ಹಳ್ಳಿಗೂ ಪಾದಾರ್ಪಣೆ ಮಾಡಿದ ಮತಾಂತರ

ಕೈತಪ್ಪಿ ಹೋಗುತ್ತಿರುವ ಕುಟುಂಬಗಳು „ ಹಳ್ಳಿಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ  ಕೊಡಲಿಪೆಟ್ಟು

Team Udayavani, Oct 27, 2021, 5:16 PM IST

mayamma

ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿ ಮರಗೂರು ಗ್ರಾಮದದಲ್ಲಿ ನನ್ನ ತಾಯಿ ಪುಟ್ಟಮ್ಮ ಕ್ರೆçಸ್ತ ಮತಕ್ಕೆ ಮತಾಂತರಗೊಂಡು ನಮ್ಮ ಕುಟುಂಬದಿಂದ ಕೈತಪ್ಪಿ ಹೋಗುತ್ತಿದ್ದಾರೆ. ದಯವಿಟ್ಟು ಉಳಿಸಿಕೊಡಿ ಎಂದು ಪುಟ್ಟಮ್ಮನ ಪುತ್ರ ಅರವಿಂದ್‌ಯೋಗರಾಜು ತಮ್ಮ ಅಳಲು ಜಿಲ್ಲಾಡಳಿತದ ಮುಂದೆ ತೋಡಿಕೊಂಡಿದ್ದಾರೆ.

ಮರಗೂರು ಗ್ರಾಮದ ಅರವಿಂದ್‌ ಯೋಗರಾಜ್‌ ಹಲವು ವರ್ಷದಿಂದ ಬೆಂಗಳೂರಿನಲ್ಲಿ ಸ್ವಉದ್ಯೋಗ ನಡೆಸಿಕೊಂಡಿದ್ದು ಬದುಕು ಕಟ್ಟಿಕೊಂಡಿದ್ದರು. ತಿಂಗಳಿಗೆ ಒಮ್ಮೆ ತನ್ನೂರಿಗೆ ಆಗಮಿಸಿ ತಾಯಿಗೆ ಅಗತ್ಯ ವಸ್ತುಗಳನ್ನು ಕೊಡಿಸಿ ವೆಚ್ಚಕ್ಕೆ ಹಣ ನೀಡಿ ತಾಯಿ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು. ಆದರೆ ಕಳೆದ ವಾರ ಗ್ರಾಮಕ್ಕೆ ಬಂದಾಗ ತಾಯಿಯನ್ನು ಕ್ರೈಸ್ತ ಮತಕ್ಕೆ ಆಮೀಚ ಒಡ್ಡಿ ಮತಾಂತರ ಮಾಡಿರುವ ವಿಚಾರ ತಿಳಿದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮತಾಂತರ ಮಾಡಿದವರೇ ಪುಟ್ಟಮ್ಮನ ಕೃಷಿ ಭೂಮಿಯಲ್ಲಿ ಇದ್ದ ಮಾಯಮ್ಮ ದೇವತೆ ಗುಡಿಯನ್ನು ದ್ವಂಸ ಮಾಡಿಸಿದ್ದಾರೆ.

ಇನ್ನು ಈ ಭೂಮಿಯನ್ನು ದಾನ ಮಾಡಿದರೆ ಇಲ್ಲಿ ಚರ್ಚ್‌ ನಿರ್ಮಿಸುತ್ತೇವೆ ನೀನು ಅಲ್ಲಿ ನೆಮ್ಮದಿಯಾಗಿ ಇತರ ಕ್ರೈಸ್ತ ಬಾಂಧವರೊಂದಿಗೆ ಬದುಕು ಕಟ್ಟಿಕೊಳ್ಳಬಹುದು ಎಂದು ಪುಟ್ಟಮ್ಮನ ಮನಸ್ಸು ಪರಿವರ್ತನೆ ಮಾಡಿದ್ದಾರೆ. ಈ ವಿಷಯ ಗ್ರಾಮದಲ್ಲಿ ಹರಡಿದ್ದು ಮಾಯಮ್ಮ ದೇವರನ್ನು 40 ಕುಟುಂಬಸ್ಥರು ಪೂಜೆ ಮಾಡುತ್ತಿದ್ದರು ಅವರು ಈ ಬಗ್ಗೆ ಒಪ್ಪದೆ ಅಡ್ಡಿಪಡಿಸಿದ್ದಾರೆ.

