2 ಕೆರೆಗಳಲ್ಲಿ ಪ್ರಾಯೋಗಿಕ ಏರಿಯೇಟರ್‌ ಅಳವಡಿಕೆ

ಕೆ.ಸಿ ವ್ಯಾಲಿ ನೀರು ನೈಸರ್ಗಿಕ ನೀರು ಶುದ್ಧೀಕರಣ

Team Udayavani, Oct 4, 2020, 3:08 PM IST

2 ಕೆರೆಗಳಲ್ಲಿ ಪ್ರಾಯೋಗಿಕ ಏರಿಯೇಟರ್‌ ಅಳವಡಿಕೆ

ಕೋಲಾರ ತಾಲೂಕಿನ ನರಸಾಪುರಕೆರೆಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ಏರಿಯೇಟರ್‌ಗಳಿಂದ ನೀರು ಚಿಮ್ಮುತ್ತಾ ಶುದ್ಧೀಕರಣ ಕಾರ್ಯ ನಡೆಯುತ್ತಿರುವುದು. ಕೆರೆಯನ್ನುಕ್ರಮೇಣ ಆಕ್ರಮಿಸುತ್ತಿರುವ ಜೊಂಡನ್ನು ಗಮನಿಸಬಹುದು

ಕೋಲಾರ: ಜಿಲ್ಲೆಗೆಕೆ.ಸಿ.ವ್ಯಾಲಿ ನೀರು ಹರಿಯುವ ಎರಡು ಕೆರೆಗಳಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ನೈಸರ್ಗಿಕವಾಗಿ ನೀರು ಶುದ್ಧೀಕರಿಸುವ ಏರಿಯೇಟರ್‌ಗಳನ್ನು ಪ್ರಾಯೋಗಿಕವಾಗಿ ಅಳವಡಿಸಿದ್ದಾರೆ.

ಪರಿಸರವಾದಿ ಕೆ.ಎನ್‌.ತ್ಯಾಗರಾಜು ನೀಡಿದ ಸಲಹೆ ಮೇರೆಗೆಕೋಲಾರ ತಾಲೂಕಿನ ನರಸಾಪುರ ಹಾಗೂ ಚೌಡದೇನಹಳ್ಳಿ ಕೆರೆಯಲ್ಲಿ ಏರಿಯೇಟರ್‌ ಅಳವಡಿಸುವ ಮೂಲಕ ಅಧಿಕಾರಿಗಳು ಪ್ರಾಯೋಗಿಕ ಅನುಷ್ಠಾನ ಮಾಡಿದ್ದಾರೆ. ಕೆರೆಯ ಮಧ್ಯ ಭಾಗದಲ್ಲಿ ನೀರು ಬುಗ್ಗೆಯಂತೆ ಚಿಮ್ಮುತ್ತಿರುವುದನ್ನು ಗಮನಿಸಿದ ಸಾರ್ವ ಜನಿಕರು ಇದು ಅಂತರ್ಜಲ ತುಂಬಿ ಉಕ್ಕುತ್ತಿರು ವುದು ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಖ್ಯಾನಿಸಿಕೊಂಡಿದ್ದರು. ಆದರೆ, ಇದು ಕೆ.ಸಿ. ವ್ಯಾಲಿ ನೀರನ್ನು ಶುದ್ಧೀಕರಿಸುವ ಭಾಗವಾಗಿ ಅಳವಡಿಸಿರುವ ಏರಿಯೇಟರ್‌ಗಳೆಂದು ತ್ಯಾಗರಾಜು ಸ್ಪಷ್ಟಪಡಿಸಿದ್ದಾರೆ.

