ಹೆದ್ದಾರಿ ರಸ್ತೆ ವಿಭಜಕ ನಾಶ: ಅಧಿಕಾರಿಗಳ ಮೌನ

Team Udayavani, Jan 26, 2022, 2:41 PM IST

ಹೆದ್ದಾರಿ ರಸ್ತೆ ವಿಭಜಕ ನಾಶ: ಅಧಿಕಾರಿಗಳ ಮೌನ

ಮುಳಬಾಗಿಲು: ಕೇಂದ್ರ ಸರ್ಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ಜನರ ಅನುಕೂಲಕ್ಕಾಗಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗ್ರಾಮಸ್ಥರು ತಮ್ಮ ಗ್ರಾಮಗಳ ಗೇಟ್‌ಗಳಲ್ಲಿ ರಸ್ತೆ ದಾಟಲು ಅಕ್ರಮವಾಗಿ ಕೊರೆದು ಸೃಷ್ಟಿಸಿಕೊಂಡಿರುವ ರಸ್ತೆ ವಿಭಜಕಗಳು ಅಪಘಾತ ಸೃಷ್ಟಿಸುವ ರಸ್ತೆಗಳಾಗಿ ಪರಿವರ್ತನೆಯಾಗುತ್ತಿವೆ.

ಶುಲ್ಕ ವಸೂಲಿ: ತಾಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿಯನ್ನು ಕೇಂದ್ರ ಸರ್ಕಾರ ಮೇಲ್ದಜೇಗೇರಿಸಲು ಉದ್ದೇಶಿಸಿ ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳು ಚುತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲು ಕ್ರಮ ಕೈಗೊಂಡಿದ್ದರು. ಅದರಂತೆ 2013ರಲ್ಲಿ ಲ್ಯಾಂಕೋಕಂಪನಿ ಹೊಸಕೋಟೆಯಿಂದ ಮುಳಬಾಗಿಲು ನಗರದ ಮದರಸಾವರೆಗೂ ನಿರ್ಮಿಸಿ ಹೆದ್ದಾರಿ ಅಭಿವೃದ್ಧಿಗಾಗಿ ವ್ಯಯವಾಗಿರುವ ಹಣವನ್ನು ವಸೂಲಿ ಮಾಡಲು ದೇವರಾಯಸಮುದ್ರ ಬಳಿ ಟೋಲ್‌ ನಿರ್ಮಿಸಿದ್ದಾರೆ.

ಅಂತೆಯೇ ಎರಡನೇ ಹಂತವಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಭಾರತಸರ್ಕಾರದ ಅನುಸಾರ ಜೆಎಸ್‌ಆರ್‌ ಟೋಲ್‌ವೇಸ್‌  ಪ್ರೈವೇಟ್‌ ಲಿಮಿಟೆಡ್‌ ಕಂಪನಿ ರಾ.ಹೆ.75ರ ಮುಳ ಬಾಗಿಲು ನಗರದ ಮದರಸಾದಿಂದ ಕರ್ನಾಟಕ ಗಡಿಭಾಗದ ವರೆಗೆ 2015ರಲ್ಲಿ ಚುತುಷ್ಪಥ ರಸ್ತೆ ನಿರ್ಮಿಸಿದ್ದು ಹೆದ್ದಾರಿ ಬಳಕೆಗಾಗಿ ಬಳಕೆದಾರ ಶುಲ್ಕಸಂಗ್ರಹಿಸಲು ಗಡಿ ರೇಖೆಯಿಂದ 500 ಮೀ ದೂರದ ಎನ್‌. ಯಲುವಹಳ್ಳಿ ಬಳಿ ಟೋಲ್‌ ಪ್ಲಾಜಾ ನಿರ್ಮಿಸಿ ಶುಲ್ಕ ವಸೂಲಿ ಮಾಡುತ್ತಿದೆ.

