ಮಳೆ ನಿರೀಕ್ಷೆ ಮಧ್ಯೆ ಬಿತ್ತನೆ ಆರಂಭ

ಸೊಯಾಬಿನ್‌ ಬೀಜಕ್ಕೆ ಸರ್ಕಾರದ ನಿರ್ಬಂಧ ತೊಗರಿ ಬಿತ್ತನೆಗೆ ಸಲಹೆ

Team Udayavani, Jun 21, 2020, 6:06 PM IST

21-June-29

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಆಳಂದ: ಮಳೆಯ ನಿರೀಕ್ಷೆಯೊಂದಿಗೆ ತಾಲೂಕಿನ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯವನ್ನು ಭರದಿಂದ ಆರಂಭಿಸಿದ್ದಾರೆ.

ಹಲವೆಡೆ ಬಿತ್ತನೆಗೆ ಪೂರಕವಾಗುವಷ್ಟು ಮಳೆಯಾಗಿದ್ದು, ಇನ್ನೂ ಕೆಲವೆಡೆ ಮಳೆಯ ಅಗತ್ಯವಾಗಿದ್ದು, ಆದರೂ ರೈತ ಸಮುದಾಯ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದು, ಶುಕ್ರವಾರವರೆಗೆ ಶೇ.13ರಷ್ಟು ಬಿತ್ತನೆ ನಡೆದಿದ್ದು, ಸೋಮವಾರದವರೆಗೆ ಶೇ.40ರಷ್ಟು ಬಿತ್ತನೆ ಆಗಲಿದೆ ಎಂದು ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ಈಗಾಗಲೇ ರೈತರು ಬೀಜ, ರಸಗೊಬ್ಬರ ಖರೀದಿಸಿ ಅನೇಕರು ಎತ್ತುಗಳಿಂದ ಮತ್ತು ಎತ್ತು ಇಲ್ಲದವರು ಟ್ರ್ಯಾಕ್ಟರ್‌ಗಳ ಮೂಲಕ ತೊಗರಿ, ಸಜ್ಜೆ, ಉದ್ದು, ಹೆಸರು, ಸೂರ್ಯಕಾಂತಿ ಮೆಕ್ಕೆಜೋಳ ಹೀಗೆ ಇನ್ನಿತರ ಬೀಜಗಳ ಬಿತ್ತನೆ ಆರಂಭಿಸಿದ್ದಾರೆ. ಆದರೆ ಬಹು ನಿರೀಕ್ಷಿತ ಬಿತ್ತನೆ ಹಾಗೂ ರೈತರ ಒಲವು ಆಗಿದ್ದ ಸೊಯಾಬಿನ್‌ ಬೀಜದ ದೋಷಪೂರಿತವಾಗಿವೆ. ಈ ಬಾರಿ ಬಿತ್ತಲೆ ಬಾರದು ಎಂಬ ಅಧಿಕಾರಿಗಳ ಕಟ್ಟಪ್ಪಣೆಯಿಂದಾಗಿ ರೈತರು ಗೊಂದಲಕ್ಕೆ ಒಳಗಾಗಿದ್ದಾರೆ. ಅನೇಕರು ದುಬಾರಿ ಬೆಲೆಯಲ್ಲಿ ಖಾಸಗಿ ಅಂಗಡಿಗಳಿಂದ ಸೊಯಾಬಿನ್‌ ಖರೀದಿಸಿದ್ದಾರೆ. ಅಧಿಕಾರಿಗಳ ಹೇಳಿಕೆಯಿಂದ ಗೊಂದಲಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ತಾಲೂಕಿನ ಒಟ್ಟು 1,31,131 ಕ್ಷೇತ್ರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲು ರೈತರ ಮುಂದಾಗಿದ್ದಾರೆ.

ಒಟ್ಟು ತೃಣಧಾನ್ಯ: ಆಳಂದ ವಲಯಕ್ಕೆ 566 ಹೆಕ್ಟೇರ್‌, ಖಜೂರಿ 811 ಹೆಕ್ಟೇರ್‌, ನರೋಣಾ 601 ಹೆಕ್ಟೇರ್‌, ಮಾದನಹಿಪ್ಪರಗಾ 766 ಹೆಕ್ಟೇರ್‌, ನಿಂಬರಗಾ 921 ಹೆಕ್ಟೇರ್‌ ಹೀಗೆ ಒಟ್ಟು 3,665 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ.

ಬೆಳೆಕಾಳು: ಆಳಂದ ವಲಯಕ್ಕೆ 19340 ಹೆಕ್ಟೇರ್‌, ಖಜೂರಿ 21090 ಹೆಕ್ಟೇರ್‌, ನರೋಣಾ 20415 ಹೆಕ್ಟೇರ್‌, ಮಾದನಹಿಪ್ಪರಗಾ 19360 ಹೆಕ್ಟೇರ್‌, ನಿಂಬರಗಾ 26785 ಹೆಕ್ಟೇರ್‌ ಸೇರಿ ಒಟ್ಟು 1,07,000 ಹೆಕ್ಟೇರ್‌ ಬಿತ್ತನೆ ಗುರಿ ಇದೆ.