ಐಸಿಂತ್ಯಾ(ಜೊಂಡು) ತಡೆಗಟ್ಟಿ ಕೆ.ಸಿ. ವ್ಯಾಲಿ ನೀರು ನಿಂತಿರುವ ನರಸಾಪುರ ಮತ್ತು ಕೆಲವಾರು ಕೆರೆಗಳಲ್ಲಿ ಐಸಿಂತ್ಯಾ ಎಂದು ಕರೆಯಲ್ಪಡುವ ಜೊಂಡು ಬೆಳೆಯುತ್ತಿದೆ. ಇದು ಮಳೆಗಾಲದಲ್ಲಿ ಗಂಟೆಗೆ 9 ಲೀಟರ್‌ ನೀರನ್ನು ಕುಡಿಯುತ್ತದೆ. ‌ ಏರಿಯೇಟರ್‌ಗಳನ್ನುಅಳವಡಿಸುವುದರಿಂದಮಳೆ ಸುರಿಯದಿದ್ದರೂ ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚು ಸೇರಲ್ಪಡುವುದರಿಂದ ಜೊಂಡು ಸೊಂಪಾಗಿಯೇ ಬೆಳೆಯುತ್ತದೆ. ಆದ್ದರಿಂದ ಮೂಲದಲ್ಲಿಯೇ ಜೊಂಡು ಕೆರೆ ಪೂರ್ತಿ ಆಕ್ರಮಿಸದಂತೆ ಎಚ್ಚರ ವಹಿಸಬೇಕಾಗಿದೆ. ಜೊಂಡು ನಿವಾರಣೆ ಹೇಗೆಂಬ ಕುರಿತು ಪರಿಸರವಾದಿ ತ್ಯಾಗರಾಜು ಈಗಾಗಲೇ ಅಧಿಕಾರಿಗಳಿಗೆ ವರದಿ ಮಂಡಿಸಿದ್ದು, ಈ ಬಗ್ಗೆ ಕಾರ್ಯಾರಂಭವಾಗಬೇಕಷ್ಟೆ.

ಹೇಗೆ ಅಳವಡಿಕೆ:ಕೆ.ಸಿ. ವ್ಯಾಲಿ ನೀರು ತುಂಬುವ ಎಲ್ಲಾ ಕೆರೆಗಳಲ್ಲಿಯೂ ಕಡ್ಡಾಯವಾಗಿ ಏರಿಯೇಟರ್‌ಗಳನ್ನು ಅಳವಡಿಸುವುದರಿಂದನೀರಿನ ಶುದ್ಧತೆ ಹೆಚ್ಚಳವಾಗುತ್ತದೆ. ಈಗಾಗಲೇ ಕೆ.ಸಿ.ವ್ಯಾಲಿ ನೀರು ತುಂಬುವ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಹರಾಜು ಪಡೆದಿರುವ ಗುತ್ತಿಗೆದಾರರು ಮೀನು ಮರಿಗಳನ್ನು ಬೆಳೆಸುತ್ತಿದ್ದಾರೆ.

ಈ ಗುತ್ತಿಗೆದಾರರು ಕಡ್ಡಾಯವಾಗಿ ಏರಿಯೇಟರ್‌ಗಳನ್ನು ಅಳವಡಿಸಿಕೊಂಡಲ್ಲಿ ಮೀನು ಮರಿಗಳು ಅರ್ಧ ಕೆಜಿ ಬೆಳೆಯುವ ಜಾಗದಲ್ಲಿ ಮುಕ್ಕಾಲು ಕೆಜಿ ಬೆಳೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ. ಆದ್ದರಿಂದ ಮೀನು ಪಾಶುವಾರು ಹರಾಜು ಪಡೆದಿರುವ ಗುತ್ತಿಗೆದಾರರ ಮೂಲಕವೇ ಇದನ್ನು ಅಳವಡಿಸುವುದು ಸೂಕ್ತ.

ಏನಿದು ಏರಿಯೇಟರ್‌ :  ಒಳ ಚರಂಡಿ ನೀರನ್ನು ಎರಡು ಬಾರಿ ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದ್ದರೂ, ನೀರಿನ ಶುದ್ಧತೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಅನುಮಾನಗಳು ನಿವಾರಣೆಯಾಗಿಲ್ಲ. ಈ ನಿಟ್ಟಿನಲ್ಲಿ ಕೆ.ಸಿ.ವ್ಯಾಲಿ ನೀರು ತುಂಬಿರುವ ಕೆರೆಗಳಲ್ಲಿ ಏರಿಯೇಟರ್‌ಗಳನ್ನು ಅಳವಡಿಸಿದರೆ ನೀರು ಗಾಳಿಯಲ್ಲಿ ಚಿಮ್ಮುವಂತೆ ಮಾಡಿ ನೀರಿಗೆ ಹೆಚ್ಚು ಆಮ್ಲಜನಕ ಸೇರುವಂತೆ ಮಾಡುವುದೇ ಏರಿಯೇಟರ್‌ನ ತಂತ್ರಜ್ಞಾನವಾಗಿದೆ. ಇದರಿಂದ ಗಡಸು ನೀರು ಮೆದು ನೀರಾಗಿ ಪರಿವರ್ತನೆ ಯಾಗುತ್ತದೆಯೆಂದು ಹೇಳಲಾಗುತ್ತಿದೆ.

