ಸೂರು ಕಲ್ಪಿಸಲು ಆಗ್ರಹಿಸಿ ನಿರಶನ

ರೈಲ್ವೆ ನಿಲ್ದಾಣ ಬಳಿ 80 ವರ್ಷದಿಂದ ವಾಸಿಸುತ್ತಿದ್ದ 200 ಜನರ ತೆರವು

Team Udayavani, Aug 10, 2019, 2:50 PM IST

ಹೊಸಪೇಟೆ: ಬೇರೆಡೆ ಸೂರು ಕಲ್ಪಿಸಲು ಆಗ್ರಹಿಸಿ ನಗರದ 88 ಮುದ್ಲಾಪುರ ನಿವಾಸಿಗಳು ನಗರಸಭೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹೊಸಪೇಟೆ: ನಗರದ 88 ಮುದ್ಲಾಪುರ ರೈಲ್ವೆ ಜಾಗದಲ್ಲಿರುವ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಕೂಡಲೇ ಸೂರು ಒದಗಿಸಬೇಕು ಎಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ನಗರಸಭೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ 88 ಮುದ್ಲಾಪುರದಿಂದ ನಗರಸಭೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಮೀನಮೇಷ ಎಣೆಸದೇ ಕೂಡಲೇ ಸೂರು ಒದಗಿಸಬೇಕು ಎಂದು ಒತ್ತಾಯಿಸಿದರು. ನಗರಸಭೆ ವ್ಯಾಪ್ತಿಗೆ ಬರುವ 2ನೇ ವಾರ್ಡ್‌ 88 ಮುದ್ಲಾಪುರ 200ಕ್ಕೂ ಜನರು ರೈಲ್ವೆ ನಿಲ್ದಾಣದ ಸಮೀಪ 80 ವರ್ಷಗಳಿಂದ ವಾಸಿಸುತ್ತಿದ್ದಾರೆ. ಇವರನ್ನು ರೈಲ್ವೆ ಇಲಾಖೆ ಒಕ್ಕಲೆಬ್ಬಿಸಲು ಮುಂದಾಗಿದೆ. ರೈಲ್ವೆ ಇಲಾಖೆ ಸ್ಥಳ ಬಿಟ್ಟು ಬೇರೆಡೆ ಹೋಗಬೇಕು ಎಂದು ಎರಡು ತಿಂಗಳ ಹಿಂದೆಯೇ ನೋಟಿಸ್‌ ನೀಡಿದೆ. ಕೂಡಲೇ ಅವರಿಗೆ ಬೇರೆಡೆ ಸೂರು ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಇಷ್ಟು ವರ್ಷ ಮೌನವಾಗಿದ್ದ ರೈಲ್ವೆ ಇಲಾಖೆ ಈಗ ಅಭಿವೃದ್ಧಿ ಹೆಸರಿನಲ್ಲಿ ಏಕಾಏಕಿ ತೆರವುಗೊಳಿಸುವಂತೆ ನೋಟಿಸ್‌ ನೀಡಿರುವುದು ಸರಿಯಲ್ಲ. ನಿವಾಸಿಗಳಿಗೆ ಮೊದಲು ಬೇರೆಡೆ ಸೂರು ಸೌಲಭ್ಯ ಒದಗಿಸಬೇಕು. ಬಳಿಕ ತೆರವು ಕಾರ್ಯ ಮಾಡಬೇಕು ಎಂದು ಸಮಿತಿಯ ಕೇಂದ್ರ ಸದಸ್ಯ ಕರಿಯಪ್ಪ ಗುಡಿಮನಿ ಒತ್ತಾಯಿಸಿದರು. ಬಳಿಕ ನಗರಸಭೆ ಆಯುಕ್ತ ವಿ.ರಮೇಶ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ವಸಂತರಾಜ, ಗುರುಬಸವ ಬರಗೂರು, ತಿಮ್ಮರಾಜ್‌, ಸಂತೋಷ, ಆರ್‌.ಜಿ.ಪ್ರತಾಪ್‌ಸಿಂಗ್‌, ಕೆ.ಪಲ್ಲವಿ, ಗಂಗಮ್ಮ, ನಾಗರತ್ನಮ್ಮ, ಲಲಿತಾ, ಹುಲಿಗೆಮ್ಮ, ತಾಯಮ್ಮ, ಸಿ.ಯಲ್ಲಮ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