21ರಂದು ಹಾವೇರಿಯಲ್ಲಿ ರೈತರ ಬೃಹತ್‌ ಸಮಾವೇಶ


Team Udayavani, Mar 16, 2021, 5:51 PM IST

21ರಂದು ಹಾವೇರಿಯಲ್ಲಿ ರೈತರ ಬೃಹತ್‌ ಸಮಾವೇಶ

ಹಾವೇರಿ: ಕೃಷಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್‌ ಇಲಾಖೆ ಖಾಸಗೀಕರಣ ಸೇರಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರೈತ ವಿರೋಧಿ  ಕಾಯ್ದೆಗಳ ಕುರಿತು ರೈತರಿಗೆ ಜಾಗೃತಿ ಮೂಡಿಸಲು ಮಾ.21ರಂದು ನಗರದಲ್ಲಿ ರೈತರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಮಾವೇಶದ ಕುರಿತು ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚಾ ಹಾಗೂ ಐಕ್ಯ ಹೋರಾಟ, ಸಂಯುಕ್ತ ಹೋರಾಟಗಳ ಸಾಮೂಹಿಕ ನಾಯಕತ್ವದಲ್ಲಿ ಇಲ್ಲಿನ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಮಾ.21ರ ಬೆಳಗ್ಗೆ 11ಕ್ಕೆ ಸಮಾವೇಶ ನಡೆಯಲಿದ್ದು, ಜಿಲ್ಲೆಯಲ್ಲೂ ಎಲ್ಲ ರೈತ ಸಂಘಟನೆಗಳು ಒಂದಾಗಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು.

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಉತ್ತರ ಭಾರತದ ರೈತರು ಅಷ್ಟೇ ಬೆಂಬಲ ಕೊಡುತ್ತಿದ್ದು, ದಕ್ಷಿಣ ಭಾಗದ ರೈತರ ಬೆಂಬಲ ಇದೆ ಎಂಬ ಸುಳ್ಳು ಮಾಹಿತಿ ಹರಿಬಿಡಲಾಗುತ್ತಿದೆ. ಹೀಗಾಗಿ ದಕ್ಷಿಣ ಭಾರತದಲ್ಲೂ ರೈತರ ಹೋರಾಟ, ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಮಾ.21ರಂದು 10 ಸಾವಿರಕ್ಕೂ ಹೆಚ್ಚು ರೈತರು ಸೇರಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದೇವೆ. ಈ ಸಮಾವೇಶದಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ ಸಂಘಟನೆ ಅಧ್ಯಕ್ಷ ರಾಕೇಶ ಟಿಕಾಯತ್‌, ಕಾರ್ಯದರ್ಶಿ ಯದುವೀರ್‌ ಸಿಂಗ್‌, ಡಾ| ದರ್ಶನ್‌ಪಾಲ್‌ ಹಾಗೂ ರಾಜ್ಯದ ಎಲ್ಲ ರೈತ ಸಂಘಟನೆಯ ಮುಖಂಡರು ಪಾಲ್ಗೊಳ್ಳುವರು ಎಂದರು.

ಕೃಷಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಗಳು ರೈತರಿಗೆ ಮಾರಕವಾಗಿದ್ದು, ಅವುಗಳನ್ನು ಹಿಂಪಡೆಯುವಂತೆ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಹಠಮಾರಿತನ ಪ್ರದರ್ಶಿಸುತ್ತಿದೆ. ಸರ್ಕಾರಗಳ ದುರಾಡಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಕ್ಕೆಜೋಳದ ಬೆಲೆ ಕುಸಿದಿದ್ದರೂ ಖರೀದಿ ಕೇಂದ್ರ ತೆರೆದಿಲ್ಲ, ಪರಿಣಾಮ ಜಿಲ್ಲೆಯ ರೈತರಿಗಷ್ಟೇ 600ಕೋಟಿ ಗೂ., ಹೆಚ್ಚು ಹಾನಿಯಾಗಿದೆ. ರಸಗೊಬ್ಬರದ ಬೆಲೆಯೂ ಗಗನಕ್ಕೇರಿದೆ. ಪ್ರಧಾನಿ ಮೋದಿ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂಬ ಸುಳ್ಳು ಹೇಳಿಕೆ ನೀಡುತ್ತಾ ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ಪೆಟ್ರೋಲ್‌, ಡಿಸೇಲ್‌, ಸಿಲೆಂಡರ್‌ ಹಾಗೂ ರಸಗೊಬ್ಬರ ಬೆಲೆ ನಿಯಂತ್ರಿಸಲು ವಿಫಲವಾಗಿದೆ. ವಿದ್ಯುತ್‌, ವಿಮಾ ಕಂಪನಿ, ಬ್ಯಾಂಕ್‌ ಖಾಸಗೀಕರಣ ಮಾಡುತ್ತಾ ಬಡ ಮಕ್ಕಳಿಗೆ ಉದ್ಯೋಗ ಒದಗಿಸದೇ ದೇಶದ ಜನತೆಗೆ ದ್ರೋಹ ಮಾಡಿದೆ. ಕೃಷಿ ಕಾರ್ಮಿಕರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದ್ದು, ದೇಶದ ಪ್ರಗತಿ ಕುಂಠಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯ ಎಲ್ಲ ರೈತ ಸಂಘಟನೆಯವರು ಸೇರಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಸಮಾವೇಶಕ್ಕೆ ಪರವಾನಗಿ ಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಮುನ್ಸಿಪಲ್‌ ಹೈಸ್ಕೂಲ್‌ ಜಾಗೆ ಕೊಟ್ಟಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಿ ಸಮಾವೇಶ ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ. ಪರವಾನಗಿ ಕೊಡದಿದ್ದರೂ ಮಾಸ್ಕ್ ಧರಿಸಿ ಸಮಾವೇಶ ಮಾಡೇ ಮಾಡುತ್ತೇವೆ. ದೆಹಲಿ ಮಾದರಿಯಲ್ಲಿ ಇಲ್ಲೂ ನಿರಂತರ ಹೋರಾಟ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಮುಖಂಡರಾದ ಶಿವಬಸಪ್ಪ ಭೋವಿ, ಸಿದ್ದನಗೌಡ ಪಾಟೀಲ, ಗಂಗಣ್ಣ ಎಲಿ, ಮಾಲತೇಶ ಪೂಜಾರ, ಶಂಕ್ರಣ್ಣ ಶಿರಗಂಬಿ, ಹನುಮಂತಪ್ಪ ಹುಚ್ಚಣ್ಣನವರ, ದೀಪಕ್‌ ಗಂಟೇರ, ರಾಜು ಮುತ್ತಗಿ ಇತರರಿದ್ದರು.

