Udayavni Special

ಮೊರೆಯಿಟ್ಟರೂ ರಕ್ಷಣೆಗೆ ತಕ್ಷಣ ಯಾರೂ ಬರಲಿಲ್ಲ


Team Udayavani, Aug 23, 2018, 6:00 AM IST

harish.jpg

ಮಡಿಕೇರಿ: ಮನೆಯ ಸುತ್ತಲೂ ಗುಡ್ಡ ಕುಸಿದಿದೆ, ಸಂಪರ್ಕ ರಸ್ತೆಗಳು ಕಡಿತವಾಗಿದೆ, ಪೊಲೀಸರ ಸಹಿತ ಯಾರಿಗೆ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು ಎಂದು ಪಣತೊಟ್ಟು ಮನೆಬಿಟ್ಟು ತೋಟದ ದಾರಿಯಲ್ಲೇ ನಡೆದು ಜೀವ ಉಳಿಸಿಕೊಂಡೆವು.

ಇದು ಹಾಲೇರಿ ಸುತ್ತಮುತ್ತಲಿನ ನಿವಾಸಿಗಳು ಬದುಕುಳಿದ ಕಥೆ.

ನಮ್ಮನ್ನು ಯಾರೂ ರಕ್ಷಿಸಿಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಂಡಿದ್ದೇವೆ. ಸುಂಟಿಕೊಪ್ಪದ ಗ್ರಾಮಸ್ಥರು ನಮ್ಮನ್ನು ರಕ್ಷಿಸಿದ್ದಾರೆ. ನಮ್ಮ ಮನೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿರಲಿಕ್ಕಿಲ್ಲ. ಆದರೆ, ಜಮೀನು ಸಂಪೂರ್ಣ ನಾಶವಾಗಿದೆ. ಗುಡ್ಡ ಕುಸಿದು ಜಮೀನನ ಮೇಲೆ ಬಿದ್ದಿದೆ. ಹಾಲೇರಿ ಸುತ್ತಮುತ್ತಲು ಸುಮಾರು 300 ಮನೆಯಲ್ಲಿ 700 ರಿಂದ 800 ಜನ ವಾಸವಾಗಿದ್ದೆವು. ಇನ್ಮುಂದೆ ಅಲ್ಲಿ ವಾಸ ಮಾಡುವುದು ಕಷ್ಟ. ಸರ್ಕಾರವೇ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ಯುವಕ ಹರೀಶ್‌ ನೋವು ತೋಡಿಕೊಂಡರು.

ಕಳೆದ ಬುಧವಾರ ಮಧ್ಯಾಹ್ನ ವೇಳೆಗೆ ಗುಡ್ಡ ಕುಸಿಯುತ್ತಿರುವುದು ಕಂಡು ಬಂದಿತ್ತು. ಅಷ್ಟೋತ್ತಿಗೆ ನಮ್ಮ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಕಡಿತವಾಗಿತ್ತು. ಎಲ್ಲರೂ ಮನೆ ಬಿಟ್ಟು ಸಮೀಪದ ಶಾಲೆ ಹಾಗೂ ಸಹಕಾರಿ ಸಂಘದ ಸಭಾಂಗಣದಲ್ಲಿ ಬಂದು ಸೇರಿದ್ದೆವು. ಬುಧವಾರ ಸಂಜೆಯಿಂದ ಪೊಲೀಸರು, ಜಿಲ್ಲಾಡಳಿತ  ಸೇರಿದಂತೆ ಅನೇಕರಿಗೆ ಕರೆ ಮಾಡಿದೆವು ಯಾರೂ ಸ್ಪಂದಿಸಿಲ್ಲ. ರಾತ್ರಿಪೂರ್ತಿ ಮನೆ ಬಿಟ್ಟು ಶಾಲೆಯ ಆವರಣದಲ್ಲಿ ಭಯದಲ್ಲೇ ಕಳೆದಿದ್ದೆವು. ವಿದ್ಯುತ್‌ ಇಲ್ಲದೇ ಟೈರ್‌ಗೆ ಬಿಂಕಿ ಹಾಕಿಕೊಂಡು ಜಾಗರಣೆ ಮಾಡಿದ್ದೆವು ಎಂದು ವಿವರಿಸಿದರು.ನಮ್ಮ ಕಷ್ಟಕ್ಕೆ ಇನ್ನು ಯಾರು ಬರುವುದಿಲ್ಲ ಎಂದು ಭಾವಿಸಿ  ನಾವೇ ರಕ್ಷಿಸಿಕೊಳ್ಳಬೇಕು ಎಂದು ಪಣತೊಟ್ಟು 30-35 ಯುವಕರು ಒಟ್ಟಾಗಿ ಮೊದಲಿಗೆ 200-250 ಮಹಿಳೆಯನ್ನು  ಸುರಕ್ಷಿತ ಜಾಗಕ್ಕೆ ತಲುಪಿಸಿದೆವು. ಅವರ ಜತೆಗೆ 70ರಿಂದ80 ಮಕ್ಕಳಿದ್ದರು. ಅವರನ್ನು ಸುರಕ್ಷಿತ ಪ್ರದೇಶಕ್ಕೆ ತಲುಸಿದ ನಂತರವೇ ನಾವೆಲ್ಲರೂ ಒಟ್ಟಾಗಿ ಮನೆ ಖಾಲಿ ಮಾಡಿದೆವು. ಈಗ ನಾವೆಲ್ಲರೂ ಸುರಕ್ಷಿತವಾಗಿ ಸುಂಟಿಕೊಪ್ಪದ ವಿವಿಧ ನಿರಾಶ್ರಿತರ ಶಿಬಿರದಲ್ಲಿದ್ದೇವೆ ಎಂದು ಹಾಲೇರಿ ರವಿ, ಮೊಹ್ಮದ್‌ ಸೀರಾಜ್‌ ಮಾಹಿತಿ ನೀಡಿದರು.

