ಸಿಂಗನಾಥನಹಳ್ಳಿ ಶಾಲೆ ಮಕ್ಕಳಿಗೆ ಆಟೋ ಭಾಗ್ಯ!

ಹಂಪಿ ಗ್ರಾಪಂ ಸ್ವಂತ ಖರ್ಚಿನಲ್ಲಿ 11 ಮಕ್ಕ ಳಿಗೆ ಆಟೋ  ವ್ಯವಸ್ಥೆಪ್ರತಿನಿತ್ಯ ಶಾಲೆಗಾಗಿ 8 ಕಿಮೀ ನಡೆಯುತ್ತಿದ್ದ ಮಕ್ಕಳು

Team Udayavani, Dec 26, 2019, 3:18 PM IST

26-December-11

„ಪಿ.ಸತ್ಯನಾರಾಯಣ
ಹೊಸಪೇಟೆ:
ಬಿಸಿಲು, ಮಳೆ, ಚಳಿ ಇದ್ಯಾವುದನ್ನೂ ಲೆಕ್ಕಿಸದೆ ಕಾಲ್ನಡಿಗೆಯಲ್ಲೇ ನಿತ್ಯ ನಾಲ್ಕಾರು ಕಿ.ಮೀ ದೂರ  ಸಾಗಿ ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಹಂಪಿ ಗ್ರಾಮ ಪಂಚಾಯತಿ ಈಗ ಆಟೋ ಭಾಗ್ಯ ಕರುಣಿಸಿದೆ.

ಹಂಪಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂಗನಾಥನಹಳ್ಳಿ ಗ್ರಾಮದಲ್ಲಿ ಶಾಲೆ ಇಲ್ಲ. ಬೇರೆ ಕಡೆ ಇರುವ ಶಾಲೆಗೆ ತೆರಳಿ ಓದಬೇಕೆಂದರೆ ಬಸ್‌ ಸಂಚಾರವೂ ಇಲ್ಲ. ಹೀಗಾಗಿ ಇಲ್ಲಿಯ ಮಕ್ಕಳು ಅನಿವಾರ್ಯವಾಗಿ ನಿತ್ಯ ಕಾಲ್ನಡಿಗೆ  ಮೂಲಕ ನಾಲ್ಕು ಕೀಮಿ ದೂರದಲ್ಲಿರುವ ಕಡ್ಡಿ ರಾಂಪುರ ಗ್ರಾಮದ ಸರಕಾರಿ ಶಾಲೆಗೆ ಬಂದು ಓದುತ್ತಿದ್ದಾರೆ. ಶಾಲೆ ಅವಧಿ ಮುಗಿದ ನಂತರ ಪುನಃ ನಾಲ್ಕು ಕೀಮಿ ನಡೆದು ಮನೆ ಸೇರುತ್ತಾರೆ. ಮಕ್ಕಳ ಕಷ್ಟಕ್ಕೆ ಸ್ಪಂದಿಸಿರುವ ಹಂಪಿ ಗ್ರಾಮ ಪಂಚಾಯ್ತಿ ತನ್ನ ಸ್ವಂತ ಸಂಪನ್ಮೂಲದಲ್ಲಿ ಆಟೋ ವ್ಯವಸ್ಥೆ ಕಲ್ಪಿಸಿದೆ.

ಪಂಚಾಯತಿಯ ಕ್ರಮದಿಂದ ಸಿಂಗನಾಥಹಳ್ಳಿ ಗ್ರಾಮದ ಒಂದನೇ ತರಗತಿಯಿಂದ 8 ನೇ ತರಗತಿವರೆಗೆ ಓದುವ 11 ಮಕ್ಕಳು ಆಟೋಮೂಲಕ ಶಾಲೆಗೆ ಬಂದು ಪಾಠ ಕಲಿತು ವಾಪಸ್‌ ಮನೆಗೆ ತೆರಳುತ್ತಿದ್ದಾರೆ. ಇದಲ್ಲದೆ ಅಂಗನವಾಡಿಗೆ ತೆರಳುವ ಇಬ್ಬರು ಮಕ್ಕಳು ಸಹ ಆಟೋದಲ್ಲೇ ಬರುತ್ತಿದ್ದಾರೆ.

ಹಂಪಿ ಗ್ರಾಮ ಪಂಚಾಯ್ತಿಪಿ ಡಿಒ ಟಿ.ಎ ರಾಜೇಶ್ವರಿ ಅವರು, ಮಕ್ಕಳು ಕಾಲ್ನಡಿಗೆಯಲ್ಲಿ ಶಾಲೆಗೆ ಬಂದು ಹೋಗುವುದನ್ನು ಗಮನಿಸಿ ಪಂಚಾಯತಿಯ ಸಂಪನ್ಮೂಲದಲ್ಲೇ ಈ ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ. ಕಳೆದ ಅಕ್ಟೋಬರ್‌ ನಿಂದ ಮಕ್ಕಳು ಆಟೋದಲ್ಲಿ ಶಾಲೆಗೆ ಬಂದು ಹೋಗುವಂತೆ ಮಾಡಿದ್ದಾರೆ. ಅಲ್ಲದೆ ಗ್ರಾಮಕ್ಕೆ ಬಸ್‌ ಸೌಕರ್ಯ ಕಲ್ಪಿ ಸು ವಂತೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಹೊಸಪೇಟೆಯಿಂದ ಹಂಪಿಗೆ ತೆರ ಳುವ ಮಾರ್ಗ ಮಧ್ಯದಲ್ಲಿ ಬರುವ ಕಡ್ಡಿ ರಾಂಪುರ ಗ್ರಾಮದಿಂದ ಸುಮಾರು 4 ಕಿಮೀ ದೂರದಲ್ಲಿರುವ ಸಿಂಗನಾಥ ಹಳ್ಳಿ ಗ್ರಾಮದಲ್ಲಿ ಸುಮಾರು 15-ರಿಂದ 20 ಕುಟುಂಬ ಗಳು ವಾಸ ಮಾಡುತ್ತಿದ್ದು, ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ತಮ್ಮ ಮಕ್ಕಳಿಗೆ ಆಟೋ  ವ್ಯವಸ್ಥೆ ಮಾಡಿರುವುದಕ್ಕೆ ಪಾಲಕರು ಖುಷಿಯಾಗಿದ್ದಾರೆ. ಆದರೆ ಆಟೋ ಚಾಲಕನಿಗೆ ಗ್ರಾಮ ಪಂಚಾಯ್ತಿ ಕೇವಲ ಒಂದು ತಿಂಗಳ ಬಾಡಿಗೆ ಮಾತ್ರ ನೀಡಿದೆ ಎನ್ನಲಾಗುತ್ತಿದ್ದು, ಪಾಲಕರ ಆತಂಕಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯ್ತಿ ಸರಿಯಾಗಿ ಬಾಡಿಗೆ ನೀಡುತ್ತಿಲ್ಲವಾದ್ದರಿಂದ ಮಕ್ಕಳ ಕರೆ ದೊಯ್ಯುವುದನ್ನು ನಿಲ್ಲಿಸಲಾಗುವುದು ಎಂದು ಆಟೋ ಚಾಲಕ ಮಕ್ಕಳ ಪಾಲಕರಿಗೆ ಹೇಳಿರುವುದರಿಂದ ಪಾಲಕರು
ಮತ್ತೆ ಚಿಂತೆಗೀಡಾಗಿದ್ದಾರೆ. ಕೂಡಲೇ ಈ ಗ್ರಾಮಕ್ಕೆ ಬಸ್‌ ಸೌಕರ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಸಿಂಗನಾಥ ಹಳ್ಳಿ ಮಕ್ಕಳು ಕಾಲ್ನಡಿಗೆಯಲ್ಲಿ ಶಾಲೆಗೆ ತೆರುಳುತ್ತಿರುವುದು ಕಂಡು ಬಂತು. ಕೂಡಲೇ ಈ ಮಕ್ಕಳಿಗೆ ಆಟೋ ವ್ಯವಸ್ಥೆ ಮಾಡ ಬೇಕು ಎಂದೆನ್ನಿಸಿ ಆಟೋ ಗೊತ್ತು ಮಾಡಿದೆ. ಕಳೆದ ಅಕ್ಟೋಬರ್‌ ತಿಂಗಳಿಂದ ಆಟೋ ಮೂಲಕ ಮಕ್ಕಳು ಕಡ್ಡಿ ರಾಂಪುರದ ಸರ್ಕಾರಿ ಶಾಲೆಗೆ ಬಂದು ಹೋಗುವುದು ಮಾಡುತ್ತಿದ್ದಾರೆ.
ಟಿ.ಎ.ರಾಜೇಶ್ವರಿ,
ಪಿಡಿಒ, ಹಂಪಿ.

