Udayavni Special

ಸ್ಕ್ಯಾನಿಂಗ್‌ ವೈದ್ಯರಿಲ್ಲದೇ ಗರ್ಭಿಣಿಯರ ಪರದಾಟ

•ಎರಡು ತಿಂಗಳಿಂದ ಬಾಗಿಲು ಹಾಕಿದ ಕೇಂದ್ರ•ಖಾಸಗಿ ಸ್ಕಾ ್ಯನಿಂಗ್‌ ಕೇಂದ್ರಗಳಲ್ಲಿ ದುಪ್ಪಟ್ಟು ಹಣಗಳಿಕೆ

Team Udayavani, May 10, 2019, 3:33 PM IST

haveri-tdy-1..

ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್‌ ಇಲ್ಲದೇ ಸ್ಕ್ಯಾನಿಂಗ್‌ ಯಂತ್ರ ಖಾಲಿ ಬಿದ್ದಿರುವುದು.

ಹಾವೇರಿ: ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡುವ ತಜ್ಞ ವೈದ್ಯರು ಇಲ್ಲದೇ ಬಡ ಗರ್ಭಿಣಿಯರು ಅನಿವಾರ್ಯವಾಗಿ ದುಬಾರಿ ವೆಚ್ಚ ತೆತ್ತು ಖಾಸಗಿ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಬಡವರು ಪರದಾಡುವಂತಾಗಿದೆ.

ಜಿಲ್ಲಾಸ್ಪತ್ರೆ 250ಹಾಸಿಗೆ ಸಾಮರ್ಥ್ಯ ಹೊಂದಿದ್ದು ಇತ್ತೀಚೆಗೆ ಹೊಸದಾಗಿ ಆರಂಭವಾಗಿರುವ ಮಕ್ಕಳು ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಕ್ಯಾನಿಂಗ್‌ ಮಾಡಲಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಆಸ್ಪತ್ರೆ ಬಾಗಿಲಿಗೆ ‘ಸ್ಕ್ಯಾನಿಂಗ್‌ ವೈದ್ಯರಿಲ್ಲ’ ಎಂಬ ಬರಹ ಅಂಟಿಸಲಾಗಿದೆ. ಚುನಾವಣೆಗೂ ಮುನ್ನವೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಡಿಯಾಲಜಿಸ್ಟ್‌ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದು, ಬಡವರು ಪರದಾಡುವಂತಾಗಿದೆ.

ನಿತ್ಯ ಜಿಲ್ಲೆಯ ವಿವಿಧೆಡೆಯಿಂದ 80ಕ್ಕೂ ಹೆಚ್ಚು ಗರ್ಭಿಣಿಯರು ಸ್ಕ್ಯಾನಿಂಗ್‌ ಗಾಗಿ ಬರುತ್ತಾರೆ. ವೈದ್ಯರ ಸಲಹೆ ಮೇರೆಗೆ ಹೆರಿಗೆಗೂ ಮುನ್ನ ಅನೇಕ ಬಾರಿ ಸ್ಕ್ಯಾನಿಂಗ್‌  ಮಾಡಿಸಬೇಕಾಗುತ್ತದೆ. ಗರ್ಭದಲ್ಲಿ ತೊಡಕು ಇದ್ದರೆ ತಿಳಿದುಕೊಳ್ಳಲು ನಿಗದಿತ ಅವಧಿಗೊಮ್ಮೆ ಸ್ಕ್ಯಾನಿಂಗ್‌ ಮಾಡಿಸುವುದು ಕಡ್ಡಾಯವೂ ಆಗಿದೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತಿದ್ದ ಸ್ಕ್ಯಾನಿಂಗ್‌ ಸೌಲಭ್ಯ ಈಗ ವೈದ್ಯರಿಲ್ಲದೇ ಸ್ಥಗಿತಗೊಂಡಿರುವುದು ಬಡವರ ಬವಣೆ ಹೆಚ್ಚಿಸಿದೆ.

