Udayavni Special

ನೆರೆ ಅಕ್ರಮ: ಪ್ರಕರಣ ದಾಖಲಿಸಲು ಸಿದ್ಧತೆ


Team Udayavani, Feb 19, 2020, 2:31 PM IST

HV-TDY-1

ಸಾಂಧರ್ಬಿಕ ಚಿತ್ರ

ಹಾವೇರಿ: ಜಿಲ್ಲೆಯ ನೆರೆ ಪರಿಹಾರ ವಿತರಣೆಯಲ್ಲಿ ಅಂದಾಜು ಎರಡು ಸಾವಿರಕ್ಕೂ ಹೆಚ್ಚು ಅಕ್ರಮ ಪ್ರಕರಣಗಳು ಮೇಲ್ನೊಟಕ್ಕೆ ಪತ್ತೆಯಾಗಿದ್ದು, ಈಗ ಎಲ್ಲ ಪ್ರಕರಣಗಳನ್ನು ಪೊಲೀಸ್‌ ತನಿಖೆಗೊಳಪಡಿಸಲಾಗಿದೆ.

ಅಕ್ರಮ ಕುರಿತು ಶಿಗ್ಗಾವಿ, ಸವಣೂರು ಹಾಗೂ ಹಾನಗಲ್ಲಗಳಲ್ಲಿ ಆಯಾ ತಾಲೂಕುಗಳ ಪೊಲೀಸ್‌ ಠಾಣೆಗಳಲ್ಲಿ ಉಪವಿಭಾಗಾಧಿಕಾರಿಗಳು ಪೊಲೀಸ್‌ ಪ್ರಕರಣ ದಾಖಲಿಸಿ, ತನಿಖೆಗೆ ಕೋರಿದ್ದಾರೆ. ಇನ್ನು ಹಾವೇರಿ ಉಪವಿಭಾಗದಲ್ಲಿ ಇಲಾಖಾ ಪರಿಶೋಧನೆ ನಡೆಸಿ, ಅಕ್ರಮ ಪ್ರಕರಣ ಪತ್ತೆ ಮಾಡಿ ನಾಲ್ಕೈದು ದಿನಗಳಲ್ಲಿ ಪೊಲೀಸ್‌ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.

ನೆರೆ ಪರಿಹಾರ ವಿತರಣೆಯಲ್ಲಿ ಯಾರಧ್ದೋ ಪಹಣಿ ನಂಬರ್‌ಗೆ ಇನ್ಯಾರಧ್ದೋ ಆಧಾರ್‌ ಸಂಖ್ಯೆ ನಮೂದಾಗಿದ್ದು, ಬೆಳೆ ಹಾನಿ ಪರಿಹಾರ ಸಂಬಂಧವಿಲ್ಲದವರ ಖಾತೆಗೆ ಜಮೆ ಆಗಿರುವ ಮೂಲಕ ನೂರಾರು ಕೋಟಿ ರೂ. ಸರ್ಕಾರದ ಹಣ ದುರುಪಯೋಗ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಕ್ರಮ ಯಾವ ಸ್ಥಳದಿಂದ ಆಗಿದೆ? ಇದರಲ್ಲಿ ಯಾವ ಗಣಕಯಂತ್ರ, ಮೊಬೈಲ್‌, ಲ್ಯಾಪ್‌ ಟಾಪ್‌ ಬಳಕೆಯಾಗಿದೆಯೇ? ಪಾಸ್‌ವರ್ಡ್‌ಗಳು ಎಲ್ಲಿ ದುರ್ಬಳಕೆಯಾಗಿದೆಯೇ? ತಂತ್ರಾಂಶ ಹ್ಯಾಕ್‌ ಆಗಿದೆಯಾ ? ಅಕ್ರಮದಲ್ಲಿ ಯಾರ್ಯಾರ ಕೈವಾಡವಿದೆ. ಯಾರು ಶಾಮೀಲಾಗಿದ್ದಾರೆ. ಹೀಗೆ ಸಮಗ್ರ ತನಿಖಾ ವರದಿ ನೀಡಬೇಕು ಎಂದು ಪೊಲೀಸ್‌ ದೂರಿನಲ್ಲಿ ಉಪವಿಭಾಗಾಧಿಕಾರಿಗಳು ಕೋರಿದ್ದಾರೆ.

ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಿಂದ ಹಿಡಿದು ತಹಸೀಲ್ದಾರ್‌ ಹಾಗೂ ಅವರ ಮೇಲಿನ ಅಧಿಕಾರಿಗಳವರೆಗೂ ಜವಾಬ್ದಾರಿ ಹೊಂದಿರುವ ಈ ನೆರೆ ಹಾನಿ ಪರಿಹಾರ ವಿತರಣೆ ಕಾರ್ಯದಲ್ಲಿ ಹೊರಗಿನವರ ಕೈವಾಡವೂ ಇರಬಹುದು ಎಂಬ ಸಂಶಯ ದಟ್ಟವಾಗಿದೆ. ನೆರೆ ಪರಹಾರ ಅಕ್ರಮ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ಪಕ್ಕಾ ಆಗಿದೆ.

ಸಚಿವರ ಪತ್ರದಿಂದ ಗಂಭೀರ ಸ್ವರೂಪ: ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಸಹ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಜಿಲ್ಲೆಯಲ್ಲಿ ನಡೆದಿರುವ ನೆರೆ ಪರಿಹಾರದಲ್ಲಿ ಅಕ್ರಮ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಸಹ “ನೆರೆ ಪರಿಹಾರ ಪರಿಹಾರ ಸರಿಯಾಗಿ ಮುಟ್ಟಿಲ್ಲ. ಪರಿಹಾರ ವಿತರಣೆಯಲ್ಲಿ ಲೋಪದೋಷಗಳಾಗಿವೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಿ ಎಂದು ಸ್ವತಃ ಪ್ರಾದೇಶಿಕ ಆಯುಕ್ತರಿಗೆ ಪತ್ರ ಹಾಗೂ ದೂರವಾಣಿ ಮೂಲಕ ನಿರ್ದೇಶನ ನೀಡಿದ್ದಾರೆ. ಪ್ರಾದೇಶಿಕ ಆಯುಕ್ತರ ಕಚೇರಿಯಿಂದ  ತಾಲೂಕಿನಲ್ಲಿ ಪರಿಶೋಧನೆಯೂ ಆಗಿದ್ದು, ಆಗ ಗಂಭೀರವಾದ ಕ್ರಿಮಿನಲ್‌ ಪ್ರಕರಣಗಳು ಆಯುಕ್ತರ ಗಮನಕ್ಕೆ ಬಂದಿವೆ. ಹೀಗಾಗಿ ಪ್ರಕರಣ ಈಗ ಗಂಭೀರ ತಿರುವು ಪಡೆದುಕೊಂಡಿದೆ. ಈಗ ಪೊಲೀಸ್‌ ಪ್ರಕರಣ ದಾಖಲು ಪ್ರಕ್ರಿಯೆ ನಡೆದಿದ್ದು, ಪೊಲೀಸ್‌ ಇಲಾಖೆ ತನಿಖೆ ಮಾಡಿ ವರದಿ ಕೊಡಲು ಸಾಕಷ್ಟು ವಿಳಂಬವಾಗಬಹುದು ಎಂಬಂತೆಯೂ ಇಲ್ಲ. ಏಕೆಂದರೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರೇ ಗೃಹ ಸಚಿವರಾಗಿರುವುದಿಂದ ಪೊಲೀಸ್‌ ತನಿಖೆ ಚುರುಕಾಗಿ ನಡೆದು ಶೀಘ್ರ ತನಿಖಾ ವರದಿ ದೊರಕುವ ನಿರೀಕ್ಷೆ ಹೊಂದಲಾಗಿದೆ. ಇದು ತಪ್ಪು ಮಾಡಿದವರಿಗೆ ನಡುಕ ಹುಟ್ಟಿಸಿದೆ.