ಶವಪತ್ತೆ :
ಕಾಟೆYàರಿಯಲ್ಲಿ ಗುಡ್ಡಿ ಕುಸಿತಕ್ಕೆ ಸಿಲುಕಿದ್ದ ಪವನ್‌(36) ಎಂಬುವರ ಶವವನ್ನು ಬುಧವಾರ ಮಧ್ಯಾಹ್ನ ಪತ್ತೆ ಹಚ್ಚಲಾಗಿದೆ. ಕಳೆದ ಎಳು ದಿನಗಳಿಂದ ಮಣ್ಣಿನ ಅಡಿಯಲ್ಲೇ ಇದ್ದ ಶವನ್ನು ಎನ್‌ಡಿಆರ್‌ಎಫ್ ಹಾಗೂ ಸೇವಾಭಾರತಿ ತಂಡದ ಜಂಟಿ ಕಾರ್ಯಚರಣೆ ನಡೆಸಿ ನೂರು ನೂರೈವತ್ತು ಅಡಿ ಆಳದಲ್ಲಿದ್ದ ಶವವನ್ನು ಮೇಲೇತ್ತಿದ್ದಾರೆ. ಗುಡ್ಡ ಕುಸಿತದ ಸಂದರ್ಭದಲ್ಲಿ ಮನೆಯಿಂದ ಆಚೆ ಬರುವಾಗ ಮಣ್ಣೊಳಗೆ ಸಿಲುಕಿಕೊಂಡಿದ್ದ ಪವನ್‌ ಇಷ್ಟು ದಿನವಾದರೂ ಸಿಕ್ಕಿರಲಿಲ್ಲ. ಅವರ ಪತ್ನಿ ಹಾಗೂ ಪುಟ್ಟ ಮಗು ನಿರಾಶ್ರಿತರ ಕೇಂದ್ರದಲ್ಲಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಮೋಘ ಗೆಲುವು ಸಾದಿಸಿದ ಆರ್ ಸಿ ಬಿ

ಚಹಾಲ್ ಬಿಗಿ ಬೌಲಿಂಗ್; 10 ರನ್ ಗಳ ಅಮೋಘ ಗೆಲುವು ಸಾಧಿಸಿದ ಆರ್ ಸಿ ಬಿ

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್

CSKಧೋನಿ – ಸ್ಮಿತ್‌ ತಂಡಗಳ ಮೇಲಾಟ

ಧೋನಿ – ಸ್ಮಿತ್‌ ತಂಡಗಳ ಮೇಲಾಟ

ಪಡಿಕ್ಕಲ್ ಅರ್ಧ ಶತಕದ ಆಟ ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 160 ರ ಗುರಿ

ಪಡಿಕ್ಕಲ್ ಅರ್ಧ ಶತಕದ ಆಟ ; ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 164 ರ ಗುರಿ

50ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತ; ಎಕರೆಗಟ್ಟಲೆ ಗದ್ದೆ ಜಲಾವೃತ

