ಮಡಿಕೇರಿ: ಎಮ್ಮೆಮಾಡು ಮಖಾಂ ಉರೂಸ್ಗೆ ಚಾಲನೆ
Team Udayavani, Feb 25, 2023, 6:07 AM IST
ಮಡಿಕೇರಿ: ಸೂಫಿ ಶಹೀದ್ (ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ) ಮತ್ತು ಇತರ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಎಮ್ಮೆಮಾಡು ಮಖಾಂ ಉರೂಸ್ಗೆ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಸಖಾಫಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.
ಧ್ವಜಾರೋಹಣಕ್ಕೂ ಮೊದಲು ಸಾಮೂಹಿಕ ನಮಾಜಿನ ಬಳಿಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಲಾಯಿತು.
ಉರೂಸ್ನ್ನು ಕೋಝಿಕೋಡ್ ಖಾಝಿಗಳಾದ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೆಲಿ ತಂಘಳ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೊಡಗಿನ ನಾಯಿಬ್ ಖಾಝಿ ಶಾದುಲಿ ಫೈಝಿ ವಹಿಸಿದ್ದು, ಸಂಜೆ ಶಾಫಿ ಸಖಾಫಿ ಮುಂಡಂಬ್ರ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು.