ಬದಲಾಗಿವೆ ರಸ್ತೆಗಳ ಮೂಲ ಹೆಸರು!

ತಿರುಚಲಾಗುತ್ತಿದೆಯೇ ಇತಿಹಾಸ?•ಹುಮನಾಬಾದ ರಸ್ತೆಗಳಿಗೆ ಮಹಾತ್ಮರ ಹೆಸರು ಮರುನಾಮಕರಣವಾಗಲಿ

Team Udayavani, Sep 11, 2019, 12:06 PM IST

ಹುಮನಾಬಾದ: ಪಟ್ಟಣದ ಮಲ್ಲಿಕಾರ್ಜುನ ರಸ್ತೆಗೆ ಮುರಗಿಮಠ ರಸ್ತೆ ಎಂದು ಬದಲಾಯಿಸಿರುವುದು.

ಶಶಿಕಂತ ಕೆ.ಭಗೋಜಿ
ಹುಮನಾಬಾದ:
ಪಟ್ಟಣದ ಪ್ರಮುಖ ಹಾಗೂ ಉಪರಸ್ತೆಗಳಿಗೆ 6 ದಶಕಗಳ ಹಿಂದೆ ಅಳವಡಿಸಲಾಗಿದ್ದ ಬಹುತೇಕ ಹೆಸರುಗಳ ಸ್ಥಳದಲ್ಲಿ ಇದೀಗ ಹೊಸ ನಾಮಫಲಕಗಳು ರಾರಾಜಿಸುತ್ತಿದ್ದು, ಮೂಲ ಹೆಸರು ಬದಲಾವಣೆ ಮಾಡುವ ಮೂಲಕ ಇತಿಹಾಸ ತಿರುಚಲಾಗುತ್ತಿಯೇ ಎನ್ನುವ ವಿಚಾರ ಸಾರ್ವಜನಿಕರನ್ನು ಕಾಡುತ್ತಿದೆ.

ಊರು, ರಸ್ತೆ, ಉಪರಸ್ತೆಗಳಿಗೆ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರು, ಸಮಾಜಕ್ಕೆ ಆದರ್ಶರಾದ ಮಹಾತ್ಮರ ಹೆಸರುಗಳನ್ನು ಸ್ಮರಿಸಿ, ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಲಿ ಎಂಬ ಉದ್ದೇಶದಿಂದ ಇಡಲಾಗುತ್ತದೆ. ಅದೇ ಉದ್ದೇಶದಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಆರ್ಯ ಸಮಾಜದವರಾಗಿದ್ದ ಮತ್ತು 1959ನೇ ಸಾಲಿನಲ್ಲಿ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ಶಂಕ್ರೆಪ್ಪ ಚಿದ್ರಿ ಅವರ ಅವಯಲ್ಲಿ ನಾಮಫಲಕ ಅಳವಡಿಸುವ ಮಹತ್ವದ ಕೆಲಸ ನಡೆದಿತ್ತು.

ಹೀಗಿದ್ದವು ರಸ್ತೆಗಳ ಹೆಸರು: ಜೇರಪೇಟೆಯ ಈಗಿರುವ ಮೌನೇಶ್ವರ ಶಾಲೆ ಪಕ್ಕದ ರಸ್ತೆ ಹೆಸರು- ದ‌ಯಾನಂದ ರಸ್ತೆ, ನರೇಂದ್ರ ರಸ್ತೆ, ಎಂ.ಡಿ.ಕಿದ್ವಾಯಿ ರಸ್ತೆ, ಶಿವಚಂದ್ರ ರಸ್ತೆ, ಆಜಾದ್‌ ರಸ್ತೆ, ತ್ಯಾಗರಾಜ ರಸ್ತೆ, ವಿಜಯಲಕ್ಷ್ಮೀ ರಸ್ತೆ, ವಿವೇಕಾನಂದ ರಸ್ತೆ, ಹರಳಯ್ಯ ರಸ್ತೆ, ಸುಭಾಷ ರಸ್ತೆ, ಮಲ್ಲಿಕಾರ್ಜುನ ರಸ್ತೆ, ಜವಾಹರ ರಸ್ತೆ, ಬಸವೇಶ್ವರ ರಸ್ತೆ, ಚಾಂದಬೀಬೀ ರಸ್ತೆ, ಸೇಯೋಬುಲ್ಲಾ ರಸ್ತೆ, ಅಕ್ಕಮಹಾದೇವಿ ರಸ್ತೆ, ರಾವಜಿರಾವ್‌ ರಸ್ತೆ, ವೀರಭದ್ರೇಶ್ವರ ರಸ್ತೆ, ಸಂಭಾಜಿ ರಸ್ತೆ, ಉಗ್ರಪ್ಪ ಬಪ್ಪಣ್ಣ ಸೇರಿದಂತೆ ಅನೇಕ ಮಹಾನ್‌ ಕಲಾವಿದರು, ಶರಣರು, ಸಂತರು, ಸ್ವಾತಂತ್ರ್ಯ ಹೋರಾಟಗಾರರ ಹೆಸರಿಟ್ಟು ಪ್ರತೀ ಓಣಿಗಳಿಗೆ ಆ ಹೆಸರಿನ ನಾಮಫಲಕ ಅಳವಡಿಕೆ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಆ ಪೈಕಿ ಈಗ ಉಳಿದವುಗಳೆಂದರೆ ಸಂಭಾಜಿ ರಸ್ತೆ, ಅಕ್ಕಮಹಾದೇವಿ ರಸ್ತೆ ಸೇರಿ ಮೂರ್‍ನಾಲ್ಕು ಮಾತ್ರ.

ಬದಲಾದ ಹಸರೇನು?: ಶಿವಪುರ ಹನುಮಾನ ದೇವಸ್ಥಾನ ಮುಂಭಾಗದಿಂದ ತೆರಳುವ ರಸ್ತೆ ಹೆಸರು ಖ್ಯಾತ ವೈದ್ಯ ಹಾಗೂ ದಾನಿಯೂ ಆಗಿದ್ದ ಎಂ.ಡಿ.ಕಿದ್ವಾಯಿ ಎಂಬುದಾಗಿತ್ತು. ಈಗ ಅಲ್ಲಿ ನಾಮಫಲಕವೇ ಇಲ್ಲ. ಸರ್ದಾರ್‌ ವಲ್ಲಭಭಾಯಿ ಪಟೇಲ ವೃತ್ತದಿಂದ ಕೋಳಿವಾಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ನರೇಂದ್ರ ಎಂಬುದಾಗಿತ್ತು. ಬಾಲಾಜಿ ದೇವಸ್ಥಾನದಿಂದ ಕೆಳಗೆ ಹೋಗುವ ರಸ್ತೆಗೆ ವೀರಭದ್ರೇಶ್ವರ ರಸ್ತೆ ಎಂದಾಗಿದ್ದ ಹೆಸರೀಗ ಧುಮ್ಮನಸೂರ ರಸ್ತೆ ಎಂದು ಬದಲಾಗಿದೆ.

ಈಗಿನ ಶಿವಾಜಿ ವೃತ್ತಕ್ಕೆ ಹೊಂದಿಕೊಂಡಿರುವ ರಸ್ತೆ ಮಲ್ಲಿಕಾರ್ಜುನ ರಸ್ತೆ ಎಂಬುದಾಗಿತ್ತು-ಅದೀಗ ಮುರಗಿಮಠ ಎಂದು ಬದಲಾಗಿದೆ. ಅಂಬೇಡ್ಕರ್‌ ವೃತ್ತದಿಂದ ನಗರ ಪ್ರವೇಶಿಸುವ ರಸ್ತೆ ಆಜಾದ್‌ ರಸ್ತೆ ಎಂಬುದಾಗಿತ್ತು. ಬಾಲಾಜಿ ದೇವಸ್ತಾನಕ್ಕೆ ಹೊಂದಿಕೊಂಡಿರುವ ಸೀಗಿ ಓಣಿಗೆ ಖ್ಯಾತ ಸಂಗೀತ ಕಲಾವಿದರಾಗಿದ್ದ ತ್ಯಾಗರಾಜ ರಸ್ತೆ ಎಂಬ ಹೆಸರಿತ್ತು. ವಿಜಯಲಕ್ಷ್ಮೀ, ವಿವೇಕಾನಂದ, ಹೈ.ಕ. ಮುಕ್ತಿ ಸಂಗ್ರಾಮಕ್ಕಾಗೆ ಪ್ರಾಣತೆತ್ತ ಶಿವಚಂದ್ರ ನೆಲ್ಲೋಗಿ ಸೇರಿದಂತೆ ಇನ್ನೂ ಅನೇಕ ಪ್ರಮುಖ ರಸ್ತೆಗಳ ನಾಮಫಲಕಗಳೀಗ ಸಂಪೂರ್ಣ ಕಣ್ಮರೆ ಆಗಿರುವುದು ಇತಿಹಾಸ ಪ್ರಿಯರಲ್ಲಿ ಅಘಾತ ಉಂಟು ಮಾಡಿದೆ.

ನಾಮಫಲಕ ಅಳವಡಿಸಲಿ: ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಗಳು, ಅಧಿಕಾರಿಗಳು, ಬದಲಾದ ರಸ್ತೆಗಳ ಹೆಸರಿನ ವಿಷಯವನ್ನು ಗಂಭೀರ ಪರಿಗಣಿಸಿ, ತಿರುಚಲಾದ ಮೂಲ ಹೆಸರಿನ ಸ್ಥಳದಲ್ಲಿ ಹಳೆಯ ಹೆಸರಿನ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