ಬೆಲೆ ಏರಿಕೆಗೆ ಕಾಂಗ್ರೆಸ್‌ ಆಕ್ರೋಶ

Team Udayavani, Feb 13, 2021, 8:13 PM IST

Untitled-1

ಹಾವೇರಿ: ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸಿಲಿಂಡರ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಸರ್ಕಾರಗಳ ಜನ ವಿರೋಧಿ  ನೀತಿ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಎಂಜಿ ರಸ್ತೆ, ಜೆಪಿ ಸರ್ಕಲ್‌ಮಾರ್ಗವಾಗಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡರು. ಕೇಂದ್ರ ಮತ್ತುರಾಜ್ಯ ಸರ್ಕಾರಗಳ ಜನ ವಿರೋಧಿ  ನೀತಿ ಹಾಗೂ ಪ್ರಧಾನಿ ಮೋದಿ ಸರ್ವಾಧಿ ಕಾರಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೈ ಮುಖಂಡರು, ರೈತ ವಿರೋಧಿ  ಕೃಷಿ ಕಾಯ್ದೆ ಹಿಂಪಡೆಯುವಂತೆ ಹಾಗೂ ಬೆಲೆ ಏರಿಕೆ ತಡೆಗಟ್ಟುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ದಿನದಿಂದ ದಿನಕ್ಕೆ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಇದರಿಂದ ಜನಸಾಮಾನ್ಯರುಬದುಕು ನಡೆಸುವುದೇ ದುಸ್ತರವಾಗಿದೆ. ಅಚ್ಛೇ ದಿನ್‌ ಆಯೇಗಾ ಎಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಬಡವರನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ ಎಂದು ದೂರಿದರು.

ತೈಲ ಬೆಲೆ ಏರಿಕೆಯಿಂದ ದಿನ ಬಳಕೆ ಸಾಮಗ್ರಿಗಳ ಬೆಲೆಯಲ್ಲೂ ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ. ಕೋವಿಡ್ ದಿಂದ ಮೊದಲೇ ಸಂಕಷ್ಟದಲ್ಲಿರುವಜನರಿಗೆ ಇದರಿಂದ ಭಾರೀ ಹೊಡೆತ ಬಿದ್ದಿದೆ.ಆದ್ದರಿಂದ ಸೆಸ್‌ ಕಡಿಮೆ ಮಾಡಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ  ಆಡಳಿತದಿಂದ ಜನ ರೋಸಿಹೋಗಿದ್ದಾರೆ. ರೈತ ವಿರೋಧಿ ಕಾನೂನನ್ನು ಜಾರಿಗೊಳಿಸಿರುವುದರಿಂದ ಅನ್ನದಾತನನ್ನು ಬೀದಿಪಾಲು ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಅನೇಕ ರೈತರು ಪ್ರಾಣ ಕಳೆದುಕೊಂಡರೂ ಪ್ರಧಾನಿಗೆಕನಿಕರ ಬರುತ್ತಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕಲುಪ್ರಯತ್ನಿಸಲಾಗುತ್ತಿದ್ದು, ನರೇಂದ್ರ ಮೋದಿಯವರ ಸರ್ವಾಧಿಕಾರಿ ಆಡಳಿತ ಸರ್ವನಾಶವಾಗುವ ಕಾಲ ಸನ್ನಿಹಿತವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕಾಂಗ್ರೆಸ್‌ ನಾಯಕರ ವಿರುದ್ಧ ಟೀಕೆ ಮಾಡುವುದರಲ್ಲೇ ಪ್ರಧಾನಿ ಮೋದಿ ಕಾಲಕಳೆಯುತ್ತಿದ್ದಾರೆ. ಕೃಷಿ ಕಾಯ್ದೆ ಜಾರಿಗೊಳಿಸುವಮೂಲಕ ರೈತರನ್ನು ಕಾರ್ಪೋರೇಟ್‌ ಕಂಪನಿಗಳಗುಲಾಮರನ್ನಾಗಿಸಲು ಸರ್ಕಾರ ಹೊರಟಿದೆ. ಅನ್ನದಾತನ ಶಾಪ ಆಡಳಿತ ಸರ್ಕಾರಕ್ಕೆ ತಟ್ಟಲಿದೆ ಎಂದರು.

ಸಬ್‌ ಕಿ ಸಾಥ್‌ ಸಬ್‌ ಕಿ ವಿಕಾಸ್‌ ಎಂದು ಹೇಳುತ್ತಿದ್ದ ಮೋದಿ ಈಗ ಬಡವರು, ರೈತರು,ಜನಸಾಮಾನ್ಯರ ವಿನಾಶ ಮಾಡಲು ಹೊರಟಿದ್ದಾರೆ. ಇದೇ ರೀತಿ ದುರಾಡಳಿ ನಡೆಸಿದರೆ ಮುಂದೆಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ‌ ಎಂ.ಎಂ.ಹಿರೇಮಠ ಮಾತನಾಡಿ, ಸರ್ಕಾರ ಇಂಧನ ಬೆಲೆ ಇಳಿಕೆಮಾಡಬೇಕು. ಕರಾಳ ಕೃಷಿ ಕಾಯ್ದೆ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ನಿಂದಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ‌ ಸಂಜೀವಕುಮಾರ ನೀರಲಗಿ, ಪ್ರಮುಖರಾದ ಡಾ|ಸಂಜಯ ಡಾಂಗೆ, ಈರಪ್ಪ ಲಮಾಣಿ, ಎಂ.ಎಂ.ಮೈದೂರ, ಬಸವರಾಜ ಬಳ್ಳಾರಿ, ಗಣೇಶ ಬಿಷ್ಟಣ್ಣನವರ, ಜಗದೀಶ ಬೆಟಗೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಅಚ್ಛೇ ದಿನ್‌ ಆಯೇಗಾ ಎಂದುಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿಈಗ ಬಡವರನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ. ತೈಲ ಬೆಲೆ ಏರಿಕೆಯಿಂದ ದಿನಬಳಕೆ ಸಾಮಗ್ರಿಗಳ ಬೆಲೆಯಲ್ಲೂ ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ. ಕೋವಿಡ್ ದಿಂದ ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ಇದರಿಂದ ಭಾರೀ ಹೊಡೆತ ಬಿದ್ದಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಮಾಡಬೇಕು.  -ಬಸವರಾಜ ಶಿವಣ್ಣನವರ, ಮಾಜಿ ಸಚಿವ

ಟಾಪ್ ನ್ಯೂಸ್

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

34 ಸಾವಿರ ರೂ. ಬರ ಪರಿಹಾರಕ್ಕೆ ಒತ್ತಾಯ: ಮಲ್ಲಿಕಾರ್ಜುನ ಬಳ್ಳಾರಿ

34 ಸಾವಿರ ರೂ. ಬರ ಪರಿಹಾರಕ್ಕೆ ಒತ್ತಾಯ: ಮಲ್ಲಿಕಾರ್ಜುನ ಬಳ್ಳಾರಿ

7-haveri

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

9-koratagere

Koratagere: ಜೂ.9 ರಂದು ಉಚಿತ ಸಾಮೂಹಿಕ ವಿವಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.