ಪುಟ್ಟಮ್ಮ ಮೈನ್ಸ್‌ನಲ್ಲಿ ಕೆಲಸ ಮಾಡುತಿದ್ದ ವೇಳೆಯಲ್ಲಿ ಅಲ್ಲಿದ್ದ ಸಿಬ್ಬಂದಿಯೊಬ್ಬರು ಕ್ರೈಸ್ಥ ಮತಕ್ಕೆ ಸೇರಿದ್ದು ಅವರಿಂದಾಗಿ ಮತಾಂತವಾಗಿದ್ದಾರೆ ನಮಗೆ ಇರುವ 1.17 ಎಕರೆ ಕೃಷಿ ಭೂಮಿಯನ್ನು ದಾನ ಮಾಡುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಸೇವೆಯಿಂದ ನಿವೃತ್ತಿ ಪಡೆದಿದ್ದ ಮೇಲೆ ಮೈನ್ಸ್‌ನ ವ್ಯವಸ್ಥಾಪಕರ ಮನೆಗೆಲಸಕ್ಕೆ ಸೇರಿಕೊಂಡಿದ್ದು ವ್ಯವಸ್ಥಾಪಕನ ಪತ್ನಿ ಕ್ರೈಸ್ತರಾದ ಶಾಂತಮ್ಮ ಜತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರಿಂದ ಈ ರೀತಿ ಮತಾಂತರ ವಾಗಿರುವ ಶಂಕೆಯನ್ನು ವ್ಯಕ್ತ ಪಡಿಸಿದ್ದಾರೆ.

ಮತಾಂತರ ವಿರುದ್ಧ ಗ್ರಾಮದಲ್ಲಿ ಜಾಗೃತಿ-

ಚನ್ನರಾಯಪಟ್ಟಣ: ತಾಲೂಕಿನ ಮರಗೂರು ಗ್ರಾಮದಲ್ಲಿ ಮತಾಂತರ ನಡೆಯುತ್ತಿರುವ ವಿಷಯ ತಿಳಿದು ಸ್ಥಳಿಯ ಹಿಂದೂಪರ ಸಂಘಟನೆ ಕಾರ್ಯ ಕರ್ತರು ಗ್ರಾಮಕ್ಕೆ ಭೇಟಿ ನೀಡಿ ಮತಾಂತರ ಆಗಿರವ ಬಗ್ಗೆ ಮಾಹಿತಿ ಪಡೆದು ಗ್ರಾಮಕ್ಕೆ ಧರ್ಮ ಜಾಗೃತಿ ಸಭೆ ಮಾಡುವುದಾಗಿ ಭಜರಂಗದಳ ಮಾಜಿ ಸಂಚಾಲಕ ಧರಣಿನಾಗೇಶ್‌ ಭರವಸೆ ನೀಡಿದರು.

ಈಗಾಗಲೆ ಇಬ್ಬರು ಒಕ್ಕಲಿಗರ ಕುಟುಂಬ, ಮೂರು ದಲಿತರ ಕುಟುಂಬದವರು ಕ್ರೈಸ್ತ ಮತಕ್ಕೆ ಸೇರಿದ್ದಾರೆ ಇನ್ನು ಐದಾರು ಮನೆಯವರು ಕ್ರೈಸ್ತರಾಗುವಂತೆ ಒತ್ತಡ ಹೇರಿದ್ದು ಅವರೂ ಸಹಮತ ವ್ಯಕ್ತ ಪಡಿಸಿದ್ದಾರೆ ಎಂಬ ವಿಷಯ ತಿಳಿದಿದೆ. ಆದಷ್ಟು ಬೇಗ ಗ್ರಾಮದಲ್ಲಿ ಧರ್ಮ ಜಾಗೃತಿ ಸಭೆ ಮಾಡಲಾಗುವುದು, ಮತಾಂತರ ಆಗಿರುವ ಕುಟುಂಬವನ್ನು ವಾಪಸ್‌ ಹಿಂದೂ ಧರ್ಮಕ್ಕೆ ವಾಪಸ್‌ ಕರೆತರಲಾಗುವುದು ಎಂದರು.

ಇದನ್ನೂ ಓದಿ:- ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

ಎಲ್ಲಾ ಜಾತಿಯ ಮಠಾಧೀಶರು ತಮ್ಮ ತಮ್ಮ ಸಮುದಾಯಗಳಿಗೆ ಧರ್ಮ ಹಾಗೂ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಿ ಮತಾಂತರದಿಂದ ಕಾಪಾಡುವ ಕೆಲಸ ಮಾಡಬೇಕಿದೆ. ಜಾತಿಯಲ್ಲಿ ಭಕ್ತರು ಕಡಿಮೆಯಾದರೆ ಮಠಕ್ಕೆ ಭಕ್ತರು ಕಡಿಮೆ ಆಗುತ್ತಾರೆ ಇದನ್ನು ಅರಿತು ಮಠಾಧೀಶರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯಾವ ಮಠವೂ ಉಳಿಯುವುದಿಲ್ಲ ಎಂದರು.