ಉಪಯೋಗವೇನು? :  ಕೆ.ಸಿ.ವ್ಯಾಲಿ ನೀರು ಕೋಲಾರ ಜಿಲ್ಲೆಯ 138 ಕೆರೆಗಳಿಗೂ ತುಂಬಲು ಯೋಜಿಸಲಾಗಿದ್ದು, ಈಗಾಗಲೇ 70 ಕೆರೆಗಳು ಕೋಡಿ ಹರಿಯುತ್ತಿವೆ. ಈ ಕೆರೆಗಳಲ್ಲಿಏರಿಯೇಟರ್‌ಗಳನ್ನು20ಎಕರೆಗೊಂದರಂತೆ ಅಳವಡಿಸಿದರೆ ನೀರು ಶುದ್ಧೀಕರಣವಾಗುತ್ತದೆ. ಹೆಚ್ಚು ಆಮ್ಲಜನಕ ನೀರಿಗೆ ಸೇರ್ಪಡೆಯಾಗುವುದರಿಂದ ಮೀನುಗಳ ವೃದ್ಧಿಗೂ ಸಹಕಾರಿಯಾಗುತ್ತದೆ. ನೀರಿನ ಗಡಸುತನವನ್ನು ಮೆದುವಾಗಿಸುತ್ತದೆ. ನೀರಲ್ಲಿ ಉಳಿದುಕೊಂಡಿರುವ ರಾಸಾಯನಿಕಗಳು ವಿಭಜನೆಗೊಳಪಟ್ಟು ಹಾನಿಯನ್ನು ಕಡಿಮೆ ಮಾಡುತ್ತದೆ.

ಕೆ.ಸಿ. ವ್ಯಾಲಿನೀರು ನಿಂತಿರುವ ನರಸಾಪುರ ಹಾಗೂ ಚೌಡದೇನಹಳ್ಳಿ ಕೆರೆಗಳಲ್ಲಿ ಪ್ರಾಯೋಗಿಕವಾಗಿ ಗಾಳಿಯಿಂದ ನೀರು ಶುದ್ಧೀಕರಿಸುವ ಏರಿಯೇಟರ್‌ಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಇದು ಎಲ್ಲಾಕೆರೆಗಳಿಗೂ ಕಡ್ಡಾಯವಾಗ ಬೇಕಿದೆ. ಐಸಿಂತ್ಯಾ(ನೀರುಕುಡಿಯುವಜೊಂಡು) ನಿವಾರಣೆಗೂಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡರೆ ನೀರುಪೋಲಾಗುವುದು ಕಡಿಮೆಯಾಗುತ್ತದೆ. ಮುಂದಿನಕೆರೆಗಳುಬೇಗ ತುಂಬಲು ಸಹಕಾರಿಯಾಗುತ್ತದೆ. ಕೆ.ಎನ್‌.ತ್ಯಾಗರಾಜು, ಪರಿಸರವಾದಿ, ಕೋಲಾರ

 

ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ 1ಲಕ್ಷ ಕೋಟಿ ರೂ. ದಾಟಿದೆ..!

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ

ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ, ಬಿರಿಯಾನಿ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ

ಹಣ, ಬಿರಿಯಾನಿ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಿ

ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಿ

ನಕಲಿ food inspector

ಫುಡ್‌ ಇನ್ಸ್‌ಪೆಕ್ಷರ್‌ ಎಂದು ನಂಬಿಸಿ ಮೋಸ

chinthamani news

ನಗರಸಭೆ ಜೆ.ಇ ಪ್ರಸಾದ್ ವಿರುದ್ಧ ಗರಂ ಆದ ಸದಸ್ಯ ಜೈ ಭೀಮ್ ಮುರಳಿ

MUST WATCH

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

ಹೊಸ ಸೇರ್ಪಡೆ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಮೈಸೂರು ಆರ್ಟಿಸ್ಟ್‌ ಅಸೋಸಿಯೇಷನ್‌ನಿಂದ ಸಾಮೂಹಿಕ ನಾಡಗೀತೆ

ಅನಂತಸ್ವಾಮಿ ಗೀತೆಯನ್ನೇ ನಾಡಗೀತೆಯಾಗಿ ಘೋಷಿಸಿ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

20lake

ಇನ್ನೂ ತುಂಬಿಲ್ಲ ನಿಡಶೇಸಿ ಕೆರೆಯಂಗಳ

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ 1ಲಕ್ಷ ಕೋಟಿ ರೂ. ದಾಟಿದೆ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.