ಯಾವ ರೀತಿ ಅಕ್ರಮ?: ಯಾರಧ್ದೋ ಪಹಣಿ ಸರ್ವೇ ನಂಬರ್‌ಗೆ ಇನ್ನಾರಧ್ದೋ ಆಧಾರ್‌ ಸಂಖ್ಯೆ ನಮೂದಿಸಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿರುವುದೇ ಇಲ್ಲಿ ನಡೆದಿರುವ ದೊಡ್ಡ ಅಕ್ರಮ. ಈ ಅಕ್ರಮದಲ್ಲಿ ಪರಿಹಾರ ಹಣವನ್ನು ಯಾರಧ್ದೋ ಕುಟುಂಬದವರಿಗೆ, ಇನ್ಯಾರೋ ಸ್ನೇಹಿತರಿಗೆ, ಸಂಬಂಧವಿಲ್ಲದ ಬೇರೆ ಬೇರೆ ಜಿಲ್ಲೆಯಲ್ಲಿರುವವರ ಖಾತೆಗೆ ಹಣ ಜಮೆ ಆಗಿದೆ.ನಗರದ ವೈದ್ಯರೋರ್ವರ ಹೆಸರಲ್ಲಿ ಬೇರೆಯವರಿಗೆ ಹಣ ಸಂದಾಯವಾಗಿದೆ. ವಿಧಾನ ಪರಿಷತ್‌ ಮಾಜಿ ಸದಸ್ಯರೋರ್ವರ ಹೆಸರಲ್ಲಿದ್ದ ಜಮೀನಿನ ಬೆಳೆಹಾನಿ ಪರಿಹಾರವೂ ಅನ್ಯ ಅಪರಿಚಿತರ ಪಾಲಾಗಿರುವುದು ಇಲಾಖಾ ಪರಿಶೀಲನೆಯಲ್ಲಿ ಬಹಿರಂಗಗೊಂಡಿದ್ದು, ಇದರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬುದು ಮೇಲ್ನೊಟಕ್ಕೆ ಸಾಬೀತಾಗಿದೆ.

ನೆರೆ ಪರಿಹಾರ ಹಣ ವಿತರಿಸುವಾಗ ಕೆಲ ಪ್ರಕರಣದಲ್ಲಿ ಆಯಾ ರೈತರ ಕುಟುಂಬದವರು ಯಾರಾದರೂ ಮೃತಪಟ್ಟಿದ್ದರೆ, ಇನ್ನಾವುದೇ ನಿಖರ ಕಾರಣಗಳಿದ್ದರೆ ಬೇರೆ ವ್ಯಕ್ತಿಯ ಖಾತೆಗೆ ಜಮೆ ಮಾಡಲು ಅವಕಾಶವಿದೆ. ಆದರೆ, ಇಲ್ಲಿ ಅರ್ಹ ರೈತರಿಗೆ ಸಿಗಬೇಕಿದ್ದ ಪರಿಹಾರ ಯಾವುದೇ ಸಂಬಂಧ ಇಲ್ಲದ ಬೇರೆ ಯಾರಧ್ದೋ ಖಾತೆಗೆ ಜಮೆ ಆಗಿರುವುದೇ ದೊಡ್ಡ ಅಕ್ರಮವಾಗಿದೆ. ಉದಾಹರಣೆಗೆ ಹಾನಗಲ್ಲ ತಾಲೂಕಿನ ರೈತರೊಬ್ಬರಿಗೆ ಸೇರಬೇಕಿದ್ದ ಪರಿಹಾರದ ಹಣ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರ ಖಾತೆಗೆ ಹೋಗಿದೆ. ಇಂತಹ ಸಾವಿರಾರು ಸಾಕಷ್ಟು ಪ್ರಕರಣಗಳು ಪತ್ತೆಯಾಗಿವೆ.