ಲ್ಯಾಂಕೋ ಹೊಸಕೋಟೆ ಕಂಪನಿ ಮುಳಬಾಗಿಲು ತಾಲೂಕಿನಲ್ಲಿ ತಂಬಿಹಳ್ಳಿ ಪಾಲಾರ್‌ ಸೇತುವೆಯಿಂದ ನಗರದ ಮದರಸಾವರೆಗೂ ಚತುಷ್ಪಥ ರಸ್ತೆಯುಳ್ಳಹೆದ್ದಾರಿ ನಿರ್ಮಿಸಿದೆ. ಅಂತೆಯೇ ವಿವಿಧ ಗ್ರಾಮಗಳಗೇಟ್‌ಗಳ ಬಳಿ ಗ್ರಾಮಸ್ಥರು ಒಂದು ಕಡೆಯಿಂದ ಮತ್ತೂಂದು ಕಡೆ ರಸ್ತೆ ದಾಟಲು ರಸ್ತೆ ವಿಭಜಕನಿರ್ಮಿಸಲಾಗಿದೆ. ಆದರೆ ಅದರ ನಡುವೆಯೂ ನಲ್ಲೂರು ಕ್ರಾಸ್‌, ಕಮ್ಮದಟ್ಟಿ, ಕಾಮನೂರು, ಪಂಚವಟಿಫಾರ್ಮ್, ಕುರುಬರಹಳ್ಳಿ ಗೇಟ್‌, ಜಮ್ಮನಹಳ್ಳಿ ಗೇಟ್‌ಬಳಿ ಎರಡು ಕಡೆ, ದೊಡ್ಡಮಾದೇನಹಳ್ಳಿ ಗೇಟ್‌ಗಳಲ್ಲಿಜನ ವಾಹನಗಳಲ್ಲಿ ರಸ್ತೆ ದಾಟಲು ಮಧ್ಯದಲ್ಲಿನ ರಸ್ತೆ ವಿಭಜಕವನ್ನು ಅಕ್ರಮವಾಗಿ ಕೊರೆದು ದಾರಿ ಮಾಡಿಕೊಂಡಿದ್ದಾರೆ.

ಅಕ್ರಮವಾಗಿ ಕೊರೆದ ಅಧಿಕಾರಿಗಳು: ಜೆಎಸ್‌ಆರ್‌ ಕಂಪನಿ ಮದರಸಾದಿಂದ ಕರ್ನಾಟಕ ಗಡಿಭಾಗದವರೆಗೆ ಸುಮಾರು 15 ಕಿ.ಮೀ. ರಾಷ್ಟ್ರೀಯಹೆದ್ದಾರಿ 75ರ ಚತುಷ್ಪಥ ರಸ್ತೆ ನಿರ್ಮಿಸಿದೆ. ಆದರೆಸೀಗೇನಹಳ್ಳಿ, ಅಲಾಲಸಂದ್ರ, ಎನ್‌.ವೆಂಕಟಾಪುರ,ಹಳೇಕುಪ್ಪ ಸೇರಿ ನಂಗಲಿಯಿಂದ ಮುದಿಗೆರೆ ಕ್ರಾಸ್‌ ವರೆಗೆ ವಿವಿಧ ಗ್ರಾಮಗಳ ಜನರು ರಸ್ತೆ ವಿಭಜಕವನ್ನು ಅಕ್ರಮವಾಗಿ ಕೊರೆದು ರಸ್ತೆ ದಾಟುತ್ತಿದ್ದಾರೆ.

ಸಿಮೆಂಟ್‌ ದಿಮ್ಮಿಗಳಿಂದ ಮುಚ್ಚಿದ್ದರೂ ಕೊರೆತ :  ಹೆದ್ದಾರಿಯಲ್ಲಿ 24 ಗಂಟೆ ವಾಹನ ಶರವೇಗದಿಂದ ಸಂಚರಿಸುತ್ತಿರುತ್ತವೆ. ಆದರೆ, ಹಳ್ಳಿಗಳ ಜನ ಹೆದ್ದಾರಿ ಯಲ್ಲಿ ವಿಭಜಕದ ಮೂಲಕ ಹಠಾತ್‌ ಆಗಿ ಒಂದು ಕಡೆಯಿಂದ ಮತ್ತೂಂದು ಕಡೆ ವಾಹನ ನುಗ್ಗಿಸಿದಾಗಎದುರುಗಡೆಯಿಂದ ವೇಗವಾಗಿ ಬರುವ ವಾಹನ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿವೆ. ಸಾಕಷ್ಟು ಜನಮೃತಪಟ್ಟು ಮತ್ತೂ ಕೆಲವರು ಗಾಯಗೊಂಡಿರುವ ಘಟನೆಗಳು ನಡೆದಿವೆ. ಹೆಚ್ಚು ಅಪಘಾತಗಳುಉಂಟಾಗುತ್ತಿದ್ದ ದೊಡ್ಡ ಮಾದೇನಹಳ್ಳಿ, ನಲ್ಲೂರು ಕ್ರಾಸ್‌, ಕಮದಟ್ಟಿ-ಕಾಮನೂರು ಕಡೆ ಈ ಹಿಂದೆ ಕೊರೆಯಲಾಗಿದ್ದ ರಸ್ತೆ ವಿಭಜಕಗಳನ್ನು ಕಬ್ಬಿಣದ ಬ್ಯಾರಿಕೇಡ್‌ ಮತ್ತು ಸಿಮೆಂಟ್‌ ದಿಮ್ಮಿಗಳಿಂದ ಮುಚ್ಚಲಾಗಿದ್ದರೂ ಜನ ಅದರ ಪಕ್ಕದಲ್ಲಿಯೇ ಕೊರೆದು ಬೈಕ್‌ಗಳಲ್ಲಿ ಸಂಚರಿಸ್ತುದ್ದಾರೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ.

ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ವಿವಿಧಗೇಟ್‌ಗಳಲ್ಲಿ ಜನ ಅಕ್ರಮವಾಗಿ ರಸ್ತೆ ವಿಭಜಕ ಕೊರೆದು ದಾರಿ ಮಾಡಿಕೊಂಡಿದ್ದಾರೆ.ಈ ದಾರಿಗಳ ಮೂಲಕ ಸಂಚರಿಸುವಾಗವೇಗವಾಗಿ ಬರುವ ವಾಹನಗಳು ಅಪಘಾತ ಕ್ಕೀಡಾಗುತ್ತಿವೆ. ಹೀಗಾಗಿ ಹೆದ್ದಾರಿ ಅಧಿಕಾರಿ ಗಳು ಕೂಡಲೇ ಕ್ರಮ ಕೈಗೊಳ್ಳಬೇಕು. -ರಾಮಚಂದ್ರ, ಟ್ಯಾಕ್ಸಿ ಚಾಲಕ

ಹೆದ್ದಾರಿಯಲ್ಲಿ ಇಂತಹ ಕೃತ್ಯಗಳಿಂದ ಉಂಟಾಗುತ್ತಿರುವ ಅಪಘಾತತಪ್ಪಿಸಲು ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. -ಉಕೇಶ್‌ಕುಮಾರ್‌, ಪ್ರಭಾರಿ ಡೀಸಿ

-ಎಂ.ನಾಗರಾಜಯ್ಯ

ಟಾಪ್ ನ್ಯೂಸ್

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

astrology

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

4 ತಿಂಗಳ ಗಾಢ ಕತ್ತಲೆಯಲ್ಲಿ ವಿಜ್ಞಾನಿಗಳ ವಾಸ!

4 ತಿಂಗಳ ಗಾಢ ಕತ್ತಲೆಯಲ್ಲಿ ವಿಜ್ಞಾನಿಗಳ ವಾಸ!

3 ಹುಲಿ ಮರಿಗಳಿಗೆ ತಾಯಿಯಾದ ನಾಯಿ-ವಿಡಿಯೋ ವೈರಲ್

ಈ 3 ಹುಲಿ ಮರಿಗಳಿಗೆ ನಾಯಿಯೇ “ತಾಯಿ’!-ವಿಡಿಯೋ ವೈರಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ ಆರ್ಭಟಕ್ಕೆ ನಷ್ಟವಾಗಿರುವ ಬೆಳೆ ಸಮೀಕ್ಷೆ ನಡೆಸಿ

ಮಳೆ ಆರ್ಭಟಕ್ಕೆ ನಷ್ಟವಾಗಿರುವ ಬೆಳೆ ಸಮೀಕ್ಷೆ ನಡೆಸಿ

ಅಧಿಕಾರಿಗಳ ಕಿರುಕುಳ: ಆತ್ಮಹತ್ಯೆಗೆ ರೈತರ ನಿರ್ಧಾರ

ಅಧಿಕಾರಿಗಳ ಕಿರುಕುಳ: ಆತ್ಮಹತ್ಯೆಗೆ ರೈತರ ನಿರ್ಧಾರ

Untitled-1

ಪತ್ರಕರ್ತರ ಹೊರಗಿಟ್ಟು ಕೆಡಿಪಿ ಸಭೆ ನಡೆಸಿದ ಸಚಿವ

Untitled-1

ಕೆಡಿಪಿ ಸಭೆಯನ್ನೇ ನಡೆಸದ ಉಸ್ತುವಾರಿ ಸಚಿವ!

Untitled-1

ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಭಿನ್ನಮತ ಬಿಸಿ

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

astrology

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.