ಟಾಪ್ ನ್ಯೂಸ್

1-sdsasd

ನಮೀಬಿಯಾದಿಂದ ತರಲಾದ ಚೀತಾಗಳಲ್ಲಿ ಒಂದು ಗರ್ಭಿಣಿ ?

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

1-ddasdad

ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್: ಸತತ ಆರನೇ ಬಾರಿಗೆ ಗೆದ್ದ ಇಂದೋರ್

1czff

ಕೆವೈಸಿ ವಂಚನೆ : ಖ್ಯಾತ ನಟನ ಖಾತೆಯಿಂದ 4.36 ಲಕ್ಷ ರೂ. ಮಾಯ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

tdy-16

ವಾರ್ತಾ ಇಲಾಖೆ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ರಜತ ಕಮಲ: ಮುಖ್ಯಮಂತ್ರಿಗಳಿಂದ ಅಭಿನಂದನೆ

tdy-15

ಗುಂಡ್ಲುಪೇಟೆ: ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಟೀ ಶರ್ಟ್ ಧರಿಸಿದ್ದ ಯುವಕನ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cmಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತ ಮಠಾಧೀಶರು

ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತ ಮಠಾಧೀಶರು

14

ಅಧಿಕಾರವಿಲ್ಲದೇ ಪುರಸಭೆ ಸದಸ್ಯರ ಪರದಾಟ!

ಪಿಎಫ್ಐ ಬ್ಯಾನ್ ಮಾಡುವಂತೆ ಅಸೆಂಬ್ಲಿಯಲ್ಲಿ ಕೂಗಾಡಿದ್ದೇ ಕಾಂಗ್ರೆಸ್ ನವರು; ಸಿಎಂ ಬೊಮ್ಮಾಯಿ

ಪಿಎಫ್ಐ ಬ್ಯಾನ್ ಮಾಡುವಂತೆ ಅಸೆಂಬ್ಲಿಯಲ್ಲಿ ಕೂಗಾಡಿದ್ದೇ ಕಾಂಗ್ರೆಸ್ ನವರು; ಸಿಎಂ ಬೊಮ್ಮಾಯಿ

19

ರಕ್ತದಾನ ಮಾಡಿ ಬೇರೊಂದು ಜೀವ ಕಾಪಾಡಿ

18

ಶಾಂತಿ ಕದಡಲು ಯತ್ನಿಸಿದರೆ ಸೂಕ್ತ ಕ್ರಮ

MUST WATCH

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

ಹೊಸ ಸೇರ್ಪಡೆ

1-sdsasd

ನಮೀಬಿಯಾದಿಂದ ತರಲಾದ ಚೀತಾಗಳಲ್ಲಿ ಒಂದು ಗರ್ಭಿಣಿ ?

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

1-ddasdad

ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್: ಸತತ ಆರನೇ ಬಾರಿಗೆ ಗೆದ್ದ ಇಂದೋರ್

ಉಡುಪಿ: ಗಾಂಜಾ ಪ್ರಕರಣ; ಆರೋಪಿಗೆ 3 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಉಡುಪಿ: ಗಾಂಜಾ ಪ್ರಕರಣ; ಆರೋಪಿಗೆ 3 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಅಡಿಕೆ ಕೊಳೆ ರೋಗಕ್ಕೆ ಸರಕಾರದಿಂದ ಉಚಿತ ಔಷಧಿಗೆ ಚಿಂತನೆ : ಸಚಿವ ಎಸ್.ಅಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.