Udayavni Special

ಮಳೆ ಕೊರತೆಗೆ ಅಲ್ಪಾವಧಿ ಬೆಳೆ ಹಾಳು


Team Udayavani, Aug 20, 2017, 10:49 AM IST

Farmerstory1 copy.JPG

ಅಫಜಲಪುರ: ತಾಲೂಕಿನಾದ್ಯಂತ ಮಳೆ ಕೊರತೆ ಹಿನ್ನೆಲೆಯಲ್ಲಿ ಅಲ್ಪಾವಧಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ರೈತರು ಆತಂಕಪಡುವಂತೆ ಆಗಿದೆ. ಉತ್ತಮ ಮುಂಗಾರು ಮಳೆ ಬಂದ ಹಿನ್ನೆಲೆಯಲ್ಲಿ ರೈತರು ಖುಷಿಯಿಂದ ಅಲ್ಪಾವಧಿ ಬೆಳೆಗಳಾದ ಉದ್ದು, ಎಳ್ಳು, ಹೆಸರು ಬಿತ್ತನೆ ಮಾಡಿದ್ದರು. ಬಿತ್ತನೆಯಾದ ಮೇಲೆ ಮಳೆಯೇ ಬಾರದಿರುವ ಹಿನ್ನೆಲೆಯಲ್ಲಿ ಬೆಳೆಗಳು ಹಾಳಾಗಿವೆ. ಕೆಲವೆಡೆ ರೈತರು ತಾವೇ ಬಿತ್ತಿದ ಬೆಳೆಯನ್ನು ಕಿತ್ತು ಹಾಕುತ್ತಿದ್ದಾರೆ. ತಾಲೂಕಿನ ಘತ್ತರಗಿಯಲ್ಲಿ ರೈತರೊಬ್ಬರು ಮಳೆ ಆಗದಿದ್ದರೇನಂತೆ ಎಂದು ಸ್ಪಿಂಕ್ಲರ್‌ ಮೂಲಕ ನೀರು ಸಿಂಪಡಿಸಿ ನೋಡುತ್ತೇನೆ ಎಂದು ಬೆಳೆಗೆ ನೀರು ಸಿಂಪಡಿಸುತ್ತಿದ್ದಾರೆ. ಈ ಪ್ರಯತ್ನ ಫಲ ನೀಡಿದರೆ ಶ್ರಮಕ್ಕೆ ಫಲ ಸಿಗಲಿದೆ. ತಾಲೂಖೀನ ಗೊಬ್ಬೂರ (ಬಿ) ಗ್ರಾಮದಲ್ಲಿ ರೈತರು ಮಳೆ ಕೊರತೆಯಿಂದ ಬಾಡಿ ಹೋಗುತ್ತಿರುವ ಹೆಸರು ಬೆಳೆಯನ್ನು ಕಿತ್ತು ಹಾಕುತ್ತಿದ್ದಾರೆ. ಸಾಲ ಮಾಡಿಕೊಂಡು ದುಬಾರಿಯಾದರೂ ಯೋಚಿಸದೆ ಆಳುಗಳನ್ನು ಹಚ್ಚಿ ಬಿತ್ತನೆ ಮಾಡಿದ್ದ ರೈತರು ಅದೇ ಕೂಲಿ ಆಳುಗಳಿಂದ ಬಿತ್ತಿದ ಬೆಳೆಯನ್ನು ಕಿತ್ತಿಸುತ್ತಿದ್ದಾರೆ. ಹಿಂಗಾರಿ ಬೆಳೆ ಮೇಲೆ ಆಸೆ: ಮುಂಗಾರು ಮಳೆ ಕೈ ಕೊಟ್ಟಿದ್ದು, ಹಿಂಗಾರು ಮಳೆ ಉತ್ತಮವಾಗಿ ಆದರೆ ಜೋಳವನ್ನಾದರೂ ಬೆಳೆದುಕೊಂಡು ವರ್ಷದ ಗಂಜಿ ಮಾಡಿಕೊಳ್ಳುತ್ತೇವೆ. ದನಕರುಗಳಿಗೆ ಕಣಕಿ ಮೇವಾದರೂ ಸಿಗಲಿದೆ. ಹಿಂಗಾರು ಮಳೆಯೂ ಬಾರದಿದ್ದರೆ ನಾವು ಈ ಬಾರಿ ಗುಳೆ ಹೋಗುವುದಂತು ಖಂಡಿತ ಎಂದು ರೈತರು ತಮ್ಮ ಗೋಳನ್ನು ಹೇಳಿಕೊಳ್ಳುತ್ತಾರೆ. ಈ ಬಾರಿ ತಾಲೂಕಿನಾದ್ಯಂತ 2095 ಹೆಕ್ಟೇರ್‌ ಪ್ರದೇಶದಲ್ಲಿ ಮಳೆಯಾಶ್ರಿತ ಬಿತ್ತನೆಯಾಗಿದೆ. ಈ ಪೈಕಿ 1676 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದು ಮಳೆಯಾಶ್ರಿತ ಬೆಳೆಯಾಗಿದ್ದರಿಂದ ಸ್ಪಿಂಕ್ಲರ್‌ ಪಯೋಗಿಸದರೆ ಪ್ರಯೋಜನವಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಹಿಂಗಾರು ಕೈಕೊಟ್ಟರೆ ಬೀದಿಪಾಲು: ಮುಂಗಾರು ಮಳೆ ಬಾರದೇ ಇರುವುದರಿಂದ ಬಿತ್ತಿದ ಬೆಳೆ ಹಾಳಾಗಿದೆ. ಹಿಂಗಾರು ಮಳೆಯಾದರೂ ಉತ್ತಮವಾಗಿ ಬಂದರೆ ಜೋಳ ಬೆಳೆದುಕೊಂಡು ನಮಗೂ ಮತ್ತು ದನಕರುಗಳಿಗೂ
ತುತ್ತಿನ ಗಂಜಿ ಬೆಳೆದುಕೊಳ್ಳುತ್ತೇವೆ. ಇಲ್ಲದಿದ್ದರೆ ನಮ್ಮ ಬಾಳು ಬೀದಿಪಾಲಾಗಲಿದೆ. 