ಹಂಪಿ ಗ್ರಾಮ ಪಂಚಾಯ್ತಿ ತಾಲೂಕಿನ ಸಿಂಗನಾಥ ನಹಳ್ಳಿಯ ಮಕ್ಕಳಿಗೆ ಆಟೋ ವ್ಯವಸ್ಥೆ ಮಾಡಿರುವುದು ಅಭಿನಂದನಾರ್ಹ. ಇದು ಇತರೆ ಗ್ರಾಮ ಪಂಚಾಯ್ತಿಗೆ ಮಾದರಿಯಾಗಿದೆ. ಬೇರೆ ಗ್ರಾಮ ಪಂಚಾಯ್ತಿಗಳು ಇಂಥ ಕಾರ್ಯವನ್ನು ಮಾಡುವ ಮೂಲಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಬೇಕು.
ಎಲ್‌. ಡಿ. ಜೋಷಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸಪೇಟ

ಕಳೆದ ಎರಡು-ಮೂರು ತಿಂಗಳಿಂದ ನನ್ನ ಮೂರು ಮಕ್ಕಳು ಆಟೋದಲ್ಲಿ ಕಡ್ಡಿರಾಂಪುರ ಶಾಲೆಗೆ ತೆರಳುತ್ತಿದ್ದಾರೆ. ಆಟೋ ಬಾಡಿಗೆಯನ್ನು ಹಂಪಿ ಗ್ರಾಮ ಪಂಚಾಯ್ತಿ ನೀಡುತ್ತಿದೆ. ಆದರೆ ಗ್ರಾಮ ಪಂಚಾಯ್ತಿ ಆಟೋ ಚಾಲಕನಿಗೆ ಒಂದು ತಿಂಗಳು ಮಾತ್ರ ಬಾಡಿಗೆ ನೀಡಿದೆ. ಹೀಗಾದರೆ, ನಾನು ಮಕ್ಕಳನ್ನು ಕರೆದ್ಯೊಯುದನ್ನು ನಿಲ್ಲಿಸುತ್ತೇನೆ ಎಂದು ಚಾಲಕ ಹೇಳುತ್ತಿದ್ದಾನೆ.
ಮಾರೆಪ್ಪ,
ಪಾಲಕ, ಸಿಂಗತನ ಹಳ್ಳಿ ಗ್ರಾಮ

ಸಿಂಗನಾಥನ ಹಳ್ಳಿ ಹಾಗೂ ಕಡ್ಡಿ ರಾಂಪುರ ಗ್ರಾಮಕ್ಕೆ ಶಾಲಾ ಮಕ್ಕಳ ಅನುಕೂಲಕ್ಕಾಗಿ
ಬೆಳಗ್ಗೆ ಮತ್ತು ಸಂಜೆ ಹೊತ್ತು ಬಸ್‌ ಸಂಚಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಜಿ.ಶೀ ನಯ್ಯ, ವಿಭಾಗೀಯ ನಿಯಂತ್ರಣಾಧಿಕಾರಿ,
ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ, ಉಪ ವಿಭಾಗ, ಹೊಸಪೇಟೆ

ಸಿಂಗನಾಥ ಹಳ್ಳಿ ಗ್ರಾಮದ 11 ಮಕ್ಕಳನ್ನು ಕಡ್ಡಿ ರಾಂಪುರದ ಶಾಲೆಗೆ ಆಟೋದಲ್ಲಿ ಕಳೆದ ಮೂರು ತಿಂಗಳಿಂದ ಕರೆ ದೊಯ್ಯುತ್ತಿದ್ದೇನೆ.  ಗ್ರಾಮ ಪಂಚಾಯ್ತಿ ನನಗೆ ಒಂದು ತಿಂಗಳ ಬಾಡಿಗೆ ನೀಡಿದೆ. ಇನ್ನೆರಡು ತಿಂಗಳ ಬಾಡಿಗೆ ನೀಡಬೇಕಿದೆ.
ಪಳನಿ,
ಆಟೋ ಚಾಲಕ ಹಂಪಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.