ವನ್ಯಜೀವಿ ಧಾಮದಲ್ಲಿ ಹೆಚ್ಚುತ್ತಿದೆ ಪ್ರಾಣಿ ಸಂತತಿ


Team Udayavani, Jun 5, 2022, 1:09 PM IST

10-animals

ಚಿಂಚೋಳಿ: ಕಲಬುರಗಿ ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಕುಂಚಾವರಂ ಅರಣ್ಯಪ್ರದೇಶವನ್ನು ವನ್ಯಜೀವಿಧಾಮವೆಂದು ಘೋಷಿಸಿದ ಬಳಿಕ ವನ್ಯ ಜೀವಿಧಾಮದಲ್ಲಿ ವಿವಿಧ ಜಾತಿಗಳ ಕಾಡು ಪ್ರಾಣಿಗಳ ಸಂತತಿ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅಲ್ಲದೇ ಹೊಸ ಕಾಡುಪ್ರಾಣಿಗಳಿಗೆ ಸುರಕ್ಷಿತ, ಸಂರಕ್ಷಿತ ಅರಣ್ಯಪ್ರದೇಶವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಕುಂಚಾವರಂ ವನ್ಯಜೀವಿಧಾಮದಲ್ಲಿ ಇತ್ತೀಚೆಗೆ ಅಪರೂಪದ ನೀಲಗಾಯ, ಸೀಳುನಾಯಿ, ಚೌಸಿಂಗಾ, ಚಿಪ್ಪುಹಂದಿ, ಕಾಡುಕೋಣ ಪತ್ತೆಯಾಗಿವೆ. 2011ರಲ್ಲಿ ರಾಜ್ಯಅರಣ್ಯ ಇಲಾಖೆ ಮಂಡಳಿ ಉಪಾಧ್ಯಕ್ಷರಾಗಿದ್ದ ಕ್ರಿಕೆಟ್‌ ಆಟಗಾರ ಅನಿಲ ಕುಂಬ್ಳೆ ಕುಂಚಾವರಂ ಅರಣ್ಯ ಪ್ರದೇಶದ ಸೇರಿಭಿಕನಳ್ಳಿ ತಾಂಡಾಕ್ಕೆ ಭೇಟಿ ನೀಡಿ, ಈ ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮವೆಂದು ಘೋಷಿಸಲು ಸೂಕ್ತವಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದರು. ಆ ನಂತರ ಸರ್ಕಾರ ಪ್ರಾದೇಶಿಕ ಅರಣ್ಯವನ್ನು ಮೇಲ್ದರ್ಜೆಗೇರಿಸಿದ ನಂತರ ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳ ಅರಣ್ಯ ಪ್ರದೇಶದಲ್ಲಿರುವ ನೀಲಗಾಯಿ ಹೊಸ ವನ್ಯಪ್ರಾಣಿಗಳು ಪತ್ತೆಯಾಗಿವೆ. ಕೆಲವು ಪ್ರಾಣಿಗಳು ತಂಪು ವಾತಾವರಣದಲ್ಲಿ ವಾಸಿಸುವಂತಹವಾಗಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಮೂರು ನೀಲಗಾಯಿ ಕಾಡು ಪ್ರಾಣಿಗಳು ಕಾಣಿಸಿಕೊಂಡಿವೆ. ಕುಂಚಾವರಂ ಬಯಲು ಸೀಮೆಯ ಪ್ರಮುಖ ವನ್ಯಜೀವಿ ಧಾಮವಾಗಿರುವ ಈ ಅರಣ್ಯ 13,488 ಹೆಕ್ಟೇರ್‌ ಪ್ರದೇಶವನ್ನು ಹೊಂದಿದೆ.

