ವಿದ್ಯಾರ್ಥಿಗಳಿಂದ ಸಂಚಾರಿ ಜಾಗೃತಿ

Team Udayavani, Sep 8, 2019, 11:19 AM IST

ರಾಣಿಬೆನ್ನೂರ: ಗ್ರಾಮೀಣ ಠಾಣೆ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಸಂಚಾರಿ ನಿಯಮಗಳ ಜಾತಿ ಜಾಥಾ ಮೆರವಣಿಗೆ ನಡೆಸಲಾಯಿತು.

ರಾಣಿಬೆನ್ನೂರ: ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಗರ ಠಾಣೆ ಪೊಲೀಸರು ಸಂಚಾರಿ ನಿಯಮಗಳ ಜಾಗೃತಿ ಜಾಥಾ ಮೆರವಣಿಗೆ ನಡೆಸಿದರು.

ನಗರ ಠಾಣೆಯಲ್ಲಿ ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಮತ್ತು ಹೆಲ್ಮೆಟ್ ಧರಿಸಿದ ಗಣೇಶ ಮೂರ್ತಿ ಪ್ರದರ್ಶನ ಮತ್ತು ಕೇಂದ್ರ ಸರಕಾರ ನೂತನವಾಗಿ ಜಾರಿಗೆ ತಂದ ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ನಗರದ ಗ್ರಾಮೀಣ ಠಾಣೆ ಪೊಲೀಸರು ಗಣೇಶ ವಿಸರ್ಜನೆ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಕುಣಿದು ಕುಪ್ಪಳಿಸಿ, ಸಿಡಿಮದ್ದುಗಳನ್ನು ಸಿಡಿಸಿ ಪರಿಸರಕ್ಕೆ ಹಾನಿ ಮಾಡುವುದು ಬೇಡ. ಮೆರವಣಿಗೆಯಲ್ಲಿ ಸಮಯ ವ್ಯರ್ಥ ಮಾಡಬೇಡಿ. ಎಂಬ ಸಂದೇಶಗಳನ್ನು ಸಾರುತ್ತ ಗಣೇಶ ವಿಸರ್ಜನೆ ವೇಳೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ್ದು ನಗರದಲ್ಲಿ ಹೊಸ ಪ್ರಯೋಗವಾಗಿತ್ತು. ಸಂಚಾರಿ ನಿಯಮಗಳ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಡಿವೈಎಸ್‌ಪಿ ಟಿ.ಸುರೇಶ, ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಇದರಿಂದ ಅವಘಡಗಳು ಸಂಭವಿಸುವುದು ಕಡಿಮೆಯಾಗುತ್ತದೆ ಎಂದರು.

ಗ್ರಾಮೀಣ ಠಾಣೆಯಿಂದ ಪ್ರಾರಂಭವಾದ ಜಾಥಾವು ಕುರುಬಗೇರಿ ವೃತ್ತ, ದುರ್ಗಾ ಸರ್ಕಲ್, ಎಂ.ಜಿ. ರಸ್ತೆ, ಅಂಚೆ ಕಚೇರಿ ವೃತ್ತ, ಅಶೋಕ ವೃತ್ತ, ಬಸ್‌ ನಿಲ್ದಾಣ ರಸ್ತೆ, ಮೇಡ್ಲೇರಿ ಕ್ರಾಸ್‌ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ಬೈಕ್‌ ಮೇಲೆ ಕುಳಿತ ಹೆಲ್ಮೆಟ್ಧಾರಿ ಗಣೇಶ ಮೆರವಣಿಗೆಯಲ್ಲಿ ಆಕರ್ಷಣೆಯವಾಗಿತ್ತು. ವಿದ್ಯಾರ್ಥಿಗಳು ಮೆರವಣಿಗೆಯುದ್ದಕ್ಕೂ ಸಾರ್ವಜನಿಕರಿಗೆ ಕರಪತ್ರ ಹಂಚಿ ನಂತರ ಸಂಚಾರಿ ನಿಯಮಗಳ ಕುರಿತು ಘೋಷಣೆ ಕೂಗಿದರು. ನಗರದ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ಸಿಪಿಐ ಸುರೇಶ ಸಗರಿ, ಸಬ್‌ಇನಸ್ಪೆಕ್ಟರ್‌ ದೇವರಾಜ್‌, ಪ್ರಭು ಕೆಳಗಿನಮನಿ ಮತ್ತು ದೇಸಾಯಿ, ಚಂದ್ರು ಸಣ್ಣಮನಿ, ಮೋಹನ್‌ ಮೇಲಗಿರಿ, ದೊಡ್ಡಮನಿ, ಮುಗದೂರು ಹಾಗೂ ಬಾಳಿಕಾಯಿ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