ವೈದ್ಯರು ಬರುತ್ತಿಲ್ಲ: ಜಿಲ್ಲಾಸ್ಪತ್ರೆಗೆ ರೇಡಿಯಾಲಜಿಸ್ಟ್‌ ಹುದ್ದೆ ಖಾಲಿಯಿದ್ದು, ಇಲ್ಲಿಗೆ ಯಾವ ವೈದ್ಯರೂ ವರ್ಗಾವಣೆ ಮಾಡಿಸಿಕೊಂಡು ಬರುತ್ತಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಖಾಸಗಿ ವೈದ್ಯರ ಸೇವೆ ಪಡೆಯಲು ಅವಕಾಶವಿದೆ. ಆದರೆ, ಖಾಸಗಿ ವೈದ್ಯರೂ ಬರಲು ಒಪ್ಪುತ್ತಿಲ್ಲ. ಈ ಹಿಂದೆ ಸ್ಥಳೀಯ ವೈದ್ಯರೊಬ್ಬರು ತಿಂಗಳಿಗೆ 1.10 ಲಕ್ಷ‌ ರೂ. ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಈಗ ಅವರೂ ಬರಲು ಒಪ್ಪುತ್ತಿಲ್ಲ ಎನ್ನಲಾಗಿದೆ.

ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ನೂರಾರು ಜನರ ಸ್ಕ್ಯಾನಿಂಗ್‌ ಮಾಡಿದರೂ ಸಿಗುವುದು ಕಡಿಮೆ ವೇತನ ಎಂಬುದು ಅವರ ವಾದ. ಅದಕ್ಕಾಗಿ ಮಾಸಿಕ ಗೌರವಧನಕ್ಕಿಂತ ಪ್ರತಿ ಸ್ಕ್ಯಾನಿಂಗ್‌ ಗೆ ದರ ನಿಗದಿ ಮಾಡಬೇಕು ಎಂಬ ಬೇಡಿಕೆಯಿದೆ. ಹಾಗಾದರೆ ಮಾಸಿಕ ನಾಲ್ಕೈದು ಲಕ್ಷ‌ ರೂ. ಸಂಪಾದಿಸಬಹುದು. ಇದನ್ನು ಜಿಲ್ಲಾಧಿಕಾರಿ ಅಧ್ಯಕ್ಷ‌ತೆಯಲ್ಲಿ ತೀರ್ಮಾನಿಸಬೇಕಾಗುತ್ತದೆ. ಆದರೆ, ಸದ್ಯಕ್ಕೆ ಜಿಲ್ಲಾಸ್ಪತ್ರೆ ಸರ್ಜನ್‌ ಇನ್ನೂ ಯಾರ ಹೆಸರನ್ನೂ ಶಿಫಾರಸು ಮಾಡಿಲ್ಲ.

ಖಾಸಗಿ ಲಾಬಿ ಶಂಕೆ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ವೈದ್ಯರು ಇಲ್ಲದೇ ಇರುವುದನ್ನು ಖಾಸಗಿ ಸ್ಕ್ಯಾನಿಂಗ್‌ ಕೇಂದ್ರಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದುಬಾರಿ ದರದಲ್ಲಿ ಸ್ಕ್ಯಾನಿಂಗ್‌ ಮಾಡುತ್ತಿವೆ. ಖಾಸಗಿ ಸ್ಕ್ಯಾನಿಂಗ್‌ ಕೇಂದ್ರಕ್ಕೆ ಹೋದರೆ 500ಕ್ಕೂ ಹೆಚ್ಚು ರೂ. ನೀಡಬೇಕಾಗಿದ್ದು, ಬಡ ರೋಗಿಗಳು ಖಾಸಗಿ  ಕೇಂದ್ರಗಳಿಗೆ ಹೋಗುವ ಅನಿವಾರ್ಯತೆ ನಿರ್ಮಾಣವಾಗಿದೆ.

