ಗ್ರಾಮ ಸುಧಾರಣೆಗೆ ವಿವೇಕ ಪಥ ಸಂಕಲ್ಪ


Team Udayavani, Apr 4, 2022, 9:33 AM IST

1patila

ಕಲಬುರಗಿ: ಮಹಾರಾಷ್ಟ್ರದ ಅಣ್ಣಾ ಹಜಾರೆ ಹಾಗೂ ಪೋಪಟರಾವ್‌ ಪವಾರ ತಮ್ಮ ಗ್ರಾಮಗಳನ್ನು ಇಡೀ ದೇಶದಲ್ಲೇ ಮಾದರಿ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸಲು ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿರುವುದೇ ಕಾರಣ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ಇಬ್ಬರು ಸಾಮಾಜಿಕ ಕ್ರಾಂತಿಕಾರರ ಹಾದಿಯಲ್ಲಿ ಸಣ್ಣದಾದ ಪ್ರಯತ್ನ ಮಾಡಿದರೆ ಸ್ವಲ್ಪ ಮಟ್ಟಿನಲ್ಲಾದರೂ ಬದಲಾವಣೆ ತರಲು ಸಾಧ್ಯವಿದೆ ಎಂಬುದನ್ನು ಸಾಧಿಸಲು ಗದಗದ ಸಾಮಾಜಿಕ ಚಳವಳಿಗಾರ, ಮಾಜಿ ಶಾಸಕ ಡಿ.ಆರ್‌. ಪಾಟೀಲ ಮುಂದಾಗಿದ್ದಾರೆ.

ಈಗಾಗಲೇ ವಿವೇಕ ಪಥ ಸಂಘಟನೆ ಮೂಲಕ ಕೆಲ ಗ್ರಾಮಗಲ್ಲಿ ಗ್ರಾಮ ಸುಧಾರಣೆ ನಿಟ್ಟಿನಲ್ಲಿ ಸಮಾಜ ಸುಧಾರಕ ಪೋಪಟರಾವ್‌ ಪವಾರ ಮತ್ತಿತರರನ್ನು ಕರೆಯಿಸಿ ಜಾಗೃತಿ ಅಭಿಯಾನ ಹಾಗೂ ಪರಿವರ್ತನಾ ಶಿಬಿರದ ಮೂಲಕ ಹೆಜ್ಜೆ ಇಡಲಾಗಿದೆ. ಮೊದಲು ಗದಗ ಜಿಲ್ಲೆಯಲ್ಲಿ ಗ್ರಾಮಾಭಿವೃದ್ಧಿ ಅಭಿಯಾನ ಯಶಸ್ವಿಯಾದ ನಂತರ ರಾಜ್ಯದ ಇತರ ಭಾಗದಲ್ಲಿ ಕಾರ್ಯೋನ್ಮುಖಗೊಳಿಸಲು ಮುಂದಾಗಲಿದೆ. ಗದಗದಲ್ಲಿ ಈ ಅಭಿಯಾನ ಯಶಸ್ವಿಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಅದೇ ರೀತಿ ಇತರ ಭಾಗದಲ್ಲೂ ಸಾಮಾಜಿಕ ಕಾರ್ಯಕರ್ತರು ಮುಂದಾದಲ್ಲಿ ತಮ್ಮ ಧ್ಯೇಯ ಹಾಗೂ ಪ್ರಯತ್ನ ಸಾರ್ಥವಾಗುತ್ತದೆ ಎನ್ನುತ್ತಾರೆ ಡಿ.ಆರ್‌. ಪಾಟೀಲ.

ಅಣ್ಣಾ ಹಜಾರೆ ತಮ್ಮ ರಾಣೇಗಾಂವ ಸಿದ್ಧಿ ಹಾಗೂ ಪೋಪಟರಾವ್‌ ಅವರು “ಹಿವರೇ ಬಜಾರ’ ಇಡೀ ವಿಶ್ವವೇ ನೋಡುವಂತೆ ಅಭಿವೃದ್ಧಿ ಹೊಂದಿದೆ. ಇದಕ್ಕೆ ಗ್ರಾಮಸ್ಥರಲ್ಲಿ ಕಾಯಕ ನಿಷ್ಠೆ, ಒಗ್ಗಟ್ಟು ಹಾಗೂ ರಾಜಕೀಯ ಎಳ್ಳು ಕಾಳಷ್ಟು ಇರದಿರುವುದೇ ಕಾರಣವಾಗಿದೆ. ಇದೇ ಮಾದರಿ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಗದಗ ತಾಲೂಕಿನ ಜಿಪಂ ಕ್ಷೇತ್ರಗಳಲ್ಲಿ ತಲಾ ಒಂದೊಂದು ಗ್ರಾಮ ಆಯ್ಕೆ ಮಾಡಿಕೊಂಡು ಗ್ರಾಮಸ್ಥರೆಲ್ಲರನ್ನು ಸೇರಿಸಿ ತಿಳಿವಳಿಕೆ ಮೂಡಿಸಿ ಮೊದಲನೆಯದಾಗಿ ವ್ಯಸನಮುಕ್ತಗೊಳಿಸಲು ಮುಂದಾಗಲಾಗುವುದು. ಗ್ರಾಮಸ್ಥರು ಒಗ್ಗಟ್ಟಾಗಿದರೆ ಏನೆಲ್ಲ ಸಾಧನೆ ಮಾಡಬಹುದು. ಮೊದಲು ನೀನು ಸುಧಾರಣೆಯಾಗು, ನಂತರ ಕುಟುಂಬ ಸುಧಾರಿಸಿ, ಬಳಿಕ ಗ್ರಾಮ ಸುಧಾರಣೆಗೆ ನಾಂದಿ ಹಾಡಬಹುದೆಂಬುದಾಗಿ ಮನವರಿಕೆ ಮಾಡಿಕೊಡುವುದು ತಮ್ಮ ಪಥದ ಪ್ರಥಮ ಧ್ಯೇಯವಾಗಿದೆ ಎಂದು ವಿವರಣೆ ನೀಡುತ್ತಾರೆ.

