Udayavni Special

ಕೇತ್ರಗಳ ಪುನರ್ವಿಂಗಡಣೆಗೆ ಡಿಸಿಗಳಿಗೆ ನಿರ್ದೇಶನ  

20ರಂದು ಸಭೆಗೆ ಹಾಜರಾಗಲು ಜಿಲ್ಲೆಯ ತಹಶೀಲ್ದಾರ್‌-ಸಿಬ್ಬಂದಿಗೆ ರಾಜ್ಯ ಚುನಾವಣಾ ಆಯೋಗ ಸೂಚನೆ

Team Udayavani, Feb 12, 2021, 2:54 PM IST

reallocation of Ketra

ಹಾವೇರಿ: ರಾಜ್ಯ ಚುನಾವಣಾ ಆಯೋಗ ಜಿಪಂ,ತಾಪಂ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು, ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಫೆ.20ರಂದು ನಡೆಯುವ ಸಭೆಗೆ ಜಿಲ್ಲೆಯ ಚುನಾವಣಾ ತಹಶೀಲ್ದಾರ್‌ ಹಾಗೂ ಸಿಬ್ಬಂದಿ ಹಾಜರಾಗುವಂತೆ ಸೂಚನೆ ನೀಡಿದೆ.

ರಾಜ್ಯ ಚುನಾವಣೆ ಆಯೋಗಕ್ಕೆ ಈಗಾಗಲೇ ಜಿಲ್ಲಾ ಚುನಾವಣಾ ವಿಭಾಗದಿಂದ ಗ್ರಾಮೀಣ ವಿಭಾಗದ ಜನಸಂಖ್ಯೆ ವಿವರಗಳು ಸಲ್ಲಿಕೆಯಾಗಿದ್ದು, ತಾಲೂಕುವಾರು ಜಿಪಂ ಹಾಗೂ ತಾಪಂ ಸದಸ್ಯ ಸ್ಥಾನಗಳನ್ನು ಆಯೋಗವೇ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಸ್ಥಾನಗಳ ಆಧಾರದಲ್ಲಿ ತಾಪಂ, ಜಿಪಂ ಕ್ಷೇತ್ರಗಳನ್ನು ಪುನರ್‌ ರಚಿಸುವ ಕೆಲಸ ಜಿಲ್ಲಾಡಳಿತದ ಮುಂದಿದೆ.

ಹಾವೇರಿ, ಬ್ಯಾಡಗಿ, ರಾಣೆಬೆನ್ನೂರ, ಹಾನಗಲ್ಲತಾಲೂಕುಗಳಲ್ಲಿ ತಲಾ ಒಂದು ಜಿಪಂ ಕ್ಷೇತ್ರಗಳನ್ನು ಹೆಚ್ಚಿಸಲು ಆಯೋಗ ಸೂಚಿಸಿದೆ. ಇದರಿಂದ ಈ ಬಾರಿ ನಾಲ್ಕು ತಾಲೂಕುಗಳಲ್ಲಿ ಜಿಪಂ ಕ್ಷೇತ್ರಗಳ ವ್ಯಾಪ್ತಿ ಬದಲಾಗಲಿದೆ. ಇನ್ನು ಹಿರೇಕೆರೂರು ತಾಲೂಕಿನಲ್ಲಿದ್ದ 6 ಕ್ಷೇತ್ರಗಳನ್ನು ಆ ತಾಲೂಕಿನಿಂದ  ಬೇರ್ಪಟ್ಟಿರುವ ರಟ್ಟಿಹಳ್ಳಿಗೆ 3, ಹಿರೇಕೆರೂರಿಗೆ 3 ಹಂಚಿಕೆ ಮಾಡಲಾಗಿದೆ. ಅಲ್ಲದೇ ರಟ್ಟಿಹಳ್ಳಿ ಗ್ರಾಪಂನಿಂದ ಪಪಂಗೆ ಮೇಲ್ದರ್ಜೆಗೇರಿದೆ. ಹೀಗಾಗಿ ರಟ್ಟಿಹಳ್ಳಿ ಜಿಪಂ ಕ್ಷೇತ್ರ ವಿಂಗಡಣೆ ಮಾಡುವ ಅಗತ್ಯವಿದೆ. ರಟ್ಟಿಹಳ್ಳಿ ಬದಲಾಗಿ ಹೊಸ ಕ್ಷೇತ್ರ ಅಲ್ಲಿ ಸೃಷ್ಟಿಯಾಗಲಿದೆ. 24 ತಾಪಂ ಕ್ಷೇತ್ರ ಕಡಿತ: ಇತ್ತೀಚೆಗೆ ತಾಪಂ ರದ್ದುಗೊಳಿಸಿ ಜಿಪಂ ಹಾಗೂ ಗ್ರಾಪಂಗಳಷ್ಟೇ ಇರಬೇಕೆಂಬ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಏಕಾಏಕಿ ಜಿಲ್ಲೆಯ 24 ತಾಪಂ ಕ್ಷೇತ್ರಗಳು ಕಡಿತವಾಗಿರುವುದು ಸ್ಪರ್ಧಾಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.

