ಕಸ-ರಸ ಪ್ರಯತ್ನಕ್ಕೆ ಮೆಚ್ಚುಗೆ ಮಾತು

•ವಿನೂತನ ಪ್ರಯೋಗಕ್ಕೆ ಮುಂದಾದ ಪುರಸಭೆ•ಎಲ್ಲೆಂದರಲ್ಲಿ ಕಸ ಹಾಕುವ ಪರಿಪಾಠಕ್ಕೆ ಮುಕ್ತಿ

Team Udayavani, Aug 17, 2019, 11:30 AM IST

hv-tdy-3

ಬ್ಯಾಡಗಿ: ಪೈಪ್‌ ಕಾಂಪೋಸ್ಟ್‌ ತಯಾರಿಕೆ ಪ್ರಯೋಗದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಹಾಗೂ ಸಿಬ್ಬಂದಿ.

ಬ್ಯಾಡಗಿ: ಪಟ್ಟಣದಲ್ಲಿ ಉತ್ಪತ್ತಿ ಆಗುವ ಕಸವನ್ನು ರಸ ಮಾಡುವ ನಿಟ್ಟಿನಲ್ಲಿ ವಿನೂತನ ಪೈಪ್‌ ಕಾಂಪೋಸ್ಟ್‌ ಪ್ರಯೋಗ ಪ್ರಯತ್ನವೊಂದಕ್ಕೆ ಕೈ ಹಾಕಿರುವ ಸ್ಥಳೀಯ ಪುರಸಭೆ ಅಧಿಕಾರಿಗಳ ನಡೆಗೆ ಸಾರ್ವಜಕನಿರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಟ್ಟಣವನ್ನು ಸುಂದರ ಹಾಗೂ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಹಲವಾರು ಹೊಸ ಹೊಸ ಪ್ರಯೋಗ ಮಾಡಿ ಈಗಾಗಲೇ ಯಶಸ್ಸು ಕಂಡಿದೆ. ಇದರಲ್ಲಿ ಪ್ರಮುಖವಾಗಿ ಘನತಾಜ್ಯ ವಿಲೇವಾರಿ, ಹಸಿ ಕಸ ಒಣ ಕಸ ವಿಂಗಡಣೆ, ಸೇರಿದಂತೆ ಎನ್‌ಜಿಒಗಳ ಸಹಕಾರದೊಂದಿಗೆ ಮನೆ ಮನೆ ಕಸ ಸಂಗ್ರಹಣೆ ಮಾಡುವ ಮೂಲಕ ಸ್ವಚ್ಛತೆಗೆ ಒತ್ತು ನೀಡಿದೆ. ಇದರ ಜೊತೆಯಲ್ಲಿ ಪುರಸಭೆ ಇದೀಗ ಮತ್ತೂಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಜಿಲ್ಲೆಯಲ್ಲಿ ಮೊದಲು: ಹಲವಾರು ಪ್ರಯತ್ನಗಳ ನಡುವೆ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ನಡುವೆಯು ಸಾರ್ವಜನಿಕರ ಎಲ್ಲೆಂದರಲ್ಲಿ ಕಸ ಹಾಕುವ ಪರಿಪಾಠಕ್ಕೆ ಮುಕ್ತಿ ಸಿಕ್ಕಿರಲಿಲ್ಲ. ಇದೀಗ ಪುರಸಭೆ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಯಲ್ಲಿ ಕಸವನ್ನು ರಸ (ಗೊಬ್ಬರ) ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಜಿಲ್ಲೆಯ ಪಾಲಿಗೆ ಪ್ರಥಮವೆನಿಸಿದೆ.

ಪೈಪ್‌ ಕಾಂಪೋಸ್ಟ್‌ ವಿಧಾನ: ಕಸವನ್ನು ರಸ ಮಾಡುವ ನಿಟ್ಟಿನಲ್ಲಿ ಪುರಸಭೆ ಮಾಡುತ್ತಿರುವ ಪೈಪ್‌ ಕಾಂಪೋಸ್ಟ್‌ ಪ್ರಯೋಗ ಇಗಾಗಲೇ ಹಲವರ ಗಮನ ಸೆಳೆದಿದೆ. ಮನೆಯಲ್ಲಿ ಉತ್ಪಾದನೆಯಾಗುವ ಹಸಿ ಕಸ (ತರಕಾರಿ, ಗಿಡಗಳ ಎಲೆ,) ಸೇರಿದಂತೆ ಮಣ್ಣಲ್ಲಿ ಸುಲಭವಾಗಿ ಕರಗುವ ತಾಜ್ಯಗಳನ್ನು ತಮ್ಮ ಮನೆ ನಿವೇಶನದ ಹತ್ತಿರದಲ್ಲಿನ ಖಾಲಿ ಸ್ಥಳದಲ್ಲಿ ಒಂದರಿಂದ ಒಂದುವರೆ ಅಡಿಯಲ್ಲಿ ಗುಂಡಿಯೊಂದನ್ನು ತೆಗೆದು ಅದರಲ್ಲಿ 8 ಇಂಚು ಸುತ್ತಳೆತೆಯ, 6 ಅಡಿ ಎತ್ತರ ಪೈಪ್‌ಅನ್ನು ವಿದ್ಯುತ್‌ ಕಂಬದ ರೀತಿಯಲ್ಲಿ ನಿಲ್ಲಿಸಿ ನಂತರ ಪೈಪ್‌ ಒಳಗಡೆಯಲ್ಲಿ ಮೊದಲು ಸಗಣಿ ಗೊಬ್ಬರ ಹಾಗೂ ಒಂದು ಕೆಜಿ ಬೆಲ್ಲವನ್ನು ಹಾಕಿದ ನಂತರ ಅದರಲ್ಲಿ ಮನೆಯಲ್ಲಿ ಉಳಿದ ಹಸಿ ಕಸವನ್ನು ಪ್ರತಿ ದಿನ ಹಾಕುತ್ತಾ ಬರಬೇಕು.