ರಾಷ್ಟ್ರ ರಕ್ಷಣಾಪಡೆ ಜಿಲ್ಲಾಧ್ಯಕ್ಷ ಸುರೇಶ್‌ ಮಾತನಾಡಿ, ವೃದ್ಧರು, ಬಡತನ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರನ್ನೇ ಮುಖ್ಯಗುರಿ ಇಟ್ಟುಕೊಂಡು ಅವರಿಗೆ ಇಲ್ಲದ ವ್ಯಾಮೋಹ ತೋರಿ ಹಿಂದುತ್ವದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.

ತಾಲೂಕು ವ್ಯಾಪ್ತಿಯಲ್ಲಿನ ಅಧಿಕೃತ ಹಾಗೂ ಅನಧಿಕೃತ ಚರ್ಚ್‌ಗಳ ಬಗ್ಗೆ ಮಾಹಿತಿ ಪಡೆದು, ಕಾನೂನು ಬಾಹೀರವಾಗಿ ಚರ್ಚ್‌ ತೆರೆದು ಮತಾಂತರದಂತಹ ಕೃತ್ಯಕ್ಕೆ ಕೈ ಹಾಕಿದ್ದಲ್ಲಿ ಅಂತವುಗಳನ್ನು ಕೂಡಲೆ ತಾಲೂಕು ಆಡಳಿತ ತೆರವುಗೊಳಿಸಬೇಕು ಎಂದು ಎಚ್ಚರಿಸಿದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಉಪಾಧ್ಯಕ್ಷ ಶಾಮಸುಂದರ್‌, ಯುವ ಬ್ರಿಗೇಡ್‌ ಕಾರ್ಯಕರ್ತ ಕೆರೆಬೀದಿ ಜಗದೀಶ್‌, ಹಿಂದುಪರ ಸಂಘಟನೆಯ ಕಾರ್ಯಕರ್ತ ಎನ್‌.ಎಸ್‌.ನಾಗೇಂದ್ರ, ಗ್ರಾಮದ ಮುಖಂಡರಾದ ಗುರುಮಲ್ಲೇಶ್‌, ನವೀನ್‌, ಶಿವನಂಜೇಗೌಡ, ಗುಡಿಗೌಡ ಶಂಕರೇಗೌಡ, ಶಂಭೇಗೌಡ, ದೇವರಾಜ್‌, ಜವರಯ್ಯ, ಕುಮಾರ್‌, ನಟರಾಜ್‌, ಶಿವಣ್ಣ ಸಭೆಯಲ್ಲಿ ಹಾಜರಿದ್ದರು.

ದೇಗುಲ ಪುನರ್‌ ನಿರ್ಮಾಣ-

ಗ್ರಾಮಕ್ಕೆ ಆಗಮಿಸಿದ ಪುಟ್ಟಮ್ಮ ಪುತ್ರ ಅರವಿಂದ್‌ಗೆ ಸಂಪೂರ್ಣ ಮಾಹಿತಿ ನೀಡಿ ಕೃಷಿ ಭೂಮಿಗೆ ಕರೆದುಕೊಂಡು ಹೋಗಿ ಅಲ್ಲಿನ ಮಾಯಮ್ಮ ಗುಡಿ ನೆಲಸಮ ಮಾಡಿರುವುದಾಗಿ ತಿಳಿಸಿದ್ದಾರೆ. ಕೂಡಲೆ ಅರವಿಂದ್‌ ಪುನಃ ಮಾಯಮ್ಮ ಗುಡಿಯನ್ನು ಎಂದಿನಂತೆ ನಿರ್ಮಿಸಿದ್ದಾರೆ.

“ನನ್ನ ತಾಯಿಯನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರಲು ಸಹಕಾರ ನೀಡಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದು, ಈ ಬಗ್ಗೆ ಸ್ವಯಂ ವಿಡಿಯೋ ಮಾಡಿ ಸಾಮಾಜಿಕ ಜಾಲಾತಣದಲ್ಲಿ ಹರಿ ಬಿಟ್ಟಿದ್ದಾರೆ.