ಗ್ರಾಮ ಸುಧಾರಣೆ ಆಗಬೇಕೆಂದರೆ ಮೊದಲು ವ್ಯಸನಮುಕ್ತವಾಗಬೇಕು. ಸುಮ್ಮನೇ ಇಲ್ಲಸಲ್ಲದ್ದನ್ನು ಮುಂದೆ ಮಾಡಿಕೊಂಡು ವ್ಯಸನ ಅಳವಡಿಸಿಕೊಂಡು ಜೀವನ ಹಾಳಾಗಿಸಿಕೊಳ್ಳಬಾರದು. ಎಲ್ಲವೂ ಸರ್ಕಾರ ಮಾಡುತ್ತದೆ ಎಂದು ಕುಳಿತುಕೊಳ್ಳುವುದು ಸರಿಯಲ್ಲ. ಅಣ್ಣಾ ಹಜಾರೆ ಅವರ ರಾಣೇಗಾಂವ ಸಿದ್ಧಿ ಹಾಗೂ ಪೋಪಟರಾವ್‌ ಪವಾರ ಹಿವರೇ ಬಜಾರ ಒಂದೇ ದಿನದಲ್ಲಿ ಅಭಿವೃದ್ಧಿ ಹಾಗೂ ಎಲ್ಲ ವ್ಯವಹಾರಗಳಲ್ಲಿ ಸ್ವತಂತ್ರತೆ ಹೊಂದಿಲ್ಲ. ಇದಕ್ಕೆಲ್ಲ ತಪಸ್ಸು ಹಾಗೂ ಪ್ರಯತ್ನ ಕಾರಣವಾಗಿದೆ. ಇದೇ ಹಾದಿಯಲ್ಲಿ ಹೆಜ್ಜೆ ಇಡಲು ಉದ್ದೇಶಿಸಿ ಕಾರ್ಯೋನ್ಮುಖಗೊಳ್ಳಲಾಗಿದೆ ಎಂದು ಡಿ.ಆರ್‌. ಪಾಟೀಲ ತಿಳಿಸಿದ್ದಾರೆ.

ಯಾವುದಾರೂ ಸಾಮಾಜಿಕ ಕ್ರಾಂತಿ ನಿಟ್ಟಿನಲ್ಲಿ ಹೋರಾಟ ಮಾಡಲು ಮುಂದಾದರೆ ಆಯಾ ಗ್ರಾಮದಲ್ಲಿ ಎರಡು ಪಂಗಡಗಳಾಗುತ್ತವೆ. ಗ್ರಾಮಸ್ಥರ ಸಹಾಯವಿಲ್ಲದೇ ಪ್ರಮುಖ ಬದಲಾವಣೆ ತರಲು ಸಾಧ್ಯವಿಲ್ಲ. ಮೊದಲು ಒಗ್ಗಟ್ಟು ಮೂಡಿಸುವುದೇ ತಮ್ಮ ಧ್ಯೇಯ ಹಾಗೂ ಪ್ರಯತ್ನವಾಗಿದೆ. ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಈಗಾಗಲೇ ಹಲವು ಗ್ರಾಮಗಳನ್ನು ವ್ಯಸನಮುಕ್ತಗೊಳಿಸಿದ್ದಾರೆ. ಪೂಜ್ಯರ ಅಷ್ಠ ದಶಮಾನೋತ್ಸವ ಅಂಗವಾಗಿ ಕಳೆದ ಮಾರ್ಚ್‌ ಕೊನೆ ವಾರದಲ್ಲಿ ಚಾಲನೆ ನೀಡಲಾಗಿದೆ. ತಾವಂತೂ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದು, ಗ್ರಾಮಗಳಿಂದಲೇ ಬದಲಾವಣೆ ಹಾಗೂ ಅಭಿವೃದ್ಧಿ ಸಾಧ್ಯ ಎಂಬುದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾತ್ರ ನಮ್ಮದಾಗಿದೆ. ಈ ಕಾರ್ಯ ಯಶಸ್ವಿಗೊಳಿಸುವ ಮನಸ್ಸುಗಳು ಹೆಚ್ಚಾಗಲಿ ಎನ್ನುವ ಆಶಯವಿದೆ. -ಡಿ.ಆರ್‌. ಪಾಟೀಲ, ವಿವೇಕ ಪಥ ಸಂಘಟನೆ, ಗದಗ

-ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.