ಗುಲ್ಬರ್ಗ ವಿವಿ ಉತ್ತರ ಪತ್ರಿಕೆಮೌಲ್ಯಮಾಪನಕ್ಕೆ ಬಾರ್‌ಕೋಡಿಂಗ್‌


Team Udayavani, Aug 31, 2018, 11:31 AM IST

gul-4.jpg

ಕಲಬುರಗಿ: ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪರೀಕ್ಷಾ ಸುಧಾರಣೆಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತಿದ್ದು, ಈಗಾಗಲೇ ಕಳೆದ ವರ್ಷ ಪರೀಕ್ಷೆಯನ್ನು ಕ್ಲಸ್ಟರ್‌ ಪದ್ಧತಿ ಜಾರಿಗೆ ತಂದಿದ್ದ ವಿವಿ ಈಗ ಮೌಲ್ಯಮಾಪನಕ್ಕೆ ಬಾರ್‌ ಕೋಡಿಂಗ್‌ ಪದ್ಧತಿ ಕಾರ್ಯಾನುಷ್ಠಗೊಳಿಸಲು ಮುಂದಾಗಿದೆ.

ಮೌಲ್ಯಮಾಪನದಲ್ಲಿ ಯಾವುದೇ ನಿಟ್ಟಿನ ಹಸ್ತಕ್ಷೇಪ ತಡೆಯುವುದರ ಜತೆಗೆ ಅಂಕಗಳ ನೀಡಿಕೆ ಹಾಗೂ ಫಲಿತಾಂಶದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಉತ್ತರ ಪತ್ರಿಕೆಗೆ ಬಾರ್‌ ಕೋಡಿಂಗ್‌ ಕೊಟ್ಟು ತದನಂತರ ಮೌಲ್ಯಮಾಪನ ಮಾಡುವ ಸುಧಾರಣೆ ಕಾರ್ಯಕ್ಕೆ ಕೈ ಹಾಕಲಾಗಿದೆ. ಈಗಾಗಲೇ ವಿವಿ ವಿದ್ಯಾವಿಷಯಕ ಪರಿಷತ್ತು ಹಾಗೂ ಸಿಂಡಿಕೇಟ್‌ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದ್ದು, ಮುಂಬರುವ ನವೆಂಬರ್‌ ತಿಂಗಳಿನಿಂದ ನಡೆಯುವ ವಿವಿಯ ಎಲ್ಲ ಹಂತದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಿಂದ ಜಾರಿಗೆ ತರಲು ದೃಢ ನಿರ್ಧಾರ ಕೈಗೊಳ್ಳಲಾಗಿದೆ. 

ಈಗಾಗಲೇ ಬಾರ್‌ ಕೋಡಿಂಗ್‌ ಮೌಲ್ಯಮಾಪನ ಪದ್ಧತಿಯು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯ ಮೌಲ್ಯಮಾಪನದಲ್ಲಿದೆಯಲ್ಲದೇ ರಾಜ್ಯದ ವಿವಿಧ ವಿವಿಗಳಲ್ಲೂ ಕಾರ್ಯರೂಪದಲ್ಲಿದೆ. ಪರೀಕ್ಷೆ ಹಾಗೂ
ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿನ ಅವಾಂತರ, ಹಸ್ತಕ್ಷೇಪ ತಡೆಯುವ ಜತೆಗೆ ದಕ್ಷತೆ ತರುವ ನಿಟ್ಟಿನಲ್ಲಿ ಈಗ ಗುಲ್ಬರ್ಗ ವಿವಿ ಕಾಯ್ಗತಗೊಳಿಸಲು ಸಜ್ಜಾಗಿದೆ.

ಉತ್ತರ ಪತ್ರಿಕೆಗಳಿಗೆ ಬಾರ್‌ ಕೋಡಿಂಗ್‌ ನೀಡುವ ಹಾಗೂ ತದನಂತರ ಅಂಕಗಳ ಪಟ್ಟಿ ಸಲ್ಲಿಸುವ ಮಹತ್ವದ ಕಾರ್ಯವನ್ನು ಏಜೆನ್ಸಿಗೆ ವಹಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿ ಮೂರ್‍ನಾಲ್ಕು ಏಜೆನ್ಸಿಗಳೊಂದಿಗೆ ಒಂದು ಹಂತದ ಮಾತುಕತೆ ನಡೆಸಿದೆ. ಮೂಲಗಳ ಪ್ರಕಾರ ಪ್ರತಿಷ್ಠಿತ ಏಜೆನ್ಸಿಯೊಂದನ್ನು ಕಾರ್ಯ ವಹಿಸುವ ಕುರಿತಾಗಿ ಅಂತಿಮಗೊಂಡಿದೆ ಎನ್ನಲಾಗಿದೆ.
 