ಪಹಣಿಗೆ ತಾಳೆಯಾಗದ ಆಧಾರ್‌: ಪಹಣಿ ನಂಬರ್‌ ಯಾರಧ್ದೋ ಪರಿಹಾರ ಇನ್ನಾರಿಗೋ ಹಾಕಲಾಗಿದೆ. ಹೀಗೆ ಮಾಡುವಾಗ ಯಾರ್ಯಾರಧ್ದೋ ಆಧಾರ್‌ ಕಾರ್ಡ್‌ ನಂಬರ್‌ ಬಳಕೆ ಮಾಡಲಾಗಿದ್ದು, ಇದರಿಂದ ಪಹಣಿಗೂ ಆ ಆಧಾರ್‌ ಇರುವ ವ್ಯಕ್ತಿಗೂ ಸಂಬಂಧವೇ ಇಲ್ಲದ ಪ್ರಕರಣಗಳು ಹೆಚ್ಚಾಗಿ ಬಹಿರಂಗಗೊಂಡಿವೆ. ಪಹಣಿಯಲ್ಲಿರುವ ಹೆಸರಿಗೂ ಆಧಾರ್‌ ನಂಬರಿಗೂ ತಾಳೆ ಆಗದೇ ಇರುವುದರಿಂದ ಕೇವಲ ಹೆಸರು ಮಾತ್ರವಲ್ಲ. ಧರ್ಮ, ವಯಸ್ಸು, ಸ್ಥಳ ಎಲ್ಲವೂ ಒಂದಕ್ಕೊಂದು ಬದಲಾಗಿರುವುದು ಇಲಾಖಾ ಪರಿಶೀಲನೆ ವೇಳೆ ಗೊತ್ತಾಗಿದೆ.

ಈ ಅಕ್ರಮದಲ್ಲಿ ಒಬ್ಬರ ಪರಿಹಾರದ ಹಣ ಬೇರೆ ಯಾರಧ್ದೋ ಖಾತೆಗೆ ಏಕೆ? ಹೇಗೆ ಜಮೆ ಆಗಿದೆ? ಇದಕ್ಕೆ ಯಾರು ಒಪ್ಪಿಗೆ ಕೊಟ್ಟಿದ್ದಾರೆ. ಯಾರಧ್ದೋ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿರುವ ವ್ಯಕ್ತಿಗಳು ಯಾರು? ಇದರಲ್ಲಿ ಯಾವ ಅಧಿಕಾರಿಗಳಿದ್ದಾರೆ. ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ? ಯಾವ ರೀತಿ ಲೋಪವಾಗಿದೆ ಎಂಬುದು ಪೊಲೀಸ್‌ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.

ಅಕ್ರಮವೋ, ತಂತ್ರಾಂಶ ಲೋಪವೋ :  ನೆರೆ ಹಾನಿ ಪರಿಹಾರ ವಿತರಣೆಯಲ್ಲಿ ಡಾಟಾ ಎಂಟ್ರಿ ಮಾಡುವವರು, ಅನುಮೋದನೆ ನೀಡುವ ಅಧಿಕಾರಿಗಳು, ಮಧ್ಯವರ್ತಿಗಳು, ಪ್ರಭಾವಿಗಳು, ಇಲಾಖಾ ಸಿಬ್ಬಂದಿಗಳು ಹೀಗೆ ಅನೇಕರು ಗುಂಪಾಗಿ ಭ್ರಷ್ಟಾಚಾರಕ್ಕಿಳಿದ ಪರಿಣಾಮವಾಗಿ ನಡೆದ ಅಕ್ರಮ ಇದಾಗಿದೆಯೋ ಅಥವಾ ಪರಿಹಾರ ತಂತ್ರಾಂಶ ದೋಷದಿಂದ ಆಗಿದೆಯೋ? ಇಲ್ಲವೇ ಕಾಣದ ಕೈಗಳು ತಂತ್ರಾಂಶವನ್ನು ಹ್ಯಾಕ್‌ ಮಾಡಿ ಅಕ್ರಮ ಎಸಗಿವೆಯೋ ಎಂಬುದು ಪೊಲೀಸ್‌ ತನಿಖೆಯಿಂದಲೇ ಖಚಿತವಾಗಬೇಕಿದೆ.

