ದೇಶಕ್ಕೆ ಜೀವನ ಮುಡುಪಾಗಿಟ್ಟಿದ್ದ ನೇತಾಜಿ

ನೇತಾಜಿ ಇತಿಹಾಸ ಪಠ್ಯದಲ್ಲಿ ಸೇರಿಸಿಸ್ವಾತಂತ್ರ್ಯಕ್ಕಾಗಿ ವೈಭೋಗ-ಅಧಿಕಾರ ತ್ಯಜಿಸಿದ ಮಹಾನ್‌ ವ್ಯಕ್ತಿ

Team Udayavani, Jan 24, 2020, 10:35 AM IST

ಶಹಾಬಾದ: ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಪರಕೀಯರ ವಿರುದ್ಧ ತೊಡೆ ತಟ್ಟಿ ನಿಂತು ಭಾರತ ಮಾತೆಯನ್ನು ದಾಸ್ಯದಿಂದ ಪಾರು ಮಾಡುವ ಸಂಕಲ್ಪ ಕೈಗೊಂಡು ಅದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಭಾರತದ ವೀರ ಸೇನಾನಿ ನೇತಾಜಿ ಸುಭಾಶ್ಚಂದ್ರ ಬೋಸರು ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಹಣಮಂತ ಎಸ್‌.ಎಚ್‌ ಹೇಳಿದರು.

ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಆಲ್‌ ಇಂಡಿಯಾ ಡೆಮೋಕ್ರೆಟಿಕ್‌ ಸ್ಟೂಡೆಂಟ್ಸ್‌
ಆರ್ಗನೈಸೇಷನ್‌ ವತಿಯಿಂದ ಆಯೋಜಿಸಲಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್‌ರ 123ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೇತಾಜಿ ಐಸಿಎಸ್‌ನಲ್ಲಿ ಏಷ್ಯದ ನಾಲ್ಕನೆ ರ್‍ಯಾಂಕ್‌ನಲ್ಲಿ ಪಾಸಾಗಿದರು. ಆದರೆ ದೇಶದ ವಿಮೋಚನೆಗಾಗಿ ಆ ಸರ್ಟಿಫಿಕೆಟ್‌ ಹರಿದು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು. ಮುಂದೆ ಐ.ಎನ್‌.ಎ ಆರ್ಮಿ ಕಟ್ಟಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅವರ ಧರ್ಮನೀರಪೇಕ್ಷ, ಪ್ರಜಾತಾಂತ್ರಿಕ ವಿಚಾರಗಳನ್ನು ಎತ್ತಿಹಿಡಿದರು. ಆದರೆ ಇವತ್ತಿನ ಸರಕಾರಗಳು ಅವರ ವಿಚಾರಗಳನ್ನು ಮರೆಮಾಚುತ್ತಿವೆ. ನೇತಾಜಿ ನೈಜ ಇತಿಹಾಸ ಪಠ್ಯದಲ್ಲಿ ಸೇರಿಸಿ ಎಂದು ಆಗ್ರಹಿಸಿದರು.

ಎಸ್‌ಯುಸಿಐ ಸದಸ್ಯ ಜಗನ್ನಾಥ ಎಸ್‌.ಹೆಚ್‌ ಮಾತನಾಡಿ, ಸುಭಾಷರು ತಮ್ಮ
23ನೇ ವಯಸ್ಸಿನಲ್ಲಿಯೇ ಐಸಿಎಸ್‌ ಪರೀಕ್ಷೆ ಪಾಸು ಮಾಡಿದರು. ಇವರಿಗೆ ದೇಶದಲ್ಲಿಯೇ ಉನ್ನತವಾದ ಅಧಿಕಾರವುಳ್ಳ ನೌಕರಿ, ಜೊತೆಗೆ ಹಲವಾರು ಸರಕಾರಿ ಸೌಲಭ್ಯಗಳು ಮತ್ತು ವೈಭಯುತವಾದ ಜೀವನ ಸಿಗುತ್ತಿತ್ತು. ಆದರೆ ಅವರಿಗೆ ಈ ಎಲ್ಲ ವೈಭೋಗಗಳು ಭಾರತದ ಸ್ವಾತಂತ್ರ್ಯದ ಮುಂದೆ ತೃಣ ಸಮಾನವಾಗಿ ಕಂಡವು ಎಂದರು.

ಎಐಡಿಎಸ್‌ಒ ಅಧ್ಯಕ್ಷ ತುಳಜಾರಾಮ ಎನ್‌. ಕೆ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಮಶೋದ್ದಿನ್‌ ಪಟೇಲ್‌, ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಯೇಮನಾಥ ರಾಠೊಡ, ಭಾರತ ಉಳಿಸಿ ಸಮಿತಿಯ ಮಸ್ತಾನ ಪಟೇಲ್‌, ರಮೇಶ ದೇವಕರ, ರಾಘವೇಂದ್ರ ಜಿ.ಮಾನೆ, ಕಿರಣ, ತೇಜಸ್‌, ಪ್ರಕಾಶ, ಸಾಕ್ಷಿ, ಅಶ್ವಿ‌ನಿ, ಪಲ್ಲವಿ, ಸಿದ್ಧು ಚೌಧರಿ, ತಿಮ್ಮಯ್ಯ ಮಾನೆ, ನೀಲಕಂಠ ಹುಲಿ, ಶ್ರೀನಿವಾಸ, ರೇಣುಕಾ, ಅರ್ಪಿತಾ, ಪ್ರವೀಣ, ಓಂಕಾರ ಮತ್ತಿತರರು ಇದ್ದರು. ಬೆಳಗ್ಗೆ ವಿವಿಧ ಶಾಲೆಯ ವಿದ್ಯಾರ್ಥಿಗಲಿಂದ ನೇತಾಜಿ ಸುಭಾಶ್ಚಂದ್ರ ಬೋಸ್‌ ಭಾವಚಿತ್ರದ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ಪ್ರಭಾತ ಪೇರಿ ನಡೆಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