ಸೇರಿಭಿಕನಳ್ಳಿ, ಮೋಟಿಮೋಕ, ಧರ್ಮಸಾಗರ, ಸಂಗಾಪುರ, ಕುಸರಂಪಳ್ಳಿ, ಗೊಟ್ಟಂಗೊಟ್ಟ, ಭೋಗಾಲಿಂಗದಳ್ಳಿ, ಚಂದ್ರಂಪಳ್ಳಿ, ಮಂಡಿಬಸವಣ್ಣ, ಕೊತ್ವಾಲನಾಲಾ, ಹಾಥಿಪಗಡಿ, ಚಿಕ್ಕನಿಂಗದಳ್ಳಿ ಪ್ರದೇಶಗಳಲ್ಲಿ ಹೆಚ್ಚು ಕಾಡು ಪ್ರಾಣಿಗಳು ಕಾಣಸಿಗುತ್ತವೆ. ಅರಣ್ಯಪ್ರದೇಶದಲ್ಲಿ ಜೀವ ವೈವಿಧ್ಯತೆಯ ಕಾಡಿನಲ್ಲಿ ಅಪರೂಪದ ಪ್ರಾಣಿ, ಪಕ್ಷಿಗಳು ಹಾಗೂ ಸಸ್ಯ ಸಂಕುಲಗಳಿಗೆ ಆಸರೆಯಾಗಿದೆ. ಕುಂಚಾವರಂ ವನ್ಯಜೀವಿಧಾಮದಲ್ಲಿ ಮೂರು ಚಿರತೆ,ನೀಲಗಾಯ, ಸೀಳುನಾಯಿ, ಕಾಡುಕೋಣ, ಕತ್ತೆ, ಕಿರುಬ, ಚೌಸಿಂಗಾ, ತೋಳ, ಕೃಷ್ಣಮೃಗ, ಜಿಂಕೆ, ಕಾಡುಬೆಕ್ಕು, ನರಿ, ಮೊಲ, ಕಾಡುಹಂದಿ, ಮುಳ್ಳುಹಂದಿ ಊಸರವಳ್ಳಿ,ನಾಗರಹಾವು, ಆಮೆ ವನ್ಯಧಾಮದಲ್ಲಿರುವ ಪ್ರಾಣಿಗಳಾಗಿವೆ.

ಕುಂಚಾವರಂ ವನ್ಯಜೀವಿಧಾಮ ಪರಿಸರದಲ್ಲಿ ಗಿಡಮರಗಳು

ಸಾಗುವಾನಿ, ತೇಗ, ಬನ್ನಿ, ಬೇವು, ಕಿತ್ತಳೆ, ಧೂಪ, ಚಿರಂಜಿ, ಮುತ್ತುಗ, ತುಮರಿ, ಬೀಟೆ, ನೆಲ್ಲಿಕಾಯಿ, ಕಳ್ಳಿ, ಆಲದ ಮರ, ಹುಣಸೆ ಮರ, ಅರಳಿ ಮರ, ಮಾವು, ಚೆನ್ನಂಗಿ, ರಕ್ತ ಚಂದನ, ಗೇರು, ಕರಿಮತ್ತಿ, ಹೊಳೆ ಮತ್ತಿ, ಬಿಳಿ ಮತ್ತು ಕೆಂಪು ಎಕ್ಕಿ ಗಿಡಗಳು ಹೆಚ್ಚಾಗಿ ಬೆಳೆದಿವೆ. ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶ 13,488 ಹೆಕ್ಟೇರ್‌ ವನ್ಯಜೀವಿಧಾಮ, ಪ್ರಾದೇಶಿಕ ವಲಯ ಅರಣ್ಯಪ್ರದೇಶ 15,137 ಹೆಕ್ಟೇರ್‌, ಡೀಮ್ಡ್ ಫಾರೆಸ್ಟ್‌ 7272 ಹೆಕ್ಟೇರ್‌ ಇದೆ. ಒಟ್ಟು 37,897 ಹೆಕ್ಟೇರ್‌ ಪ್ರದೇಶದಿಂದ ಕೂಡಿದೆ. ಕುಂಚಾವರಂ ವನ್ಯಜೀವಿಧಾಮದ ವ್ಯಾಪ್ತಿಯ ಚಂದ್ರಂಪಳ್ಳಿ ಪ್ರವಾಸಿತಾಣವೆಂದು ಸರ್ಕಾರ ಘೋಷಣೆ ಮಾಡಿದರೂ ಪ್ರವಾಸಿಗರಿಗೆ ಯಾವುದೇ ಸೌ

ಲಭ್ಯಗಳಿಲ್ಲಕುಂಚಾವರಂ ವನ್ಯಜೀವಿಧಾಮದಲ್ಲಿ ಚಿರತೆ ಮತ್ತು ನೀಲಗಾಯಿ, ಕಾಡುಕೋಣ ಪತ್ತೆಯಾಗಿವೆ. ಅರಣ್ಯಸಿಬ್ಬಂದಿ ಸೇವೆಗೆ ಬಿಗಿಕ್ರಮ ಕೈಗೊಂಡಿದ್ದರಿಂದ ಕಾಡು ಪ್ರಾಣಿಗಳ ಸಂತತಿ ಹೆಚ್ಚುತ್ತಿರುವುದು ತುಂಬಾ ಖುಷಿತಂದಿದೆ. -ಸಂಜೀವಕುಮಾರ ಚವ್ಹಾಣ, ವಲಯ ಅರಣ್ಯಾಧಿಕಾರಿ, ಕುಂಚಾವರಂ

ವನ್ಯಜೀವಿಧಾಮಜಿಲ್ಲೆಯಲ್ಲಿಯೇ ಹೆಮ್ಮಪಡುವಂತಹ ಅರಣ್ಯಪ್ರದೇಶ ಚಿಂಚೋಳಿ ತಾಲೂಕಿನಲ್ಲಿದೆ. ಬೇರೆ ರಾಜ್ಯಗಳಲ್ಲಿ ವಾಸಿಸುವ ಕಾಡು ಪ್ರಾಣಿಗಳು ಕುಂಚಾವರಂ ವನ್ಯಜೀವಿಧಾಮದ ಪರಿಸರದಲ್ಲಿ ಬೆಳೆಯುತ್ತಿರುವುದು ಸಂತಸವಾಗುತ್ತಿದೆ. -ಅಜೀತ ಪಾಟೀಲ, ನಿರ್ದೇಶಕ, ಎಪಿಎಂಸಿ

ಐನೋಳಿ ಹತ್ತಿರವಿರುವ ಅರಣ್ಯಪ್ರದೇಶದಲ್ಲಿ ಅಪರೂಪದ ಕಾಡು ಪ್ರಾಣಿಗಳಾದ ಜಿಂಕೆ, ಮೊಲ,ನವಿಲು ಹೆಚ್ಚು ಕಾಣಿಸುತ್ತಿವೆ ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರೆ ಕುಂಚಾವರಂ ಕಾಡು ಮತ್ತು ಕಾಡುಪ್ರಾಣಿಗಳನ್ನು ಉಳಿಸುವುದು ಮತ್ತು ಬೆಳೆಸುವುದು ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ. -ದೀಪಕನಾಗ ಪುಣ್ಯಶೆಟ್ಟಿ , ಜಿಪಂ ಮಾಜಿ ಅಧ್ಯಕ್ಷ

ಕುಂಚಾವರಂ ವನ್ಯಜೀವಿಧಾಮವು ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಜಲಧಾರೆಗಳು ತುಂಬಿ ಹರಿಯುತ್ತವೆ. ಕಾಡು ಪ್ರಾಣಿಗಳು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಜಿಲ್ಲೆಗೆ ಮಾದರಿಯಾಗಿದೆ. ಪರಿಸರ ಮತ್ತು ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. -ಮಲ್ಲಿಕಾರ್ಜುನ ರುದನೂರ, ನಿರ್ದೇಶಕ, ಎಪಿಎಂಸಿ

-ಶಾಮರಾವ ಚಿಂಚೋಳಿ

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.