ಎಷ್ಟು ವಿದ್ಯಾರ್ಥಿಗಳು?: ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಬಾರ್‌ ಕೋಡಿಂಗ್‌ ಪದ್ಧತಿ ಜಾರಿಗೆ ತಂದರೆ ಉತ್ತರ ಪತ್ರಿಕೆ ಯಾವ ವಿದ್ಯಾರ್ಥಿ ಎಂಬುದಾಗಿ ಮೌಲ್ಯಮಾಪಕರಿಗೆ ಗೊತ್ತಾಗುವುದಿಲ್ಲ. ಇಲ್ಲಿ ಸಂಪೂರ್ಣ ಪಾರದರ್ಶಕತೆ ತರಬಹುದಾಗಿದೆಯಲ್ಲದೇ ವಿನಾಕಾರಣ ಪರೀಕ್ಷಾಂಗ ವಿಭಾಗದ ಸಿಬ್ಬಂದಿ ಹಸ್ತಕ್ಷೇಪ ಮಾಡುವುದನ್ನು ತಡೆಗಟ್ಟಬಹುದಾಗಿದೆ. ಒಟ್ಟಾರೆ ಈ ಪದ್ಧತಿ ಕಾರ್ಯಾನುಷ್ಠಾನವಾದರೆ ವಿವಿ ವ್ಯಾಪ್ತಿಯ 1.20 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳೆಲ್ಲ ಬಾರ್‌ ಕೋಡಿಂಗ್‌ಗೆ ಒಳಪಡುತ್ತವೆಯಲ್ಲದೇ ವಸ್ತುನಿಷ್ಠ ಫಲಿತಾಂಶಕ್ಕೆ ಕಾರಣವಾಗುತ್ತದೆ.

ಕಾರ್ಯರೂಪಕ್ಕೆ ತರದಂತೆ ಒತ್ತಡ: ಸುಧಾರಣೆ ನಿಟ್ಟಿನಲ್ಲಿ ಮುಂದಾಗಿರುವ ವಿವಿಯ ಈ ಕಾರ್ಯಕ್ಕೆ ವಿವಿ ವ್ಯಾಪ್ತಿಯ
ಕೆಲವು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ಕಾರ್ಯರೂಪಕ್ಕೆ
ಬಾರದಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಸಾಲದು ಎಂಬುದಕ್ಕೆ ಜನಪ್ರತಿನಿಧಿಗಳ ಮೂಲಕವೂ ಹೇಳಿಸುತ್ತಿದ್ದಾರೆ ಎಂಬುದು ವರದಿಯಾಗಿದೆ.

ಇನ್ಮುಂದೆ ಕಠಿಣ: ತಮ್ಮದೇ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ಅವರಿವರ ಸಹಾಯದಿಂದ ಪರೀಕ್ಷೆ ಬರೆಯುವುದಕ್ಕೆ ಕ್ಲಷ್ಟರ್‌ ಪದ್ಧತಿಯಿಂದ ಬ್ರೇಕ್‌ ಹಾಕಿದ್ದಕ್ಕೆ ವಿದ್ಯಾರ್ಥಿ ಸಮುದಾಯ ಹಾಗೂ ಕೆಲವು ಖಾಸಗಿ ಕಾಲೇಜ್‌ಗಳಿಂದ ವಿರೋಧ ವ್ಯಕ್ತವಾಗಿತ್ತಲ್ಲದೇ ಈ ಸುಧಾರಣಾ ಕಾರ್ಯ ಮೈಗೂಢಿಸಿಕೊಳ್ಳದೇ ರಂಗೋಲಿ ಕೆಳಗೆ ನುಸುಳಿದಂತೆ ಬೇರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯದೇ ತಮ್ಮ ಕಾಲೇಜ್‌ನಲ್ಲಿಯೇ ಪರೀಕ್ಷೆ ಬರೆದು ತದನಂತರ ದಂಡ ತುಂಬಲಾಗಿತ್ತು. ಆದರೆ ಇದಕ್ಕೂ ಕಡಿವಾಣ ಈಗ ಹಾಕಲಾಗುತ್ತಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಬಾರ್‌ ಕೋಡಿಂಗ್‌ ಪದ್ಧತಿ ಜಾರಿಗೆ ತರುತ್ತಿರುವುದನ್ನು ಅವಲೋಕಿಸಿದರೆ ಗುಲ್ಬರ್ಗ ವಿವಿಯಿಂದ ಹೇಗಾದರೂ ಪದವಿ ಪಡೆಯಬಹುದು ಎಂಬ ಲೆಕ್ಕಾಚಾರ ಹೊಂದಿದ್ದವರಿಗೆ ಇನ್ಮುಂದೆ ಕೈ ಕೊಡುವ ಸಾಧ್ಯತೆಗಳೇ ಹೆಚ್ಚು. ಒಟ್ಟಾರೆ ಬಾರ್‌ ಕೋಡಿಂಗ್‌ ಪದ್ಧತಿಯ ಮೂಲ ಆಶಯ ಸಮರ್ಪಕ ಜಾರಿಯಾಗಿ ಶೈಕ್ಷಣಿಕ ಮಟ್ಟ ಸುಧಾರಣೆಗೆ ನಾಂದಿ ಹಾಡಬೇಕೆಂದು ವಿವಿಯ ಕೆಲ ಪ್ರಾಧ್ಯಾಪಕರು ಹಾಗೂ ಶಿಕ್ಷಣ ಪ್ರೇಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬರುವ ನವೆಂಬರ್‌ ತಿಂಗಳಿನಿಂದ ನಡೆಯುವ ವಿವಿಯ ಎಲ್ಲ ಹಂತದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಬಾರ್‌ ಕೋಡಿಂಗ್‌ ನೀಡುವ ಪದ್ಧತಿ ಜಾರಿಗೆ ತರಲು ವಿವಿ ನಿರ್ಧರಿಸಿದೆ. ಈ ಸಂಬಂಧ ಏಜೆನ್ಸಿಗಳೊಂದಿಗೆ ಮಾತುಕತೆ ನಡೆದಿದೆ. ಒಟ್ಟಾರೆ ಈ ಪದ್ಧತಿ ಕಾರ್ಯಾನುಷ್ಠಾನಕ್ಕೆ ಬರಲಿದೆ.
ಪ್ರೊ| ಡಿ.ಎಂ. ಮದರಿ, ಕುಲಸಚಿವರು (ಮೌಲ್ಯಮಾಪನ) ಗುಲ್ಬರ್ಗ ವಿವಿ

„ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

ಚೆಕ್‌ ಬೌನ್ಸ್‌ ಪ್ರಕರಣ : 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಮಂಗಳೂರು : ಚೆಕ್‌ ಬೌನ್ಸ್‌ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ

ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ

ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ

ಸನ್ನಡತೆ: 96 ಕೈದಿಗಳ ಅವಧಿಪೂರ್ವ ಬಿಡುಗಡೆ

ಸನ್ನಡತೆ: 96 ಕೈದಿಗಳ ಅವಧಿಪೂರ್ವ ಬಿಡುಗಡೆ

ರಾಜ್ಯದಲ್ಲಿ ಇಂದು 153 ಪಾಸಿಟಿವ್‌ ವರದಿ

ರಾಜ್ಯದಲ್ಲಿ ಇಂದು 153 ಪಾಸಿಟಿವ್‌ ವರದಿ

1-dfsfsdfd

ರಾಜ್ಯ ಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಂ ರಮೇಶ್ ಆಯ್ಕೆ

ಬಂಟ್ವಾಳ : ಅಪರಿಚಿತ ವಾಹನ ಢಿಕ್ಕಿ ; ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸಾವು

ಬಂಟ್ವಾಳ : ಅಪರಿಚಿತ ವಾಹನ ಢಿಕ್ಕಿ ; ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17aam-admi

ಆಮ್‌ ಆದ್ಮಿಯಿಂದ ಮಾತ್ರ ಸರ್ವ ಕ್ಷೇತ್ರ ಬದಲು: ರೆಡ್ಡಿ

10constitution

ಸಂವಿಧಾನವೇ ಜೀವನದ ಸಿದ್ಧಾಂತವಾಗಲಿ: ಕೃಷ್ಣಾ ರೆಡ್ಡಿ

7hostel

ವಸತಿ ನಿಲಯ ನೌಕರರ ಬಾಕಿ ವೇತನ ನೀಡಿ

6protest

ಆಲ್‌ ಇಂಡಿಯಾ ಇಮಾಮ್‌ ಕೌನ್ಸಿಲ್‌ನಿಂದ ಪ್ರತಿಭಟನೆ

5DC

ಜಿಡಗಾದಲ್ಲಿ ನಾಳೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

ಚೆಕ್‌ ಬೌನ್ಸ್‌ ಪ್ರಕರಣ : 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಮಂಗಳೂರು : ಚೆಕ್‌ ಬೌನ್ಸ್‌ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ

ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ

ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ

ಸನ್ನಡತೆ: 96 ಕೈದಿಗಳ ಅವಧಿಪೂರ್ವ ಬಿಡುಗಡೆ

ಸನ್ನಡತೆ: 96 ಕೈದಿಗಳ ಅವಧಿಪೂರ್ವ ಬಿಡುಗಡೆ

ಗ್ರಾಮೀಣ-ಕೃಷಿ ವರದಿಗಾರಿಕೆ ಎಂದರೆ ಸಂಸ್ಕೃತಿ -ಅಭಿವೃದ್ಧಿಯ ಅನಾವರಣ- ಸುನಿಲ್‌ಕುಮಾರ್‌

ಗ್ರಾಮೀಣ-ಕೃಷಿ ವರದಿಗಾರಿಕೆ ಎಂದರೆ ಸಂಸ್ಕೃತಿ -ಅಭಿವೃದ್ಧಿಯ ಅನಾವರಣ- ಸುನಿಲ್‌ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.