ಎಣ್ಣೆ ಕಾಳು: ಆಳಂದ ವಲಯಕ್ಕೆ 2477 ಹೆಕ್ಟೇರ್‌, ಖಜೂರಿ 4272 ಹೆಕ್ಟೇರ್‌, ನರೋಣಾ 3642, ಮಾದನಹಿಪ್ಪರಗಾ 2027, ನಿಂಬರಗಾ 2217 ಹೆಕ್ಟೇರ್‌ ಸೇರಿ ಒಟ್ಟು 14,635 ಹೆಕ್ಟೇರ್‌ ಬಿತ್ತನೆ ಗುರಿಯಿದೆ.

ವಾಣಿಜ್ಯ ಬೆಳೆ: ಆಳಂದ ವಲಯ 643 ಹೆಕ್ಟೇರ್‌, ಖಜೂರಿ 468 ಹೆಕ್ಟೇರ್‌, ನರೋಣಾ 775 ಹೆಕ್ಟೇರ್‌, ಮಾದನಹಿಪ್ಪರಗಾ 338 ಹೆಕ್ಟೇರ್‌, ನಿಂಬರಗಾ 3607 ಹೆಕ್ಟೇರ್‌ ಸೇರಿ ಒಟ್ಟು 5831 ಹೆಕ್ಟೇರ್‌ ಗುರಿಯಿದೆ. ಹೀಗೆ ಒಟ್ಟು ನೀರಾವರಿ ಹಾಗೂ ಖುಷ್ಕಿ ಸೇರಿ ಬಿತ್ತನೆಯ ಕ್ಷೇತ್ರವನ್ನು ಆಳಂದ ವಲಯದ 23026 ಹೆಕ್ಟೇರ್‌, ಖಜೂರಿ 26641 ಹೆಕ್ಟೇರ್‌, ನರೋಣಾ 25443 ಹೆಕ್ಟೇರ್‌, ಮಾದನಹಿಪ್ಪರಗಾ 22491 ಹೆಕ್ಟೇರ್‌, ನಿಂಬರಗಾ 33530 ಹೆಕ್ಟೇರ್‌ ಒಳಗೊಂಡು ಈ ಬಾರಿ 1,31,131 ಹೆಕ್ಟೇರ್‌ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಸೋಮವಾರದ ವರೆಗೆ ಮಳೆಯ ಬಿಡುವು ನೀಡಿದ್ದರಿಂದ ಶೇ.40ರಷ್ಟು ಬಿತ್ತನೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಪರ್ಯಾಯ ಬಿತ್ತನೆ ಕೈಗೊಳ್ಳಿ: ಈ ನಡುವೆ ತಾಲೂಕಿನಲ್ಲಿ ಸುಮಾರು 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾಬಿನ್‌ ಬೀಜದ ಬಿತ್ತನೆಗೆ ಗುರಿಯಿಟ್ಟುಕೊಂಡಿದ್ದ ಕೃಷಿ ಇಲಾಖೆ ವಿತರಣೆಗಾಗಿ ಈ ಬೀಜದ ದಾಸ್ತಾನು ಕೈಗೊಂಡಿತ್ತಾದರು. ನಂತರ ಈ ಬೀಜ ದೋಷದಿಂದ ಕೂಡಿದೆ. ದಾಸ್ತಾನು ಕೈಗೊಂಡಿದ್ದ ಬೀಜವನ್ನು ವಿತರಣೆ ಹಂತದಲ್ಲೇ ಹಠಾತಾಗಿ ನಿಲ್ಲಿಸಿ ಬೀಜ ವಿತರಣೆ ಹಾಗೂ ಬಿತ್ತನೆಗೆ ನಿರ್ಬಂಧಿಸಿದೆ. ವಿತರಣೆ ಮಾಡಿದ ಬೀಜವನ್ನು ವಾಪಸ್‌ ಪಡೆಯಲಾಗಿದೆ. ಒಂದೊಮ್ಮೆ ಬೀಜ ವಾಪಸ್‌ ನೀಡದೆ ಅಥವಾ ಖಾಸಗಿವಾಗಿ ಬೀಜ ಖರೀದಿಸಿ ಬಿತ್ತನೆ ಕೈಗೊಂಡರೆ ರೈತರೆ ಹೊಣೆಯಾಗುತ್ತಾರೆ. ಇದಕ್ಕೆ ಸರ್ಕಾರ ಅಥವಾ ಕೃಷಿ ಇಲಾಖೆ ಹೊಣೆಯಾಗುವುದಿಲ್ಲ. ಸೋಯಾಬಿನ್‌ ಬಿತ್ತನೆ ಕೈಗೊಳ್ಳಬಾರದು. ಪರ್ಯಾಯವಾಗಿ ತೊಗರಿ ಇನ್ನಿತರ ಬಿತ್ತನೆ ಕೈಗೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮನವಿ ಮಾಡಿದ್ದಾರೆ.

ಮಹಾದೇವ ವಡಗಾಂವ

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.