ನೆರೆಗೆ ದ್ವೀಪವಾದ ನಾವುಂದದ ಸಾಲ್ಪುಡಾ; ಜನಜೀವನ ಸ್ತಬ್ಧ

ಹುಣಸೂರು: ಜಿಂಕೆ ಮಾಂಸ ಅಕ್ರಮ ಸಾಗಾಟ; ಇಬ್ಬರ ಬಂಧನ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ; ಜಿಂಕೆ ಮಾಂಸ ಅಕ್ರಮ ಸಾಗಾಟ; ಇಬ್ಬರ ಬಂಧನ

ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ

ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜನಗರ ಪಟ್ಟಣ ಪಂಚಾಯತ್ ನ ನೂತನ ಸದಸ್ಯ ಕೋವಿಡ್ ಸೋಂಕಿನಿಂದ ಸಾವು

ಚಾಮರಾಜನಗರ ಪಟ್ಟಣ ಪಂಚಾಯತ್ ನ ನೂತನ ಸದಸ್ಯ ಕೋವಿಡ್ ಸೋಂಕಿನಿಂದ ಸಾವು

ಮಂಡ್ಯ ಜಿಲ್ಲೆಯಲ್ಲಿ 102 ಮಂದಿಗೆ ಕಾವಿಡ್ ಪಾಸಿಟಿವ್! 424 ಮಂದಿ ಡಿಸ್ಚಾರ್ಜ್; ಇಬ್ಬರು ಸಾವು

ಮಂಡ್ಯ ಜಿಲ್ಲೆಯಲ್ಲಿ 102 ಮಂದಿಗೆ ಕೋವಿಡ್ ಪಾಸಿಟಿವ್! 424 ಮಂದಿ ಡಿಸ್ಚಾರ್ಜ್; ಇಬ್ಬರು ಸಾವು

ಬೆಂಗಳೂರು ರೋಸ್ ಆನಿಯನ್ ರಫ್ತು ನಿರ್ಭಂದ ತೆಗೆಯುವಂತೆ ಕೇಂದ್ರಕ್ಕೆ ಪತ್ರ

ಬೆಂಗಳೂರು ರೋಸ್ ತಳಿಯ ಈರುಳ್ಳಿ ರಫ್ತು ನಿರ್ಭಂದ ತೆಗೆಯುವಂತೆ ಕೇಂದ್ರಕ್ಕೆ ಪತ್ರ

ಡ್ರಗ್ ಮಾಫಿಯಾ : ರಾಗಿಣಿ, ಸಂಜನಾ ಜಾಮೀನು ಅರ್ಜಿ ಸೆ. 24ಕ್ಕೆ ಮುಂದೂಡಿಕೆ

ಡ್ರಗ್ ಮಾಫಿಯಾ : ರಾಗಿಣಿ, ಸಂಜನಾ ಜಾಮೀನು ಅರ್ಜಿ ಸೆ. 24ಕ್ಕೆ ಮುಂದೂಡಿಕೆ

ಆರು ದಿನಗಳಿಗೆ ವಿಧಾನಮಂಡಲ ಅಧಿವೇಶನ ಮುಕ್ತಾಯ ಮಾಡಲು ನಿರ್ಧಾರ

ಆರು ದಿನಗಳಿಗೆ ವಿಧಾನಮಂಡಲ ಅಧಿವೇಶನ ಮುಕ್ತಾಯ ಮಾಡಲು ನಿರ್ಧಾರ

MUST WATCH

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತಹೊಸ ಸೇರ್ಪಡೆ

ಅಮೋಘ ಗೆಲುವು ಸಾದಿಸಿದ ಆರ್ ಸಿ ಬಿ

ಚಹಾಲ್ ಬಿಗಿ ಬೌಲಿಂಗ್; 10 ರನ್ ಗಳ ಅಮೋಘ ಗೆಲುವು ಸಾಧಿಸಿದ ಆರ್ ಸಿ ಬಿ

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್

CSKಧೋನಿ – ಸ್ಮಿತ್‌ ತಂಡಗಳ ಮೇಲಾಟ

ಧೋನಿ – ಸ್ಮಿತ್‌ ತಂಡಗಳ ಮೇಲಾಟ

ಪಡಿಕ್ಕಲ್ ಅರ್ಧ ಶತಕದ ಆಟ ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 160 ರ ಗುರಿ

ಪಡಿಕ್ಕಲ್ ಅರ್ಧ ಶತಕದ ಆಟ ; ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 164 ರ ಗುರಿ

50ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತ; ಎಕರೆಗಟ್ಟಲೆ ಗದ್ದೆ ಜಲಾವೃತ

ನೆರೆಗೆ ದ್ವೀಪವಾದ ನಾವುಂದದ ಸಾಲ್ಪುಡಾ; ಜನಜೀವನ ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.