ಜಿಲ್ಲಾಸ್ಪತ್ರೆ ರೇಡಿಯಾಲಜಿಸ್ಟ್‌ ಹುದ್ದೆಗೆ ಖಾಸಗಿ ವೈದ್ಯರೂ ಸಿಗದಿರುವುದರ ಹಿಂದೆ ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗಳ ಮಸಲತ್ತು ಅಡಗಿದೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್‌ ಇಲ್ಲದಿದ್ದರೆ ಸುತ್ತಮುತ್ತ ಇರುವ ನಾಲ್ಕಾರು ಸ್ಕ್ಯಾನಿಂಗ್‌ ಕೇಂದ್ರಗಳು ಬ್ಯುಸಿಯಾಗಿರುತ್ತವೆ. ದಿನಕ್ಕೆ ಒಂದು ಕೇಂದ್ರದಲ್ಲಿ 50ಕ್ಕೂ ಹೆಚ್ಚು ಜನರನ್ನು ಪರೀಕ್ಷೆ ಮಾಡಲಾಗುತ್ತಿದ್ದು, ಇದರಿಂದ ಭಾರಿ ಲಾಭ ಗಳಿಸುತ್ತಿವೆ. ಅದಕ್ಕಾಗಿ ಜಿಲ್ಲಾಸ್ಪತ್ರೆಗೆ ಯಾವುದೇ ರೇಡಿಯಾಲಜಿಸ್ಟ್‌ ಹೋಗದಂತೆ ಖಾಸಗಿ ಲಾಬಿ ತಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಒಟ್ಟಾರೆ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಇಲ್ಲದೇ ಬಡವರು ಖಾಸಗಿ ಕೇಂದ್ರಗಳಿಗೆ ಹೋಗಿ ದುಬಾರಿ ಹಣ ನೀಡಿ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷ‌ತೆಯ ಸಮಿತಿ ಶೀಘ್ರದಲ್ಲಿ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಿದೆ.

ಟಾಪ್ ನ್ಯೂಸ್

ಮೂಲ ವರ್ಸಸ್‌ ವಲಸಿಗ : ಬಿಜೆಪಿಯ ನಾಯಕತ್ವ ಬದಲಾವಣೆ ವಿಚಾರದಲ್ಲಿ ಮತ್ತೊಂದು ತಿರುವು

ಮೂಲ ವರ್ಸಸ್‌ ವಲಸಿಗ : ಬಿಜೆಪಿಯ ನಾಯಕತ್ವ ಬದಲಾವಣೆ ವಿಚಾರದಲ್ಲಿ ಮತ್ತೊಂದು ತಿರುವು

online

ಉದ್ಯೋಗಕ್ಕೆ ಆನ್‌ ಲೈನ್‌ ಬಲ : ಜಾಬ್‌ ಪೋಸ್ಟಿಂಗ್‌ ನಲ್ಲಿ ಹೆಚ್ಚುತ್ತಿದೆ Online ಟ್ರೆಂಡ್‌

banking frauds

“ಬ್ಯಾಂಕ್‌ ಖಾತೆ ಬ್ಲಾಕ್‌’ ಸಂದೇಶ: ಲಿಂಕ್‌ ಕಳುಹಿಸಿ ಒಟಿಪಿ ಪಡೆದು ಹಣ ದೋಚುವ ವಂಚಕರು!

