ಸಾಲಗೇರಿ ರಸ್ತೆ ನಿವಾಸಿಗಳಿಗೆ ರೋಗ ಭೀತಿ


Team Udayavani, Oct 15, 2022, 3:18 PM IST

ಸಾಲಗೇರಿ ರಸ್ತೆ ನಿವಾಸಿಗಳಿಗೆ ರೋಗ ಭೀತಿ

ಅರಕಲಗೂಡು: ಪಟ್ಟಣದ ಸಾಲಗೇರಿ ನಿವಾಸಿಗಳ ಬಹುನಿರೀಕ್ಷಿತ ರಸ್ತೆ ಅಗಲೀಕರಣ ಕಾಮಗಾರಿ ನನೆಗುದಿಗೆ ಬಿದ್ದಿರುವ ಪರಿಣಾಮ ಮಳೆ ಮತ್ತು ಜನವಸತಿ ಪ್ರದೇಶದ ನೀರು ರಸ್ತೆಯಲ್ಲಿ ನಿಂತು ಸಾಂಕ್ರಾಮಿಕ ರೋಗಗಳು ಹರಡಲು ಕಾಣರವಾಗುತ್ತಿದೆ.

ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿ ಎರಡು ವರ್ಷಗಳು ಕಳೆದಿದ್ದು, ಒಟ್ಟು 3.50 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಇದಾಗಿದೆ. ಮೊದಲ ಹಂತದಲ್ಲಿ ಅರ್ಧ ಕಿ.ಮೀ. ದೂರದ ಡಾಂಬರ್‌ ರಸ್ತೆ ಕಾಂಕ್ರಿಟ್‌ ಬಾಕ್ಸ್‌ ಚರಂಡಿ, ಯುಜಿಡಿ ಕೆಲಸ ಮುಗಿದಿದೆ. ಈ ಮೂರು ಕಾಮಗಾರಿ ಅವೈ ಜ್ಞಾನಿಕವಾಗಿ ಕೂಡಿ ರುವ ಪರಿಣಾಮ ರಸ್ತೆ ಮೇಲೆ ಬಿದ್ದ ನೀರು ಚರಂಡಿ ಸೇರದೆ ಮನೆ ಮುಂಭಾಗ ನಿಂತಿ ದ್ದರೆ, ಚರಂಡಿ ನೀರು ಮುಂದೆ ಹೋಗಲು ಸಾಧ್ಯವಾ ಗದೇ ಜನ ಬಳಸುತಿದ್ದ ತೆರೆದ ಬಾವಿಗೆ ಸೇರುತ್ತಿದೆ.

ಅವೈಜ್ಞಾನಿಕ ಚರಂಡಿ ನಿರ್ಮಾಣ: ಸಾಲಗೇರಿ ರಸ್ತೆ ಸುಮಾರು 900ಮೀ.ಅಂತರದಲ್ಲಿ ಅಭಿವೃದ್ಧಿಗೊಳ್ಳಲಿದೆ. ಕೆಳ ಸಾಲಗೇರಿ ಭಾಗದಲ್ಲಿ ರಸ್ತೆ, ಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಮೇಲು ಸಾಲಗೇರಿಯಲ್ಲಿ ಕೇವಲ ಚರಂಡಿ ಕೆಲಸ ಆಗಿದೆ ವಿನಃ ರಸ್ತೆ ಕೆಲಸವನ್ನು ಇನ್ನೂ ಆರಂಭಿಸಿಲ್ಲ. ಆದರೆ, ಅವೈಜ್ಞಾನಿವಾಗಿ ಚರಂಡಿಯನ್ನು ರಸ್ತೆಯಿಂದ 2 ಅಡಿ ಎತ್ತರದಲ್ಲಿ ನಿರ್ಮಿಸಿದ್ದು, ರಸ್ತೆಯಲ್ಲಿ ಹರಿಯುವ ನೀರು ಚರಂಡಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಬಾವಿಗೆ ಚರಂಡಿ ನೀರು: ಗ್ರಾಮದಲ್ಲಿದ್ದ ಹಳೆಯ ತೆರೆದ ಬಾವಿಯಿಂದ ನಿವಾಸಿ ಗಳು ನೀರು ಬಳಕೆ ಮಾಡುತಿದ್ದರು. ಇತ್ತೀಚೆಗೆ ಕುಡಿಯಲು ಈ ನೀರನ್ನು ಬಳಕೆ ಮಾಡುತ್ತಿಲ್ಲ. ಜಾನುವಾರುಗಳಿಗೆ ಕುಡಿಯಲು ಮತ್ತು ಬಟ್ಟೆ ತೊಳೆಯಲು ಬಳಕೆ ಮಾಡುತಿದ್ದಾರೆ. ಇತ್ತೀಚೆಗೆ ಚರಂಡಿ ಕೆಲಸ ಮಾಡುವ ವೇಳೆ ಬಾವಿ ಇರುವ ಜಾಗದಲ್ಲಿ ಕೆಲಸ ಮಾಡಿಲ್ಲ. ಚರಂಡಿ ಮಟ್ಟ ದಲ್ಲಿ ಬಾವಿಯ ಕಲ್ಲುಗಳು ಬಿರುಕು ಬಿಟ್ಟಿರುವ ಪರಿ ಣಾಮ ಚರಂಡಿ ನೀರು ನೇರವಾಗಿ ಬಾವಿ ಸೇರಿ ದುರ್ನಾತ ಬೀರುತ್ತಾ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ.

