುಲಸಚಿವರಾದ ಪ್ರೊ| ಸಿ.ಟಿ. ಗುರುಪ್ರಸಾದ ಮಾತನಾಡಿ, ಗುಬ್ಬಚ್ಚಿ ದಿನವನ್ನು ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಗುಬ್ಬಚ್ಚಿ ಸಂಕುಲ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದು ಅತ್ಯಂತ ಸಣ್ಣ ಪಕ್ಷಿ ಆಗಿರುವುದರಿಂದ ಇದನ್ನು ರಕ್ಷಿಸುವ ಸಲುವಾಗಿ ಪರಿಸರವಾದಿಗಳು ಈ ಆಚರಣೆ ಜಾರಿಗೆ ತಂದಿದ್ದಾರೆ. ಮಗುವನ್ನು ಸಂರಕ್ಷಿಸಿಕೊಳ್ಳಲು ಗುಬ್ಬಚ್ಚಿ ಹೇಗೆ ಗೂಡು ಕಟ್ಟಿಕೊಳ್ಳುತ್ತದೆಯೋ ಹಾಗೆ ಆ ಗುಬ್ಬಚ್ಚಿ ಗೂಡು ಪ್ರೀತಿಯ ಸಂಕೇತವಾಗಿ ಮಾನವ ಕುಲಕ್ಕೆ ಮಾದರಿಯಾಗಿದೆ. ಪ್ರಾಣಿ, ಪಕ್ಷಿಗಳನ್ನು ರಕ್ಷಿಸಿಕೊಳ್ಳಬೇಕು. ಈ ಬಿಸಿಲು ಬೇಗುದಿಯ ಸಂದರ್ಭದಲ್ಲಿ ಆಹಾರ, ನೀರು ಇಡುವ ಪ್ರತಿಜ್ಞೆ ಮಾಡುವ ಮೂಲಕ ಈ ಆಚರಣೆಯನ್ನು ಅರ್ಥಪೂರ್ಣವಾಗಿಸೋಣ ಎಂದರು.

ಮೌಲ್ಯಮಾಪನ ಕುಲಸಚಿವರಾದ ಪ್ರೊ| ಎನ್‌.ಎಂ. ಸಾಲಿ ಮಾತನಾಡಿ, ಪಕ್ಷಿಗಳಿಂದ ನಾವು ಮಾನವೀಯ ಮೌಲ್ಯಗಳನ್ನು
ಕಲಿಯೋಣ. ಅವುಗಳನ್ನು ರಕ್ಷಣೆ ಮಾಡಿಕೊಳ್ಳೋಣ ಎಂದರು.

ಹಿರಿಯ ಸಂಶೋಧನಾಧಿಕಾರಿಗಳಾದ ಡಾ| ಕೆ. ಪ್ರೇಮಕುಮಾರ ಅವರು ಮಾತನಾಡಿ, ಪರಿಸರಕ್ಕೆ ಪಕ್ಷಿಗಳು ಮಿತ್ರರು. ಸಸ್ಯ ಸಂಕುಲ ಬೆಳೆಯಬೇಕಾದರೆ ಪಕ್ಷಿಗಳ ಕಾರ್ಯ ಶ್ಲಾಘನೀಯ ನಮ್ಮ ಮಿತಿಯಲ್ಲಿ ಪಕ್ಷಿ ಸಂಕುಲ ರಕ್ಷಣೆಗೆ ನಿಲ್ಲಬೇಕು ಎಂದರು.

ಸಹಾಯಕ ಕುಲಸಚಿವರಾದ ಶಹಜಹಾನ್‌ ಮುದಕವಿ ಮಾತನಾಡಿ, ನಮ್ಮ ಅಕ್ಕಪಕ್ಕದ ಗಿಡಮರಗಳಲ್ಲಿ ಪಕ್ಷಿಗಳಿಗೆ ಕಾಳು,
ನೀರು ಒದಗಿಸಬೇಕು. ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಹಾಯಕ ಪ್ರಾಧ್ಯಾಪಕ ಡಾ| ಗಿರೇಗೌಡ ಅರಳಿಹಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದೊಡ್ಡಾಟ ಕಲಾವಿದರಾದ ಗೋವಿಂದಪ್ಪ ತಳವಾರ ಪ್ರಾರ್ಥಿಸಿದರು. ಕಿರಿಯ ಸಹಾಯಕ ಶರೀಫ್‌ ಮಾಕಪ್ಪನವರ ಪರಿಸರ ಗೀತೆ ಹಾಡಿದರು.

ಸಹಾಯಕ ಪ್ರಾಧ್ಯಾಪಕಿ ಡಾ| ವಿಜಯಲಕ್ಷ್ಮೀ ಗೇಟಿಯವರ ನಿರೂಪಿಸಿದರು, ಡಾ| ರಜಿಯಾ ನದಾಫ್‌ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.

ಟಾಪ್ ನ್ಯೂಸ್

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

11-yellapur

Yellapur: ನಿಯಂತ್ರಣ ತಪ್ಪಿ ಕಾರು ಪಲ್ಟಿ; ಪ್ರಯಾಣಿಕರು ಪಾರು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.