ಕಸ ಗೊಬ್ಬರವಾಗಿ ಪರಿವರ್ತನೆ: ಪ್ರತಿ ದಿನ ಕಸ ಹಾಕುವುದರ ಜೊತೆಯಲ್ಲಿ ವಾರಕ್ಕೊಮ್ಮೆ ಒಂದು ಹಿಡಿ, ಮಣ್ಣು ಸೇರಿದಂತೆ ನೀರನ್ನು ಹಾಕುತ್ತಾ ಬಂದಲ್ಲಿ 3 ತಿಂಗಳ ಅವಧಿಯಲ್ಲಿ ಕಸವು ಉತ್ತಮ ಹಾಗ ಗುಣ ಮಟ್ಟದ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಸದ ಸಮಸ್ಯೆಗೆ ಕಡಿಮೆ ಕರ್ಚಿನಲ್ಲಿ ಕಡಿವಾಣ ಹಾಕಬಹುದಾಗಿದೆ. ಈ ಉತ್ಪಾದನೆಯಾದ ಗೊಬ್ಬರವನ್ನು ತಮ್ಮ ಮನೆಯ ಗಿಡಗಳಿಗೆ ಕುಂಡಲಗಳಿಗೆ ಉಪಯೋಗಿಸುವುದು ಸೇರಿದಂತೆ ಹೆಚ್ಚಿನದ್ದನ್ನು ಸೂಕ್ತ ಮೊತ್ತ ನೀಡಿ ಪುರಸಭೆ ಖರೀದಿಸುವ ಭರವಸೆ ನೀಡಿದೆ. ಇದರಿಂದ ಕಸದಿಂದಲೂ ಆದಾಯ ಗಳಿಸಬಹುದಾಗಿದೆ.

ಒಟ್ಟು 4 ಕಡೆ ಪ್ರಯೋಗ: ಈ ವಿನೂತನ ಪ್ರಯೋಗವನ್ನು ಪಟ್ಟಣದ ಪುರಸಭೆ ಆವರಣ, ನೀರು ಶುದ್ಧಿಕರಣ ಘಟಕ, ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರಾಯೋಗಿಕವಾಗಿ ಸಿದ್ದಪಡಿಸಲಾಗಿದೆ. ಮತ್ತು ಪಟ್ಟಣದ ಇನ್ನೂ ಹಲವೆಡೆಗಳಲ್ಲಿ ಹಲವೆಡೆಗಳಲ್ಲಿ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ. ಪುರಸಭೆ ಆವರಣದಲ್ಲಿ ಪ್ರಯೋಗ ಮಾಡುವ ಸಮಯದಲ್ಲಿ ಪುರಸಭೆಗೆ ಆಗಮಿಸಿದ್ದ ಸ್ನೇಹ ಸದನ ಸಮಿತಿ ಸದಸ್ಯರು ಇದರಿಂದ ಪ್ರಭಾವಿತರಾಗಿ ತಮ್ಮ ಆವರಣದಲ್ಲಿ ಅಳವಡಿಸಿಕೊಂಡಿದ್ದು ಪ್ರಯೋಗ ಮುಂದಿನ ದಿನಗಳಲ್ಲಿ ಯಶಸ್ಸು ಕಾಣುವ ವಿಶ್ವಾಸ ಪುರಸಭೆ ಸಿಬ್ಬಂದಿ ಹೊಂದಿದ್ದಾರೆ.

ಟಾಪ್ ನ್ಯೂಸ್

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

ಪಶುಗಳ ಪರ್ಯಾಯ ಆಹಾರ ಅಜೋಲ್ಲಾ ಪರ್ನ್

20

ಒತ್ತಡದ ಬದುಕಿನಿಂದ ಮಾನಸಿಕ ರೋಗ 

19

ಬುದ್ದಿ ಶುದ್ಧವಾಗಿದ್ದರೆ ಸುಖ-ಶಾಂತಿ ಪ್ರಾಪ್ತಿ

18

ಮಾರುಕಟ್ಟೆಗೆ ತಡವಾಗಿ ಲಗ್ಗೆಯಿಟ್ಟ ಮಾವು

17

ಪಶು ಆಸ್ಪತ್ರೆಗೆ ಸಿಬ್ಬಂದಿ ನೇಮಿಸಲು ಒತ್ತಾಯ

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.