ಸವಣೂರಲ್ಲಿ ಎಫ್‌ಆರ್‌ಐ : ತಾಲೂಕಿನಾದ್ಯಂತ 2019ರಲ್ಲಿ ನಡೆದ ಅತಿವೃಷ್ಟಿಯಿಂದಾದ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಅನರ್ಹರಿಗೆ ಪರಿಹಾರದ ಹಣ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಸವಣೂರು ತಹಶೀಲ್ದಾರ್‌, ಗ್ರಾಮ ಲೆಕ್ಕಾಧಿಕಾರಿಗಳು, ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರರ ವಿರುದ್ಧ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಸವಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅನ್ಯಾಯವಾಗಿದ್ದರೆ ದೂರು ನೀಡಿ: ಭಾಜಪೇಯಿ ನೆರೆ ಪರಿಹಾರ ವಿತರಣೆಗೆ ಸಂಬಂಧಿ ಸಿ ಇಲಾಖಾ ಪರಿಶೀಲನೆ ವೇಳೆ ಮೇಲ್ನೊಟಕ್ಕೆ ಅಂದಾಜು 2000ಕ್ಕೂ ಹೆಚ್ಚು ಪ್ರಕರಣ ಕಂಡು ಬಂದಿವೆ. ಸವಣೂರು, ಶಿಗ್ಗಾವಿ, ಹಾನಗಲ್ಲ ಪೊಲೀಸ್‌ ಠಾಣೆಗಳಲ್ಲಿ ಉಪವಿಭಾಗಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಹಾವೇರಿ ವಿಭಾಗದಲ್ಲಿ ಅಕ್ರಮ ಪರಿಶೀಲನೆ ನಡೆದಿದೆ. ಅಕ್ರಮ ಪರಿಶೀಲಿಸಲು 70-80 ದಾಖಲೆ ಪರೀಕ್ಷಿಸಬೇಕಾಗಿದ್ದು, ನಾಲ್ಕೈದು ದಿನಗಳಲ್ಲಿ ಅಕ್ರಮ ಗುರುತಿಸಿ ಪೊಲೀಸ್‌ ಪ್ರಕರಣ ದಾಖಲಿಸಲಾಗುವುದು. ನೆರೆ ಪರಿಹಾರ ವಿಚಾರವಾಗಿ ತಮ್ಮ ಜಮೀನನಿನ ಹೆಸರಲ್ಲಿ ಬೇರೆಯವರ ಖಾತೆಗೆ ಹಣ ಹೋಗಿದ್ದರೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ದೂರು ನೀಡಬಹುದು. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹೇಳಿದ್ದಾರೆ.

 

ಎಚ್‌.ಕೆ. ನಟರಾಜ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆಕ್ಲೆಂಡ್‌: ರಾಧಾಕೃಷ್ಣ ದೇಗುಲಕ್ಕೆ ನ್ಯೂಜಿಲೆಂಡ್‌ ಪ್ರಧಾನಿ ದಿಢೀರ್‌ ಭೇಟಿ !

ಆಕ್ಲೆಂಡ್‌: ರಾಧಾಕೃಷ್ಣ ದೇಗುಲಕ್ಕೆ ನ್ಯೂಜಿಲೆಂಡ್‌ ಪ್ರಧಾನಿ ದಿಢೀರ್‌ ಭೇಟಿ !

ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ ಅವಕಾಶಗಳನ್ನು ಕಸಿದಿದೆ: ಎಚ್ ಡಿಕೆ ಆಕ್ರೋಶ

ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ ಅವಕಾಶಗಳನ್ನು ಕಸಿದಿದೆ: ಎಚ್ ಡಿಕೆ ಆಕ್ರೋಶ

ರಾಜ್ಯದ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ

ರಾಜ್ಯದ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ

ಸಾಸ್ತಾನ ‘ರುಚಿ’ಸಂಸ್ಥೆಯಲ್ಲಿ ಓವನ್ ಸ್ಪೋಟಗೊಂಡು ಮಾಲೀಕ ರೋಬರ್ಟ್ ಪುಟಾರ್ಡೊ ಸಾವು

ಸಾಸ್ತಾನ ‘ರುಚಿ’ಸಂಸ್ಥೆಯಲ್ಲಿ ಓವನ್ ಸ್ಪೋಟಗೊಂಡು ಮಾಲೀಕ ರೋಬರ್ಟ್ ಪುಟಾರ್ಡೊ ಸಾವು

1000 ಕೋಟಿ ಬೆಲೆಯ 191 ಕೆಜಿ ಹೆರಾಯಿನ್ ವಶಪಡಿಸಿಕೊಂಡ ಕಂದಯ ಅಧಿಕಾರಿಗಳು: ಇಬ್ಬರು ವಶಕ್ಕೆ

1000 ಕೋಟಿ ಬೆಲೆಯ 191 ಕೆಜಿ ಹೆರಾಯಿನ್ ವಶಪಡಿಸಿಕೊಂಡ ಕಂದಾಯ ಅಧಿಕಾರಿಗಳು: ಇಬ್ಬರು ವಶಕ್ಕೆ

ಉಡುಪಿ: ಸರ್ಕಾರಿ ಆಸ್ಪತ್ರೆ ಎದುರು ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

ಉಡುಪಿ: ಸರ್ಕಾರಿ ಆಸ್ಪತ್ರೆ ಎದುರು ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

ಮಿಹಿಕಾ ಬಜಾಜ್‌ ಲೆಹಂಗಾ ತಯಾರಿಕೆಗೆ 10 ಸಾವಿರ ಗಂಟೆ!