ನಗರದಲ್ಲಿ ನಡೆಯುತಿದ್ದ ಮತಾಂತರ ಭೂತ ಈಗಾಗಲೇ ಗ್ರಾಮೀಣ ಭಾಗವನ್ನು ಆವರಿಸಿದ್ದು, ಅದೆಷ್ಟೋ ಕುಟುಂಬವನ್ನು ನುಂಗಲಾರಂಭಿಸಿದೆ. ನನಗೆ ತಿಳಿಯದೆ ನನ್ನ ತಾಯಿ ಮನಸ್ಸು ಕೆಡಿಸಿ ಮತಾಂತರ ಮಾಡಲಾಗಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಬೇಕು.”  – ಅರವಿಂದ್‌ ಯೋಗರಾಜ್‌, ಮರುಗೂರು ಪುಟ್ಟಮ್ಮನ ಮಗ

ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ಇಂದು –

ಅರಸೀಕೆರೆ: ತಾಲೂಕು ವಿಶ್ವಹಿಂದು ಪರಿಷತ್‌ ಹಾಗೂ ಭಜರಂಗ ದಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಆಡಲಿತದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಾಲೂಕು ವಿಶ್ವಹಿಂದು ಪರಿಷತ್‌ ಅಧ್ಯಕ್ಷ ಟಿ.ವಿ.ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಾಲೂಕಿನ ನಗರ ಮತ್ತು ಗ್ರಾಮೀಣಾ ಪ್ರದೇಶಗಳಲ್ಲಿ ಅನ್ಯ ಧರ್ಮೀಯರು ಮತಾಂತರ ಕಾರ್ಯವನ್ನು ಮಾಡುತ್ತಿದ್ದು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡುತ್ತಿದ್ದಾರೆ, ಕೊರೊನಾ ಸಾಂಕ್ರಾಮಿಕ ಖಾಯಿಲೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಈದ್‌ ಮಿಲಾದ್‌ ಹಬ್ಬದ ಆಚರಣೆಗೆ ಮುಂದಾದ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಯುವಕರ ಗುಂಪು ನಗರದ ಪ್ರಮುಖ ರಸ್ತೆಯಲ್ಲಿ ಸಾವಿರರು ಸಂಖ್ಯೆಯಲ್ಲಿ ಸೇರಿ ಮೆರವಣಿಗೆ ನಡೆಸಿದ್ದು, ಅಲ್ಲದೆ ಆರ್‌ಎಸ್‌ಎಸ್‌ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು.

ಅಲ್ಲದೆ ನೂರಾರು ಬೈಕ್‌ಗಳ ರ್ಯಾಲಿ ನಡೆಸಿದ್ದಾರೆ, ಆದರೆ, ತಾಲೂಕು ಆಡಳಿತ ಕಾನೂನು ಕ್ರಮ ಕೈಗೊಂಡಿಲ್ಲ. ತಾಲೂಕು ಆಡಳಿತದ ವೈಪಲ್ಯವನ್ನು ಖಂಡಿಸಿ ನಮ್ಮ ಸಂಘಟನೆಗಳು ಸಾರ್ವಜನಿಕರ ಪರವಾಗಿ ನಗರದ ಹಾಸನ ರಸ್ತೆಯ ಶ್ರೀಅಯ್ಯಪ್ಪ ಸ್ವಾಮಿ ದೇವಾಲಯ ಮುಂಭಾಗದಿಂದ ಬುಧವಾರ ಬೆಳಗ್ಗೆ 11 ಗಂಟೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿರುವುದಾಗಿ ತಿಳಿಸಿದರು.

ಟಾಪ್ ನ್ಯೂಸ್

ದೇಶದಲ್ಲಿ ಇರುವವರು ಹಿಂದೂಗಳೇ: ಮೋಹನ್‌ ಭಾಗವತ್‌

ದೇಶದಲ್ಲಿ ಇರುವವರು ಹಿಂದೂಗಳೇ: ಮೋಹನ್‌ ಭಾಗವತ್‌

tdy-24

ಹೃದಯಾಘಾತ: ಮದುವೆ ಸಂಭ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೋ ವೈರಲ್

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಜಮ್ಮುವಿನ ಅತಿದೊಡ್ಡ ದಾಸ್ತಾನು ಕೇಂದ್ರದಲ್ಲಿ ಸಂಸ್ಕೃತದಲ್ಲಿ ಬಿಲ್‌!

ಜಮ್ಮುವಿನ ದಾಸ್ತಾನು ಕೇಂದ್ರದಲ್ಲಿ ಇನ್ನು ಮುಂದೆ ಸಂಸ್ಕೃತದಲ್ಲಿ ಬಿಲ್‌!