ರಸ್ತೆಯಲ್ಲಿಯೇ ಮಲಿನ ನೀರು: ಸಾಲಗೇರಿ ರಸ್ತೆ ಅಗಲೀಕರಣ ಕಾಮ ಗಾರಿ ಆರಂಭಗೊಂಡ ವೇಳೆ ಕೆಲವು ನಿವಾಸಿಗಳು, ನ್ಯಾಯಾಲಯ ಮೆಟ್ಟಿಲು ಹತ್ತಿರುವ ಪರಿ ಣಾಮ ಕೆಲಸ ಪೂರ್ಣಗೊಳಿಸಲು ಸಮಸ್ಯೆ ಎದುರಾ ಗಿದೆ. ನ್ಯಾಯಾಲಯ ಮೆಟ್ಟಿಲು ಏರಿರುವ ನಿವಾಸಿಗ ಳು ಮನೆ ಮುಂದೆ ಚರಂಡಿ ಕಾಮಗಾರಿ ನಿರ್ವಹಿಸಲು ಸಾಧ್ಯವಾಗಿಲ್ಲ. ಇದರಿಂದ ಜನವಸತಿ ಪ್ರದೇಶದ ನೀರು ಮುಂದೆ ಹೋಗಲು ಸಾಧ್ಯವಾಗದೇ ರಸ್ತೆಯ ಲ್ಲಿಯೇ ನಿಂತ್ತು ಮಲಿನ ಗೊಂಡು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಸಾಲಗೇರಿ ರಸ್ತೆ ಅಗಲೀಕರಣ ಕಾಮಗಾರಿ ನನೆಗುದಿ ಗೆ ಬಿದ್ದಿರುವ ಪರಿಣಾಮ ನಿವಾಸಿಗಳಿಗೆ, ಸಂಚಾರ ಮಾಡು ವವರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ರಸ್ತೆ ಅಭಿ ವೃದ್ಧಿ ಕೆಲಸವನ್ನು ಪೂರ್ಣಗೊಳಿಸಿ ಸಾರ್ವ ಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡುತ್ತೇನೆ. ● ಕುಮಾರಸ್ವಾಮಿ, ಸ್ಥಳೀಯ ನಿವಾಸಿ

ಸಾಲಗೇರಿ ರಸ್ತೆ ಅಗಲೀಕರಣ ಕೆಲಸ ತಾಂತ್ರಿಕ ಕಾರಣದಿಂದ ತಟಸ್ಥ ಗೊಂ ಡಿದೆ. ಜನರ ಅನುಕೂಲ ಸಲುವಾಗಿ ಗುಂಡಿಬಿದ್ದಿರುವ ರಸ್ತೆಗೆ ವೆಟ್‌ಮಿಕ್ಸ್‌ ಮಾಡಲಾಗಿದೆ. ಮಳೆ ಬೀಳುತ್ತಿರುವ ಪರಿ ಣಾಮ ನೀರು ನಿಲ್ಲುವಂತ್ತಾಗಿದೆ. ಚರಂಡಿ ನೀರು ಬಾವಿ ಸೇರದಂತೆ ಶೀಘ್ರವಾಗಿ ಕಾಮಗಾರಿ ಕೈಗೊಳ್ಳಲಾಗುವುದು. – ಗಣೇಶ್‌, ಎಇಇ, ಲೋಕೋಪಯೋಗಿ ಇಲಾಖೆ

 

-ವಿಜಯ್‌ ಕುಮಾರ್‌

ಟಾಪ್ ನ್ಯೂಸ್

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.