ಶಿವಾನಂದ ಬಸಣ್ಣ ಕಲಶೆಟ್ಟಿ, ಗೊಬ್ಬೂರ (ಬಿ) ಗ್ರಾಮದ ರೈತ

ಬೆಳೆ ಕೈ ಹಿಡಿಯದಿದ್ದರೆ ಪರದಾಟ: ಸ್ಪಿಂಕ್ಲರ್‌ ಬಳಸಿ ಹೆಸರು ಬೆಳೆಗೆ ನೀರು ಹರಿಸುತ್ತಿದ್ದೇನೆ. ಇದರಿಂದ ಬೆಳೆ ಕೈಹಿಡಿದರೆ ನಾವು, ನಮ್ಮ ಕುಟುಂಬದವರು ಬದುಕಲು ಸಹಕಾರಿಯಾಗಲಿದೆ. ಇಲ್ಲದಿದ್ದರೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬೆಳೆ ಕೈ ಹಿಡಿದರೆ ಇತರ ರೈತರಿಗೂ ಮಾದರಿ ಆಗಲಿದೆ.
ಮಹಾದೇವಪ್ಪ ಗುರುಪ್ಪ ಭೂಸನೂರ, ಘತ್ತರಗಾ ಗ್ರಾಮದ ರೈತ

ಟಾಪ್ ನ್ಯೂಸ್

1-haara

ಆರ್ಯನ್ ಗೆ ಜಾಮೀನಿಲ್ಲ :’ಅತಿರೇಕ,ಹೃದಯ ವಿದ್ರಾವಕ’ಎಂದ ಬಾಲಿವುಡ್ ಮಂದಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kalaburagi news

ಮೂರನೇ ಅಲೆ ತಡೆಗೆ ಲಸಿಕೆ ಹಾಕಿಸಿಕೊಳ್ಳಿ

gulbarga news

ಇಂದು ನಾಗಾವಿ ಯಲ್ಲಮ್ಮದೇವಿ ಜಾತ್ರೆ

kalaburagi news

ಕೆಕೆಆರ್‌ಡಿಬಿಗೆ 3000 ಕೋಟಿ ರೂ. ಕೊಡಲು ಬದ್ಧ: ಮುಖ್ಯಮಂತ್ರಿ ಬೊಮ್ಮಾಯಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

surjwewala

ಬೊಮ್ಮಾಯಿ‌ ಸರ್ಕಾರ ಕಾಲಿನಿಂದ ಮುಡಿಯವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ: ಸುರ್ಜೇವಾಲಾ

MUST WATCH

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

ಹೊಸ ಸೇರ್ಪಡೆ

1-haara

ಆರ್ಯನ್ ಗೆ ಜಾಮೀನಿಲ್ಲ :’ಅತಿರೇಕ,ಹೃದಯ ವಿದ್ರಾವಕ’ಎಂದ ಬಾಲಿವುಡ್ ಮಂದಿ

ನಂದಳಿಕೆ ಗೋಳಿಕಟ್ಟೆಯಲ್ಲಿ ಶಾಸನ ಪತ್ತೆ

ನಂದಳಿಕೆ ಗೋಳಿಕಟ್ಟೆಯಲ್ಲಿ ಶಾಸನ ಪತ್ತೆ

Untitled-1

ಸ್ವಚ್ಛ ಶಿರ್ವ-ನಮ್ಮ ಶಿರ್ವ ಅಭಿಯಾನ: ಕಸ ತ್ಯಾಜ್ಯ ನಿರ್ಮೂಲನೆಗೆ ಪಣತೊಟ್ಟ ಗ್ರಾ.ಪಂ.ಅಧ್ಯಕ್ಷ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

Sakleshpur: Destroy paddy crop for forest attack

ಸಕಲೇಶಪುರ: ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.