ಮುಂದಿನ ತಿಂಗಳು ಸೀಹಾಕ್‌ ಹೆಲಿಕಾಪ್ಟರ್‌ ಭಾರತಕ್ಕೆ

ಮುಂದಿನ ತಿಂಗಳು ಸೀಹಾಕ್‌ ಹೆಲಿಕಾಪ್ಟರ್‌ ಭಾರತಕ್ಕೆ

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ

ಅಣ್ವಸ್ತ್ರ ಬಲ ವೃದ್ಧಿಯತ್ತ ಭಾರತ : ಸದ್ಯ ನಮ್ಮ ಬಳಿ ಇರುವುದು 156 ಪರಮಾಣು ಅಸ್ತ್ರ 

ಅಣ್ವಸ್ತ್ರ ಬಲ ವೃದ್ಧಿಯತ್ತ ಭಾರತ : ಸದ್ಯ ನಮ್ಮ ಬಳಿ ಇರುವುದು 156 ಪರಮಾಣು ಅಸ್ತ್ರ 

ಶಿಕ್ಷಕಿಯರಿಗೆ ಮನೆಗೆಲಸ : ಸಾರಿಗೆ ವ್ಯವಸ್ಥೆ ಇಲ್ಲದವರಿಗೆ ಜೂ. 21ರ ವರೆಗೆ ವಿನಾಯಿತಿ

ಶಿಕ್ಷಕಿಯರಿಗೆ ಮನೆಗೆಲಸ : ಸಾರಿಗೆ ವ್ಯವಸ್ಥೆ ಇಲ್ಲದವರಿಗೆ ಜೂ. 21ರ ವರೆಗೆ ವಿನಾಯಿತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3654566666666666666666666

ಹಾನಗಲ್ ಉಪ ಚುನಾವಣೆ ದಿನಾಂಕ ಘೋಷಣೆ ಮುನ್ನವೆ ಅಭ್ಯರ್ಥಿ ಪ್ರಕಟಿಸಿದ ಜೆಡಿಎಸ್

14hvr2

ಕೇಂದ್ರ ಸರ್ಕಾರಕ್ಕಿಲ್ಲ ನೈತಿಕತೆ: ಪಾಟೀಲ

12hvr1

ಪ್ರವಾಹ-ವಿಪತ್ತು  ಎದುರಿಸಲು ಜಿಲ್ಲಾಡಳಿತ ಸನ್ನದ್ಧ

11hvr1

ತೈಲ ಬೆಲೆ ಏರಿಕೆಗೆ ಕಾಂಗ್ರೆಸ್‌ ಆಕ್ರೋಶ

10byd4

ಕೋವಿಡ್‌ ಪರೀಕ್ಷೆಗೆ ಹೆದರಿ ಹೊಲಕ್ಕೆ ತೆರಳಿದ ಗ್ರಾಮಸ್ಥರು

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

ಮೂಲ ವರ್ಸಸ್‌ ವಲಸಿಗ : ಬಿಜೆಪಿಯ ನಾಯಕತ್ವ ಬದಲಾವಣೆ ವಿಚಾರದಲ್ಲಿ ಮತ್ತೊಂದು ತಿರುವು

ಮೂಲ ವರ್ಸಸ್‌ ವಲಸಿಗ : ಬಿಜೆಪಿಯ ನಾಯಕತ್ವ ಬದಲಾವಣೆ ವಿಚಾರದಲ್ಲಿ ಮತ್ತೊಂದು ತಿರುವು

online

ಉದ್ಯೋಗಕ್ಕೆ ಆನ್‌ ಲೈನ್‌ ಬಲ : ಜಾಬ್‌ ಪೋಸ್ಟಿಂಗ್‌ ನಲ್ಲಿ ಹೆಚ್ಚುತ್ತಿದೆ Online ಟ್ರೆಂಡ್‌

banking frauds

“ಬ್ಯಾಂಕ್‌ ಖಾತೆ ಬ್ಲಾಕ್‌’ ಸಂದೇಶ: ಲಿಂಕ್‌ ಕಳುಹಿಸಿ ಒಟಿಪಿ ಪಡೆದು ಹಣ ದೋಚುವ ವಂಚಕರು!

ಮುಂದಿನ ತಿಂಗಳು ಸೀಹಾಕ್‌ ಹೆಲಿಕಾಪ್ಟರ್‌ ಭಾರತಕ್ಕೆ

ಮುಂದಿನ ತಿಂಗಳು ಸೀಹಾಕ್‌ ಹೆಲಿಕಾಪ್ಟರ್‌ ಭಾರತಕ್ಕೆ

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.