ಅಂಜನಾದ್ರಿಯಲ್ಲಿ ಅನ್ಯಧರ್ಮಿಯರು ವ್ಯಾಪಾರ ಮಾಡದಂತೆ ಹಿಂಜಾವೇ ಹಾಕಿದ್ದ ಬ್ಯಾನರ್ ತೆರವು

ಅಂಜನಾದ್ರಿಯಲ್ಲಿ ಅನ್ಯಧರ್ಮಿಯರು ವ್ಯಾಪಾರ ಮಾಡದಂತೆ ಹಿಂಜಾವೇ ಹಾಕಿದ್ದ ಬ್ಯಾನರ್ ತೆರವು

shettar

ಗಡಿ ವಿವಾದ ಮಹಾರಾಷ್ಟ್ರದ ರಾಜಕೀಯ ಗಿಮಿಕ್: ಜಗದೀಶ ಶೆಟ್ಟರ್

ಡಿ. 16,17,18 : ಕಾಪುವಿನಲ್ಲಿ ಕಡಲ ಐಸಿರ ಬೀಚ್ ಫೆಸ್ಟ್ 2022: ಶಾಸಕ ಲಾಲಾಜಿ ಆರ್. ಮೆಂಡನ್

ಡಿ. 16,17,18 : ಕಾಪುವಿನಲ್ಲಿ ಕಡಲ ಐಸಿರ ಬೀಚ್ ಫೆಸ್ಟ್ 2022: ಶಾಸಕ ಲಾಲಾಜಿ ಆರ್. ಮೆಂಡನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

ಚಿರತೆಗಳ ಬಗ್ಗೆ ಎಚ್ಚರವಿರಲಿ, ನಿರ್ಲಕ್ಷ್ಯ ಬೇಡ

ಕೋಡಿಮಠದಲ್ಲಿ ಲಕ್ಷ ದೀಪೋತ್ಸವ ಸಂಪನ್ನ

ಕೋಡಿಮಠದಲ್ಲಿ ಲಕ್ಷ ದೀಪೋತ್ಸವ ಸಂಪನ್ನ

ಕುಡಿಯುವ ನೀರಿಗೆ ಹಾಹಾಕಾರ

ಕುಡಿಯುವ ನೀರಿಗೆ ಹಾಹಾಕಾರ

ಹಾಸನ ಜಿಲ್ಲೆಯಲ್ಲಿ ಈ ವರ್ಷ ಮೀನು ಕೃಷಿ ಚುರುಕು; 3 ಕೋಟಿ ಮರಿಗಳ ಬೇಡಿಕೆ

ಹಾಸನ ಜಿಲ್ಲೆಯಲ್ಲಿ ಈ ವರ್ಷ ಮೀನು ಕೃಷಿ ಚುರುಕು; 3 ಕೋಟಿ ಮರಿಗಳ ಬೇಡಿಕೆ

ಉನ್ನತ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಕ ಮಾಡಿ; ಶಾಸಕ ಎಚ್‌.ಕೆ ಕುಮಾರಸ್ವಾಮಿ

ಉನ್ನತ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಕ ಮಾಡಿ; ಶಾಸಕ ಎಚ್‌.ಕೆ ಕುಮಾರಸ್ವಾಮಿ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ದೇಶದಲ್ಲಿ ಇರುವವರು ಹಿಂದೂಗಳೇ: ಮೋಹನ್‌ ಭಾಗವತ್‌

ದೇಶದಲ್ಲಿ ಇರುವವರು ಹಿಂದೂಗಳೇ: ಮೋಹನ್‌ ಭಾಗವತ್‌

tdy-24

ಹೃದಯಾಘಾತ: ಮದುವೆ ಸಂಭ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೋ ವೈರಲ್

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಬಿಜೆಪಿಯಿಂದ ಮತ ಕಳ್ಳತನ ಕೃತ್ಯ: ಡಿಕೆ ಶಿವಕುಮಾರ್‌

ಬಿಜೆಪಿಯಿಂದ ಮತ ಕಳ್ಳತನ ಕೃತ್ಯ: ಡಿಕೆ ಶಿವಕುಮಾರ್‌

ಕಲುಷಿತ ನೀರು ಸೇವಿಸಿ ಬಚನಾಳ ಗ್ರಾಮದಲ್ಲಿ ವಾಂತಿ ಬೇಧಿ: ಇಪ್ಪತ್ತಕ್ಕೂ ಹೆಚ್ಚು ಜನ ಅಸ್ವಸ್ಥ

ಕಲುಷಿತ ನೀರು ಸೇವಿಸಿ ಬಚನಾಳ ಗ್ರಾಮದಲ್ಲಿ ವಾಂತಿ ಬೇಧಿ: ಇಪ್ಪತ್ತಕ್ಕೂ ಹೆಚ್ಚು ಜನ ಅಸ್ವಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.