ಈ ಬಾರಿ ರಟ್ಟಿಹಳ್ಳಿ ಹೊಸದಾಗಿ ತಾಪಂ ಆಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಕ್ಷೇತ್ರಗಳು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿತ್ತು. 2016ರಲ್ಲೇ 128 ತಾಪಂ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈಗ ಆಯೋಗದ ನಿರ್ದೇಶನದಂತೆ 24 ಕ್ಷೇತ್ರಗಳನ್ನು ಕಡಿತಗೊಳಿಸಬೇಕಿದೆ. ಸದ್ಯ ಯಾವ ಕ್ಷೇತ್ರಗಳನ್ನು ಕಡಿತಗೊಳಿಸಬೇಕೆಂಬುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ :“ಮುಖ್ಯ ವೇದಿಕೆ ಅಂತಿಮಗೊಳಿಸಿ”

ಫೆ.20ರಂದು ಸಭೆ ನಿಗದಿ: ತಾಪಂ, ಜಿಪಂ ಕ್ಷೇತ್ರಗಳನ್ನು ಪುನರ್‌ ರಚಿಸಲು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಪಂಗಳು, ಗ್ರಾಮಗಳು, ಪುರುಷ ಹಾಗೂ ಮಹಿಳಾ ಮತದಾರರೆಷ್ಟು, ಎಸ್‌ಸಿ, ಎಸ್‌ಟಿ ಮತದಾರರೆಷ್ಟು ಒಟ್ಟು ಮತದಾರರೆಷ್ಟು ಎಂಬ ವಿವರಗಳೊಂದಿಗೆ ಫೆ. 20ರಂದು ಜಿಲ್ಲೆಯ ಚುನಾವಣಾ ತಹಶೀಲ್ದಾರ್‌ ಹಾಗೂ ಸಿಬ್ಬಂದಿ ಆಯೋಗಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ಇದರ ಜತೆಗೆ ತಾಲೂಕುವಾರು ಹಾಗೂ ಪ್ರತಿ ಜಿಪಂ, ತಾಪಂ ಕ್ಷೇತ್ರದ ನಕ್ಷೆ ಸಿದ್ಧಪಡಿಸಿಕೊಂಡು ಬರಲು ಸೂಚಿಸಲಾಗಿದೆ.

ಟಾಪ್ ನ್ಯೂಸ್

ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ

ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ

Sony TV

ಮಾರುಕಟ್ಟೆಗೆ ಸೋನಿ ಬ್ರಾವಿಯಾ ಟಿವಿ ಲಗ್ಗೆ, Bravia A8H ವಿಶೇಷತೆ ಏನು ?

ಚಳಿಗಾಲದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ: ಸಚಿವ ಧರ್ಮೇಂದ್ರ ಪ್ರಧಾನ್

ಚಳಿಗಾಲದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ: ಸಚಿವ ಧರ್ಮೇಂದ್ರ ಪ್ರಧಾನ್

k-s-eshwarappa

ತೈಲ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ: ಈಶ್ವರಪ್ಪ

Sun glass For summer

ಬೇಸಿಗೆಯಲ್ಲಿ ಕಣ್ಣುಗಳ ರಕ್ಷಣೆಗೆ ಟ್ರೆಂಡಿ ಸನ್ ಗ್ಲಾಸ್ ..!  

Alcohal

ಅತೀಯಾದ ‘ಮದ್ಯ’ ಸೇವನೆಯಿಂದ ‘ಸ್ತನ ಕ್ಯಾನ್ಸರ್’ ..ಮಹಿಳೆಯರೇ ಹುಷಾರ್   

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೈಕಿಗೆ ಟಿಪ್ಪರ್ ಡಿಕ್ಕಿ : ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

ಬೈಕಿಗೆ ಟಿಪ್ಪರ್ ಡಿಕ್ಕಿ : ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

Minister R Shankar

ಅಧಿಕಾರಿಗಳೇ ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ

Sp Devaraj

ಮೊಬೈಲ್‌ ಆ್ಯಪ್‌ನಿಂದಲೇ ದೂರು ಸ್ವೀಕೃತಿ

ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಅಪಘಾತ: ಮೂವರಿಗೆ ಗಂಭೀರ ಗಾಯ

ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಅಪಘಾತ: ಮೂವರಿಗೆ ಗಂಭೀರ ಗಾಯ

ಹಳ್ಳೂರು ಗ್ರಾಪಂ ಭ್ರಷ್ಟಾಚಾರ: ತನಿಖೆಗೆ ಆಗ್ರಹ

ಹಳ್ಳೂರು ಗ್ರಾಪಂ ಭ್ರಷ್ಟಾಚಾರ: ತನಿಖೆಗೆ ಆಗ್ರಹ

MUST WATCH

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

udayavani youtube

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ

udayavani youtube

ಕೋಟ್ಟಾ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

udayavani youtube

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

udayavani youtube

ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ

ಹೊಸ ಸೇರ್ಪಡೆ

ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ

ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ

Sony TV

ಮಾರುಕಟ್ಟೆಗೆ ಸೋನಿ ಬ್ರಾವಿಯಾ ಟಿವಿ ಲಗ್ಗೆ, Bravia A8H ವಿಶೇಷತೆ ಏನು ?

Sun and life

ಸೂರ್ಯನಂತೆ ಹೊಳೆಯಲು ಮೊದಲು ಉರಿಯಬೇಕು

Tagor

ಭಾರತದ ಕಿರೀಟಕ್ಕೆ ನೊಬೆಲ್‌ ಗರಿ ತಂದುಕೊಟ್ಟ ರವೀಂದ್ರನಾಥ ಠಾಗೋರ್‌

1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದು ವಿಚಾರ: ಸಚಿವ ಸುಧಾಕರ್ ಗೆ ಹೈಕೋರ್ಟ್ ನೋಟಿಸ್

1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದು ವಿಚಾರ: ಸಚಿವ ಸುಧಾಕರ್ ಗೆ ಹೈಕೋರ್ಟ್ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.