ಮಿಹಿಕಾ ಬಜಾಜ್‌ ಲೆಹಂಗಾ ತಯಾರಿಕೆಗೆ 10 ಸಾವಿರ ಗಂಟೆ!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿ.ಕೃ.ಗೋಕಾಕರ ಬದುಕು-ಬರಹ ಸಾರ್ವಕಾಲಿಕ

ವಿ.ಕೃ.ಗೋಕಾಕರ ಬದುಕು-ಬರಹ ಸಾರ್ವಕಾಲಿಕ

ಜಾನುವಾರು ರಕ್ಷಿಸಲು ಹೋಗಿ ವರದಾ ನದಿಯಲ್ಲಿ ಕೊಚ್ಚಿಹೊದ ಯುವಕ

ಜಾನುವಾರು ರಕ್ಷಿಸಲು ಹೋಗಿ ವರದಾ ನದಿಯಲ್ಲಿ ಕೊಚ್ಚಿಹೊದ ಯುವಕ

ಕೋವಿಡ್‌ ಸ್ಪೆಷಲ್‌ ವಾರ್ಡ್‌ ಉದ್ಘಾಟನೆ

ಕೋವಿಡ್‌ ಸ್ಪೆಷಲ್‌ ವಾರ್ಡ್‌ ಉದ್ಘಾಟನೆ

ಪ್ರವಾಹ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಿ

ಪ್ರವಾಹ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಿ

ದೊರೆಯದ ಯೂರಿಯಾ ಗೊಬ್ಬರ: ಆಕ್ರೋಶ

ದೊರೆಯದ ಯೂರಿಯಾ ಗೊಬ್ಬರ: ಆಕ್ರೋಶ

MUST WATCH

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavaniಹೊಸ ಸೇರ್ಪಡೆ

ಬಿಸಿಲು ನಾಡಿನ ರೈತರ ಜೀವನಾಡಿ ಕಾರಂಜಾ ಜಲಾಶಯಕ್ಕೆ ಬರಗಾಲ

ಬಿಸಿಲು ನಾಡಿನ ರೈತರ ಜೀವನಾಡಿ ಕಾರಂಜಾ ಜಲಾಶಯಕ್ಕೆ ಬರಗಾಲ

ಆಕ್ಲೆಂಡ್‌: ರಾಧಾಕೃಷ್ಣ ದೇಗುಲಕ್ಕೆ ನ್ಯೂಜಿಲೆಂಡ್‌ ಪ್ರಧಾನಿ ದಿಢೀರ್‌ ಭೇಟಿ !

ಆಕ್ಲೆಂಡ್‌: ರಾಧಾಕೃಷ್ಣ ದೇಗುಲಕ್ಕೆ ನ್ಯೂಜಿಲೆಂಡ್‌ ಪ್ರಧಾನಿ ದಿಢೀರ್‌ ಭೇಟಿ !

ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ ಅವಕಾಶಗಳನ್ನು ಕಸಿದಿದೆ: ಎಚ್ ಡಿಕೆ ಆಕ್ರೋಶ

ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ ಅವಕಾಶಗಳನ್ನು ಕಸಿದಿದೆ: ಎಚ್ ಡಿಕೆ ಆಕ್ರೋಶ

ಕೋವಿಡ್ ಗೆ ಯುವ ಜನರೇ ಟಾರ್ಗೆಟ್‌

ಕೋವಿಡ್ ಗೆ ಯುವ ಜನರೇ ಟಾರ್ಗೆಟ್‌

uk-tdy-1

ರಸ್ತೆ ಸಾರಿಗೆ ಸಂಸ್ಥೆಗೆ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.